Homeಕರ್ನಾಟಕಹಿಜಾಬ್‌ ನಿಷೇಧ ಕುರಿತು ಹಿರೇಮಗಳೂರು ಕಣ್ಣನ್‌ ಆಕ್ಷೇಪಾರ್ಹ ಹೇಳಿಕೆ; ಆಕ್ರೋಶ

ಹಿಜಾಬ್‌ ನಿಷೇಧ ಕುರಿತು ಹಿರೇಮಗಳೂರು ಕಣ್ಣನ್‌ ಆಕ್ಷೇಪಾರ್ಹ ಹೇಳಿಕೆ; ಆಕ್ರೋಶ

ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರೇಮಗಳೂರು ಕಣ್ಣನ್ ಅವರು, ಹಿಜಾಬ್‌ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

- Advertisement -
- Advertisement -

ವಿವಾದದ ಮೂಲಕವೇ ಆರಂಭವಾಗಿ ವಿವಾದಾತ್ಮಕ ಭಾಷಣಗಳ ಮೂಲಕವೇ ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆಬಿದ್ದಿದೆ. ರಾಜಕೀಯ ಪ್ರೇರಿತ ಮಾತುಗಳೇ ಪ್ರಧಾನವಾಗಿ ರಂಗಭೂಮಿಯ ನೈಜ ಆಶಯಗಳು ಬದಿಗೆ ಸರಿದಿದ್ದು- ಈ ಸಲದ ಬಹುರೂಪಿಯ ಕೊಡುಗೆ.

ಬಿಜೆಪಿಯ ಪ್ರೊಪಗಾಂಡಗಳಲ್ಲಿ ತೀವ್ರ ತೆರನಾಗಿ ತೊಡಗಿಸಿಕೊಂಡಿರುವ, ಸುಳ್ಳುಗಳನ್ನು ಹೇಳುತ್ತಾರೆಂಬ ಅಪಖ್ಯಾತಿಗೂ ಗುರಿಯಾಗಿರುವ ಚಕ್ರವರ್ತಿ ಸೂಲಿಬೆಲೆಯಂಥವರನ್ನು ಸಮಾರೋಪ ಸಮಾರಂಭಕ್ಕೆ ಆಹ್ವಾನ ನೀಡಿದ್ದು ವಿವಾದದ ಕಿಡಿ ಹಚ್ಚಿತ್ತು. ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪನವರ ಅಸಂವಿಧಾನಿಕ ಪ್ರತಿಕ್ರಿಯೆಗಳಿಗೂ ನಾಡು ಸಾಕ್ಷಿಯಾಯಿತು. ಅನೇಕ ವಿಚಾರವಂತರು, ಕಲಾವಿದರು ಬಹುರೂಪಿಯಿಂದ ದೂರ ಉಳಿದರು.

ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಕೊನೆಗೂ ಮಾರ್ಚ್ 11ರಿಂದ ಮಾರ್ಚ್ 20ರವರೆಗೆ ನಡೆದು ತೆರೆಬಿದ್ದಿದೆ. ಬಹುರೂಪಿ ಎಬ್ಬಿಸಿರುವ ರಾಜಕೀಯ ಧೂಳು ಮಾತ್ರ ರಂಗಾಯಣದ ಅಂಗಳದಿಂಚಾಚೆಗೂ ಹಬ್ಬಿದೆ.

‘ತಾಯಿ’ ವಿಷಯವನ್ನಾಧಾರಿಸಿ ನಡೆದ ಈ ಸಲದ ಬಹುರೂಪಿಯ ಸಮಾರೋಪ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಏನು ಮಾತನಾಡಬಹುದು ಎಂಬುದನ್ನು ಎಲ್ಲರೂ ಬಲ್ಲವರಾಗಿದ್ದರು. ಆದರೆ ಹಿರಿಯ ವಿದ್ವಾಂಸ, ಕನ್ನಡದಲ್ಲೇ ಪೌರೋಹಿತ್ಯ ಮಾಡುತ್ತಾರೆಂಬ ಮೆಚ್ಚುಗೆಗೂ ಪಾತ್ರರಾಗಿರುವ ಹಿರೇಮಗಳೂರು ಕಣ್ಣನ್ ಅವರಾಡಿರುವ ಅನಿರೀಕ್ಷಿತ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.

