Homeಅಂಕಣಗಳುರಾಮ ಕೃಷ್ಣ ಕಪ್ಪುಗಿದ್ರಲ್ಲವ..

ರಾಮ ಕೃಷ್ಣ ಕಪ್ಪುಗಿದ್ರಲ್ಲವ..

- Advertisement -
- Advertisement -

ಸಿಂಗಾಪುರದ ಮುಖಾಂತರ ಯೂರೋಪ್ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ಬಂದ ಕುಮಾರಣ್ಣ ವಿಮಾನದಿಂದ ಇಳಿಯುವ ಕೊನೆ ಮೆಟ್ಟಿಲಲ್ಲೇ ಕರ್ನಾಟಕ ಸರ್ಕಾರದ ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿ ವ್ಯವಹಾರ ನಡೆದಿದೆ ಎಂದಿದ್ದಾರಲ್ಲಾ. ಸಿಂಗಾಪುರದಲ್ಲಿದ್ದ ಕುಮಾರಣ್ಣನಿಗೆ ಈ ಕಾಂಗ್ರೆಸ್ ಸರಕಾರದ ವರ್ಗಾವರ್ಗಿ ವಿವರ ಹೇಗೆ ಗೊತ್ತಾಯಿತು? ಕುಮಾರಣ್ಣನ ಕಡೆಯ ಅಧಿಕಾರಿಗಳು ಮತ್ತು ಅಭಿಮಾನಿಗಳು ಇನ್ನೆಂತಹ ಜಾಲ ಹೆಣೆದಿರಬಹುದು? ಜೊತೆಗೆ ಪೆನ್‌ಡ್ರೈವ್ ಬೇರೆ ಕೆಲಸ ಮಾಡುತ್ತಿದೆ. ಹೇಗಾದರಾಗಲಿ ಹುಷಾರಾಗಿರಬೇಕು ಎಂದು ಸಿದ್ದು ಸಂಪುಟದ ಸಚಿವರು ಚಿಂತಿಸುತ್ತಿರುವಾಗಲೇ, ಮಂತ್ರಿಗಳಲ್ಲಿ ಕೆಲವು ಚಾಲಾಕಿಗಳು ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿ ವರ್ಗಾವರ್ಗಿಯ ದಂಧೆ ಗ್ರಹಿಸಿದವರು, ಅಲ್ಲದೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ಜನಾರ್ದನ ರೆಡ್ಡಿಯಿಂದ ವಸೂಲಿ ಮಾಡಿ ಅರಗಿಸಿಕೊಂಡವರು; ಈ ಅಂದಾಜಿನಲ್ಲೇ ಅವರು ಈ ಸರಕಾರದ ವಿರುದ್ಧ ಒಂದು ಸಾವಿರ ಕೋಟಿ ವ್ಯವಹಾರದ ದೂರನ್ನ ಮಾಡಿದ್ದಾರೆ. ಈ ವಿಷಯದಲ್ಲಿ ಅವರನ್ನ ಹಿಟ್ ಅಂಡ್ ರನ್ ಕೇಸಿಗೆ ಸೇರಿಸಿ ಮಾತನಾಡುವುದಕ್ಕಿಂತ ಕುಮಾರಣ್ಣನ ಅಂದಾಜಿಗೆ ಸಿಗದಂತೆ ವ್ಯವಹಾರ ಮಾಡಬೇಕಿದೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಮಾಡಿದ ಸಾಲ ಹಾಗೇ ಇದೆ ಎಂದು ಮಾತನಾಡಿಕೊಂಡರಂತಲ್ಲಾ, ಥೂತ್ತೇರಿ.

*****

ಕರ್ನಾಟಕ ಈವರೆಗೆ ಕಂಡ ಅತ್ಯಂತ ದುರ್ಬಲ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಆಡಿರುವ ಮಾತೊಂದು ಇಡೀ ಕರ್ನಾಟಕದಲ್ಲೇ ಅಲ್ಲೊಲಕಲ್ಲೋಲವುಂಟುಮಾಡಿದೆಯಲ್ಲಾ. ಆರೆಸ್ಸ್ಸೆನ ಕಟ್ಟಾಳು ಮತ್ತು ಎಬಿವಿಪಿಯ ’ಧೀಮಂತ’ ವಿದ್ಯಾರ್ಥಿ, ಬಿಜೆಪಿಯ ’ಧೀಮಂತ’ ನಾಯಕನಾಗಿ ಬೆಳೆದು ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಮತ್ತು ಕಿಮ್ಮನೆ ರತ್ನಾಕರ್ ಪ್ರತಿನಿಧಿಸಿದ ತೀರ್ಥಹಳ್ಳಿಯಿಂದ ಗೆದ್ದುಬಂದು ಗೃಹ ಸಚಿವರೂ ಆಗಿದ್ದ ಜ್ಞಾನೇಂದ್ರ ಅರೆಗ್ನಾನಿಯಾಗಿ ಬದಲಾದದ್ದು ಯಾವಾಗ ಎಂದು ಯೋಚಿಸಿ ಪೋನ್ ಮಾಡಲಾಗಿ ರಿಂಗಾಯ್ತು

