ಅಮೆರಿಕಾದಲ್ಲಿ ನಡೆದ ಜನಾಂಗೀಯ ವಿರೋಧಿ ಹೋರಾಟವಾದ ’ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಆಂದೋಲನವನ್ನು ಬಾಲಿವುಡ್ ತಾರೆಗಳು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿದ್ದರು. ಆದರೆ ಅವರ ವಿರುದ್ದ ನೆಟ್ಟಿಗರು ಟೀಕಾಪ್ರಹಾರ ಮಾಡಿದ್ದು, ಇದೇ ತಾರೆಗಳು ಚರ್ಮವನ್ನು ಬಿಳಿಮಾಡುವ ಕ್ರೀಮ್ಗಳನ್ನು ಉತ್ತೇಜಿಸುತ್ತಿದ್ದಾರೆ ಹಾಗೂ ಭಾರತದ ಅಲ್ಪಸಂಖ್ಯಾತರ ದುಃಸ್ಥಿತಿಯ ಬಗ್ಗೆ ಮಾತನಾಡಲು ವಿಫಲವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಿಯಾಂಕಾ ಚೋಪ್ರಾ, ಸೋನಮ್ ಕಪೂರ್, ದಿಶಾ ಪಟಾನಿ ಮುಂತಾದ ಬಾಲಿವುಡ್ ತಾರೆಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇಬ್ಬಂದಿತನಕ್ಕಾಗಿ ಟೀಕಿಸಲ್ಪಟ್ಟಿದ್ದಾರೆ. ಇವರುಗಳು ಈ ಹಿಂದೆ ಗಾರ್ನಿಯರ್, ಎಲ್’ಓರಿಯಲ್ ಅಥವಾ ಪಾಂಡ್ಸ್ ಮುಂತಾದ ಕ್ರೀಮ್ಗಳ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಸಲ್ಲಿಸಿದ್ದರು. ಈ ಉತ್ಪನ್ನಗಳನ್ನುನ ಬಳಸಿದರೆ ಕಪ್ಪಾದ ಚರ್ಮವೂ ಬಿಳಿಯಾಗುತ್ತದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಿ, ಬಿಳಿ ಚರ್ಮ ಶ್ರೇಷ್ಠ ಎಂಬಂತೆ ಬಿಂಬಿಸಿದ್ದರು ಎಂದು ಆರೋಪಿಸಲಾಗಿದೆ.
— anti pigeon (@aluminiummaiden) May 31, 2020
Hypocrisy at its best.???
First I will endorse face whitening product and then I will post against racism ??? pic.twitter.com/Wb2gmHQYOH
— Chandan Kumar (@Chandan0321) May 30, 2020
2017 ರ ವೋಗ್ ಸಂದರ್ಶನವೊಂದರಲ್ಲಿ, ಪ್ರಿಯಾಂಕ ಚೋಪ್ರಾ ತನ್ನ ಚರ್ಮದ ಕಾರಣಕ್ಕಾಗಿ ಬಾಲ್ಯದಲ್ಲಿ ಪ್ರತ್ಯೇಕಿಸಲ್ಪಟ್ಟಿದ್ದೆ ಎಂದಿದ್ದರು. ಆದರೆ ತನ್ನ ಪತಿ ಅಮೇರಿಕನ್ ಗಾಯಕ ನಿಕ್ ಜೊನಸ್ ಜೊತೆ “ವ್ಯವಸ್ಥಿತ ವರ್ಣಭೇದ ನೀತಿ, ಧರ್ಮಾಂಧತೆ ಹಾಗೂ ಬಹಿಷ್ಕಾರದ” ವಿರುದ್ಧ ನಿಲುವನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ ನಂತರ ಅವರ ಮೇಲೆ ಪುನಃ ಟೀಕೆಗಳ ಸುರಿಮಳೆಯಾಯಿತು.
ಪ್ರಿಯಾಂಕ ಚೋಪ್ರ ಭಾರತದೊಳಗಿನ ವ್ಯವಸ್ಥಿತ ವರ್ಣಭೇದ ನೀತಿಯ ವಿರುದ್ಧ ಹಾಗೂ ಅದರಲ್ಲೂ ವಿಶೇಷವಾಗಿ ದೇಶದ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾದ ಭಾರತೀಯ ಮುಸ್ಲಿಮರ ಹತ್ಯೆಯ ಕುರಿತು ಯಾವುದೇ ಹೇಳಿಕೆ ನೀಡಿಲ್ಲ ಎಂಬ ಟೀಕೆಗಳನ್ನೂ ಎದುರಿಸಿದ್ದಾರೆ.
ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ನಿಷ್ಕ್ರಿಯತೆ ತೋರಿದ್ದಾರೆ ಎಂದು ಆರೋಪ ಹೊತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಜೋನಾಸ್ ಮತ್ತು ಚೋಪ್ರಾ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ ಎಂದು ಒಬ್ಬ ವ್ಯಕ್ತಿ ಗಮನ ಸೆಳೆದಿದ್ದಾರೆ.
