Homeಅಂಕಣಗಳುಎರಡು ದುಃಖದ ಸಂಗತಿ ಎದುರಾದವಲ್ಲಾ

ಎರಡು ದುಃಖದ ಸಂಗತಿ ಎದುರಾದವಲ್ಲಾ

- Advertisement -
- Advertisement -

ಈವಾರ ಎರಡು ದುಃಖಕರ ಸಂಗತಿಗಳು ಹೊರಬಿದ್ದಿವೆಯಲ್ಲಾ. ಮೊದಲನೆಯದಾಗಿ ನಮ್ಮ ಸಭ್ಯರಾಜಕಾರಣಿ ಎಸ್.ಎಂ ಕೃಷ್ಣ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿಗಳು ಕಿವಿ ಕೇಳದಂತಿರುವುದು ಸಹಜ. ಕೃಷ್ಣ ತಮ್ಮ ರಾಜಕಾರಣದ ಇತಿಹಾಸದಲ್ಲಿ ಎಂದೂ ಅಸಭ್ಯವಾಗಿ ನಡೆದುಕೊಂಡವರಲ್ಲ. ಅಸಂಬದ್ಧ ಮಾತನಾಡಿದವರಲ್ಲಾ. ಯಾರನ್ನೂ ಕಟುವಾಗಿ ಟೀಕಿಸಿದವರಲ್ಲ. ತಮ್ಮ ಕಾರಿನ ಡ್ರೈವರನ್ನು ಕೂಡ ಬಹುವಚನದಲ್ಲಿ ಮಾತನಾಡಿಸಿದ ವ್ಯಕ್ತಿ. ಎಲ್ಲಕ್ಕಿಂತ ಮುಖ್ಯವಾಗಿ ನರಹಂತಕ ವೀರಪ್ಪನ್‌ನನ್ನು, ’ವೀರಪ್ಪನ್‌ರವರೆ’ ಎಂದು ಸಂಭೋಧಿಸಿ “ಕಿಸ್ನ ನಲ್ಲ ಪೆರಿಯವರು” ಎಂಬ ಬಿರುದು ಪಡೆದವರು. ಕೃಷ್ಣರಲ್ಲಿರುವ ಈ ಗುಣಗಳಿಗಾಗಿ ಅವರು ಸುಮ್ಮನಾಗಬಹುದಿತ್ತು. ಅದುಬಿಟ್ಟು, ತಮ್ಮ ನಡವಳಿಕೆ ಭಾಷೆ ಮತ್ತು ಬುದ್ಧಿಯ ಸಮೀಪಕ್ಕೂ ಬಾರದ ಬಿಜೆಪಿ ಸೇರಿದ್ದು ಈ ಶತಮಾನದ ರಾಜಕೀಯ ದ್ರೋಹವಾಗಿ ಕಂಡಿತಂತಲ್ಲಾ. ಯಾರೋ ರಾಹುಲ್‌ಗಾಂಧಿಯವರನ್ನು ಕೇಳಿದಾಗ, ಇದು ಕೃಷ್ಣರ ಸಮಸ್ಯೆ, ಕಾಂಗ್ರೆಸ್ ಮತ್ತು ಬಿಜೆಪಿ ಸಮಸ್ಯೆಯಲ್ಲ; ಅಲ್ಲಿ ಯಾರೂ ಇವರನ್ನು ಕರೆದಿಲ್ಲ ಎಂದುಬಿಟ್ಟಿದ್ದರಲ್ಲಾ. ಆದರೇನು ಕೃಷ್ಣ ಎಲ್ಲವನ್ನು ಬಿಟ್ಟು ಬಿಜೆಪಿಯ ಬಾಗಿಲಿಗೆ ಹೋದರು. ಖಾಲಿಯಿದ್ದ ಒಂದು ಆರಾಮ ಕುರ್ಚಿಯಲ್ಲಿ ಕುಳಿತರು. ಯಾರೂ ಕ್ಯಾರೆ ಅನ್ನಲಿಲ್ಲ. ನಿಧಾನವಾಗಿ ಎದ್ದು ಬರ್ತಿನಿ ಇವುರೆ, ಬಹಳ ಹೊತ್ತು ಕೂರಕ್ಕೆ ವಯಸ್ಸು ಪರ್ಮಿಟ್ ಮಾಡ್ತ ಇಲ್ಲ ಎಂದು ನಿಧಾನವಾಗಿ ಎದ್ದು ಹೊರಟಾಗಲೂ ಯಾವ ಬಿಜೆಪಿಗಳೂ ಕೂಡ ಆಯ್ತು ಸರ್ ಹೋಗಿ ಬನ್ನಿ ಅನ್ನಲಿಲ್ಲವಂತಲ್ಲಾ, ಥೂತ್ತೇರಿ.

