Homeಅಂಕಣಗಳುಎಲೆಮರೆವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಕಿಳ್ಯೇಕ್ಯಾತರ ಭೀಮವ್ವ!

ವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಕಿಳ್ಯೇಕ್ಯಾತರ ಭೀಮವ್ವ!

ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕ ಹಾಗೆ ಹಾಡಿಕೆಯನ್ನು ಹೊಂದಿಸಬೇಕು. ಇದೊಂದು ಸೂಕ್ಷ್ಮವಾಗ ಕಲೆ. ಇಂತಹ ಕಲೆಯ ಎಲ್ಲಾ ವಿಭಾಗಗಳಲ್ಲೂ ಭೀಮವ್ವನಿಗೆ ಪ್ರಾವಿಣ್ಯತೆಯಿದೆ.

- Advertisement -
- Advertisement -

ಎಲೆಮರೆ-42

  • ಅರುಣ್‌ ಜೋಳದ ಕೂಡ್ಲಿಗಿ

ಕೊಪ್ಪಳದ ಮಿತ್ರ ಮಂಜುನಾಥ ಗೊಂಡಬಾಳ ತಮ್ಮ ‘ಬದಲಾವಣೆ’ ಪತ್ರಿಕೆಯಲ್ಲಿ ‘ದೇಶ ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿದ ಮಹಾನ್ ಕಲಾವಿದೆ’ ಎನ್ನುವ ಶೀರ್ಷಿಕೆಯಲ್ಲಿ 103 ವರ್ಷದ ಹಿರಿಯಜ್ಜಿ ಭೀಮವ್ವನ ಬಗ್ಗೆ ಪರಿಚಯಿಸಿದ್ದರು. ಕುತೂಹಲದಿಂದ ಅಜ್ಜಿಯ ಬಗ್ಗೆ ಮತ್ತಷ್ಟು ತಿಳಿದುಕೊಂಡೆ. ಈಚೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆಯಾದ ಮಂಜಮ್ಮ ಜೋಗತಿಯವರು 2020 ರ ‘ಜಾನಪದ ಶ್ರೀ’ ಪ್ರಶಸ್ತಿಗೆ ಭೀಮವ್ವನನ್ನು ಆಯ್ಕೆ ಮಾಡಿದ್ದು ಖುಷಿಕೊಟ್ಟಿತು. ಗಂಡುಪಾರಮ್ಯದ ಕಲೆಗಳಲ್ಲಿ ಹೆಣ್ಣುಮಕ್ಕಳು ತಮ್ಮದೇ ಛಾಪು ಮೂಡಿಸುವುದು ಜನಪದ ಕಲೆಗಳಲ್ಲಿ ವಿರಳ. ತೆರೆ ಮರೆಯಲ್ಲಿರುವುದೇ ಹೆಚ್ಚು. ಕಿಳ್ಳೇಕ್ಯಾತ ಸಮುದಾಯದ ತೊಗಲುಗೊಂಬೆ ಕಲೆ ಏಕವ್ಯಕ್ತಿ ಪ್ರದರ್ಶಿಸುವ ಕಲೆಯಲ್ಲ. ಈ ಕಲೆಗೆ ಇಡೀ ಕುಟುಂಬವೇ ಪಾಲ್ಗೊಳ್ಳಬೇಕು. ಹಾಗಾಗಿ ಮಹಿಳೆಯರು ಚಿಕ್ಕ ಮಕ್ಕಳು ಕೂಡ ತೊಗಲುಗೊಂಬೆಯಾಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರಣದಿಂದಾಗಿ ವಿಶೇಷವಾಗಿ ಈ ಕಲೆಯಲ್ಲಿ ಮಹಿಳೆಯರು ಕಾಣಸಿಗುತ್ತಾರೆ.

