Homeಕರ್ನಾಟಕಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಬಹುರೂಪಿ ನಾಟಕೋತ್ಸವ ವಿವಾದದ ಕುರಿತು ಚರ್ಚಿಸಲು ಇಂದು ಸಂಜೆ (ಡಿ.4, 2021) 5 ಗಂಟೆಗೆ ಮೈಸೂರಿನ ಕಲಾಮಂದಿರದ ಕಿಂದರಜೋಗಿ ಬಳಿ ಸಭೆ ಏರ್ಪಡಿಸಲಾಗಿದೆ.

- Advertisement -
- Advertisement -

ಮೈಸೂರು ರಂಗಾಯಣದ ಪ್ರತಿಷ್ಟಿತ ಕಾರ್ಯಕ್ರಮವಾದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಬಿಜೆಪಿ ಬೆಂಬಲಿತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕ ಅವಿನಾಶ್ ಅವರನ್ನು ಕರೆಸಬಾರದು ಎಂದು ‘ಪರ್ವ’ ನಾಟಕದ ಕಿರಿಯ ಕಲಾವಿದರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ಪತ್ರ ಬರೆದಿದ್ದಾರೆ.

“ಬಹುರೂಪಿ ಕಾರ್ಯಕ್ರಮವು ರಂಗಾಯಣಕ್ಕೆ ಗರಿಮೆಯದ್ದಾಗಿದೆ. ಈ ಕಾರ್ಯಕ್ರಮಕ್ಕೆ ಸಮಾಜದ ದೃಷ್ಟಿಯಲ್ಲಿ ಎಲ್ಲಾ ಸಿದ್ಧಾಂತಗಳಿಗೂ ಗೌರವಕೊಡುವ ಸಮಾನ ಮನಸ್ಕರನ್ನು ಕರೆಸಬೇಕು” ಎಂದು ಕಿರಿಯ ಕಲಾವಿದರು ಆಗ್ರಹಿಸಿದ್ದಾರೆ.

ವಿಶ್ವವಿಖ್ಯಾತಿಯನ್ನ ಬಹುರೂಪಿ ಪಡೆದಿದೆ. ಇಂತಹ ಕಾರ್ಯಕ್ರಮಕ್ಕೆ ಸಮಾನ ಮನಸ್ಕರನ್ನು ಕರೆಸಬೇಕು. ಅವರು ಯಾರೇ ಆಗಿದ್ದರೂ ಕರೆಸಬಹುದು. ಆದರೆ ಒಂದು ಪಕ್ಷದ ವಕ್ತಾರರಾಗಿರುವ ಹಾಗೂ ಸುಳ್ಳಿನ ಸರಮಾಲೆ ಹೆಣೆದು ಭಾಷಣ ಬಿಗಿದು ಕೋಮುಗಲಭೆ ಸೃಷ್ಟಿಸಿರುವ ‘ಚಕ್ರವರ್ತಿ ಸೂಲಿಬೆಲೆ’ಯನ್ನು ಕರೆಸುವುದು ಸೂಕ್ತವಲ್ಲ ಎಂದು ಕಿರಿಯ ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, “ಮತ್ತೊಬ್ಬ ಕಲಾವಿದರಾದ ಮಾಳವಿಕ ಅವಿನಾಶ್ ಅವರು ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರನ್ನೂ ಕರೆಸುವುದು ಸೂಕ್ತವಾದ. ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ ತಾವು ತುಸು ಗಂಭೀರವಾಗಿ ಆಲೋಚಿಸಿದರೆ ನಮಗೆ ಖುಷಿ ಮತ್ತು ಹಾಗೂ ಅವರಿಬ್ಬರನ್ನು ಕರೆಸುವುದನ್ನು ನಾವು ವಿರೋಧಿಸುತ್ತೇವೆ” ಎಂದು ತಿಳಿಸಿದ್ದಾರೆ.

“ನಮ್ಮ ಆಸೆ ಒಂದೇ. ನಿಮ್ಮ ಸಾರಥ್ಯದಲ್ಲಿ ಬಹುರೂಪಿಯು ಯಾವುದೇ ವಿವಾದ, ಅಡಚಣೆಗಳಿಗೆ ಕೇಂದ್ರ ಬಿಂದುವಾಗದೆ ಯಶಸ್ವಿಯಾಗಬೇಕಿದೆ” ಎಂದು ಕೋರಿರುವ ಪತ್ರದಲ್ಲಿ ಹಲವರು ಸಹಿ ಮಾಡಿದ್ದಾರೆ. “ನಿಮ್ಮ ಮಕ್ಕಳ ಸ್ಥಾನದಲ್ಲಿರುವ ಪರ್ವದ ಕಿರಿಯ ಕಲಾವಿದರು” ಎಂದು ಉಲ್ಲೇಖಿಸಿ ಅಡ್ಡಂಡ ಕಾರ್ಯಪ್ಪ ಅವರಿಗೆ ಪತ್ರ ತಲುಪಿಸಿದ್ದಾರೆ.

