Homeಮುಖಪುಟಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? - ಜಿ.ಎನ್‌. ನಾಗರಾಜ್

ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ?

- Advertisement -
- Advertisement -

ಭಾರತ ಇಂದು ಎದುರಿಸುತ್ತಿರುವ ಹಲವು ರೀತಿಯ ಸಂಕಟಗಳ ಪರಿಸ್ಥಿತಿಯಲ್ಲಿ ಗಾಂಧಿ ಅವರ ಪ್ರಧಾನ ಕೊಡುಗೆ ಏನೆಂದು ನೆನೆಯುವುದು ಮಾತ್ರವಲ್ಲ, ಅವುಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯಗತ ಮಾಡಬೇಕಾದವುಗಳನ್ನು ಮಾತ್ರ ಈ ಕಿರು ಟಿಪ್ಪಣಿಯಲ್ಲಿ ಪರಿಶೀಲಿಸಬಯಸುತ್ತೇನೆ.

ಕೆಲವೇ ದಿನಗಳ ಹಿಂದೆ ದೇಶಾದ್ಯಂತ ಆರಂಭವಾದ ರೈತ ಹೋರಾಟದ ಮೊದಲ ಸುತ್ತು ಮುಗಿದಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಕೋಟ್ಯಂತರ ರೈತರು, ಕಾರ್ಮಿಕರು ಹಾಗೂ ಇತರ ಅನೇಕ ಜನ ಸಮುದಾಯಗಳು ಚಳುವಳಿಗೆ ಇಳಿದಿದ್ದಾರೆ. ಈ ಚಳುವಳಿ ಗಾಂಧಿಯವರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧೀಜಿಯವರು ಭಾರತದಲ್ಲಿ ಮೊದಲು ಕೈಗೊಂಡ ಹೋರಾಟಗಳು ಬ್ರಿಟಿಷ್ ಲೂಟಿಕೋರರು ಭಾರತದ ಬಡ ರೈತಾಪಿ ಜನರ ಮೇಲೆ ಎಸಗುತ್ತಿದ್ದ ದೌರ್ಜನ್ಯಗಳ ವಿರುದ್ಧ. ಈ ರೈತ ಹೋರಾಟಗಳಲ್ಲಿ ಪಡೆದ ಭಾಗಶಃ ಯಶಸ್ಸು ಅವರನ್ನು ಭಾರತದ ಒಬ್ಬ ಪ್ರಮುಖ ನಾಯಕರಾಗಿ ಸ್ಥಾಪಿಸಿತು. ತಿಲಕ್ ಯುಗದ ಅಂತ್ಯಕ್ಕೆ ನಾಂದಿ ಹಾಡಿತು.

PC: Central Press/Getty Images

ಬಿಹಾರದ ಚಂಪಾರಣ್ ಪ್ರದೇಶದಲ್ಲಿ, ಮ್ಯಾಂಚೆಸ್ಟರ್ ಜವಳಿ ಕೈಗಾರಿಕೆಗಳಲ್ಲಿ ಬಣ್ಣ ಹಚ್ಚುವುದಕ್ಕೆ ಬೇಕಾದ ನೀಲಿ ಬೆಳೆಯನ್ನು ಬೆಳೆಯುವಂತೆ ಒತ್ತಾಯ ಮಾಡಿ, ನಂತರ ಅದರ ಬೆಲೆಯನ್ನು ಏರುಪೇರು ಮಾಡುವುದು, ಕಂದಾಯವನ್ನು ಒತ್ತಾಯವಾಗಿ ವಸೂಲಿ ಮಾಡುವುದರ ಮೂಲಕ ಶೋಷಿಸುತ್ತಿದ್ದ ಬ್ರಿಟಿಷರು ಮತ್ತವರ ಬಾಲಂಗೋಚಿಗಳ ವಿರುದ್ಧ ಗಾಂಧೀಜಿ ಹೂಡಿದ ಚಳುವಳಿ ಅದು.

ನೀಲಿ ಬೆಳೆಯ ವಿರುದ್ಧ ಚಳುವಳಿಗೊಂದು ದೊಡ್ಡ ಇತಿಹಾಸವೇ ಇತ್ತು. ಬಂಗಾಲ, ಬಿಹಾರ, ಯುಪಿಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದ ಆಹಾರದ ಬೆಳೆಗಳನ್ನು ಕೈಬಿಟ್ಟು ನೀಲಿ ಮರದ ತೋಟಗಳನ್ನು ನೆಡಲು ಒತ್ತಾಯಿಸಲಾಯಿತು. ಆರಂಭದಲ್ಲಿ ಲಾಭಕರ ಬೆಲೆ, ತೋಟ ಮಾಡಲು ಸಾಲ ಇತ್ಯಾದಿಗಳನ್ನು ನೀಡಿ ಉತ್ತೇಜಿಸಲಾಯಿತು. ಆದರೆ ಒಮ್ಮೆ ಈ ಸಾಲ ಪಡೆದವರು ಎಂದೆಂದಿಗೂ ಸಾಲಗಾರರೇ ಆಗಿ ಉಳಿಯುವಂತಹ ದುಬಾರಿ ಬಡ್ಡಿ ಜೊತೆಗೆ, ಅನಕ್ಷರಸ್ಥ ರೈತರಿಗೆ ಲೆಕ್ಕದಲ್ಲಿ ಮೋಸ ಎಸಗಲಾಗುತ್ತಿತ್ತು.

