Homeಮುಖಪುಟಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮೇಲೆ FIR!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮೇಲೆ FIR!

- Advertisement -
- Advertisement -

ಪ್ರಮುಖ ರಿಯಲ್ ಎಸ್ಟೇಟ್ ಗ್ರೂಪ್ ಆಮ್ರಪಾಲಿ ಜೊತೆಗಿನ ಒಡನಾಟ ಭಾರತ ಕ್ರೀಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿಗೆ ಉರುಳಾಗಿ ಪರಿಣಾಮಿಸಿದೆ. ಅಮ್ರಪಾಲಿ ಹಗರಣದ ಪಿತೂರಿಯಲ್ಲಿ ಎಂ.ಎಸ್.ಧೋನಿ ಭಾಗಿಯಾಗಿದ್ದಾರೆಂದು ಆರೋಪಿಸಿ ಎಫ್.ಐ.ಆರ್ ದಾಖಲಿಸಲಾಗಿದೆ.

ಆಮ್ರಪಾಲಿ ರಿಯಲ್ ಎಸ್ಟೇಟ್ ಗ್ರೂಪ್‌ನ ರಾಯಭಾರಿಯಾಗಿದ್ದ ಧೋನಿ ಮತ್ತು ಬಿಲ್ಡರ್ ಅನಿಲ್ ಶರ್ಮ ಹೆಸರಾಂತ ವ್ಯಕ್ತಿಗಳಾಗಿದ್ದು ಅವರ ಮೇಲಿನ ನಂಬಿಕೆಯಿಂದಲೇ ನಾವು ಪ್ಲಾಟುಗಳನ್ನು ಕೊಂಡಕೊಳ್ಳಲು ಹಣ ಹೂಡಿಕೆ ಮಾಡಿದ್ದಾಗಿ ಎಫ್.ಐ.ಆರ್ ನಲ್ಲಿ ಬಾಧಿತರು ಹೇಳಿಕೊಂಡಿದ್ದಾರೆ.

ಆಮ್ರಪಾಲಿ ಸಂಸ್ಥೆ ಪ್ಲಾಟ್‌ಗಳನ್ನು ನೀಡುವ ನೆಪದಲ್ಲಿ ದೊಡ್ಡ ಮೊತ್ತದಲ್ಲಿ ಹಣ ಸಂಗ್ರಹಿಸಿ ನಂತರ ಬೇರೆ ಕಂಪನಿಗಳಿಗೆ ನಿಯಮಗಳಿಗೆ ವಿರುದ್ಧವಾಗಿ ಹಣ ವರ್ಗಾಯಿಸಿದೆ ಎಂದು ಆರೋಪಿಸಲಾಗಿದೆ. ಹೀಗೆ ವರ್ಗಾಯಿಸಿದ ಕಂಪನಿಗಳಲ್ಲಿ ಎಂ.ಎಸ್.ಧೋನಿಯ ಹೆಂಡತಿ ಸಾಕ್ಷಿ ಧೋನಿಯ ಕಂಪನಿಯೂ ಕೂಡ ಇದೆ ಎಂದು ಹೇಳಲಾಗಿದೆ.