*******

ಎರಡನೆ ದುಃಖಪೂರಿತ ಸಂಗತಿ ಯಾವುದೆಂದರೇ ಗೃಹಮಂತ್ರಿ ಆರಗ ಜ್ಞಾನೇಂದ್ರ ಆತ್ಮಹತ್ಯೆಯ ಮಾತನಾಡಿರುವುದು. ಕರ್ನಾಟಕದ ರಾಜಕೀಯದ ಆಗಸದಲ್ಲಿ ಎಂದೆಂದೂ ಮಿನುಗುವ ನಕ್ಷತ್ರವಾಗುಳಿದಿರುವ ಶಾಂತವೇರಿ ಗೋಪಾಲಗೌಡರು ಆರಿಸಿ ಬಂದಿದ್ದ ತೀರ್ಥಹಳ್ಳಿಯನ್ನು ಪ್ರತಿನಿಧಿಸುತ್ತಿರುವ ಜ್ಞಾನೇಂದ್ರ ಅವರು ರಾಷ್ಟ್ರಕವಿ ಕುವೆಂಪು ವಿಚಾರಧಾರೆಗಳ ವಾಹಕನಾಗಿ ಬದುಕಲಾಗದೆ ಬಲವಂತವಾಗಿ ಎಂಬಂತೆ ಗೋಳವಲಕರ, ಹೆಡಗೆವಾರ, ಸಾವರಕರ ಇತ್ಯಾದಿ ಭಯಂಕರ ಹಿಂದೂವಾದಿಗಳ ಹಿಂಬಾಲಕರಾಗಿ, ಅವರ ಸಿದ್ಧಾಂತಗಳ ಪ್ರತಿಪಾದಕರಾಗಿ ಬದುಕಿದವರು. ಸದಾ ಶ್ವೇತವಸ್ತ್ರಧಾರಿಯಾಗಿ ಶುಭ್ರವಾಗಿ ಬದುಕಿದ್ದ ಅರಗರ ಪಕ್ಕ ಸ್ಯಾಂಟ್ರೊ ರವಿ ಅದೇ ಡ್ರೆಸ್ಸಿನಲ್ಲಿ ಬಂದು ನಿಂತಿದ್ದೂ ಅಲ್ಲದೆ, ಅರಗರ ಅರಿವಿಗೂ ಬರದೆ ಜೇಬಿಗೆ ಏನೊ ಇಟ್ಟು ಹೋದದ್ದು ಗಮನಕ್ಕೇ ಬರಲಿಲ್ಲವಂತಲ್ಲಾ. ಈಗ ನೋಡಿದರೆ ಸ್ಯಾಂಟ್ರೊ ರವಿ ಪೊಲೀಸ್ ವರ್ಗಾವಣೆಯಲ್ಲಿ ಪಡೆದ ಕಾಸಿನ ಕವಡೆಯನ್ನು ಅರಗರ ಜೇಬಿಗೆ ಹಾ ಹೋಗಿದ್ದಾನೆಂಬ ಸುದ್ದಿ ಹಬ್ಬಿದೆಯಲ್ಲಾ. ಇಂತಹ ಸುದ್ದಿಗಳ ಶೋಧನೆ ಮತ್ತು ಅನಾವರಣದಲ್ಲಿ ಎತ್ತಿದ ಕೈಯಾದ ಕುಮಾರಣ್ಣನವರು, ಆತ್ಮಹತ್ಯೆ ಬೇಡ ಆತ್ಮಸಾಕ್ಷಿಯಿದ್ದರೆ ಸಾಕು; ಆತ್ಮಹತ್ಯೆಯ ಹೆಸರೆತ್ತುವುದೂ ಅಪರಾಧವೇ, ಹಾಗೆ ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡರೆ ಇಡೀ ದೇಶದಲ್ಲಿ ರಾಜಕಾರಣಿಗಳೇ ಇಲ್ಲದಂತಾಗಿ ದೇಶವೇ ಅರಾಜಕ ಸ್ಥಿತಿಗೆ ಹೋಗುತ್ತದೆ ಎಂದಿಲ್ಲವಲ್ಲಾ, ಥೂತ್ತೇರಿ.

