Homeಕರ್ನಾಟಕತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

ತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

- Advertisement -
- Advertisement -

ಹೌದು, ಬಿಜೆಪಿ ಮತ್ತು ಸಂಘಪರಿವಾರದ ಒಳಗೆ ಇದೇನೂ ಗುಟ್ಟಿನ ವಿಷಯವಾಗುಳಿದಲ್ಲ. ಸೋಮಣ್ಣರ ಬಹಿರಂಗ ಅಸಮಾಧಾನ ಚಾನೆಲ್‍ಗಳಲ್ಲಿ ಸುದ್ದಿಯಾಗಿದೆ. ಆದರೆ, ಚಕ್ರವರ್ತಿ ಸೂಲಿಬೆಲೆ ಸ್ವತಃ ವಾಟ್ಸಾಪ್ ಸಂದೇಶ ಹರಿಬಿಟ್ಟಿರುವುದು ಮತ್ತು ಅವುಗಳ ಸ್ಕ್ರೀನ್‍ಷಾಟ್‍ಗಳೂ ಓಡಾಡುತ್ತಿರುವುದು ಇನ್ನೂ ಅವರ ವಲಯದೊಳಗೇ ಇದೆ. ಮೇ 23ರಂದು ತೇಜಸ್ವಿ ಹರಕೆಯ ಕುರಿಯಾದರೆ ಬಿಜೆಪಿ ಪರಿವಾರದೊಳಗಿನ ಆತನ ವಿರೋಧಿಗಳು ಸಂಪನ್ನರಾಗುವುದರಲ್ಲಿ ಸಂದೇಹವೇ ಇಲ್ಲ. ತೇಜಸ್ವಿನಿ ಅನಂತಕುಮಾರ್‍ರಿಗೆ ಟಿಕೆಟ್ ನಿರಾಕರಣೆಯಾಗಿದ್ದರಿಂದ, ಈಗಾಗಲೇ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಿರುವ ತೇಜಸ್ವಿ ಸೂರ್ಯನ ವಿರುದ್ಧ ಸಂಘಪರಿವಾರದ ಹುಡುಗರು ಮತ್ತು ಯುವ ಬ್ರಿಗೇಡ್ ಬಾಯ್ಸ್ ಸಹಾ ತೊಡೆತಟ್ಟಿದ್ದಾರೆ.

ಟಿಕೆಟ್ ಘೋಷಣೆಯಾದ ತಕ್ಷಣ ನಿದ್ದೆ ಬರ್ತಿಲ್ಲ, ನಂಗೆ ನಿದ್ದೆ ಬರ್ತಿಲ್ಲ ಎಂದು ಟ್ವೀಟ್ ಮಾಡಿದ್ದ ಎಳಸು ವ್ಯಕ್ತಿ ಈತ. ಅಲ್ಲಿಂದಾಚೆಗೆ ಟ್ವಿಟ್ಟರ್‍ನಲ್ಲಿ ಕೆಲವರು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ತೇಜಸ್ವಿ ಸೂರ್ಯನಿಂದ ತಾನು ಮೋಸ ಹೋಗಿದ್ದಾಗಿ ಸೋಮ್ ದತ್ತ ಎಂಬ ಉದ್ಯಮಿ ಟ್ವೀಟ್ ಮಾಡಿದ್ದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಆಕೆ ಹೇಳಿರುವ ಮತ್ತೊಂದು ಮಾತು ಈ ರೀತಿ ಮೋಸ ಹೋಗಿರುವುದರಲ್ಲಿ ತಾನು ಮೊದಲನೆಯವಳೂ ಅಲ್ಲ, ಕೊನೆಯವಳೂ ಅಲ್ಲ ಎಂದು. ಇದರ ಕುರಿತು ಹೊರಗಿನ ವಲಯಕ್ಕೆ ಹೆಚ್ಚು ಗೊತ್ತಿಲ್ಲದಿದ್ದರೂ, ಸಂಘಪರಿವಾರದ ವಾಟ್ಸಾಪ್ ಗುಂಪುಗಳಲ್ಲಿ ಹೆಚ್ಚಿನ ಸುದ್ದಿ ಹರಿದಾಡುತ್ತಿದೆ. ಪ್ರಮುಖವಾಗಿ ರಿಪಬ್ಲಿಕ್ ಟಿವಿಯ ಮತ್ತೊಂದು ಹುಡುಗಿಯ ಬಗ್ಗೆ ಸಹಾ ಸುದ್ದಿ ಓಡಾಡುತ್ತಿದೆ. ಅದರ ಸ್ಕ್ರೀನ್‍ಷಾಟ್‍ನಲ್ಲಿ ಹೆಸರು ಇತ್ಯಾದಿಗಳ ವಿವರವಿದೆಯಾದ್ದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ.

