ರಾಜ್ಯದ್ಯಂತ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕೆಂದು ಕಳೆದ 18 ದಿನಗಳಿಂದ ಮದ್ಯ ನಿಷೇಧ ಆಂದೋಲನ ಕರ್ನಾಟಕದ ನೇತೃತ್ವದಲ್ಲಿ ರಾಯಚೂರಿನಲ್ಲಿ ಹೋರಾಟ ನಡೆಯುತ್ತಿದ್ದು, ಇಂದು ಭಾನುವಾರ (ಫೆ.28) ಟ್ವಿಟರ್ ಅಭಿಯಾನ ನಡೆಸಲಾಗುತ್ತಿದೆ. #StopIllegalLiquorSale, #ImplementHCOrder ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ.
ಕಳೆದ 18 ದಿನಗಳಿಂದ ಮದ್ಯ ನಿಷೇಧ ಆಂದೋಲನ ಕರ್ನಾಟಕದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿಯ ಸತ್ಯಾಗ್ರಹ ನಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅಬಕಾರಿ ಇಲಾಖೆ ಯಾವುದೇ ಮಾತುಕತೆಗೆ ಮುಂದಾಗಿರದ ಕಾರಣ ಪ್ರತಿಭಟನಾ ನಿರತರು ಟ್ವಿಟರ್ ಅಭಿಯಾನ ಕೈಗೊಂಡಿದ್ದಾರೆ.
@madynishedakar @CMofKarnataka ಮದ್ಯಮಾರಾಟಕ್ಕೆ ಟಾರ್ಗೆಟ್ ಫಿಕ್ಸ್ ಮಾಡಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಬೇಕೆಂಬ ಒತ್ತಡಹಾಕುವ ಮೂಲಕ ಮದ್ಯದ ಬಳಕೆಯನ್ನು ಮುಂದೊತ್ತುವುದನ್ನು ನಿಲ್ಲಿಸಿ. ಸಮಾಜದ ಆರೋಗ್ಯ ಮುಖ್ಯ, ಆದಾಯ ಅಲ್ಲ! @csokar
@siddaramaiah @H_D_Devegowda#StopIllegalLiquorSale#ImplementHCOrder— Madya Nisheda Andolana (@madyanishedakar) February 28, 2021
ಹಕ್ಕೊತ್ತಾಯಗಳೇನು?
1. ಅಕ್ರಮ ಮದ್ಯ ಮಾರಾಟ ತಡೆಯಲು ಇತ್ತಿಚೀನ ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ಕಾರ ಪಾಲಿಸಬೇಕು.
2. ಈ ಸಂಬಂಧ ಮದ್ಯ ನಿಷೇಧ ಆಂದೋಲನ ಮಹಿಳೆಯರ ನಿಯೋಗವನ್ನು ಸರ್ಕಾರ ಮಾತುಕತೆಗೆ ಕರೆಯಬೇಕು
ಈ ಬೇಡಿಕೆಗಳೊಂದಿಗೆ ಟ್ವಿಟರ್ ಅಭಿಯಾನ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮದ್ಯ ನಿಷೇಧ ಆಂದೋಲನದಿಂದ ಫೆ.28ಕ್ಕೆ ಟ್ವಿಟರ್ ಅಭಿಯಾನ
ಬೆಳಗ್ಗೆ 11 ಗಂಟೆಗೆ ಆರಂಭವಾದ ಈ ಅಭಿಯಾನದಲ್ಲಿ ನೂರಾರು ಮಂದಿ ಟ್ವೀಟ್ ಮಾಡುವ ಮೂಲಕ ಭಾಗಿಯಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ಯುಜನರು ಈ ಅಭಿಯಾನದ ಭಾಗವಾಗಿದ್ದಾರೆ.
Do you need an agitation to demand something as basic as #StopIllegalLiquorSale #ImplementHCOrder ?
Or to demand that CM should meet women's delegation?
