Homeಮುಖಪುಟಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-3

ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-3

- Advertisement -
- Advertisement -

“ಜೈವಿಕ ತಂತ್ರಜ್ಞಾನ” (BIO-TECHNOLOGY) ಎಂಬ ದೊಡ್ಡ ಗಂಡಾಂತರ

ಘೋರ ಪರಿಣಾಮವುಳ್ಳ ಮತ್ತೊಂದು ಹೊಸ ತಂತ್ರಜ್ಞಾನವನ್ನು ನಮ್ಮಂತಹ ದೇಶದೊಳಕ್ಕೆ ತರುವ ದೊಡ್ಡ ಪ್ರಯತ್ನ ನಡೆದಿದೆ. ಇದನ್ನು “ಜೈವಿಕ ತಂತ್ರಜ್ಞಾನ” ಎನ್ನುತ್ತಾರೆ. ಎಂದರೆ, ಬೇರೆಬೇರೆ ಜಾತಿಯ ತಳಿಗಳ ವಂಶವಾಹಿಯನ್ನು ಬೆರೆಸಿ ಅಧಿಕ ಆಹಾರ ಉತ್ಪಾದನೆ ಮಾಡಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನ, ಕೆಲವು ಬಾರಿ ಬೇರೆಬೇರೆ ಕುಲಗಳಿಗೆ ಸೇರಿದ ಸಸ್ಯಗಳ ವಂಶವಾಹಿಯ ಬೆರಕೆ ಮತ್ತು ಕೆಲವು ಬಾರಿ ಸಸ್ಯಗಳಿಗೆ ಪ್ರಾಣಿಗಳ ವಂಶವಾಹಿ ಬೆರೆಸುವ ತಂತ್ರಜ್ಞಾನ ಇದು. ಇವುಗಳನ್ನು “ಕುಲಾಂತರಿ” ಬೀಜಗಳೆಂದು ಕರೆಯುತ್ತಾರೆ.

ತಕ್ಷಣಕ್ಕೆ, ಬೀಜದ ಕಂಪೆನಿಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಎರಡು ಗುಣಗಳಿರುವ ಕುಲಾಂತರಿ ಬೀಜಗಳನ್ನು, ಅಂದರೆ 1) ಕೀಟ ನಿರೋಧಕ ತಳಿಗಳು ಮತ್ತು 2) ಕಳೆ ನಿರೋಧಕ ತಳಿಗಳು.

ಕೀಟ ನಿರೋಧಕ ತಳಿಗಳಿಂದಾಗುವ ಹಾನಿಗಳು

ಬೀಜದ ಕಂಪೆನಿಗಳು (ಉದಾ: ಮನ್ಸಾಂಟೋ ಕಂಪೆನಿ) ನಮ್ಮ ದೇಶದಲ್ಲಿ ಪ್ರಯೋಗ ಮಾಡುತ್ತಿರುವ ಕೀಟ ನಿರೋಧಕ ತಳಿ ಬಿಟಿ (BT) ತಂತ್ರಜ್ಞಾನದ್ದು. ಬಿಟಿ (BT) ಎಂದರೆ “ಬ್ಯಾಸಿಲಸ್ ತುರಿಂಗಿಯೆನ್ಸಿಸ್” ಎಂದು. ಇದು ಒಂದು ಸೂಕ್ಷ್ಮಜೀವಿ. ಇದು ಕೀಟಗಳನ್ನು ನಾಶಮಾಡುವ ವಿಷವನ್ನು ಹೊಂದಿರುವ ಸೂಕ್ಷ್ಮ ಪ್ರಾಣಿ. ಇದನ್ನು ಹತ್ತಿ ಬೀಜದೊಳಕ್ಕೆ ಜೈವಿಕ ತಂತ್ರಜ್ಞಾನದ ಮೂಲಕ ಅಳವಡಿಸುವುದರಿಂದ, ಹತ್ತಿಯ ಗಿಡ ಬೆಳೆಯುತ್ತಾ ತನ್ನ ಎಲ್ಲ ಭಾಗಗಳಲ್ಲಿ ಕೀಟನಾಶಕ ವಿಷವನ್ನು ಉತ್ಪಾದಿಸುತ್ತದೆಯಾದ್ದರಿಂದ, ಇಂತಹ ಗಿಡದ ಯಾವುದೇ ಭಾಗವನ್ನು ಹತ್ತಿಯ ಕಾಯಿ ಕೊರೆಯುವ ಹುಳು ತಿಂದ ಕೂಡಲೇ ಸಾಯುತ್ತದೆ. ರೈತರು ಈ ಕೀಟವನ್ನು ನಾಶಮಾಡಲು ಖರ್ಚು ಮಾಡಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವ ಹತ್ತಿ ತಳಿ ಇದೆಂದು ಕಂಪನಿಯವರ ಪ್ರಚಾರ.