ಅರಬ್ ಮುಸ್ಲಿಂ ಮಹಿಳೆಯರ ಲೈಂಗಿಕತೆಯ ಕುರಿತೆಲ್ಲಾ ಅಸಭ್ಯವಾಗಿ ಟ್ವೀಟ್ ಮಾಡಿದ್ದ ತೇಜಸ್ವಿಯ ಮನಸ್ಥಿತಿ ನೋಡಿದರೆ ಇಂತಹವು ಇನ್ನೂ ಹೆಚ್ಚಿರಬಹುದೆಂದು ಯಾರಿಗೂ ಗೊತ್ತಾಗುತ್ತದೆ. ಆತ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಆತನ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್‍ಗಳ ಸುರಿಮಳೆಯಾಗಿದೆ. ಅಂಬೇಡ್ಕರ್ ಬಗ್ಗೆ ಹೇಳಿಕೆ, ಸಂವಿಧಾನ ಬದಲಿಸುವುದು, ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂಬೆಲ್ಲಾ ವಿಷಯಗಳಲ್ಲಿ ಆತ ಹಿಂದೆ ಹೇಳಿದ್ದ ಮಾತು ವಿಡಿಯೋಗಳನ್ನೆಲ್ಲಾ ತಂದು ಸುರಿದು ಅಪಹಾಸ್ಯ ಮಾಡುತ್ತಿದ್ದಾರೆ. ಮಹಿಳೆಯರ ಕುರಿತ ಈತನ ಅಸಭ್ಯ ನಡವಳಿಕೆ ಹೇಸಿಗೆ ಹುಟ್ಟಿಸುವಂತಿದೆ. ಇನ್ನು ಮೋದಿ ಮೆಚ್ಚಿಸಲು ಕನ್ನಡ ವಿರೋಧಿ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

ಮಹತ್ವದ ವಿಷಯವೆಂದರೆ ಚಕ್ರವರ್ತಿ ಸೂಲಿಬೆಲೆಗೂ ತೇಜಸ್ವಿ ಸೂಯರ್ಂಗೂ ಮೊದಲಿಂದಲೂ ಮುಸುಕಿನ ಜಗಳ ಒಳಗೊಳಗೆ ಮೊದಲಿಂದಲೂ ಇತ್ತು. ತೇಜಸ್ವಿಗೆ ಟಿಕೆಟ್ ಘೋಷಣೆಯಾದ ದಿನ ನಿದ್ದೆ ಬಾರದೇ ಇದ್ದುದು ತೇಜಸ್ವಿಗಲ್ಲ, ಸೂಲಿಬೆಲೆಗೆ ಎಂಬುದು ಪರಿವಾರದ ಒಳಗಿನ ಮಾತು. ಇವರಿಬ್ಬರ ನಡುವೆ ಪರಸ್ಪರ ಅವಕಾಶ ಕಸಿಯುವುದು, ತಪ್ಪಿಸುವುದು ಹಿಂದಿನಿಂದಲೂ ನಡೆದೇ ಇತ್ತು. ಸುಳ್ಳುಗಳನ್ನು ಹರಡುವುದರಲ್ಲಿ, ಭಾಷಣಗಳನ್ನು ಮಾಡುವುದರಲ್ಲಿ, ವಯಸ್ಸಿನಲ್ಲಿ ಎಲ್ಲಾ ರೀತಿಯಲ್ಲಿಯೂ ಮೇಲಾಗಿದ್ದ ಸೂಲಿಬೆಲೆಗೆ ಟಿಕೆಟ್ ಸಿಗದೇ ತೇಜಸ್ವಿಗೆ ದಕ್ಕಿದ್ದು ಸೂಲಿಬೆಲೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ವಾಸ್ತವದಲ್ಲಿ ಒಂದು ವರ್ಷಕ್ಕೂ ಹಿಂದಿನಿಂದಲೇ ಚಕ್ರವರ್ತಿ ಸೂಲಿಬೆಲೆ ಫಾರ್ ಸಿಎಂ ಎಂಬ ಪೇಜ್‍ಗಳೆಲ್ಲಾ ಇದ್ದು, ಅಂತಹ ಮಹತ್ವಾಕಾಂಕ್ಷೆ ಆತನಿಗೂ ಅತಿಯಾಗಿಯೇ ಇದೆ. ಅದಕ್ಕೆ ಸೂಜಿ ಚುಚ್ಚಿದಂತಾಗಿದ್ದು, ಸೂಲಿಬೆಲೆ ತನ್ನ ಭಾಷಣಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮಂಡ್ಯವನ್ನು ಉಲ್ಲೇಖಿಸುತ್ತಿದ್ದಾನೇ ಹೊರತು ಅಪ್ಪಿತಪ್ಪಿಯೂ ತೇಜಸ್ವಿ ಕುರಿತು ಒಂದೂ ಮಾತಾಡಿಲ್ಲ.