ಸಾಹಿತಿ ಎಸ್‌.ಎಸ್.ಭೈರಪ್ಪ ಅವರ ಕಾದಂಬರಿ ‘ಪರ್ವ’ ರಂಗಪ್ರಯೋಗದಲ್ಲಿ ಭಾಗಿಯಾಗಿದ್ದ ಕಿರಿಯ ಕಲಾವಿದರು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸದಾ ಚರ್ಚೆಯ ಮುಖ್ಯಬಿಂದುವಾಗುತ್ತಿರುವ ಅಡ್ಡಂಡ ಸಿ.ಕಾರ್ಯಪ್ಪ ಅವರು ಕಲಾವಿದರ ಮನವಿಯನ್ನು ಸ್ವೀಕರಿಸುತ್ತಾರೋ, ತಿರಸ್ಕರಿಸುತ್ತಾರೋ ನೋಡಬೇಕು. ಡಿ.10ರಿಂದ ಡಿ.19ರವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ನಡೆಯಲಿದೆ. ಡಿ. 13ರಂದು ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣ ಹಾಗೂ ಭಾಷಣ ಸ್ಪರ್ಧೆಯ ಸಮಾರೋಪ ಸಮಾರಂಭಕ್ಕೆ ಚಕ್ರವರ್ತಿ ಸೂಲಿಬೆಲೆಯವರು ಆಗಮಿಸಲಿದ್ದು, ಡಿ.11ರಂದು ನಡೆಯುವ ಬಹುರೂಪಿ ಉದ್ಘಾಟನೆಯಲ್ಲಿ ಮಾಳವಿಕಾ ಅವನಾಶ್ ಆಶಯ ಭಾಷಣ ಮಾಡಲಿದ್ದಾರೆ.

ಸೂಲಿಬೆಲೆಯವರು ಸುಳ್ಳು ಹೇಳುವ ವ್ಯಕ್ತಿಯಲ್ಲ ಎಂದು ನಾನುಗೌರಿ.ಕಾಂ ಜೊತೆ ಮಾತನಾಡಿದ್ದ ಅಡ್ಡಂಡ ಸಿ.ಕಾರ್ಯಪ್ಪ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. “ನಿಮಗೆ ಅವರು ಸುಳ್ಳು ಹೇಳಿದ್ದಾರೆಂದು ಅನಿಸಬಹುದು. ಆದರೆ ನಮಗೆ ಅವರು ಸತ್ಯಗಳನ್ನು ಹೇಳುತ್ತಿದ್ದಾರೆ ಅನಿಸುತ್ತದೆ. ಅವರನ್ನು ಕಂಡರೆ ನಿಮಗೆ ಆಗಲ್ಲ, ನಮಗೆ ಅವರನ್ನು ಕಂಡರೆ ಆಗುತ್ತದೆ” ಎಂದಿದ್ದರು.

‘ಬಹುತ್ವದ ಕುರಿತು ಕಾಳಜಿ ಇರುವ ವ್ಯಕ್ತಿಯನ್ನು ಕರೆಸಬಹುದಲ್ಲ’ ಎಂದು ಕೇಳಿದ್ದಕ್ಕೆ, “ಈ ಸಿದ್ಧಾಂತವನ್ನೆಲ್ಲ ನಿಮಗೆ ಇಟ್ಟುಕೊಳ್ಳಿ. ನಮಗಲ್ಲ. ಇನ್ನೊಬ್ಬರನ್ನು ಓಲೈಸಲು ಆಗಲ್ಲ. ಸೂಲಿಬೆಲೆ ನಿಮಗೆ ಸುಳ್ಳುಗಾರರಾಗಿರಬಹುದು. ನಮಗೆ ಸುಳ್ಳುಗಾರನಲ್ಲ. ಒಂದು ವರ್ಷ ಅಧಿಕಾರದಲ್ಲಿರುತ್ತೇನೆ, ಏನು ಬರೆದುಕೊಳ್ಳುತ್ತೀರೋ ಬರೆದುಕೊಳ್ಳಿ. ಯಾವುದಕ್ಕೂ ಧೃತಿಗೆಡುವುದಿಲ್ಲ” ಎಂದ ಅವರು ಬಹುತ್ವವನ್ನೇ ನಿರಾಕರಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದ್ದಾಗ, “ಚಕ್ರವರ್ತಿ ಸೂಲಿಬೆಲೆಯವರು ಸಮಾರೋಪ ಭಾಷಣಕ್ಕೆ ಸೂಕ್ತವ್ಯಕ್ತಿ ಎನಿಸಿದ್ದರಿಂದ ನಾವು ಕರೆದಿದ್ದೇವೆ. ಚಕ್ರವರ್ತಿ ಸೂಲಿಬೆಲೆಯವರ ವಿಚಾರವನ್ನು ಬಿಟ್ಟುಬಿಡಿ. ಅವರನ್ನು ಕರೆದಿದ್ದೇವೆ. ಬರ್ತಾರೆ, ಸಮಾರೋಪ ಭಾಷಣ ಮಾಡ್ತಾರೆ. ಆ ಭಾಷಣದಲ್ಲಿ ದೋಷಗಳನ್ನು ಕಂಡು ಹಿಡಿದು ಅದನ್ನು ಪ್ರಕಟಿಸಿ, ಅದು ನಿಮ್ಮ ಸ್ವಾತಂತ್ರ್ಯ” ಎಂದು ಪತ್ರತರ್ಕರಿಗೆ ಬೋಧನೆ ಮಾಡಿದ್ದರು.

