Homeಎಕಾನಮಿ12,000 ಉದ್ಯೋಗಗಳನ್ನು ಕಡಿತಗೊಳಿಸಿದ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್

12,000 ಉದ್ಯೋಗಗಳನ್ನು ಕಡಿತಗೊಳಿಸಿದ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್

2022 ರಲ್ಲಿ ಟೆಕ್ ವಲಯದಲ್ಲಿ ಹೆಚ್ಚಿನ ಉದ್ಯೋಗ ಕಡಿತವಾಗಿದೆ. ಈ ವರ್ಷದಲ್ಲಿ 97,171 ಉದ್ಯೋಗಿಗಳು ಕೆಲಸ ಕಳೆದು ಕೊಂಡಿದ್ದಾರೆ.

- Advertisement -
- Advertisement -

ಜಾಗತಿಕ ಆರ್ಥಿಕ ಕುಸಿತ ಮತ್ತು ಹಣದುಬ್ಬರದ ಕಾರಣ ನೀಡಿ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ 12,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಅದರ ಜಗತ್ತಿನ ಒಟ್ಟಾರೆ ಉದ್ಯೋಗ ಪ್ರಮಾಣದಲ್ಲಿ ಶೇ.6 ರಷ್ಟು ಜನರನ್ನು ಕೆಲಸದಿಂದ ತೆಗೆಯುವುದಾಗಿ ಗೂಗಲ್ ಸಿಇಓ ಸುಂದರ್ ಪಿಚ್ಚೈ ತಿಳಿಸಿದ್ದಾರೆ.

ಇತ್ತೀಚೆಗೆ ಮೆಟಾ, ಟ್ವಿಟರ್ ಮತ್ತು ಅಮೆಜಾನ್ ಕಂಪನಿಗಳು ಉದ್ಯೋಗ ಕಡಿತ ಪ್ರಕಟಿಸಿದ್ದವು. ಅದೇ ಹಾದಿಯಲ್ಲಿ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಕೂಡ ಕಾಲಿಟ್ಟಿದೆ.

ನಮ್ಮ ಗಮನ, ವೆಚ್ಚದ ಸೂಕ್ತ ಬಳಕೆ ಆಧಾರಿತವಾಗಿ ಚುರುಕುಗೊಳಿಸಲು ಮತ್ತು ನಮ್ಮ ಪ್ರತಿಭೆ ಮತ್ತು ಬಂಡವಾಳವನ್ನು ನಮ್ಮ ಅತ್ಯುನ್ನತ ಆದ್ಯತೆಗಳಿಗೆ ನಿರ್ದೇಶಿಸಲು ಇದು ಸೂಕ್ತ ಸಮಯವಾಗಿದೆ ಎಂದು ಪಿಚೈ ಸಿಬ್ಬಂದಿಗಳಿಗೆ ಕಳಿಸಿದ ಇಮೇಲ್‌ನಲ್ಲಿ ಬರೆದಿದ್ದಾರೆ.

ಇತ್ತೀಚಿನ ಸ್ಪರ್ಧೆಗಳಲ್ಲಿ ಭಾರೀ ಸಂಚಲನ ಉಂಟು ಮಾಡಿರುವ ಪ್ರಮುಖ ಹೂಡಿಕೆ ಕ್ಷೇತ್ರವಾದ ಕೃತಕ ಬುದ್ಧಿಮತ್ತೆಯಲ್ಲಿ ಕಂಪನಿಗೆ ಬಹುದೊಡ್ಡ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಆನ್‌ಲೈನ್ ಮಾರುಕಟ್ಟೆಯ ದೈತ್ಯ ಸಂಸ್ಥೆ ಅಮೆಜಾನ್ ಕೂಡ ಅನಿಶ್ಚಿತ ಆರ್ಥಿಕತೆಯ ಕಾರಣ ನೀಡಿ ಜನವರಿ 18 ರಂದು ಮತ್ತೆ 18,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ. 2022ರ ನವೆಂಬರ್ ತಿಂಗಳಿನಲ್ಲಿ 10,000 ಉದ್ಯೋಗಿಗಳನ್ನು ಅಮೆಜಾನ್ ಕಂಪನಿಯು ಮನೆಗೆ ಕಳಿಸಿತ್ತು.

ಅಮೆಜಾನ್‌ ಕಂಪನಿಗೆ ಆರ್ಥಿಕ ಹಿಂಜರಿತದ ಹೊಡೆತ ಬಿದ್ದಿದ್ದು, ಅದು ಈಗಲೂ ಮುಂದುವರೆಯುತ್ತಿದೆ. ಮುಂದಿನ ಅನಿಶ್ಚಿತ ಆರ್ಥಿಕತೆಯ ದೃ‍ಷ್ಟಿಯಿಂದ ಈ ಕ್ರಮಗಳು ಅನಿವಾರ್ಯವಾಗಿದೆ ಎಂದು ಅಮೆಜಾನ್ ಹೇಳಿಕೊಂಡಿದೆ.

ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಚಾಲೆಂಜರ್, ಗ್ರೇ & ಕ್ರಿಸ್‌ಮಸ್ ಇಂಕ್ ಪ್ರಕಾರ, 2022 ರಲ್ಲಿ ಟೆಕ್ ವಲಯದಲ್ಲಿ ಹೆಚ್ಚಿನ ಉದ್ಯೋಗ ಕಡಿತವಾಗಿದೆ. ಈ ವರ್ಷದಲ್ಲಿ 97,171 ಉದ್ಯೋಗಿಗಳು ಕೆಲಸ ಕಳೆದು ಕೊಂಡಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ 649% ಹೆಚ್ಚಾಗಿದೆ ಎನ್ನಲಾಗಿದೆ.

ಇದನ್ನೂ ಓದಿ; ಅನಿಶ್ಚಿತ ಆರ್ಥಿಕತೆ: 18,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...