ತೇಜಸ್ವಿ ಪಕ್ಕಾ ಸಂಘದ ಉತ್ಪನ್ನ. ಸಂತೋಷ್ ಜಿ ಬಿಟ್ರೆ ಸೂರ್ಯನೆ ಟಿಪಿಕಲ್ ಸಂಘಿ ರಾಜಕಾರಣಿ. ತೇಜಸ್ವಿ ಸೂರ್ಯ ಪಿಯುಸಿ ದಿನಗಳಲ್ಲೇ ಎಂ ಎಲ್ ಎ – ಎಂ ಪಿ ಆಗ್ಬೇಕು ಅಂತ ಮಹತ್ವಾಕಾಂಕ್ಷೆ ಇಟ್ಕೊಂಡಿದ್ದ. ಅದಕ್ಕಾಗಿ ಸಂಘದ ಬೇರೆ ಹುಡುಗರನ್ನು ತುಳಿದು ಮೇಲೆ ಬರದಂತೆ ತಡೀತಿದ್ದ ಅನ್ನೋ ಆರೋಪವಿದೆ. ಸಂಘ ಪರಿವಾರದ ಸಿದ್ಧಾಂತಕ್ಕೆ ತಕ್ಕಂತೆ ಸುಳ್ಳೋ, ನಿಜವೋ ಅದನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವುದರಲ್ಲಿ ಈತನಿಗಿದ್ದ ಸಾಮಥ್ರ್ಯದ ಆಧಾರದ ಮೇಲೆ ಬಿಜೆಪಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಲಾಗಿತ್ತು. ಹಸಿ ಸುಳ್ಳುಗಳ ತಯಾರಿಕೆಯ ಆರೋಪದಲ್ಲಿ ಮಹೇಶ್ ವಿಕ್ರಮ ಹೆಗಡೆ ಜೈಲುಪಾಲಾದಾಗ ಆತನ ಪರವಾಗಿ ವಕೀಲಿಕೆ ಮಾಡಿದವನು ಇದೇ ತೇಜಸ್ವಿ ಸೂರ್ಯ.

ಈತನ ಮಾತು ಮಾತ್ರ ಸನಾತನ. ಜೀವನಶೈಲಿ ಮಾತ್ರ ಗಾಬರಿಯಾಗಬಹುದಾದಷ್ಟು ಆಧುನಿಕ. ವಿಲಾಸಿ, ಸ್ವೇಚ್ಛೆ. ಇವೆಲ್ಲಾ ಕಾರಣಗಳಿಂದ ಈತನನ್ನು ಕಂಡರೆ 50% ಬಿಜೆಪಿಗರಿಗೆ ಆಗಲ್ಲ. ಇನ್ನು 50% ಬಿಜೆಪಿಗರಿಗೆ ಅವನ್ಯಾರೆಂದೇ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸರಿಯಾದ ಕಾರಣ ಸಿಗುವವರೆಗೂ ಪ್ರಚಾರ ಮಾಡುವುದಿಲ್ಲವೆಂದು ಈಗಾಗಲೇ ವಿ. ಸೋಮಣ್ಣ ಬಂಡಾಯವೆದ್ದಿದಾಗಿದೆ. ಆರ್.ಅಶೋಕ್‍ಗಂತೂ ಮುಂದೆ ಈತ ಗೆದ್ದರೆ ಈತನೆದುರು ತಾವು ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ತಯಾರಿಲ್ಲ. ಅದಕ್ಕಾಗಿ ಈ ಬಾರಿ ತೇಜಸ್ವಿ ಸೂರ್ಯನನ್ನು ಸೋಲಿಸಲು ಸೂಲಿಬೆಲೆ, ಸೋಮಣ್ಣ, ಅಶೋಕ್‍ಆದಿಯಾಗಿ ಎಲ್ಲರೂ ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...