ರಿಂಗ್ ಟೋನ್, “ನಮಸ್ತೆ ಸಧಾವತ್ಸಲೇ ಮಾತೃಭೂಮಿ…”

“ಹಲೋ ಯಾರು?”

“ನಾನು ಸಾರ್ ನಿಮ್ಮ ಅಭಿಮಾನಿ.”

“ಅಭಿಮಾನಿ ಯಾರ್ರಿ?”

“ಅದು ಈ ಕ್ಷಣದ ಅಭಿಮಾನಿ ಸಾ. ಖರ್ಗೆಗೆ ಸರಿಯಾಗೇಳಿದ್ದಿರಿ ಬುಡಿ ಸಾ.”

“ನಾನೇನು ಹೇಳಿಲ್ಲ ಕಂಡ್ರಿ. ನನಿಗಾಗದವರು ಸುಳ್ಳು ಹೇಳ್ತ ಅವುರೆ. ಮಾಧ್ಯಮದವರು ಅದನ್ನೆ ನಂಬಿದಾರೆ.”

“ಅದೇನಾರ ಆಗ್ಲಿ, ಖರ್ಗೆ ಬಣ್ಣದ ಬಗ್ಗೆ ಹೇಳಿ, ನೋಡಿ ಸೀದು ಕರುಕಲಾಗ್ಯವುರೆ ಅಂದಿರದು ಸರಿ ಸಾ.”

“ರೀ ನಾನು ಅಂಗಂದೇಯಿಲ್ಲ ಕಂಡ್ರಿ.”

“ಅಂಗನ್ನಬಾರ್ದು ಸಾರ್. ಜಮೀರಹಮದ್ ತರ ಸಮರ್ಥಿಸಿಕೋಬೇಕು.”

“ಅವುರು ಏನನ್ನು ಸಮರ್ಥಿಸಿಕೊಂಡ್ರು ರೀ?”

“ಕುಮಾರಸ್ವಾಮಿ ಬಣ್ಣದ ಬಗ್ಗೆ ಆಡಿಕೊಳ್ಳುವಾಗ, ನಾನು ಕುಳ್ಳ ಎಂದು ಹೇಳ್ಕಂಡವರೆ.”

“ಅವುರ್‍ಯಾಕಂಗಂದರು?”

“ಕೆಲವರನ್ನ ಆಡಿಕೊಬೇಕಾದ್ರೆ ಕೆಲವು ಸಾರಿ ನಮ್ಮನ್ನ ಅಣಕಿಸಿಕೊಬೇಕಾಗತ್ತೆ, ಅದ್ಕೆ ಜಮೀರು ನಾನು ಕುಳ್ಳ ಸತ್ಯ ಅಲ್ಲವ ಅಂದು ಕುಮಾರಸ್ವಾಮಿ ಬಗ್ಗೆ ಹೇಳಿದ್ದು ನಿಜ ಅಲ್ಲವಾ” ಅಂದವರೆ ಸಾರ್.

“ಅವುರನಾರ ಅನ್ಲಿ, ನಾನು ಅನ್ನದೇಯಿರೊ ಮಾತನ್ನ ತಗೊಂಡು ರಾಜಕೀಯ ಮಾಡಿದಾರಲ್ರೀ.”

“ಹಂಗಿದ್ರೆ ನೀವು ಹಿಂಗೆ ಮಾಡಬಹುದು, ಅದು ನನ್ನ ಮಾತಲ್ಲ. ಮಿಮಿಕ್ರಿ ದಯಾನಂದರನ್ನ ಹಿಡಿದು ನನ್ನಂಗೆ ಮಾತಾಡ್ಸಿದಾರೆ. ನಾನು ಖರ್ಗೆ ಅಭಿಮಾನಿ ಅವರ ಕಾಲಿನ ಧೂಳಿಗೂ ಸಮ ಅಲ್ಲ. ಅಂತ ಪ್ರೆಸ್ ಸ್ಟೇಟುಮಂಟು ಕೊಡಿ ಸಾರ್.”