ಇದನ್ನೂ ಓದಿ: ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

ಇದರ ವಿರುದ್ಧ ಸಿಪಾಯಿ ದಂಗೆಯ ನಂತರದ ಕೆಲವೇ ಸಮಯದಲ್ಲಿ ಬಂಗಾಲದ ಆದಿವಾಸಿಗಳು ಮತ್ತಿತರ ರೈತರು ಸ್ಥಳೀಯ ನಾಯಕತ್ವದಲ್ಲಿ ದೊಡ್ಡ ಹೋರಾಟ ಮಾಡಿದರು. ಈ ಹೋರಾಟ ಬಂಗಾಲದ ಹಲವು ಜಿಲ್ಲೆಗಳಿಗೆ ಹಬ್ಬಿತು. ಸೈನ್ಯ ಬಳಸಿ ದೊಡ್ಡ ಹತ್ಯಾಕಾಂಡ ನಡೆಸಿ ಈ ಹೋರಾಟವನ್ನು ಹತ್ತಿಕ್ಕಿದರೂ ಅದು ಜನರಲ್ಲಿ ವ್ಯಾಪಕ ಜಾಗೃತಿಯನ್ನು ಉಂಟುಮಾಡಿತು. ಆಗ ಮೈಕೆಲ್ ಮಧುಸೂದನ ದತ್ತರು ಬರೆದ ನೀಲ ದರ್ಪಣ ಎಂಬ ನಾಟಕ ಬಹಳ ಜನಪ್ರಿಯವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ನಿಷೇಧಕ್ಕೊಳಗಾಯಿತು.

ಗಾಂಧೀಜಿಯವರು ಇಂತಹ ಹೋರಾಟದ ವಾರಸುದಾರಿಕೆ ವಹಿಸಿಕೊಂಡಂತಾಯಿತು. ಗಾಂಧೀಜಿಯವರ ಚಳುವಳಿ ಚಂಪಾರಣ್‌ಗೆ ಸೀಮಿತವಾದರೂ ವ್ಯಾಪಕ ಜನಪ್ರಿಯತೆ ಪಡೆಯಿತು. ಇದರ ನಂತರ ಗಾಂಧೀಜಿ ಅಹಮದಾಬಾದ್‌ನಲ್ಲಿ ಜವಳಿ ಕೈಗಾರಿಕಾ ಕಾರ್ಮಿಕರ ಮುಷ್ಕರದಲ್ಲಿ ಮಧ್ಯಪ್ರವೇಶ ಮಾಡಿದರು. ಭಾರತದಲ್ಲಿ ಗಾಂಧೀಜಿಯವರ ಮೊದಲ ಉಪವಾಸ ಸತ್ಯಾಗ್ರಹ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಎಂಬುದು ಗಮನಾರ್ಹ.

PC:NYTimes

ಒಂದು ಕಡೆ ರೈತರ ಮೇಲೆ ಮತ್ತೊಂದು ಕಡೆ ಕಾರ್ಮಿಕರ ಮೇಲೆ ಆಳರಸರ ದಬ್ಬಾಳಿಕೆಯ ವಿರುದ್ಧ ಹೋರಾಟಗಳ ಮೂಲಕವೇ ಗಾಂಧೀಜಿ ಭಾರತದ ರಾಜಕೀಯ ನಭಕ್ಕೆ ಕಾಲಿಟ್ಟರು. ಹೀಗೆ ಸ್ವಾತಂತ್ರ್ಯ ಚಳುವಳಿಗೆ ಈ ಎರಡು ಬಹು ಮುಖ್ಯ ವರ್ಗಗಳನ್ನು ಸೆಳೆದರು ಎಂಬುದು ಗಮನಾರ್ಹ. ಚಂಪಾರಣ್ ಹೋರಾಟದಲ್ಲಿಯೇ ಗಾಂಧೀಜಿ ನಾಗರಿಕ ಹಕ್ಕುಗಳನ್ನು ಎತ್ತಿ ಹಿಡಿದು ಬ್ರಿಟಿಷ್ ಸರ್ಕಾರ ವಿಧಿಸಿದ್ದ ನಿಷೇಧವನ್ನು ಧಿಕ್ಕರಿಸಿ ಚಂಪಾರಣ್‌ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು. ಭಾರತದಲ್ಲಿ ಮೊದಲ ಬಾರಿಗೆ ಬಂಧನಕ್ಕೊಳಗಾದರು. ಜನ ಪೊಲೀಸ್ ಠಾಣೆಗಳು, ಕೋರ್ಟ್‌ಗೆ ಮುತ್ತಿಗೆ ಹಾಕಿ ಬಿಡಿಸಿಕೊಂಡು ಬಂದರು.

