Homeಮುಖಪುಟಪಿಎಂ ಕೇರ್ಸ್ ನಿಧಿಯಡಿ ಖರೀದಿಸಿರುವ ವೆಂಟಿಲೇಟರ್ ಬಳಸಬೇಕಾದರೆ 'ಬ್ಯಾಕಪ್' ವೆಂಟಿಲೇಟರ್ ಅಗತ್ಯ..!

ಪಿಎಂ ಕೇರ್ಸ್ ನಿಧಿಯಡಿ ಖರೀದಿಸಿರುವ ವೆಂಟಿಲೇಟರ್ ಬಳಸಬೇಕಾದರೆ ‘ಬ್ಯಾಕಪ್’ ವೆಂಟಿಲೇಟರ್ ಅಗತ್ಯ..!

- Advertisement -
- Advertisement -

ಕೇಂದ್ರ ಸರ್ಕಾರವು ಆದೇಶಿಸಿರುವ 10,000 ಕಡಿಮೆ ಬೆಲೆಯ ವೆಂಟಿಲೇಟರ್ ‌ಗಳ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯದ ಬಗ್ಗೆ ಸರ್ಕಾರದಿಂದ ನೇಮಕಗೊಂಡ ಎರಡು ಸಮಿತಿಗಳು ಕಳವಳ ವ್ಯಕ್ತಪಡಿಸಿದೆ ಎಂದು ‘ಹಫ್‌ಪೋಸ್ಟ್ ಇಂಡಿಯಾ’ ವರದಿ ಮಾಡಿದೆ.

ಭಾರತೀಯ ಸ್ಟಾರ್ಟ್ಅಪ್ ‘ಆಗ್ವಾ ಹೆಲ್ತ್‌ಕೇರ್’ ತಯಾರಿಸಿದ ಈ ವೆಂಟಿಲೇಟರ್‌ಗಳನ್ನು ಕೇಂದ್ರ ಸರ್ಕಾರ ಖರೀದಿಸಬಹುದು ಎಂದು ವೈದ್ಯರ ಸಮಿತಿಯೊಂದು ಜೂನ್ 1, 2020 ರ ಕ್ಲಿನಿಕಲ್ ಮೌಲ್ಯಮಾಪನ ವರದಿಯಲ್ಲಿ ಹೇಳಿದೆ, ಆದರೆ ಆಗ್ವಾ ಅವರ ಕೋವಿಡ್-ಮಾದರಿ ವೆಂಟಿಲೇಟರ್‌ಗಳನ್ನು ತೃತೀಯ ಆರೈಕೆಯ ಹೈಎಂಡ್ ಐಸಿಯುಗಳ ವೆಂಟಿಲೇಟರುಗಳ ಬದಲಿಯಾಗಿ ಪರಿಗಣಿಸಬಾರದು, ಈ ವೆಂಟಿಲೇಟರ್‌ಗಳನ್ನು ಬಳಸುವಾಗ ಬ್ಯಾಕಪ್ ವೆಂಟಿಲೇಟರ್‌ ಕೂಡಾ ಇರಬೇಕು ಎಂದು ತಜ್ಞರು ಹೇಳಿದ್ದಾರೆ.

ಜೂನ್ 1 ರ ವರದಿಯು ಆಗ್ವಾ ವೆಂಟಿಲೇಟರ್‌ಗಳನ್ನು ಸರ್ಕಾರವು ಎರಡನೇ ಬಾರಿಗೆ ಮೌಲ್ಯಮಾಪನ ಮಾಡಿದೆ. ಎರಡು ವಾರಗಳ ಹಿಂದೆ ಮೇ 16 ರಂದು, ಮತ್ತೊಂದು ಕ್ಲಿನಿಕಲ್ ಮೌಲ್ಯಮಾಪನ ಸಮಿತಿಯು ಆಗ್ವಾ ಸಾಧನಗಳನ್ನು ಅನುಮೋದಿಸುವ ಮೊದಲು “ಹೆಚ್ಚಿನ ತಾಂತ್ರಿಕ ಮೌಲ್ಯಮಾಪನ” ಅಗತ್ಯವಿದೆ ಎಂದು ತೀರ್ಮಾನಿಸಿತ್ತು.

ಕೋವಿಡ್ ರೋಗಿಗಳ ನಿರೀಕ್ಷಿತ ಉಲ್ಬಣವನ್ನು ನಿಭಾಯಿಸಲು ಆಸ್ಪತ್ರೆಗಳಿಗೆ 50,000 ವೆಂಟಿಲೇಟರ್‌ಗಳನ್ನು ಖರೀದಿಸುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಮಾರ್ಚ್ 27 ರಂದು 10,000 ಆಗ್ವಾ ವೆಂಟಿಲೇಟರ್‌ಗಳಿಗೆ ಆದೇಶ ನೀಡಲಾಯಿತು. ವಿವಾದಾತ್ಮಕ ಪಿಎಂಕೇರ್ಸ್ ನಿಧಿಯಡಿಯಲ್ಲಿ ಈ ವೆಂಟಿಲೇಟರ್ಗಳನ್ನು ಖರೀದಿಸಲಾಗಿದೆ.

ವೆಂಟಿಲೇಟರ್‌ಗಳ ಜಾಗತಿಕ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಒಮ್ಮೆ ಆದೇಶವನ್ನು ನೀಡಿದರೆ, ತಜ್ಞರ ಸಮಿತಿಯು ಅನುಮೋದಿಸಿದ ನಂತರವೇ ಸರ್ಕಾರವು ಸಾಧನಗಳನ್ನು ಸ್ವೀಕರಿಸುತ್ತದೆ ಎಂಬ ಷರತ್ತಿನ ಮೇಲೆ ಬಿಡ್ ಮಾಡಲು ಭಾರತೀಯ ಕಂಪನಿಗಳನ್ನು ಆಹ್ವಾನಿಸಲಾಗಿತ್ತು.


ಓದಿ: ದೆಹಲಿಯಲ್ಲಿ ಅಮಿತ್ ಶಾ ಹಾಗೂ ಕೇಜ್ರಿವಾಲ್ ಎಂಬ ಎರಡು ಮಾದರಿಯಿದೆ; ಸಿಸೋಡಿಯಾ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...