ಬಹುರೂಪಿಯ ವಿವಾದ: ಇಂದು ಚರ್ಚೆ

ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಈ ಬಹುರೂಪಿ ಕಾರ್ಯಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. “ಬಹುರೂಪಿ ನಾಟಕೋತ್ಸವದ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಗೊಂದಲ ಮತ್ತು ಅಪಾಯಗಳನ್ನು ಕುರಿತು ಚರ್ಚಿಸಲು ಮತ್ತು ಮುಂದಿನ ನಡೆಯನ್ನು ನಿರ್ಧರಿಸಲು ಇಂದು ಸಂಜೆ (ಡಿ.4, 2021) 5 ಗಂಟೆಗೆ ಮೈಸೂರಿನ ಕಲಾಮಂದಿರದ ಕಿಂದರಜೋಗಿ ಬಳಿ ಸಭೆ ಏರ್ಪಡಿಸಲಾಗಿದೆ. ಸಮಾನ ಮನಸ್ಕ ಚಿಂತಕರ, ಸಾಂಸ್ಕೃತಿಕ ಮನಸುಗಳ ಸಭೆ ಇದಾಗಿದ್ದು, ದಯವಿಟ್ಟು ಬಂದು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕು” ಎಂದು ಚಿಂತಕ ನಾ.ದಿವಾಕರ ಅವರು ಮನವಿ ಮಾಡಿದ್ದಾರೆ.

ಬಹುರೂಪಿಗೆ ಹೋಗದಿರಲಿ ಕೆ.ಪಿ.ಸುರೇಶ್ ಮನವಿ

ಚಕ್ರವರ್ತಿ ಸೂಲಿಬೆಲೆಯಂಥವರನ್ನು ಬಹುರೂಪಿಗೆ ಆಹ್ವಾನಿಸಿರುವುದನ್ನು ಖಂಡಿಸಿರುವ ಚಿಂತಕ ಕೆ.ಪಿ.ಸುರೇಶ್ ಅವರು, ಕಾರ್ಯಕ್ರಮಕ್ಕೆ ಪ್ರಜ್ಞಾವಂತರು ಹೋಗದಿರಲು ಮನವಿ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಕಿರು ಟಿಪ್ಪಣಿಯನ್ನು ಬರೆದಿರುವ ಅವರು, ” ಇಂಗ್ಲಿಶಲ್ಲಿ ಒಂದು ಮಾತಿದೆ. ಕೋಟ್‌ ಯುವರ್‌ ಪ್ರೈಸ್!‌ ಅಂತ ಅಂದರೆ ಕೊಳ್ಳಲಾಗದವ ಅಂತ ಇಲ್ಲ! ಬೆಲೆ ಎಷ್ಟು ಅಂತ! ನಾವೇನು ಮಾಡಬಹುದು? ನಮ್ಮ ನಾಟಿವೈದ್ಯದಲ್ಲಿ ಕಾಯಿಲೆ ಬಂದರೆ ಪಥ್ಯ ಮಾಡುವ ರೂಢಿ ಇದೆ. ಅಂದರೆ ಏನನ್ನೂ ತಿನ್ನದಿರುವುದು! ಇಲ್ಲೂ ಅಷ್ಟೇ. ಈ ಉತ್ಸವಕ್ಕೆ ರಂಗಾಯಣದ ಗೇಟೊಳಗೆ ಪಾದ ಇಡುವುದಿಲ್ಲ ಎನ್ನುವ ನಿರ್ಧಾರ ಮಾಡಿದರಾಯಿತು. ಈ ನಾಟಕಗಳನ್ನು ನೋಡದಿದ್ದರೆ ಪ್ರಪಂಚ ಮುಳುಗುವುದಿಲ್ಲ. ನಮ್ಮ ಜ್ಞಾನ ಭಂಡಾರ, ಅನುಭವ ಲೋಕ ಕಡಿಮೆಯಾಗಲಾರದು!! ನಿರ್ಲಿಪ್ತವಾಗಿ ಮಾಡುವ ಬದಲು ಸಂಘಟಿತವಾಗಿ ಇದನ್ನು ಮಾಡಬಹುದು. ನಾನು ಬಹುತೇಕ ಇಂಥಾ ಗೌಜಿಗಳಿಗೆ ಹೋಗುವುದಿಲ್ಲ. ದೇಶದ ರೈತರ ದುರಂತ ನಾಟಕ, ಚೌಕಿದಾರನ ಟ್ರಾಜಿಕಾಮಿಡಿ ನೋಡಿದ ಮೇಲೆ ಈ ರಂಗ ಪ್ರಯೋಗಗಳ ಬಗ್ಗೆ ಹೆಚ್ಚು ಆಸಕ್ತಿಇಲ್ಲ” ಎಂದು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...