ಆದರೆ, ಈ ತಳಿಯ ಬಳಕೆಯಿಂದಾಗುವ ಪರಿಣಾಮಗಳೇ ಬೇರೆ

ಮೊದಲನೆಯದಾಗಿ, ಈ ಹತ್ತಿಕಾಯಿ ಕೊರೆಯುವ ಹುಳುಗಳು ಈ ಗಿಡದಲ್ಲಿರುವ ವಿಷಕ್ಕೆ ನಿರೋಧಕ ಶಕ್ತಿ ಬೆಳೆಸಿಕೊಂಡುಬಿಡುತ್ತವೆ. (ಮಲೇರಿಯಾ ಸೊಳ್ಳೆಗಳು ಡಿಡಿಟಿಗೆ ನಿರೋಧಕ ಶಕ್ತಿ ಬೆಳೆಸಿಕೊಂಡಿರುವ ರೀತಿಯಲ್ಲಿ). ಅನಂತರ ಅವು ಸಾಯುವುದೇ ಇಲ್ಲ. ಜೊತೆಗೆ ಬೇರೆ ಕೀಟಗಳೊಂದಿಗಿನ ಲೈಂಗಿಕ ಸಂಪರ್ಕದಿಂದಾಗಿ ಕೀಟನಾಶಕ ನಿರೋಧಕ ಶಕ್ತಿಯಿರುವ ಮರಿಗಳನ್ನೇ ಹುಟ್ಟಿಸುತ್ತವೆ. ಈ ಕೀಟನಾಶಕ ನಿರೋಧಕ ಶಕ್ತಿಯಿರುವ ಸಂತಾನಾಭಿವೃದ್ಧಿಯಿಂದಾಗಿ, ನಂತರ ಎಷ್ಟೇ ಕೀಟನಾಶಕ ಬಳಸಿದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. (ಆಂಧ್ರಪ್ರದೇಶದಲ್ಲಿ ಆದದ್ದು ಹೀಗೆಯೇ ಹೀಗಾಗಿಯೇ. ಅಲ್ಲಿಯ 500-600 ಹತ್ತಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡದ್ದು).

ಎರಡನೆಯದಾಗಿ, ಈ ’ಬಿಟಿ’ ವಿಷ ಕೇವಲ ಹತ್ತಿಕಾಯಿ ಕೊರೆಯುವ ಹುಳುವನ್ನು ಸಾಯಿಸಲು ನಿರ್ದಿಷ್ಟವಾಗಿ ತಯಾರಾದದ್ದೇನಲ್ಲ. ಇದು ಎಲ್ಲ ಜೀವಿಗಳನ್ನು, ಇತರ ಕೀಟಗಳನ್ನು ಕೊಲ್ಲುವಂತಹ ವಿಷ. ಹಾಗೆಯೇ, ಈ ವಿಷವು ಗಿಡದ ಎಲ್ಲ ಭಾಗಗಳಲ್ಲಿ ಉತ್ಪಾದನೆಯಾಗುವುದರಿಂದ, ಬೇರುಗಳ ಮೂಲಕ ಹಾಗೂ ನೆಲಕ್ಕೆ ಉದುರುವ ಎಲೆಗಳಲ್ಲಿರುವ ವಿಷ ಮಣ್ಣಿನೊಂದಿಗೆ ಬೆರೆತು ಮಣ್ಣಿನಲ್ಲಿರುವ, ಭೂಮಿಯ ಫಲವತ್ತತೆಗೆ ಅತ್ಯವಶ್ಯಕವಾದ ಸೂಕ್ಷ್ಮಾಣುಜೀವಿಗಳನ್ನು ಮತ್ತು ಎಲ್ಲ ರೀತಿಯ “ಬೂಷ್ಟ”ಗಳನ್ನು (Fungi) ಸಾಯಿಸುತ್ತದೆ. ಇದರಿಂದಾಗಿ, ಭೂಮಿಯ ಫಲವತ್ತತೆ ಬಹುಬೇಗ ನಾಶವಾಗುತ್ತದೆ.