ಜುಲೈ 23ರಿಂದ ಇಲ್ಲಿಯವರೆಗೆ ಎಫ್‌ಐಆರ್ ದಾಖಲಿಸಿರುವ ಏಳು ಖರೀದಿದಾರರ ಗುಂಪುಗಳು ಒ2 ವ್ಯಾಲಿ, ಲಾ ರೆಸಿಡೆಂಟಿಯಾ, ಸಿಲಿಕಾನ್ ಸಿಟಿ, ಕರಿಸ್ಟಲ್ ಹೋಮ್ಸ್, ಲೀಜರ್ ವ್ಯಾಲಿ, ಆದರ್ಶ್ ಆವಾಸ್ ಯೋಜನೆ ಮತ್ತು ಕಿಂಗ್ಸ್ವುಡ್‌ನ ವಸತಿ ಯೋಜನೆಗಳಿಗೆ ಸೇರಿವೆ. ಎಫ್‌ಐಆರ್‌ಗಳಲ್ಲಿ ಅನಿಲ್ ಕೆ ಶರ್ಮಾ ಮತ್ತು ಇತರ ನಿರ್ದೇಶಕರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಆದರೆ ಎಂ.ಎಸ್.ಧೋನಿ ಪಾತ್ರವನ್ನು ಪರಿಶೀಲಿಸುವಂತೆ ನಾವು ತನಿಖಾ ಸಂಸ್ಥೆಗೆ ವಿನಂತಿಸಿಲಾಗಿದೆ. ನೋಯ್ಢಾ ಪ್ರಾಧಿಕಾರಗಳಿಂದ ಯಾವುದೇ ಅನುಮೋದನೆ ಪಡೆಯದೆ ಡೆವಲಪರ್ ಈ ಎಲ್ಲಾ ಯೋಜನೆಗಳನ್ನು ಪ್ರಾರಭಿಸಿದ್ದಾರೆ ಎನ್ನುವ ಆರೋಪವು ಆಮ್ರಪಾಲಿ ಸಂಸ್ಥೆಯ ಮೇಲಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಹಗರಣದ ಕೇಸಿನಿಂದ ಬಚಾವಾಗಲು ಬಿಜೆಪಿ ಸೇರಿದರಾ ಗೌತಮ್ ಗಂಭೀರ್

ಠೇವಣಿದಾರರ ಜೊತೆಗಿನ ಒಪ್ಪಂದದ ಪ್ರಕಾರ ಆಮ್ರಪಾಲಿ ಕಂಪನಿ ಪ್ಲಾಟ್‌ಗಳನ್ನು ಹಸ್ತಾಂತರಿಸಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ದೂರುಗಳು ಹೋಗಿದ್ದವು. ಇದರಿಂದ ಸುಪ್ರೀಂಕೋರ್ಟ್ 2017ರಲ್ಲಿ ತನಿಖೆಗೆ ಆದೇಶಿಸಿತ್ತು . ನ್ಯಾಯಾಲದಿಂದ ನೇಮಕಗೊಂಡ ಲೆಕ್ಕಪರಿಶೋಧಕರು ಕಂಪನಿಯ ಖಾತೆಯನ್ನು ಪರಿಶೀಲಿಸಿ ಈ ಸಂಸ್ಥೆ ಸಾವಿರಾರು ಕೋಟಿ ಜನಸಾಮಾನ್ಯರ ಹಣವನ್ನು ಸಂಗ್ರಹಿಸಿರುವುದನ್ನು ಬಹಿರಂಗಪಡಿಸಲಾಯಿತು.

2003ರಲ್ಲಿ ಸ್ಥಾಪನೆಯಾದ ಅಮ್ರಪಾಲಿ ಗ್ರೂಪ್ ತನ್ನ ಸಿ.ಎಂ.ಡಿ ಅನಿಲ್ ಶರ್ಮಾರ ಆಡಳಿತದಲ್ಲಿ 2010ರ ವೇಳೆಗೆ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಹೊರಹೊಮ್ಮಿತು. ಹಾಗೇಯೇ ಶಿಕ್ಷಣ, ಮನರಂಜನೆ, ಎಫ್.ಎಮ್.ಸಿ.ಜಿ, ಮೂಲಸೌಕರ್ಯ, ಹೋಟೆಲ್‌ಗೆ ಸಂಬಂಧಿಸಿದಂತೆ 150 ಕಂಪನಿಗಳನ್ನು ಈ ಸಮಯದಲ್ಲಿ ಹೊಸದಾಗಿ ಪ್ರಾರಂಭಿಸಿದರು. ಈ ಎಲ್ಲಾ ಚುಟುವಟಿಕೆಗಳಲ್ಲಿ ಆಮ್ರಪಾಲಿ ಸಂಸ್ಥೆ ಜನಸಾಮಾನ್ಯರ ಹಣವನ್ನು ದೊಡ್ಡ ಮಟ್ಟದಲ್ಲಿ ದುರುಪಯೋಗ ಪಡಿಸಿಕೊಂಡಿರುವ ಆರೋಪ ಹೊತ್ತಿಕೊಂಡಿದೆ. ಈಗ ಈ ಸಂಸ್ಥೆಯ ಜೊತೆಗಿದ್ದ ಧೋನಿಗೂ ಇದರ ಬಿಸಿ ತಟ್ಟಿದಂತೆ ಕಾಣುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...