ಕಣ್ಣನ್‌ ತಾವು ಮಾತನಾಡುತ್ತ ಹೀಗೆ ಹೇಳಿದ್ದಾರೆ: “ಹಿಜಾಬ್‌ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಶಾಲಾ, ಕಾಲೇಜುಗಳಿಂದ ಹಿಜಾಬ್ ಹೊರಟು ಹೋಗಿದೆ. ವಿದ್ಯಾರ್ಥಿಗಳು ಇನ್ನು ಮುಂದೆ ಶಾಲೆಗೆ ಬರುವಾಗ ‘ಮುಖ’ ಮುಚ್ಕೊಂಡು ಬಾರದೆ ……… ಮುಚ್ಕೊಂಡು ಬರಲಿ. ಮೈಸೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಇಂದು ಮಳೆಯ ಸುಳಿವು ಇಲ್ಲ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬಂದಿದ್ದಾನೆ ಅಂತ ಮಳೆಗೂ ಭಯ. ರಾಜ್ಯದಲ್ಲಿ ಹಿಜಾಬೇ ಹೊರಟು ಹೋಗಿದೆ, ಇನ್ನು ಮಳೆ ಯಾವ ಲೆಕ್ಕ. ಹೀಗಾಗಿ ಇನ್ನು ಮುಂದೆ ಶಾಲೆಗೆ ‘……’ ಮುಚ್ಕೊಂಡು ಬರಬೇಕು. ನನಗೆ ಈ ಮಾತು ಹೇಳಲು ಯಾವುದೇ ಭಯವಿಲ್ಲ. ವೈದ್ಯರ ಬಳಿ ಹೋದಾಗ ಎಲ್ಲ ಬಿಚ್ಚಿ ತೋರಿಸುತ್ತೇವೆ. ಹಾಗಿರುವಾಗ ಈ ವಿಚಾರ ಮಾತನಾಡಲು ಏತಕ್ಕೆ ಭಯ?” (`ಆಂದೋಲನ’ ದಿನಪತ್ರಿಕೆಯ ವರದಿ, ದಿನಾಂಕ 21- 03-2022)

ಇದನ್ನೂ ಓದಿರಿ: ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಕಣ್ಣನ್ ಅಂಥವರು ಈ ರೀತಿ ಮಾತನಾಡುತ್ತಿರುವ ಹಿಂದಿನ ಪ್ರೇರಣೆ ಯಾವುದು? ‘ತಾಯಿ’ ಎಂಬ ವಿಷಯವನ್ನಾಧರಿಸಿ ರೂಪಿಸಲಾದ ಬಹುರೂಪಿಯಲ್ಲಿ ಹೆಣ್ಣಿನ ಬಗ್ಗೆ ಈ ರೀತಿಯ ಧೋರಣೆ ಹೊರ ಹೊಮ್ಮಿದ್ದು ಹೇಗೆ? ಇತ್ಯಾದಿ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮೈಸೂರಿನ ಚಿಂತಕರಾದ ನಾ.ದಿವಾಕರ್‌, “ಇದು ಅತ್ಯಂತ ಆಘಾತಕಾರಿ ಬೆಳವಣಿಗೆ. ಕಣ್ಣನ್‌ ಅವರ ಮೇಲೆ ಗೌರವವಿತ್ತು. ಆದರೆ ಅವರು ಹೀಗೇಕಾದರು ಎಂಬುದು ತಿಳಿಯುತ್ತಿಲ್ಲ” ಎಂದು ವಿಷಾದಿಸಿದರು.