ಮೂರನೆಯದಾಗಿ, ಈ ಗಿಡದ ವಿಷ ಬೇರೆ ಎಲ್ಲ ಕೀಟಗಳನ್ನು ತಿನ್ನುವ ಮಿತ್ರ ಕೀಟಗಳನ್ನು ಸಾಯಿಸಿಬಿಡುವುದರಿಂದ ಬೆಳೆಗಳಿಗೆ ಬೇರೆಬೇರೆ ರೋಗಗಳು ತಗುಲಿಕೊಳ್ಳುತ್ತವೆ. ಹತ್ತಿಯಲ್ಲದೆ ಬೇರೆ ಬೆಳೆಗಳಿಗೂ ಇದರಿಂದಾಗಿ ರೋಗಗಳು ಹೆಚ್ಚಾಗುತ್ತವೆ. ಇದಲ್ಲದೆ, ಕೀಟಗಳನ್ನು ತಿನ್ನುವ ಪಕ್ಷಿಗಳೂ ಈ ವಿಷದಿಂದಾಗಿ ಸತ್ತಿರುವುದೂ ಗಮನಕ್ಕೆ ಬಂದಿದೆ. ಈ ಕಾರಣದಿಂದಲೂ ಬೆಳೆರೋಗಗಳು ಹೆಚ್ಚಾಗುತ್ತವೆ.

ಇವೆಲ್ಲಕ್ಕಿಂತ, ಈ ’ಬಿಟಿ’ ತಳಿಯಿಂದಾಗುವ ಹಾನಿಯೇನೆಂದರೆ, ಈ ತಳಿಯ ಪರಾಗ ಸುಮಾರು 2 ಕಿಲೋಮೀಟರ್‌ವರೆಗೂ ಗಾಳಿಯಲ್ಲಿ ಪ್ರಯಾಣ ಮಾಡುತ್ತವೆ. ನಮ್ಮ ಎಲ್ಲ ದೇಶೀಯ ತಳಿಗಳಿಗೂ, ಇದರ “ಪರಾಗ ಮಾಲಿನ್ಯ”ದಿಂದಾಗಿ, ಇದರ ಎಲ್ಲ ಗುಣಗಳೂ ವರ್ಗಾವಣೆಯಾಗಿ ಕ್ರಮೇಣ ನಮ್ಮ ಎಲ್ಲ ದೇಶೀಯ ತಳಿಗಳೂ ನಾಶವಾಗುತ್ತವೆ. ನಮ್ಮ ಜೈವಿಕ ವೈವಿಧ್ಯತೆಯಂತಹ ಅಮೂಲ್ಯ ಸಂಪತ್ತು ಶಾಶ್ವತವಾಗಿ ನಾಶವಾಗುತ್ತವೆ.