ಇದನ್ನೂ ಓದಿ: ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ

ಈ ಎರಡು ಹೋರಾಟಗಳ ಮೂಲಕ ಗಾಂಧೀಜಿ ತಾವು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ ಮಾಡಿ ರೂಪಿಸಿಕೊಂಡಿದ್ದ ಸತ್ಯಾಗ್ರಹವೆಂದು ಜನಜನಿತವಾದ ಶಾಂತಿಯುತ ಚಳುವಳಿಯ ವಿಧಾನವನ್ನು ಭಾರತದಲ್ಲಿ ಪ್ರಯೋಗಕ್ಕೆ ತಂದರು. ಮತ್ತಷ್ಟು ಉತ್ತಮಗೊಳಿಸಿ ಪರಿಣಾಮಕಾರಿಯಾಗಿಸಿದರು.

ಈ ವಿಧಾನಗಳು ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಗಳ (ಕೆಲವು ಹೋರಾಟಗಳು ಬೇರೆ ವಿಧಾನಗಳನ್ನು ರೂಪಿಸಿಕೊಂಡವು ಎಂಬ ಮಾತು ಬೇರೆ) ಪ್ರಮುಖ ಅಸ್ತ್ರವಾದವು ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಸತ್ಯಾಗ್ರಹ ವಿಧಾನವು ಇಡೀ ಜಗತ್ತಿನ ಜನಹೋರಾಟಗಳ ಚರಿತ್ರೆಗೆ ಪ್ರಸಿದ್ಧವಾದ ಕೊಡುಗೆಗಳಾದವು. ಸ್ವಾತಂತ್ರ್ಯಾನಂತರದ ಕಾಲದಲ್ಲಿಯೂ ಕೂಡಾ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಸತ್ಯಾಗ್ರಹ ವಿಧಾನ ಇಷ್ಟು ಪ್ರಾಮುಖ್ಯತೆ ಪಡೆಯಲು ಮುಖ್ಯವಾದ ಅಂಶವೆಂದರೆ ದೊಡ್ಡ ಪ್ರಮಾಣದಲ್ಲಿ ಜನ ಸಮುದಾಯಗಳು ಹೋರಾಟಗಳಲ್ಲಿ ಭಾಗವಹಿಸುವಂತೆ ಮಾಡಿದ್ದು. ಬಹಳ ಪ್ರಬಲವಾದ ಮಿಲಿಟರಿ ಹೊಂದಿದ, ದಬ್ಬಾಳಿಕೆ, ಕ್ರೌರ್ಯಗಳನ್ನು ನಿತ್ಯ ಬಳಸುವ ಬಲಶಾಲಿ ಸರ್ಕಾರದ ವಿರುದ್ಧ ಶಸ್ತ್ರಹೀನ ಅಥವಾ ಪ್ರಾಥಮಿಕ ರೂಪದ ಶಸ್ತ್ರಗಳನ್ನು ಮಾತ್ರ ಹೊಂದಿರುವ ಸಾಮಾನ್ಯ ಜನತೆ ಎದುರುಗೊಳ್ಳುವುದಕ್ಕೆ ಮತ್ತು ಅವು ಬೃಹತ್ ಹೋರಾಟಗಳಾಗಿ ಪರಿಣಮಿಸುವುದಕ್ಕೆ ಈ ವಿಧಾನಗಳು ನೆರವಾದವು.

PC: Commons

ಇವು ಮುಂದೆ 1920 ರ ಅಸಹಕಾರ ಚಳುವಳಿಗಳಲ್ಲಿ ಮತ್ತಷ್ಟು ವಿಸ್ತಾರಗೊಂಡವು. ಸುಡು ಸುಡು ಪರದೇಶಿಯರ ವಸ್ತ್ರವ, ತೊಡು ಖಾದಿ ಸಮಸ್ತವಾ ಎಂದು ಜನಪದವೇ ಆಗಿಬಿಟ್ಟ ಪರದೇಶಿ ವಸ್ತುಗಳ ಬಹಿಷ್ಕಾರ, ಕಾಲೇಜುಗಳು, ಕೋರ್ಟ್‌ಗಳ ಬಹಿಷ್ಕಾರ, ಸೀಮಿತ ಪ್ರಮಾಣದಲ್ಲಿ ಮಾತ್ರ ಪ್ರಯೋಗಕ್ಕೆ ಅವಕಾಶ ನೀಡಲ್ಪಟ್ಟ ಕರ ನಿರಾಕರಣೆ, ಜೈಲು ಭರೋ, ಸಾಮೂಹಿಕ ಹರತಾಳ ಇಂತಹವುಗಳು ಸತ್ಯಾಗ್ರಹಕ್ಕೆ ಸೇರಿಸಲ್ಪಟ್ಟ ಹೊಸ ವಿಧಾನಗಳಾದವು.

