Homeಕರೋನಾ ತಲ್ಲಣಆರೋಗ್ಯ ಇಲಾಖೆಯನ್ನು ಕೇರಳ ಮಾದರಿಯಲ್ಲಿ ರೂಪಿಸಲಾಗುವುದು: ಆರೋಗ್ಯ ಸಚಿವ ಸುಧಾಕರ್‌

ಆರೋಗ್ಯ ಇಲಾಖೆಯನ್ನು ಕೇರಳ ಮಾದರಿಯಲ್ಲಿ ರೂಪಿಸಲಾಗುವುದು: ಆರೋಗ್ಯ ಸಚಿವ ಸುಧಾಕರ್‌

ಇಲಾಖೆಯನ್ನು ಕೇರಳ ಮಾದರಿಯ ಆರೋಗ್ಯ ಇಲಾಖೆಯನ್ನಾಗಿ ರೂಪಿಸುವುದು ಇಲಾಖೆಗೆ ಮೈಲುಗಲ್ಲಾಗಿ ಉಳಿಯುವ ಕೆಲಸ, ಅದನ್ನು ರಚನಾತ್ಮಕವಾಗಿ ಮಾಡುತ್ತೇನೆ

- Advertisement -
- Advertisement -

ರಾಜ್ಯದ ಆರೋಗ್ಯ ಇಲಾಖೆಯನ್ನು ಕೇರಳ ಮಾದರಿಯಲ್ಲಿ ಸುಧಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಇಲಾಖೆಯನ್ನು ಕೇರಳ ಮಾದರಿಯ ಆರೋಗ್ಯ ಇಲಾಖೆಯನ್ನಾಗಿ ರೂಪಿಸುವುದು ಇಲಾಖೆಗೆ ಮೈಲುಗಲ್ಲಾಗಿ ಉಳಿಯುವ ಕೆಲಸ, ಅದನ್ನು ರಚನಾತ್ಮಕವಾಗಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆರೋಗ್ಯ ಕ್ಷೇತ್ರದಲ್ಲಿ ಕೇರಳದ ದಣಿವರಿಯದ ಸೇವೆಗೆ ವಿಶ್ವಸಂಸ್ಥೆಯ ಪ್ರಶಸ್ತಿ

ಮೈಸೂರಿನಲ್ಲಿ ಮಾತನಾಡಿದ ಸಚಿವ, ”ಆರೋಗ್ಯ ಇಲಾಖೆ ಸವಾಲಿನ ಇಲಾಖೆ. ಮುಖ್ಯಮಂತ್ರಿ ನನ್ನ ಮೇಲೆ ನಂಬಿಕೆ ಇಟ್ಟು ಹೆಚ್ಚುವರಿ ಇಲಾಖೆ ನೀಡಿದ್ದಾರೆ. ಜನರ ಸೇವೆಗೆ ಕೆಲಸ ಮಾಡುತ್ತೇನೆ” ಎಂದಿದ್ದಾರೆ.

“ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆ ತಾಂತ್ರಿಕವಾಗಿ ಒಂದೇ ಇರಬೇಕು. ದೇಶದ ಹಲವು ಕಡೆ ಇದೇ ರೀತಿ ಇದೆ. ಈ ಹಿಂದೆ ಇದನ್ನು ಬೇರ್ಪಡಿಸಲಾಗಿತ್ತು, ಆದರೆ ಆಡಳಿತಾತ್ಮಕವಾಗಿ ಇದು ಸರಿಯಲ್ಲ. ಯಾಕೆಂದರೆ ಈ ಖಾತೆ ನಿರ್ವಹಣೆ ಕಷ್ಟವಾಗುತ್ತಿತ್ತು. ಸ್ಥಳೀಯವಾಗಿ ಒಡಂಬಡಿಕೆಗಳು ಪರಿಣಾಮಕಾರಿಯಾಗಿ ಆಗುತ್ತಿರಲಿಲ್ಲ, ಇದನ್ನು ಅರಿತು ಸಿಎಂ ಈ ನಿರ್ಧಾರ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕೇರಳದ ಆರೋಗ್ಯ ಇಲಾಖೆ ಮಾಡಿದ ಕಾರ್ಯವು ವಿಶ್ವದಾದ್ಯಂತ ಪ್ರಶಂಸೆಗೊಳಗಾಗಿತ್ತು. ವಿಶ್ವಸಂಸ್ಥೆ ಕೂಡಾ ಕೇರಳದ ಆರೋಗ್ಯ ಇಲಾಖೆಯನ್ನು ಶ್ಲಾಘಿಸಿತ್ತು.

ಇದನ್ನೂ ಒದಿ: ’2020 ರ ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ’; ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟಾಪ್ ಥಿಂಕರ್-2020 ಗೌರವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read