ಕಳೆ ನಿರೋಧಕ ತಳಿಗಳಿಂದಾಗುವ ಹಾನಿಗಳು

ಈಗಾಗಲೇ ನಮ್ಮ ದೇಶದಲ್ಲಿ ಬೀಜದ ಕಂಪನಿಗಳು (ಮಾನ್ಸಾಂಟೊ) ಮಾರಾಟ ಮಾಡುತ್ತಿರುವ ಕಳೆ ನಿರೋಧಕ ತಳಿಯೆಂದರೆ “ರೌಂಡ್ ಅಪ್ ರೆಡಿ” – ROUND UP READY ಎನ್ನುವ ತಳಿಗಳು. “ರೌಂಡ್ ಅಪ್ ರೆಡಿ” ಎನ್ನುವುದು ಈ ಕಂಪನಿ ತಯಾರು ಮಾಡಿರುವ ಕಳೆನಾಶಕ. ಈ ಕಳೆನಾಶಕ ಉಪಯೋಗಿಸುವುದರಿಂದ, ಈ ಕಂಪೆನಿ ಕೊಡುವ “ರೌಂಡ್ ಅಪ್ ರೆಡಿ” ತಳಿಯೊಂದನ್ನು ಬಿಟ್ಟು ಮಿಕ್ಕೆಲ್ಲ ಕಳೆಗಳೂ ನಾಶವಾಗುತ್ತವೆ. ಈ ಕಾರಣ ರೈತರ ಕಳೆ ತೆಗೆಯುವ ಖರ್ಚಿನ ಉಳಿತಾಯವಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ತೆಗೆಯಬಹುದೆಂಬುದು ಈ ಕಂಪನಿಯ ಪ್ರಚಾರ.

ಆದರೆ, ಈ ತಳಿಯ ಮತ್ತು ಈ ಕಳೆನಾಶಕದ ಬಳಕೆಯಿಂದಾಗುವ ಪರಣಾಮಗಳೇ ಬೇರೆ.

ಮೊದಲನೆಯದಾಗಿ, ಈ “ರೌಂಡ್ ಅಪ್” ಎನ್ನುವ ರಸಾಯನಿಕವು, ಅಮೆರಿಕ ದೇಶವು ವಿಯೆಟ್ನಾಂ ದೇಶದ ಮೇಲೆ ಯುದ್ಧಮಾಡುವಾಗ ವಿಯೆಟ್ನಾಂನ ಕಾಡುಗಳನ್ನು ನಾಶಮಾಡಲು ಉಪಯೋಗಿಸಿದ ರಸಾಯನಿಕ. ಇದು ಯಾವುದೇ ವಿಶಿಷ್ಟ ಕಳೆಗಳನ್ನು ನಾಶಮಾಡಲು ತಯಾರುಮಾಡಿದ ರಸಾಯನಿಕವಲ್ಲ. ಹೀಗಾಗಿ, ಇದೇ ಕಂಪನಿ ತಯಾರುಮಾಡಿದ, ಈ ರಸಾಯನಿಕಕ್ಕೆ ನಿರೋಧಕ ಶಕ್ತಿಯಿರುವ ತಳಿಗಳು ಮಾತ್ರ ಬದುಕುಳಿಯುತ್ತವೆಯೇ ಹೊರತು, ಮಿಕ್ಕೆಲ್ಲ ಸಸ್ಯ ಸಂಪತ್ತು ಶಾಶ್ವತವಾಗಿ ನಾಶವಾಗುತ್ತವೆ. ನಮ್ಮ ದೇಶೀಯ ತಳಿಗಳೆಲ್ಲ ನಾಶವಾಗುತ್ತವೆ.

ಎರಡನೆಯದಾಗಿ, ಈ “ರೌಂಡ್ ಅಪ್” ರಸಾಯನಿಕ ಬಳಕೆಯಿಂದ ಮಣ್ಣಿನಲ್ಲಿರುವ ಎಲ್ಲ ಸೂಕ್ಷ್ಮಾಣುಗಳೂ ಸಾಯುತ್ತವೆ. ಎಲ್ಲ “ಬೂಸ್ಟ್” (Fungi) ಸಾಯುತ್ತವೆ, ಹೀಗಾಗಿ ಮಣ್ಣು ಫಲವತ್ತತೆ ಕಳೆದುಕೊಂಡು ಬರಡಾಗುತ್ತದೆ.