“ಈಗಾಗ್ಲೆ ಕೊಟ್ಟಿದ್ದಿನಿ ಕಂಡ್ರಿ.”

“ಅದರಲ್ಲೇ ಸಿಗಾಯ್ಕಂಡಿದ್ದಿರಲ್ಲ ಸಾರ್?”

“ಎಲ್ಲಿ ಸಿಗಾಯ್ಕಂಡಿದ್ದಿನ್ರಿ?”

“ಖರ್ಗೆಯವರನ್ನ ಟೀಕೀಸಿದ್ರೆ ನಾನು ಯಾವ ಶಿಕ್ಷೆ ಬೇಕಾದ್ರು ಅನುಭವುಸ್ತಿನಿ ಅಂದಿದ್ದಿರಿ.”

“ಸರಿ ಅಂದಿಲವಲ್ಲಾ…”

“ಅಂದಿರದ ಸಾಬೀತು ಮಾಡಿಕಂಡಿದ್ದಿರಿ.”

“ಹೇಗೆ ಅಂತ?”

“ನೀವು ಯಾವ ಮಾತನ್ನ ಆಡದೆ ಖರ್ಗೆ ಹೆಸರು ಹೆಂಗೆ ಬಂತು. ಇದ್ದಕ್ಕಿದ್ದಂಗೆ ಅವರನ್ನ ಹೊಗಳೊ ಕಾರಣ ಏನು? ವೈಯಕ್ತಕವಾಗಿ ನಿಂದಿಸಿ ಕೀಳುಮಟ್ಟದ ರಾಜಕಾರಣ ಮಾಡಲ್ಲ ಅಂದು ಅದ್ನೇ ಮಾಡಿದ್ದಿರಲ್ಲಾ ಸಾರ್. ಮನುಷ್ಯನ ಬಣ್ಣ ಆಕಾರ ಆಡಿಕಳದು ಅಪರಾಧ, ಅವನ್ನ ನೀವು ಮಾಡಬಾರದಿತ್ತು.”

“ಖಂಡಿತ ಮಾಡಿಲ್ಲ ಕಂಡ್ರಿ ನನ್ನ ಬಾಯಲ್ಲಿ ಆ ಮಾತೇ ಬರಲಿಲ್ಲಾ.”

“ಸರಿ, ಮಾಧ್ಯಮದ ಎದುರಿನ ಮೈಕಿನಲ್ಲಿ ಈ ಶಬ್ದ ಬಂತು, ನಿಮ್ಮ ತುಟಿ ಕೂಡ ಚಲಿಸಿವೆ ಸಾರ್.”

“ಅದೇ ಹೇಳಿದೆನಲ್ಲಾ, ನೀವೆ ಹೇಳಿದಂಗೆ ಮಿಮಿಕ್ರಿ ಕಲಾವಿದರ ಬಳಸಿ ಏನು ಬೇಕಾದ್ರು ಮಾಡಬಹುದು.”

“ಅದನ್ನ ಕೋರ್ಟಲ್ಲಿ ಸಾಬೀತು ಮಾಡ್ಸಿ. ಸಾರ್ ಹ್ಯಾಗಿದ್ರು ಬಿಜೆಪಿಗಳಿಗೆ ಕೋರ್ಟ್ ಅಂದ್ರೆ ತುಂಬಾ ಇಷ್ಟ. ನೀವು ಕೋರ್ಟಲ್ಲಿ ನಿಮ್ಮನ್ನ ಸಮರ್ಥಿಸಿಕೊಳ್ಳಬಹುದು; ರಾಹುಲಗಾಂಧಿ ನೋಡಿ, ತಪ್ಪು ಮಾಡಿಲ್ಲ, ತಪ್ಪು ಅಂತ ಒಪ್ಪಿಗಳಲ್ಲ ಅಂದ್ರು. ಅವರ ಪ್ರಾಮಾಣಿಕ ಮಾತಿಗೆ ಕೋರ್ಟ್ ಮನ್ನಣೆ ಕೊಟ್ಟು ಅವರ ಶಿಕ್ಷೆಗೆ ಸ್ಟೇ ತಂತು ಅಲ್ಲವ?”