ಕೊಪ್ಪಳದ ಇರಕಲ್ಲಗಡಾದ ಹನುಮಟ್ಟಿಯ ಸಂಜೀವಪ್ಪ ಹೊಳೆಯಮ್ಮರ ಮಗಳಾದ ಭೀಮವ್ವ, ಕೊಪ್ಪಳದಿಂದ 22 ಕಿ.ಮೀ ದೂರದ ಮೊರನಾಳದ ತೊಗಲುಗೊಂಬೆಯಾಟದಲ್ಲಿ ಆಗಲೆ ಪ್ರಸಿದ್ಧಿ ಪಡೆದಿದ್ದ ದೊಡ್ಡಬಾಳಪ್ಪ ಅವರನ್ನು ಮದುವೆಯಾಗುತ್ತಾರೆ. ತವರು ಮನೆಯಲ್ಲಿಯೂ ಭೀಮವ್ವ ತೊಗಲುಗೊಂಬೆ ಕಲೆಯನ್ನು ಬಾಲ್ಯದಿಂದಲೇ ಕಲಿತಿದ್ದರಿಂದ ಬಾಳಪ್ಪನ ಜತೆಗಿನ ಬಾಳುವೆಯಲ್ಲಿ ತೊಗಲುಗೊಂಬೆ ಕಲೆಯನ್ನು ಭೀಮವ್ವ ಮತ್ತಷ್ಟು ತನ್ಮಯತೆಯಿಂದ ಕಲಿಯುತ್ತಾಳೆ. ಇದರಿಂದ ಬಾಳಪ್ಪನ ತೊಗಲುಗೊಂಬೆಯಾಟದಲ್ಲಿ ಭೀಮವ್ವ ತನ್ನದೇ ಪಾತ್ರ ವಹಿಸುತ್ತಾಳೆ. ಹೀಗೆ ನಡೆದ ಜೀವನದಲ್ಲಿ ವಿರೂಪಾಕ್ಷಪ್ಪ, ಯಂಕಪ್ಪ, ಹಾಗೂ ಕೇಶಪ್ಪ ಮೂವರು ಮಕ್ಕಳಾಗುತ್ತಾರೆ. ಈ ಮೂವರೂ ತೊಗಲುಗೊಂಬೆಯಾಟ ಕಲಿಯುತ್ತಾರೆ. ಸೊಸೆಯಂದಿರೂ ತೊಗಲುಗೊಂಬೆಯಾಟದಲ್ಲಿ ತೊಡಗಿಕೊಳ್ಳುತ್ತಾರೆ. ಇದೀಗ ಅಜ್ಜಿಯ ಮೊಮ್ಮಕ್ಕಳಾದ ಶಿವಪ್ಪ, ಶಿವರಾಜ, ವಸಂತಕುಮಾರ್, ಪಾಂಡುರಂಗ, ರಮೇಶ್ ಹಾಗೂ ಪರುಶುರಾಮ ಎಲ್ಲರೂ ಗೊಂಬೆಯಾಟದಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಇದೀಗ ಮರಿ ಮೊಮ್ಮಕ್ಕಳನ್ನು ಪಡೆದ ಭೀಮಜ್ಜಿಯ ಮನೆಯಲ್ಲಿ ನಾಲ್ಕು ತಲೆಮಾರಿನ ಕಲಾವಿದರಿದ್ದಾರೆ.

ಈ ಅಜ್ಜಿಗೆ ಈಗ ನೂರಮೂರು ವರ್ಷ. ಶತಕ ಪೂರೈಸಿದ ಅಜ್ಜಿ ಈಗಲೂ ಖಡಕ್ ಆಗಿ ಮಾತನಾಡುತ್ತಾರೆ. ತಾನು ಬಾಳಪ್ಪನ ತಂಡದ ಭಾಗವಾಗಿ ವಿದೇಶದಲ್ಲಿ ತೊಗಲುಗೊಂಬೆಯಾಟ ಆಡಿಸಿದ್ದನ್ನು ಬೆರಗಿನಿಂದ ಕಣ್ಮುಂದೆ ಕಟ್ಟುವಂತೆ ವಿವರಿಸುತ್ತಾರೆ. 1992 ರಲ್ಲಿ ದೆಹಲಿಯಲ್ಲಿ ಸಂಗೀತ ಮತ್ತು ನಾಟಕ ಅಕಾಡೆಮಿಯವರಿಂದ ಅಂತರಾಷ್ಟ್ರೀಯ ಪೊಪೆಟ್ರಿ ಫೆಸ್ಟಿವೆಲ್ ನಡೆಯುತ್ತದೆ. ಈ ಸಂದರ್ಭದಲ್ಲಿ ಅತ್ಯುತ್ತಮ ಮತ್ತು ಪ್ರಾಚೀನ ಬೊಂಬೆಗಳಿರುವ ತಂಡಗಳನ್ನು ಕಳಿಸಲು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗೆ ಪತ್ರ ಬರುತ್ತದೆ. ಆಗ ರಿಜಿಸ್ಟ್ರಾರ್ ಆಗಿದ್ದ ಹಿ.ಚಿ.ಬೋರಲಿಂಗಯ್ಯ ಅವರು ಮೊರನಾಳದ ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡಿ, ದೆಹಲಿಗೆ ಕರೆದುಕೊಂಡು ಹೋಗುತ್ತಾರೆ. ಈ ಫೆಸ್ಟಿವೆಲ್‍ಗೆ ಬಂದ ಯುರೋಪಿನ ಪ್ರಾನ್ಸ್ ದೇಶದ ಕಲ್ಚರ್ ಡುಮ್ಯಾಂಡೆ ಎನ್ನುವ ಸಂಸ್ಥೆಯವರು ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡುತ್ತಾರೆ. ಆಗ ಪ್ರೊ.ಹಿ.ಚಿ.ಬೋರಲಿಂಗಯ್ಯ ಮತ್ತು ಮಂಗಳೂರಿನ ಉಪಧ್ಯಾಯ ಅವರು ದೊಡ್ಡಬಾಳಪ್ಪ ಅವರ ತಂಡವನ್ನು ಕರೆದುಕೊಂಡು ಹೋಗುತ್ತಾರೆ. ಯುರೋಪಿನ ಇಟಲಿ, ಪ್ರಾನ್ಸ್, ನೆದರ್ ಲ್ಯಾಂಡ್ಸ್ ಮೂರು ದೇಶಗಳಲ್ಲಿ ಬಾಳಪ್ಪನ ತಂಡ ಪ್ರದರ್ಶನ ಕೊಡುತ್ತದೆ.