“ತಾಯಿ ಹಾಗೂ ಹಿಜಾಬ್‌ ಎನ್ನುವ ವಿಚಾರ ಬಂದಾಗ ಕಣ್ಣನ್ ಅವರಿಗೆ ಹೆಣ್ಣುಮಕ್ಕಳು ಮಾತ್ರ ಕಾಣಬೇಕಿತ್ತು. ಧರ್ಮ ಕಾಣಬಾರದಿತ್ತು. ಹೆಣ್ಣು ಮಕ್ಕಳೇ ತಾಯಿ ಅಲ್ಲವಾ? ಅಮೂರ್ತ ಕಲ್ಪನೆಯ ತಾಯಿಯನ್ನು ಸಂಕುಚಿತಗೊಳಿಸಿ, ಅದನ್ನು ಹಿಜಾಬ್‌ ಮಟ್ಟಕ್ಕೆ ಇಳಿಸಿ ಕಮೆಂಟ್ ಮಾಡುವುದು ಕಣ್ಣನ್ ಅವರ ವಿದ್ವತ್ತಿಗೆ ಸರಿ ಹೊಂದುವುದಿಲ್ಲ. ಅವರೊಂದಿಗೆ ವೇದಿಕೆಯಲ್ಲಿ ಭಾಗವಹಿಸಿದ್ದೇನೆ. ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಕನ್ನಡದ ಪೂಜಾರಿ ಎಂದು ಕರೆಸಿಕೊಂಡಿದ್ದಾರೆ. ಕನ್ನಡದ ಪೂಜಾರಿಯವರ ಬಾಯಲ್ಲಿ ಈ ರೀತಿಯ ಆಕ್ಷೇಪಾರ್ಹ ಪದಗಳು ಬರುತ್ತವೆ ಎಂದರೆ ಇವರು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

“ದಿನದಿಂದ ದಿನಕ್ಕೆ ಬಲಪಂಥದ ಹಿಡನ್ ಮುಖಗಳು ಅನಾವರಣ ಆಗುತ್ತಿವೆ. ಹೆಚ್ಚು ಕುಡಿದಾಗ ಏನಾಗುತ್ತದೆ? ವೈಯಕ್ತಿಕ ವಿವರಗಳನ್ನೆಲ್ಲ ಹೇಳಿಕೊಂಡು ಬಿಡುತ್ತಾರೆ. ಇಲ್ಲಿಯೂ ಹೀಗೆಯೇ ಆಗುತ್ತಿದೆ. ಜಾತಿ, ಧರ್ಮಗಳ ಉನ್ಮಾದ ಹೆಚ್ಚಾಗಿ ಅನೇಕರ ಅಂತರಂಗ ಬಯಲಾಗುತ್ತಿದೆ. ಈ ಉನ್ಮಾದದಲ್ಲೇ ಬಲಪಂಥೀಯರ ಕೆಡುಕೆಲ್ಲ ಹೊರಬರುತ್ತಿದೆ. ಕಾಶ್ಮೀರಿ ಫೈಲ್ಸ್ ವಿಚಾರದಲ್ಲಿಯೂ ಇದು ಸತ್ಯವಾಗಿದೆ. ಜನರಿಗೆ ಸಿನಿಮಾ ತೋರಿಸಿದ್ದೇವೆಂದು ಖುಷಿಪಡುತ್ತಿರಬಹುದು. ಆದರೆ ಜನರಿಗೆ ಗೊತ್ತಿಲ್ಲದ ವಿಷಯಗಳೆಲ್ಲ ತಿಳಿಯುತ್ತಿವೆ. ಪ್ರಕಾಶ್‌ ಬೆಳವಾಡಿ, ಪಿ.ಶೇಷಾದ್ರಿ, ಅನಂತನಾಗ್‌ ಬಳಿಕ ಕಣ್ಣನ್‌ ಅವರು ಎಕ್ಸ್‌ಪೋಸ್ ಆಗಿದ್ದಾರೆ. ಬಲಪಂಥೀಯ ಬುದ್ದಿಜೀವಿಗಳು, ಕಲಾವಿದರು ಉನ್ಮಾದಕ್ಕೆ ಒಳಗಾಗಿ ತಮ್ಮನ್ನು ತಾವೇ ಬಯಲು ಮಾಡಿಕೊಳ್ಳುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ವಿದ್ವಾಂಸರಾಗಿ ಬಂದವರು ವೇದಿಕೆಯ ಶಿಷ್ಟಾಚಾರ ಪಾಲಿಸಬೇಕಾಲ್ಲವಾ? ಬಹುರೂಪಿಯಲ್ಲಿ ಈ ಹಿಂದೆಯೂ ವಿವಾದಗಳಾಗಿವೆ. ಸೂಲಿಬೆಲೆಯಂಥವರಿಂದ ಬಹುರೂಪಿ ಕೋಮುವಾದದ ಸುಳಿಗೆ ಸಿಲುಕುತ್ತದೆ ಎಂದು ನಾವು ಆರೋಪಿಸಿದ್ದ ನಿಜವಾಗಿದೆ. ಸುಲಿಬೆಲೆಯವರು ಮಾಡಿರುವ ಸಮಾರೋಪ ಭಾಷಣ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಇಂಥವರು ಇದನ್ನಲ್ಲದೆ ರಂಗಭೂಮಿ ಕುರಿತು ಮಾತನಾಡಲು ಸಾಧ್ಯವೇ?” ಎಂದು ಕೇಳಿದರು.