“ಈಗ ನಾನೇನು ಮಾಡ್ಲಿ?”

“ಏನಿಲ್ಲ ಖರ್ಗೆಯವರ ಬಣ್ಣದ ಬಗ್ಗೆ ಮಾತಾಡಿದ್ದೀನಿ. ಯಾಕಂದ್ರೆ, ನಮ್ಮ ಶ್ರೀರಾಮಚಂದ್ರ ಕಪ್ಪಗಿದ್ದ, ಹನ್ನೆರಡು ವರ್ಷ ಅರಣ್ಯದಲ್ಲಿ ಅಲದೂ ಕಾಯಿ ಕುಸುರು ತಿಂದು ಕರಕಲಾಗಿದ್ದ. ನಮ್ಮ ಖರ್ಗೆ ಸಾಹೇಬರಿಗೆ ಕಚ್ಛೆ ಹಾಕಿ ಕೈಗೆ ಬಿಲ್ಲು ಬಾಣ ಕೊಟ್ರೆ ಥೇಟ್ ಶ್ರೀರಾಮಚಂದ್ರನಂಗೇ ಕಾಣ್ತಾರೆ. ಆ ವೇಶದಲ್ಲಿ ಅವರ ಕಾಲಿಗೆ ಬೀಳಂಗಾಗತ್ತೆ; ಇನ್ನ ನಮ್ಮ ಕೃಷ್ಣನೂ ಕಪ್ಪಗಿದ್ದ. ಇವರಿಬ್ಬರು ನಮ್ಮ ಬಿಜೆಪಿ ಪಾರ್ಟಿಗೆ ಎರಡು ಚಕ್ರ ಇದ್ದಂಗೆ; ಅದರಲ್ಲೂ ಕೃಷ್ಣ ದನ ಕಾಯ್ತಾ ಕಾಯ್ತ ಕಪ್ಪಗೆ ಕರಕಲಾಗಿದ್ದ. ನಮ್ಮ ಪುರೋಹಿತಶಾಹಿಗಳು ಕಪ್ಪು ಬಣ್ಣನ ಒಪ್ಪದೇಯಿರದ್ರಿಂದ ಅವುರಿಬ್ಬರಿಗೂ ನಾಟಕದಲ್ಲಿ ಮತ್ತು ಸಿನಿಮಾದಲ್ಲಿ ನೀಲಿಬಣ್ಣ ಬಳಿತರೆ. ಈ ಭೂಮಿ ಮೇಲೆ ಯಾರಾದ್ರು ನೀಲಿ ಬಣ್ಣಕ್ಕಿದ್ದಾರ? ಆದ್ರಿಂದ ನಮ್ಮ ಪುರೋಹಿತಶಾಹಿಗಳು ಕಪ್ಪುಬಣ್ಣ ಒಪ್ಪದೆ ನೀಲಿ ಬಣ್ಣ ಬಳದು ನಾವೆಲ್ಲಾ ಕಪ್ಪುಬಣ್ಣ ದ್ವೇಷ ಮಾಡಂಗೆ ಮಾಡಿದಾರೆ. ಆ ಕಾರಣಕ್ಕೆ ನನ್ನ ಬಾಯಿ ತಪ್ಪಿ ಖಂಡ್ರೆ ಖರ್ಗೆ ಕುರಿತು ಮಾತನಾಡುವಾಗ, ಆ ಬಯಲುಸೀಮೆ, ಗುಲಬರ್ಗಾ, ರಾಯಚೂರು, ಬಳ್ಳಾರಿ ಕಡೆಯೆಲ್ಲ ಬಿಸಲಲ್ಲಿ ಬೆಂದು ಹ್ಯಂಗೆ ಕರಲಾಗ್ಯವುರೆ ನೋಡಿ ಅಂದೆ ಸಾ, ಅಂತ ಹೇಳಿ.”

“ನಿಮ್ಮ ಮಾತ ಕೇಳಿದ್ರೆ ಜೈಲಿಗೋಗಬೇಕಾಯ್ತದೆ.”

“ಮತ್ತೇನು ಮಾಡ್ತಿರಿ ಸಾರ್?”

“ನಾನು ಅಂದೇಯಿಲ್ಲ ಅಂತಿನಿ, ಮಾತು ನಂದಲ್ಲ ವಾಯ್ಸು ನಂದಲ್ಲ ಅಂತಿನಿ.”

“ಥೂತ್ತೇರಿ.”


ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...