ಈ ಯುರೋಪ್‍ನ ಪ್ರವಾಸದ ನಂತರ ಕೇಂದ್ರ ಸಂಸ್ಕೃತಿ ಇಲಾಖೆಯವರು ಇರಾನಿನ ತೆಹ್ರಾನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಪೊಪೆಟ್ ಥಿಯೇಟರ್ ಫೆಸ್ಟಿವೆಲ್‍ಗೆ ದೊಡ್ಡ ಬಾಳಪ್ಪನವರ ತಂಡವನ್ನೆ ಆಯ್ಕೆ ಮಾಡುತ್ತಾರೆ. ಈ ಎಲ್ಲಾ ಪ್ರವಾಸದಲ್ಲಿ ಭೀಮವ್ವ ಹಾಡುಗಾರ್ತಿಯಾಗಿ ದೊಡ್ಡಬಾಳಪ್ಪನ ಜೊತೆ ಇರುತ್ತಾರೆ. ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರು `ದೊಡ್ಡಬಾಳಪ್ಪ ಬಹಳ ಪ್ರತಿಭಾವಂತ ಕಲಾವಿದ. ತುಂಬಾ ಪ್ರಾಚೀನವಾದ ತೊಗಲು ಗೊಂಬೆಗಳನ್ನು ಸಂರಕ್ಷಿಸಿದ್ದರು. ಬಾಳಪ್ಪನ ಹೆಂಡತಿ ಭೀಮವ್ವನಿಗೆ ಒಳ್ಳೆಯ ಕಂಠವಿತ್ತು, ಅದ್ಭುತವಾಗಿ ಹಾಡುತ್ತಿದ್ದರು, ಇವರ ತಂಡವನ್ನು ಯೂರೋಪ್ ಮತ್ತು ಇರಾನ್‍ಗೆ ಕರೆದುಕೊಂಡು ಹೋಗಿ ಬಂದದ್ದಕ್ಕೆ ಖುಷಿ ಇದೆ’ ಎನ್ನುತ್ತಾರೆ. ಹೀಗೆ ಕೊಪ್ಪಳ ಸಮೀಪದ ಹಳ್ಳಿಯೊಂದರ ಭೀಮವ್ವ ವಿದೇಶಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕ ಹಾಗೆ ಹಾಡಿಕೆಯನ್ನು ಹೊಂದಿಸಬೇಕು. ಇದೊಂದು ಸೂಕ್ಷ್ಮವಾಗ ಕಲೆ. ಇಂತಹ ಕಲೆಯ ಎಲ್ಲಾ ವಿಭಾಗಗಳಲ್ಲೂ ಭೀಮವ್ವನಿಗೆ ಪ್ರಾವಿಣ್ಯತೆಯಿದೆ. ತೊಗಲುಗೊಂಬೆ ತಯಾರಿಕೆ, ಅದಕ್ಕೆ ಬೇಕಾದ ಸ್ಥಳೀಯ ಪರಿಕರಗಳನ್ನು ಬಳಸಿ ಬಣ್ಣಗಾರಿಕೆ ಮಾಡುವುದು, ತೊಗಲುಗೊಂಬೆ ಮಾಡಲು ಜಿಂಕೆ ಚರ್ಮವನ್ನು ಹದ ಮಾಡುವುದು, ಹೀಗೆ ತೊಗಲು ಗೊಂಬೆ ತಯಾರಿಕೆಗೆ ಬೇಕಾದ ದೇಸಿ ತಿಳಿವು ಅಜ್ಜಿಗಿದೆ. ಅದನ್ನು ಮಕ್ಕಳು ಮೊಮ್ಮಕ್ಕಳಿಗೂ ಕಲಿಸಿಕೊಟ್ಟಿದ್ದಾರೆ. ಇದೀಗ ಜಿಂಕೆಯ ಚರ್ಮದ ಕೊರತೆಯಿಂದಲೋ, ಅತಿಯಾದ ಶ್ರಮ ಮತ್ತು ಕೌಶಲ್ಯ ಬೇಡುವುದರಿಂದಲೋ ಅಜ್ಜಿಯ ಮೊಮ್ಮಕ್ಕಳು ಹೊಸ ತೊಗಲುಗೊಂಬೆಗಳನ್ನು ಮಾಡುವಲ್ಲಿ ಹಿಂದೆ ಸರಿದಿದ್ದಾರೆ. ತಮಗೆ ಹೊಸ ಗೊಂಬೆಗಳು ಬೇಕಾದರೆ ಆಂದ್ರದ ಅನಂತಪುರ, ಧರ್ಮಾವರಂ, ಹಿಂದೂಪುರ ಮೊದಲಾದ ಕಡೆಗಳಿಗೆ ಹೋಗಿ ದುಬಾರಿ ಬೆಲೆಕೊಟ್ಟು ತರುತ್ತಾರೆ. ಹೀಗಾಗಿ ಈ ಕುಟುಂಬ ತೊಗಲುಗೊಂಬೆಯ ತಯಾರಿಕೆಯ ಸ್ವಾಯತ್ತತೆಯಿಂದ ಇದೀಗ ಪರಾವಲಂಬಿಯಾಗಿದೆ.