******

ಹಾವೇರಿ ಸಾಹಿತ್ಯ ಸಮ್ಮೇಳನ ಮುಗಿದಿದೆ. ಜೋಶಿಯ ಲೆಕ್ಕಾಚಾರಗಳು ಸಾಂಗವಾಗಿ ನಡೆದಿವೆ. ಈ ನಡುವೆ ಹಾವೇರಿಯ ಸಣ್ಣವೇದಿಕೆಯಿಂದ ದೊಡ್ಡ ಗಂಟಲಲ್ಲಿ ಅಬ್ಬರಿಸಿದ ದೊಡ್ಡರಂಗೇಗೌಡರ ದನಿ ನಾಡಿನ ಮೂಲೆಮೂಲೆಗೆ ತಲುಪಿ ತುಸು ಗೊಂದಲ ಮೂಡಿಸಿದೆಯಂತಲ್ಲಾ. ಕಳೆದ ಶತಮಾನದಲ್ಲಿ ಕುವೆಂಪು ಹೊಸ ತರುಣ ಜನಾಂಗಕ್ಕೆ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂದರು. ಆ ಕೂಡಲೇ ಹಲವು ತರುಣರು ದೇವರು ದಿಂಡಿರನ್ನು ಮತ್ತು ಜ್ಯೋತಿಷಿಗಳನ್ನು ಬಿಟ್ಟು ಮಂತ್ರ ಮಾಂಗಲ್ಯದ ಮದುವೆಯಾದರು, ಉರಿಯುವ ಪಂಜುಗಳಾದರು. ಆದರೀಗ ದೊಡ್ಡರಂಗೇಗೌಡರ ದನಿಗೆ ಕಿವಿಯಾದ ಹುಡುಗರು ಯಾವ ರೂಪದ ಕ್ರಾಂತಿ ಮಾಡಬೇಕೆಂದು ಯೋಚಿಸುತ್ತಿದ್ದಾರಂತಲ್ಲಾ. ಏಕೆಂದರೆ ಗೌಡರು ಮಠೋಪಜೀವಿಯಂತಹ ಕವಿ. ಆದಿಚುಂಚನಗಿರಿ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದ ಫಲವಾಗಿ “ತೇರಾಏರಿ ಅಂಬರದಾಗ ನೇಸರು ನಗತಾನೆ ಮರಗಿಡ ಕೂಗ್ಯಾವೇ ಹಕ್ಕಿ ಹಾಡ್ಯಾವೇ” ಎಂದು ಬೇಂದ್ರೆ ತೋರಿದ ಬೆಳಗಿನ ಪ್ರತಿಯಾಗಿ ನೇಸರ ತೋರಿದ ಕವಿ. ಆದರೇನು ಶೂದ್ರ ಸಮೂಹದ ಬೆಟ್ಟಸಾಲಲ್ಲಿ ನಿಂತು ಅದ್ಯಾವಾಗ ಬಿಜೆಪಿ ಗುಡಾರಕ್ಕೆ ನೆಗೆದರೊ ಸ್ಥಾನ ಮಾನಗಳು ಹಿಂಬಾಲಿಸಿ ಬಂದವು. ಕೂಡಲೇ ಮೋದಿ ಬಗ್ಗೆ ಎಡೂರಪ್ಪನ ಬಗ್ಗೆಯೂ ಕವನ ಬರೆದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರು. ಮುಂದೆ ಜೋಶಿಗೆ ತೋರುವ ಕೃತಜ್ಞತೆಯ ಫಲವಾಗಿ ಯಾವ ಕವನ ಉದ್ಭವವಾಗುತ್ತದೊ ಎಂಬ ಆತಂಕದ ನಡುವೆ ಇತ್ತ ಚೆಡ್ಡಿಗಳು, ಅತ್ತ ಚುಂಚನಗಿರಿ ಪ್ರಾಂತ್ಯದ ಹುಡುಗರು ಗೌಡರ ಕ್ರಾಂತಿ ಮಾತಿನಿಂದ ಗೊಂದಲಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಈಚೆಗೆ ಕೆಲವು ಮಠಾಧೀಶರು ಸಂಘಟಿತರಾಗಿ ಸರಕಾರಕ್ಕೆ ಸಲಹೆ ಕೊಡುವುದು