ಇದೆಲ್ಲಕ್ಕಿಂತ ಘೋರ ಅಪಾಯವೇನೆಂದರೆ, ಈ ರಸಾಯನಿಕದಲ್ಲಿ “ಏಜೆಂಟ್ ಆರೆಂಜ್” (Agent orange)ಎಂಬ ವಿಷವಿದೆ. 25 ವರ್ಷಗಳ ಹಿಂದೆ ನಡೆದ ವಿಯಟ್ನಾಂ ಯುದ್ಧದಲ್ಲಿ ಈ ರಸಾಯನಿಕದ ಸೋಂಕು ತಗುಲಿದ ಜನರಿಗೆ ಈಗಲೂ ಅಂಗವಿಕಲ ಮಕ್ಕಳು ಹುಟ್ಟುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಲೂ ಅಮೆರಿಕದ ವಿರುದ್ಧ ಕಾನೂನು ಕಟ್ಟಳೆಗಳು ನಡೆಯುತ್ತಿವೆ. ಈ ರಸಾಯನಿಕ ಬಳಸುತ್ತಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಈ ಆಪಾಯ ಕಾದಿದೆ. ನೇರ ಸಂಪರ್ಕ ಅಥವಾ ಕುಡಿಯುವ ನೀರು ಮತ್ತು ಆಹಾರದ ಜೊತೆಗೆ ಸೋಂಕು ತಗಲುವ ಕಾರಣದಿಂದ.

ವಂಶವಾಹಿ ಬೆರಕೆ (Genetically Modified food) ಆಹಾರದಿಂದಾಗುವ ಹಾನಿಗಳು

ಇತ್ತೀಚೆಗೆ, ಅಧಿಕ ಇಳುವರಿ ಕಾರಣ ಕೊಟ್ಟು ಜೈವಿಕತಂತ್ರಜ್ಞಾನದ ಮೂಲಕ ವಂಶವಾಹಿ ವಿಕೃತ ತಳಿಗಳನ್ನು ತಯಾರಿಸಲಾಗುತ್ತಿದೆ. ಈ ತಂತ್ರಜ್ಞಾನದಲ್ಲಿ ಪ್ರಾಣಿಗಳ ವಂಶವಾಹಿಯನ್ನು ಸಸ್ಯಗಳಿಗೆ ಕೊಡಿಸುವುದು ಬಹುದೊಡ್ಡ ಕಾರ್ಯಕ್ರಮವಾಗಿದೆ. ಅದರಲ್ಲಿಯೂ ಸಸ್ತನಿಗಳ (mammal) ವಂಶವಾಹಿಯನ್ನು ಅದರಲ್ಲಿಯೂ ಮಾನವನ ವಂಶವಾಹಿಯನ್ನು ಕೂಡಿಸಿ ತಯಾರುಮಾಡುವ ಸಸ್ಯದ ತಳಿಗಳು ಮಾರಾಟಕ್ಕೆ ಬರಲಿವೆ. ಇದಕ್ಕಿಂತ ದೊಡ್ಡ ಅಪಾಯ ಎಂದರೆ ಮಾನವನಿಗೆ ರೋಗ ತರುವ ರೋಗಾಣುಗಳನ್ನು ಕೂಡಿಸಿ ತಯಾರಿಸಿದ ಸಸ್ಯಗಳ ತಳಿಗಳೂ ಮಾರಾಟಕ್ಕೆ ಬರಲಿವೆ.

ಇಂತಹ ವಂಶವಾಹಿ ಬೆರಕೆ ಬೆಳೆಗಳಿಂದ ಬೆಳೆಯಲಾದ ವಂಶವಾಹಿ ವಿಕೃತ ಅಹಾರ ಸೇವನೆಯಿಂದ ಮಾನವನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ವಿಜ್ಞಾನಿಗಳು ಈಗಾಗಲೇ ಕಂಡುಕೊಂಡಿದ್ದಾರೆ.

ಮೊದಲನೆಯದಾಗಿ, ಮಾನವನ ಕರುಳಿನಲ್ಲಿರುವ ರಸಗಳಿಗೆ ಇಂತಹ ಆಹಾರದಲ್ಲಿ ಬರುವ ಜೈವಾಂಶಗಳನ್ನೆಲ್ಲ (DNA) ಅರಗಿಸಿಕೊಳ್ಳಬಲ್ಲ ಶಕ್ತಿಯಿಲ್ಲವೆಂಬುದು ಹಾಗೂ ಈ ಹೊರಗಿನ ಜೈವಾಂಶಗಳು ಬದುಕುಳಿದು ಮಾನವನ ರಕ್ತಸಂಚಾರದೊಳಗೆ ಸೇರುತ್ತವೆ ಎನ್ನುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಇವು ಮಾನವನ ಹಾಗೂ ಪ್ರಾಣಿಗಳ ಗುಲ್ಮ ಮತ್ತು ಪಿತ್ತಜನಕಾಂಗಗಳನ್ನೂ ಪ್ರವೇಶಿಸುವುದರ ಜೊತೆಗೆ ಬಿಳಿ ರಕ್ತಕಣಗಳೊಳಕ್ಕೂ ಪ್ರವೇಶ ಮಾಡುತ್ತವೆ. ಇದರಿಂದಾಗಿ, ವಿವಿಧ ರೀತಿಯ “ಅಲರ್ಜಿನಿಕ್” (Allergenic) ಅಂದರೆ, ತುರಿಕೆ ರೋಗಗಳು ಬರುತ್ತವೆ.