In Karnataka, you do. pic.twitter.com/cML6RzMmzH— Yogendra Yadav (@_YogendraYadav) February 28, 2021
ಸ್ವರಾಜ್ ಇಂಡಿಯಾದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಈ ಅಭಿಯಾನವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಅಕ್ರಮ ಮದ್ಯ ಮಾರಾಟ ನಿಲ್ಲಿಸಲು, ಹೈಕೋರ್ಟ್ ಆದೇಶ ಅನುಷ್ಟಾನ ಮಾಡುವಂತಹ ಮೂಲಭೂತವಾದದ್ದನ್ನು ಕೇಳಲು ಅಥವಾ ಮಹಿಳಾ ನಿಯೋಗವನ್ನು ಸಿಎಂ ಭೇಟಿ ಮಾಡಬೇಕೆಂದು ಒತ್ತಾಯಿಸುವುದಕ್ಕೆ ಕರ್ನಾಟಕದಲ್ಲಿ ಪ್ರತಿಭಟನೆ ಬೇಕೇ..? ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಜನವರಿ 26ರ ಟ್ರಾಕ್ಟರ್ ರ್‍ಯಾಲಿಯಲ್ಲಿ ನಿಜವಾಗಿಯೂ ನಡೆದಿದ್ದೇನು? ಪ್ರತ್ಯಕ್ಷ ದರ್ಶಿಯ ವರದಿ
ಉಚ್ಚನ್ಯಾಯಾಲಯದ ಆದೇಶವನ್ನು ಜಾರಿಮಾಡಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿ! @cmofkarnataka @BSYBJP#StopIlegalLiquorSale#ImplementHCOrder
:@swarajindia_KA@gramasevasangha @naanugauri pic.twitter.com/RwogL5s8cO— Madya Nisheda Andolana (@madyanishedakar) February 28, 2021
ರಾಜ್ಯ ಸರ್ಕಾರವು ಸಂವಿಧಾನದ ಮದ್ಯಪಾನ ತಡೆ ಕಾಯ್ದೆ 47 ರ ನೀತಿಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವ ಮೂಲಕ ಅವುಗಳ ಆಶಯದ ಕಡೆಗೆ ಹೆಜ್ಜೆಹಾಕಬೇಕು. ಮದ್ಯಮಾರಾಟವನ್ನು ನಿಲ್ಲಿಸುವ ಕುರಿತು ಗ್ರಾಮಸಭೆಗಳ ನಿರ್ಣಯ, ಪರವಾನಗಿ ಹೊಂದಿರುವ ಮಳಿಗೆಗಳಿಗೂ ಸೇರಿದಂತೆ ಅಂತಿಮವಾಗಬೇಕು. 5 ರಿಂದ 7 ಮಹಿಳೆಯರ ಕಾವಲು ಪಡೆಯನ್ನು ಪ್ರತಿ ಹಳ್ಳಿಗಳಲ್ಲಿ ರಚಿಸುವ ಮೂಲಕ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕು ಎಂದು ಟ್ವಿಟರ್ ಅಭಿಯಾನದಲ್ಲಿ ಮದ್ಯ ನಿಷೇದ ಆಂದೋಲನ ಕರ್ನಾಟಕ ಹೇಳಿದೆ.
ರಾಯಚೂರು ಜಿಲ್ಲೆಯೊಂದರಲ್ಲಿ 177 ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ, ಈ ಅಕ್ರಮ ಮಾರಾಟದ ಮಳಿಗೆಗಳನ್ನು ನಿಲ್ಲಿಸಲು ಹಾಗೂ ಉಚ್ಚನ್ಯಾಯಾಲಯದ ಆದೇಶವನ್ನು ನಿರ್ಧಿಷ್ಟ ಸಮಯದಲ್ಲಿ ಪಾಲನೆ ಮಾಡಲು ಅಬಕಾರಿ ಇಲಾಖೆಗೆ ಇರುವ ಸಮಸ್ಯೆಗಳೇನು ಎಂದು ಪ್ರತಿಭಟನಾ ನಿರತ ಮಹಿಳೆಯರು ಮತ್ತೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಚುನಾವಣೆ: ಬಿಜೆಪಿ ಮೈತ್ರಿ ತೊರೆದು ಕಾಂಗ್ರೆಸ್ ಮೈತ್ರಿ ಸೇರಲಿರುವ BPF ಪಕ್ಷ
For last 6 years, rural women of #Karnataka are staging protests demanding an end of illegal liquor sale. Despite the high court order, the govt is not stopping illicit sale of alcohol. Is revenue from liquor more important than human lives @BSYBJP ? @manoharban @madyanishedakar pic.twitter.com/eH2H2lmjIT
— ValleyofSilence (@ValleyofS) February 28, 2021
ಕಳೆದ 6 ವರ್ಷಗಳಿಂದ ಕರ್ನಾಟಕದ ಗ್ರಾಮೀಣ ಮಹಿಳೆಯರು ಅಕ್ರಮ ಮದ್ಯ ಮಾರಾಟವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈಕೋರ್ಟ್ ಆದೇಶದ ಹೊರತಾಗಿಯೂ, ಸರ್ಕಾರವು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುತ್ತಿಲ್ಲ. ಮಾನವ ಜೀವನಕ್ಕಿಂತ ಮದ್ಯದಿಂದ ಬರುವ ಆದಾಯ ಮುಖ್ಯವಾದದ್ದೇ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ವ್ಯಾಲಿ ಆಫ್ ಸೈಲೆನ್ಸ್ ಸಂಸ್ಥೆ ತನ್ನ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ.