ಸಾಮಾನ್ಯವಾಗಿದೆಯಂತಲ್ಲಾ. ಈಗವರ ಕಣ್ಣುಬಿದ್ದಿರುವುದು ಶಾಲಾ ಮಕ್ಕಳ ಆಹಾರದ ಬಗ್ಗೆ. ಸಾಮಾನ್ಯವಾಗಿ ಮಠಾಧೀಶರು, ಧರ್ಮವಂತರು, ನೀತಿವಂತರು, ಸತ್ಯವಂತರು. ತಾವು ಪ್ರತಿನಿಧಿಸುವ ಜಾತಿಯ ತಲೆಯ ಮೇಲೂ ಕುಳಿತವರು. ಇಂತಹ ಸ್ಥಾನದಲ್ಲಿರುವವರಿಗೆ ಸಾಮಾನ್ಯವಾಗಿ ಯಾವ ಶ್ರಮವೂ ಇರುವುದಿಲ್ಲ. ವಿಕಲಚೇತನ ಮಗುವಿಗೆ ತಾಯಿ ತಾನೇ ಆಹಾರ ನೀಡಿ ಸಾಕಿ ಸಲಹುವಂತೆ ಜನಾಂಗ ಈ ಜಗದ್ಗುರುಗಳನ್ನ ಸಾಕುತ್ತಿದೆ. ಹೀಗೆ ಸಾಕಿಸಿಕೊಂಡವರೆಲ್ಲಾ ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಮಾತನಾಡುತ್ತಿದ್ದಾರೆ. ಗುರುಗಳ ಭೋಜನದ ಬಗ್ಗೆ ’ಗುರು ಶಿಷ್ಯರು’ ಎಂಬ ಚಿತ್ರದ ತುಣುಕು ಹೇಳಿದರೆ ಅಪ್ರಸ್ತುತವಾಗಲಾರದು. ಉಂಡಾಡಿ ಗುರುವೊಬ್ಬರು ಗುರುವರ್ಯರ ಮನೆಗೆ ಬರುತ್ತಾರೆ. ಆಗ ಆಚಾರ್ಯರು ಅವರ ಕಾರ್ಯಕ್ರಮ ಕೇಳುತ್ತಾರೆ. ಆಗ ಅತಿಥಿಗಳು ಮುಂಜಾನೆ ಸ್ನಾನ, ಸಂಧ್ಯಾವಂದನೆ ಮತ್ತೆ ಉಪಾಹಾರ ಮಧ್ಯಾಹ್ನ ಭೋಜನ, ಶಯನ ನಂತರ ವಾಯುವಿಹಾರ, ರಾತ್ರಿ ಭೋಜನ ಮತ್ತು ಒಂದು ತಂಬಿಗೆ ಕ್ಷೀರ ಇದೇ ನನ್ನ ದಿನಚರಿ ಎನ್ನುತ್ತಾನೆ. ಹೀಗೆ ಬದುಕಿರುವ ನಮ್ಮ ಕೆಲವು ಜಗತ್ ಗುರುಗಳು ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಎಗ್ಗಿಲ್ಲದೆ ಸಲಹೆ ಕೊಡತೊಡಗಿದ್ದಾರೆ. ಇಂತಹವರ ಅವಗಾಹನೆಗೆ ತರುವ ವಿಷಯ ಯಾವುದೆಂದರೆ ಶೃಂಗೇರಿ, ಚುಂಚನಗಿರಿ, ಸಿದ್ಧಗಂಗಾ ಮಠ ಮತ್ತು ಇನ್ನಿತರ ಪ್ರಗತಿಪರ ಚಿಂತಕರನ್ನ ಪಡೆದಿರುವ ಮಠಗಳು ಎಂದೂ ಮಕ್ಕಳ ಆಹಾರ ಪದ್ಧತಿ ಬಗ್ಗೆ ಮಾತನಾಡಿಲ್ಲ. ಆಹಾರ ಅವರವರ ಜನ್ಮಸಿದ್ಧ ಹಕ್ಕು. ಆದ್ದರಿಂದ ತಮಗೆ ಬಿಟ್ಟಿ ಸಿಗುವ ದ್ರಾಕ್ಷಿ, ಉತ್ತುತ್ತೆ, ಗೋಡಂಬಿ ತಿಂದುಕೊಂಡು ಟಿವಿ ನೋಡುತ್ತ ಕಾಲ ಹಾಕಲು ಸಮಸ್ಯೆ ಏನು ಎಂದು ಕೇಳುವಂತೆ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...