ಇದನ್ನೂ ಓದಿ: ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಇತ್ತೀಚಿನ ರೈತ ಪ್ರತಿರೋಧದ ಸಮಯದಲ್ಲಿ ಈ ವಿಧಾನಗಳು ವ್ಯಾಪಕ ಬಳಕೆಯಾಗುವಾಗ ಗಾಂಧೀಜಿಯವರ ನೆನಪು ಬಾರದಿದ್ದೀತೆ?

ಜೊತೆಗೆ ಅಂದು ನೀಲಿ ರೈತರು ಅನುಭವಿಸಿದ ಸಂಕಟಗಳಂತಹವೇ ಭಾರತದ ಎಲ್ಲ ರೈತರ ಮೇಲೆ ಎರಗುತ್ತಿರುವ ಸಂದರ್ಭದಲ್ಲಿ ನೀಲ ವಿದ್ರೋಹ್, ಚಂಪಾರಣ್ ಹೋರಾಟಗಳು ನೆನಪಿಗೆ ಬಾರದಿದ್ದೀತೆ ? ತಮ್ಮ ಬದುಕಿಗೆ ಅತ್ಯಗತ್ಯವಾದ ಆಹಾರದ ಬೆಳೆಗಳನ್ನು ಬಿಟ್ಟು ಪರದೇಶಗಳಿಗೆ ಅವಶ್ಯವಾದ ಬೆಳೆಗಳನ್ನು ಬೆಳೆದುದರ ಪರಿಣಾಮವಾಗಿ ಭಾರತದ ಮಿಲಿಯಗಟ್ಟಲೆ ಜನ ಹಸಿವಿನಿಂದ ನರಳಿ ಸತ್ತದ್ದು ನಮ್ಮ ನೆನಪಿಗೆ ಈಗ ಬಾರದೇ ಹೋದರೆ ಹೇಗೆ?

ಹತ್ತಿ ಬಿತ್ತಿ ಬೆಳೆಕೊಂಡೆವು ಹಾಳು

ತಿನ್ನಲು ದೊರೆಯದು ತುಸು ಕಡಿಕಾಳು

ಬಕ್ಕರಿಸುವುದೋ ಹೆಂಟೆಯ ಕೂಳು

ಬತ್ತಿತ್ತು ಅನ್ನ ಹೊತ್ತಿತು ಚಿನ್ನ

ಅನ್ನವೆಲ್ಲವೂ ಆದರೆ ಚಿನ್ನ ತಿನ್ನುವುದೇ ನನ್ನ

ಎಂಬೆಲ್ಲಾ ತುತ್ತಿನ ಚೀಲದ ಸಂಕಷ್ಟಗಳನ್ನು, ಕುರುಡು ಕಾಂಚಾಣದ ಮೆರೆದಾಟವನ್ನು ಮರೆಯುವುದು ಹೇಗೆ?

ಕಾರ್ಮಿಕರ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳನ್ನು ನಾಶ ಮಾಡುತ್ತಿರುವಾಗ ಗಾಂಧಿ ಅವರು ಕಾರ್ಮಿಕರ ಸಮಸ್ಯೆಗಳಿಗಾಗಿ ಮಾಡಿದ ಇಪ್ಪತ್ತೊಂದು ದಿನಗಳ ಉಪವಾಸವನ್ನು ಮರೆಯಲಾದೀತೆ?

ಜಿ. ಎನ್. ನಾಗರಾಜ್‌

ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್  80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣವಾಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.

ಇದನ್ನೂ ಓದಿ: ’ನಮ್ಮನ್ನ ಕ್ಷಮಿಸಿ’: ಗಾಂಧಿ ಶಿಲ್ಪ ವಿರೂಪ ಘಟನೆಗೆ ಅಮೆರಿಕ ರಾಯಭಾರಿ ಕ್ಷಮೆಯಾಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...

ಮುಂಬೈ| ಬುರ್ಖಾ ಧರಿಸಿ ಲೋಕಲ್‌ ಟ್ರೈನ್‌ನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಬಂಧನ

ಮುಂಬೈನ ಉಪನಗರ ರೈಲಿನ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ನಾಸಿಕ್‌ನ 57 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಘಟನೆ ಫೆಬ್ರವರಿ 6 ರಂದು ಘಾಟ್ಕೋಪರ್...

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...