ದೇಶದ ಹಲವೆಡೆ, ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಭೀಮವ್ವ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿದ್ದಾರೆ. ಇದೀಗ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಕಲಾತಂಡಗಳಾಗಿ ದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸುವ ಮೂಲಕ ಕಲೆಯನ್ನು ಜೀವಂತಗೊಳಿಸಿದ್ದಾರೆ. 2004 ರಲ್ಲಿ ಜಾನಪದ ಯಕ್ಷಗಾನ ಅಕಾಡೆಮಿಯು ಭೀಮವ್ವನಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2014 ರಲ್ಲಿ ಭೀಮವ್ವನ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. 2010 ರಲ್ಲಿ ಡಿಸೆಂಬರ್ 1 ರಿಂದ 5 ರ ತನಕ ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಬೆಂಗಳೂರಿನಲ್ಲಿ ಆಯೋಜಿಸಿದ `ತೊಗಲುಗೊಂಬೆ ಪರಂಪರೆ’ ಕಾರ್ಯಕ್ರಮದಲ್ಲಿ ಈ ಕುಟುಂಬದ ನಾಲ್ಕೈದು ಜನ ಪ್ರತ್ಯೇಕ ತೊಗಲುಗೊಂಬೆ ಪ್ರಸಂಗಗಳನ್ನು ಪ್ರದರ್ಶನ ಮಾಡಿ ಗಮನ ಸೆಳೆದಿದ್ದರು. ಭೀಮವ್ವನ ದೇಶಿ ತಿಳಿವನ್ನು ಸಂಗ್ರಹಿಸುವ ಅಗತ್ಯವಿದೆ. ನೂರಾ ಮೂರು ವರ್ಷದ ಅಜ್ಜಿಯ ಆರೋಗ್ಯ ಚೆನ್ನಾಗಿರಲಿ, ಮತ್ತಷ್ಟು ಪ್ರದರ್ಶನ ನೀಡುವ ಚೈತನ್ಯ ಹೆಚ್ಚಲಿ ಎಂದು ಪತ್ರಿಕೆ ಆಶಿಸುತ್ತದೆ.


ಇದನ್ನು ಓದಿ: ಜೇನುಕುರುಬರ ಒಳಿತಾಗಿ ದುಡಿವ ಗಟ್ಟಿಗಿತ್ತಿ ಜಾನಕಮ್ಮ.. ಎಲೆಮರೆ-4

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...