Homeಅಂತರಾಷ್ಟ್ರೀಯಆಸ್ಟ್ರೀಯಾ: ರಾಜಧಾನಿ ವಿಯೆನ್ನಾದ 6 ಸ್ಥಳಗಳಲ್ಲಿ ಗುಂಡಿನ ದಾಳಿ; 3 ಸಾವು

ಆಸ್ಟ್ರೀಯಾ: ರಾಜಧಾನಿ ವಿಯೆನ್ನಾದ 6 ಸ್ಥಳಗಳಲ್ಲಿ ಗುಂಡಿನ ದಾಳಿ; 3 ಸಾವು

- Advertisement -
- Advertisement -

ಸೋಮವಾರ ರಾತ್ರಿ ಆಸ್ಟ್ರೀಯಾ ರಾಜಧಾನಿ ವಿಯೆನ್ನಾದಾದ್ಯಂತ ಆರು ಸ್ಥಳಗಳಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು,  ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು ಸುಮಾರು 15 ಜನರು ಗಾಯಗೊಂಡಿದ್ದಾರೆ.

ವಿಯೆನ್ನಾ ಬಳಿ ಪ್ರಾರಂಭವಾದ ಗುಂಡಿನ ದಾಳಿಯ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ಆಸ್ಟ್ರಿಯಾದ ಚಾನ್ಸೆಲರ್ ಸೆಬಾಸ್ಟಿಯನ್ ಕುರ್ಜ್ ಗುಂಡಿನ ದಾಳಿಯನ್ನು, “ಪ್ರತಿಕಾರದ ಭಯೋತ್ಪಾದಕ ದಾಳಿ” ಎಂದು ಬಣ್ಣಿಸಿದ್ದು, ಬಂದೂಕುಧಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಮತ್ತು ವೃತ್ತಿಪರವಾಗಿ ತಯಾರಾಗಿದ್ದರು” ಎಂದಿದ್ದಾರೆ.

ಇದನ್ನೂ ಓದಿ: ’ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರ’: ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ವ್ಯಾಪಕ ವಿರೋಧ

“ಇದು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ನಡುವೆ ಅಥವಾ ಆಸ್ಟ್ರಿಯನ್ನರು ಮತ್ತು ವಲಸಿಗರ ನಡುವಿನ ಜಗಳವಲ್ಲ. ಇದು ಶಾಂತಿಯನ್ನು ನಂಬುವ ಅನೇಕ ಜನರು ಮತ್ತು ಯುದ್ಧವನ್ನು ಬಯಸುವ ಕೆಲವೇ ಜನರ ನಡುವಿನ ಹೋರಾಟವಾಗಿದೆ” ಎಂದು ಅವರು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಟ್ರೀಯಾದಲ್ಲಿ ಎರಡನೇ ಬಾರಿಗೆ ಲಾಕ್​ಡೌನ್ ಘೋಷಿಸಲಾಗಿತ್ತು. ಲಾಕ್​ಡೌನ್ ಆರಂಭವಾಗುವ ಕೆಲ ಗಂಟೆಗಳ ಮುಂಚೆ ರಾತ್ರಿ 8 ಗಂಟೆ ಹೊತ್ತಿಗೆ ಬಂದೂಕುಧಾರಿಗಳು ಶಸ್ತ್ರಾಸ್ತ್ರಗಳನ್ನ ಹಿಡಿದು ರಸ್ತೆಗಳಲ್ಲಿ ಓಡಾಡುತ್ತಾ ಸಿಕ್ಕಸಿಕ್ಕವರ ಮೇಲೆ ಗುಂಡು ಹಾರಿಸಿದ್ದಾರೆ.

ವಿಶ್ವದಾದ್ಯಂತ ದೇಶಗಳು ದಾಳಿಯನ್ನು ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಸ್ಟ್ರೀಯಾವನ್ನು ಬೆಂಬಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ”ವಿಯೆನ್ನಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ತೀವ್ರ ಆಘಾತ ಮತ್ತು ದುಃಖಕ್ಕೊಳಗಾಗಿದ್ದೇನೆ. ಈ ದುರಂತ ಸಮಯದಲ್ಲಿ ಭಾರತ ಆಸ್ಟ್ರಿಯಾದೊಂದಿಗೆ ನಿಲ್ಲುತ್ತದೆ” ಎಂದು ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದ ನಟಿ ಕಂಗನಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...