ರೋಗ ನಿರೋಧಕಗಳಿಗೆ ನಿರೋಧಕ ಶಕ್ತಿಯಿರುವ ವಂಶವಾಹಿಗಳು ಮಾನವನ ಕರುಳನ್ನು, ಆ ಮೂಲಕ ಮಾನವನ ರಕ್ತ ಸಂಚಾರವನ್ನು, ಆ ಮೂಲಕ ಮಾನವನ ವಂಶವಾಹಿ ರಚನೆಯನ್ನೇ ಪ್ರವೇಶ ಮಾಡುವುದರಿಂದ ಮಾನವನಿಗೆ ಕೂಡ ರೋಗ ನಿರೋಧಕಗಳಿಗೆ ನಿರೋಧಕ (STEROID RESISTANCE) ಗುಣಗಳು ಮೈಗೂಡಿ ಎಲ್ಲ ರೀತಿಯ ರೋಗಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ. ಇದು ಕ್ಯಾನ್ಸರ್ ರೋಗಕ್ಕೂ ಎಡೆಮಾಡಿಕೊಡುತ್ತದೆ.

ಜೈವಿಕ ತಂತ್ರಜ್ಞಾನಕ್ಕಾಗಿ ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು

ಅಧಿಕ ಇಳುವರಿ ಮಿಶ್ರತಳಿ ಬಳಕೆಯ ಮೊದಲನೆ ಹಸಿರು ಕ್ರಾಂತಿ (First Green Revolution Technology) ತಂತ್ರಜ್ಞಾನ ಪ್ರಪಂಚದ ಎಲ್ಲ ಜನರಿಗೆ ಆಹಾರ ಒದಗಿಸಲು ಸಾಧ್ಯವಾಗದ ಕಾರಣ ಹಾಗೂ ನಮ್ಮ ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಸಾಕಷ್ಟು ಆಹಾರ ಬೆಳೆಯಬೇಕಾಗಿರುವುದರಿಂದ ಈ ’ಜೈವಿಕ ತಂತ್ರಜ್ಞಾನ’ವನ್ನು ಎರಡನೇ ಹಸಿರು ಕ್ರಾಂತಿ (Second Green Revolution) ತಂತ್ರಜ್ಞಾನವೆಂದು ಪ್ರಚಾರ ಮಾಡಲಾಗುತ್ತಿದೆ. ಮೇಲ್ಕಂಡಂತೆ, ಇದರಿಂದ ಸಸ್ಯ ಮತ್ತು ಮಾನವ ಕುಲಕ್ಕೆ ಅಪಾಯಗಳಿವೆಯೆಂದು ಗೊತ್ತಿದ್ದರೂ ಸಹ, ಕೆಲವು ಶ್ರೀಮಂತ ಬೀಜದ ಕಂಪೆನಿಗಳು ಮತ್ತು ಕೃಷಿ ವ್ಯಾಪಾರಿಗಳ ಒತ್ತಡಕ್ಕೆ ಮತ್ತು ಆಮಿಷಗಳಿಗೆ ಬಲಿಯಾಗಿ ನಮ್ಮ ಸರ್ಕಾರ ಈಗಿರುವ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ಈ ಕಂಪೆನಿಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿವೆ.

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಮೂರನೇ ಭಾಗ. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು. ಮುಂದಿನ ವಾರ, ಕೊನೆಯ ಭಾಗ: ಸರ್ಕಾರದ ಕರಾಳ ಕಾನೂನುಗಳು)


ಇದನ್ನೂ ಓದಿ: ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...