ಹಿಜಾಬ್‌ ಸುಪ್ರೀಂ ಅಂಗಳದಲ್ಲಿರುವುದು ಇವರಿಗೆ ಕಾಣುವುದಿಲ್ಲವೆ?

ಬಹುರೂಪಿಯನ್ನು ಹಲವು ವರ್ಷಗಳಿಂದ ಹತ್ತಿರದಿಂದ ಕಂಡಿರುವ, ರಂಗಕರ್ಮಿಗಳೊಂದಿಗೆ ಒಡನಾಟ ಹೊಂದಿರುವ ಜಿ.ಪಿ.ಬಸವರಾಜು ಅವರು ಈ ಸಲದ ಬಹುರೂಪಿಯ ವಿವಾದದ ಕುರಿತು ಮಾತನಾಡಿದರು.

“ಕಣ್ಣನ್‌ ಅವರು ಕನ್ನಡದಲ್ಲಿ ಪೌರೋಹಿತ್ಯ ಮಾಡುತ್ತಾರೆಂಬ ಕಾರಣಕ್ಕೆ ಬಹಳ ಗೌರವವಿದೆ. ಆದರೆ ಅವರಾಡಿರುವ ಮಾತುಗಳಲ್ಲಿ ದ್ವೇಷ ಇದೆ, ಮಾತಿನ ಘನತೆಯೂ ಕಳೆದು ಹೋಗಿದೆ. ಇದನ್ನು ಎಲ್ಲರೂ ಗಮನಿಸುತ್ತಾರೆ” ಎಂದರು.

“ಹಿಜಾಬ್‌ ಕುರಿತು ಹೈಕೋರ್ಟ್ ತೀರ್ಪು ಬಂದಿದೆ ಎಂದ ಮಾತ್ರ ಮುಕ್ತಾಯವಾಗಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಹೀಗಿರುವಾಗ ಮುಚ್ಚೊಂಡು ಬನ್ನಿ ಎಂದು ಯಾರೂ ಮಾತನಾಡಬಾರದು. ಕಣ್ಣನ್‌ ಥರದವರಿಗೆ ಒಂದು ಗೌರವಿರುತ್ತದೆ. ಇಂಥವರು ಭಾಷೆಯ ಮೇಲೆ ಹಿಡಿತವಿಲ್ಲದೆ ಮಾತನಾಡುವುದು ಸರಿಯಲ್ಲ. ಒಂದು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ವಿಶ್ವಾಸದಿಂದ ಬದುಕಬೇಕು. ಬಹುಸಂಖ್ಯಾತರಾದ ಮಾತ್ರಕ್ಕೆ ಅಲ್ಪಸಂಖ್ಯಾತರನ್ನು, ದಲಿತರನ್ನು ಅವಮಾನ ಮಾಡಬಾರದು. ಇಲ್ಲಿ ಸರ್ವಾಧಿಕಾರವಿಲ್ಲ. ಪ್ರಜಾಪ್ರಭುತ್ವವಿದೆ” ಎಂದು ನೆನಪಿಸಿದರು.


ಇದನ್ನೂ ಓದಿರಿ: ಬಹುರೂಪಿ ರಂಪಾಟ: ಸೈದ್ಧಾಂತಿಕ ವಿರೋಧಿಗಳಿಗೆ ರಂಗಾಯಣದಿಂದ ಗೇಟ್‌ ಪಾಸ್‌?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ತೀರಾ ಆಘಾತಕಾರಿ ಹೇಳಿಕೆ. ಗುರು ಸಮಾನರಾದ ಶ್ರೀ ಕಣ್ಣನ್ ಅವರಿಂದ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ. ಅವರ ಘನತೆಗೆ ತಕ್ಕ ಹಿತವಚನಗಳನ್ನು ಆಡಿ ಮನವೊಲಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಶ್ರೀಯುತರ ಬಗ್ಗೆ ನಮಗಿರುವ ಗೌರವ ಕುಂದದಿರಲಿ.

