Homeಕರೋನಾ ತಲ್ಲಣಕೊರೊನಾ ಲಸಿಕೆ ಮುಂದಿನ ವರ್ಷಕ್ಕೆ ಸಿದ್ಧವಾಗಬಹುದು: ಕೇಂದ್ರ ಸಚಿವ ಹರ್ಷವರ್ಧನ್

ಕೊರೊನಾ ಲಸಿಕೆ ಮುಂದಿನ ವರ್ಷಕ್ಕೆ ಸಿದ್ಧವಾಗಬಹುದು: ಕೇಂದ್ರ ಸಚಿವ ಹರ್ಷವರ್ಧನ್

ಲಸಿಕೆಯ ಪರಿಣಾಮವನ್ನು ಪರೀಕ್ಷಿಸಲು ಸ್ವತಃ ನಾನೇ ಲಸಿಕೆ ತೆಗೆದುಕೊಳ್ಳಬೇಕೆನ್ನುವುದಾದರೆ, ಸಂತೋಷದಿಂದ ತೆಗೆದುಕೊಳ್ಳುತ್ತೇನೆ” ಎಂದು ಸಚಿವರು ಹೇಳಿದರು.

- Advertisement -
- Advertisement -

ಕೊರೊನಾ ಲಸಿಕೆ ಬಿಡುಗಡೆ ಮಾಡಲು ಇನ್ನೂ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಇದು ಸಿದ್ಧವಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಸಂವಾದ ಕಾರ್ಯಕ್ರಮವಾದ ‘ಸಂಡೇ ಸಂವಾದ’ದಲ್ಲಿ ಸಚಿವರು ಈ ಮಾತನ್ನು ಹೇಳಿದರು.

ಅತಿದೊಡ್ಡ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೊರೊನಾ ಲಸಿಕೆ ಪ್ರಯೋಗವನ್ನು ಬ್ರಿಟಿಷ್ ನಿಯಂತ್ರಕರಿಂದ ಹಿಂದಕ್ಕೆ ಪಡೆದು, ನಂತರ ಮತ್ತೆ ಪುನರಾರಂಭಿಸುವುದಾಗಿ ಘೋಷಿಸಿದ ಒಂದು ದಿನದ ನಂತರ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ.

“ಲಸಿಕೆಯ ಮಾನವ ಪ್ರಯೋಗಗಳನ್ನು ನಡೆಸುವಲ್ಲಿ ಸರ್ಕಾರ ಸಂಪೂರ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಸಚಿವರು ಭರವಸೆ ನೀಡಿದರು. “ಲಸಿಕೆ ಸುರಕ್ಷತೆ, ವೆಚ್ಚ, ಈಕ್ವಿಟಿ, ಕೋಲ್ಡ್-ಚೈನ್ ಅವಶ್ಯಕತೆಗಳು, ಉತ್ಪಾದನಾ ಸಮಯಸೂಚಿಗಳು ಇತ್ಯಾದಿಗಳ ಬಗ್ಗೆಯೂ ತೀವ್ರವಾಗಿ ಚರ್ಚಿಸಲಾಗುತ್ತಿದೆ” ಎಂದು ಹರ್ಷವರ್ಧನ್ ಹೇಳಿದರು.

ಇದನ್ನೂ ಓದಿ: ಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಸಹಕಾರದಿಂದ ಹೊರಗೆ: ಅಮೇರಿಕಾ ನಿರ್ಧಾರ

“ಲಸಿಕೆ, ಒಮ್ಮೆ ಸಿದ್ಧವಾದರೆ, ಅದು ಹೆಚ್ಚು ಅಗತ್ಯವಿರುವವರಿಗೆ ಲಭ್ಯವಾಗಲಿದೆ. ಆದರೆ ಲಸಿಕೆಯ ಮೊದಲ ಪ್ರಮಾಣವನ್ನು ಸ್ವೀಕರಿಸಲು ಸಂತೋಷವಾಗುತ್ತದೆ” ಎಂದು ಸಚಿವರು ಹೇಳಿದರು.

ಸೋಷಿಯಲ್ ಮೀಡಿಯಾ ಬಳಕೆದಾರರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ, ಕೊರೊನಾಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಸಚಿವರು ತಮ್ಮ ಒಂದು ಗಂಟೆ ಸಂವಾದದಲ್ಲಿ ಚರ್ಚಿಸಿದರು.

* ಭಾರತದಲ್ಲಿ ಹಲವಾರು ಲಸಿಕೆ ಪ್ರಯೋಗಗಳು ನಡೆಯುತ್ತಿವೆ. ಪ್ರಸ್ತುತ, ಯಾವುದು ಹೆಚ್ಚು ಪರಿಣಾಮಕಾರಿಯಾಗಿ ಹೊರಹೊಮ್ಮುತ್ತದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಆದರೆ 2021 ರ ಮೊದಲ ತ್ರೈಮಾಸಿಕದ ವೇಳೆಗೆ ನಾವು ಖಂಡಿತವಾಗಿಯೂ ಅದರ ಫಲಿತಾಂಶಗಳನ್ನು ತಿಳಿಯುತ್ತೇವೆ ಎಂದು ಸಚಿವ ಹರ್ಷವರ್ಧನ್ ಹೇಳಿದರು.

* ಲಸಿಕೆ ತಜ್ಞರ ಗುಂಪನ್ನು ಸ್ಥಾಪಿಸಲಾಗಿದೆ. ಇದು ಸಂಪೂರ್ಣ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದೆ. ಪ್ರಾಯೋಗಿಕ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲಾಗಿದ್ದರೂ, ಸಮಯ ವ್ಯರ್ಥವಾಗದಂತೆ ತಯಾರಕರಿಗೆ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಲು ಸೂಚಿಸಲಾಗುವುದು ಎಂದು ಸಚಿವರು ಹೇಳಿದರು.

* ಲಸಿಕೆಯ ಪರಿಣಾಮವನ್ನು ಪರೀಕ್ಷಿಸಲು ಸ್ವತಃ ನಾನೇ ಲಸಿಕೆ ತೆಗೆದುಕೊಳ್ಳಬೇಕೆನ್ನುವುದಾದರೆ, ಸಂತೋಷದಿಂದ ತೆಗೆದುಕೊಳ್ಳುತ್ತೇನೆ” ಎಂದು ಸಚಿವರು ಹೇಳಿದರು.


ಇದನ್ನೂ ಓದಿ: ಕೊರೊನಾ ಲಸಿಕೆ ಪ್ರಯೋಗ ನಿಲ್ಲಿಸಿದ ಅಸ್ಟ್ರಾಜೆನೆಕಾ ಕಂಪನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...