ಸಾಕಷ್ಟು ಯುವಜನತೆ ಕೂಡ ಮದ್ಯ ನಿಷೇದ ಆಂದೋಲನಕ್ಕೆ ಸಾಥ್ ನೀಡಿದ್ದು, ತಮ್ಮ ಟ್ವಿಟರ್ ಅಕೌಂಟ್‌ಗಳಲ್ಲಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
@madynishedakar @cmofkarnataka @PMOIndia
Why CM not meeting a delegation of women to know their issues & problems
@gramasevasangha#StopIllegalLiquorSale#ImplementHCOrder pic.twitter.com/cV4lKY2dY0— PhaneeshKrishna (@Phaneeshkrishna) February 28, 2021
ಯಾಕೆ ಮುಖ್ಯಮಂತ್ರಿಗಳು ಮಹಿಳಾ ನಿಯೋಗವನ್ನು ಭೇಟಿ ಮಾಡಿ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿಲ್ಲ ಎಂದು ಪ್ರಶ್ನಿಸಿ ಮುಖ್ಯಮಂತ್ರಿ ಮತ್ತು ಪ್ರಧಾನಿಯವರನ್ನು ಟ್ಯಾಗ್ ಮಾಡಿ ಫಣೀಶ್ ಕೃಷ್ಣ ಎನ್ನುವವರು ಟ್ವೀಟ್ ಮಾಡಿದ್ದಾರೆ.
@madynishedakar @CMofKarnataka ಮದ್ಯಮಾರಾಟಕ್ಕೆ ಟಾರ್ಗೆಟ್ ಫಿಕ್ಸ್ ಮಾಡಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಬೇಕೆಂಬ ಒತ್ತಡಹಾಕುವ ಮೂಲಕ ಮದ್ಯದ ಬಳಕೆಯನ್ನು ಮುಂದೊತ್ತುವುದನ್ನು ನಿಲ್ಲಿಸಿ. ಸಮಾಜದ ಆರೋಗ್ಯ ಮುಖ್ಯ, ಆದಾಯ ಅಲ್ಲ! @csokar
@gramasevasangha @ravikrishna_r#StopIllegalLiquorSale#ImplementHCOrder pic.twitter.com/sH8RGrhqDC— Basavaraj (@njmobasava) February 28, 2021
ಕಳೆದ ಫೆಬ್ರವರಿ 11 ರಿಂದಲೂ ರಾಯಚೂರಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಒನಕೆಗಳನ್ನು ಹಿಡಿದು ಮಹಿಳೆಯರು ರ್‍ಯಾಲಿ ನಡೆಸಿದ್ದಾರೆ. ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಸಮೀಕ್ಷೆ ನಡೆಸಿ ಪಟ್ಟಿಯನ್ನು ಅಬಕಾರಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ನೀಡಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಜಾಬ್‌ಕಿ ಬಾತ್, ಕಿಸಾನ್ ಕಿ ಬಾತ್ ಬೇಕು: ಮೋದಿ ವಿರುದ್ಧ ಸಿಡಿದೆದ್ದ ಯುವಜನರು –…