  2. ಪ್ರಪಂಚದಲ್ಲಿ ಅತ್ಯಂಚ ಶ್ರೇಷ್ಠ ಪದ್ಧತಿ ಪ್ರಜಾಪ್ರಭುತ್ವ ಪದ್ಧತಿ, ಇದನ್ನು ಬೇರೆಯಾವುದೇ ನೀತಿಯ ಜೊತೆಯಲ್ಲಿ ಒರೆಗೆ ಹಾಕದೇ ಪಾಲೀಸುವುದರಿಂದ ಶಾಂತಿ, ನೆಮ್ಮದಿ, ಅಭಿವೃದ್ಧಿ,ಜೀವನ ಮಟ್ಟ ಉತ್ತಮವಾಗಬಹುದು. ಪ್ರಸ್ತುತ ಯುವಕ ಯುವತಿಯರ ಪೀಳಿಗೆಯನ್ನು ಗೊಂದಲಕ್ಕೆ ಸಿಕ್ಕಿಸದೇ ಇನ್ನಷ್ಟು ಪ್ರಗತಿಯ ನಂತರ ನಿಧಾನವಾಗಿ ಪ್ರಜ್ಞೆಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತೇನೋ ಅನಿಸುತ್ತದೆ.
    ಈಗಾಗಲೇ ದುಡಿದು ಸಂಪಾದಿಸುವ ಗಾತ್ರ ಗಣನೀಯವಾಗಿ ಕುಸಿದಿರುವುದು ಪ್ರತಿಯೊಬ್ಬರಲ್ಲೂ ಕಾಣಸಿಗುತ್ತವೆ ಹಾಗು ಜೀವನ ಮಟ್ಟದಲ್ಲಿ ಆರೋಗ್ಯದಲ್ಲಿ ಏರು ಪೇರು ಹೆಚ್ಚಾಗಿ ಮಾನಸಿಕವಾಗಿ ಡೋಲಾಯಸ್ಥಿತಿ ಕಂಡುಬರುತ್ತಿದೆ. ಈ ಪರಿಸ್ಥಿತಿಯಲ್ಲಿ ಇಡೀ ದೇಶದ ಜವಾಬ್ದಾರಿಯನ್ನು ಅರಿತು ಹಿರಿಯರು ಹಲವಾರು ರೀತಿಯಲ್ಲಿ ಮಾರ್ಗದರ್ಶನ ಮಾಡುವ ಅರ್ಥಗರ್ಭಿತ ಸಭೆಯಾಗಭೇಕು, ಈ ಕಾರ್ಯಕ್ರಮಗಳು. ಎಂಬುದು ನನ್ನ ಅನಿಸಿಕೆ..
    ಧನ್ಯವಾದಗಳು.

  3. ನರಹಂತಕ ಮೋದಿ ಗುಜರಾತಿನಲ್ಲಿ ಉಂಡು ಜೀರ್ಣಿಸಿಕೊಂಡಿರುವ ಹಿಂದುತ್ವದ ಆಹಾರ ಹೇತು ಹಾಕುತ್ತಿದ್ದಾಗ ಹೊರಬಂದ ಹೇಸಿಗೆಯಲ್ಲಿ ಬೈರಪ್ಪ, ಬೆಳವಾಡಿ, ಹೆಂಗ್ ಪುಂಗ್ಲಿ, ಮಾಳವೀಕಾ, ಜಗ್ಗೇಶ್, ಅನಂತನಾಗ್ ಇತ್ಯಾದಿಗಳು as expected. ಈಗ ಕಣ್ಣನ್ ಒಂದು additional surprise ಅಷ್ಟೇ.ಈ notoriousಗಳಿಂದ ಸೌಹಾರ್ದ ಸಮಾಜಕ್ಕೆ ಉಂಟಾಗುತ್ತಿರುವ ಹಾನಿ ತಡೆಯುವುದೇ ಜಾತ್ಯಾತೀತರಿಗೆ ಇರುವ ದೊಡ್ಡ ಸವಾಲು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...