Was pri’s “heart heavy” before or after she promoted skin lightening creams? Was it “heavy” when she watched Muslims get lynched in her own country & said nothing? What about the time when you invited a fascist to your wedding? It seems like her heart is doing just fine.
— Amsi (@thisisamsi) June 3, 2020
Yeah Im sure ‘pri’ doesn’t have a heavy heart for the muslims that are being tortured and killed in her country
— تحریم (@thetehreem) June 3, 2020
ಬಾಲಿವುಡ್ ನಟ ಮತ್ತು ನಿರ್ಮಾಪಕ ಅಭಯ್ ಡಿಯೋಲ್ ಮಂಗಳವಾರ ಈ ವಿಷಯದ ಬಗ್ಗೆ ಸೂಕ್ಷ್ಮವಾಗಿ ಚರ್ಚಿಸಿ “ಈಗ ಎಚ್ಚರಗೊಂಡ ’ಭಾರತೀಯ ಸೆಲೆಬ್ರಿಟಿಗಳು ಮತ್ತು ಮಧ್ಯಮ ವರ್ಗದವರು ಅಮೆರಿಕದಲ್ಲಿ ವ್ಯವಸ್ಥಿತ ವರ್ಣಭೇದ ನೀತಿಯ ವಿರುದ್ಧ ಹೋರಾಡಲು ಒಗ್ಗಟ್ಟಿನಲ್ಲಿ ನಿಂತಿದ್ದಾರೆ, ಅವರ ಸ್ವಂತ ದೇಶದಲ್ಲಿ ನಡೆದದ್ದನ್ನು ಅವರು ಹೇಗೆ ನೋಡುತ್ತಾರೆ?” ಎಂದು ಚಾಟಿ ಬೀಸಿದ್ದಾರೆ.
“ಇಂತವುಗಳನ್ನು ಸಂಪೂರ್ಣವಾಗಿ ನೋಡಿ, ನಿಮ್ಮ ದೇಶಗಳಲ್ಲೂ ಇಂತವುಗಳು ನಡೆಯುತ್ತದೆ ಅವುಗಳನ್ನೂ ಬೆಂಬಲಿಸಿ, ಯಾಕೆಂದರೆ ಇಂತಹ ಸಮಸ್ಯೆಗಳು ಒಂದೇ ಆಗಿರುತ್ತದೆ” ಎಂದು ಅವರು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಭಾರತದಲ್ಲಿ ಚರ್ಮವನ್ನು ಬಿಳಿಮಾಡುವ ಕ್ರೀಮ್ಗಳ ವಿಶ್ಲೇಷಣೆಯನ್ನು ಡಿಯೋಲ್ ಹಂಚಿಕೊಂಡಿದ್ದಾರೆ. ಮಾರ್ಕೆಟಿಂಗ್ನಲ್ಲಿ ಚರ್ಮದ ಬಣ್ಣವನ್ನು ವಿವರಿಸಲು ಬಳಸುವ ಭಾಷೆಯು ’ಬಿಳಿ ಹೊಳಪು’(ವೈಟ್ ಗ್ಲೋ) ಎನ್ನಲಾಗುತ್ತದೆ ಎಂದು ಮಾರ್ಕೆಟಿಂಗ್ ಸ್ವರೂಪವನ್ನು ಎತ್ತಿ ತೋರಿಸಿದ್ದಾರೆ.
ಜನಪ್ರಿಯ ತಾರೆಗಳ ಈ ನಡೆ, ಅಮೆರಿಕಾದಲ್ಲಿ ನಡೆದ ಜಾರ್ಜ್ ಫ್ಲಾಯ್ಡ್ ಸಾವು ಭಾರತೀಯ ಸಾಮಾಜಿಕ ಜಾಲತಾಣದ ವಲಯಗಳಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.
ಅನೇಕರು ಕಪ್ಪು ಅಮೆರಿಕನ್ನರ ಮತ್ತು ಭಾರತೀಯ ಮುಸ್ಲಿಮರ ದುಃಸ್ಥಿತಿಯ ನಡುವೆ ಸಮಾನಾಂತರತೆಯನ್ನು ತೋರಿಸುತ್ತಾರೆ. ಒಂದು ವೇಳೆ ಫ್ಲಾಯ್ಡ್ ಏನಾದರೂ ಭಾರತದಲ್ಲಿ ಮರಣ ಹೊಂದಿದ್ದರೆ, ಪೊಲೀಸರ ಪರವಾಗಿ ಸಾಮೂಹಿಕ ಪ್ರತಿಭಟನೆಗಳು ಭುಗಿಲೇಲುತ್ತಿದ್ದವು ಎಂದು ಹಲವರು ವಾದಿಸಿದ್ದಾರೆ.
Had this #GeorgeFloyd debacle occurred in India, there would be mass protests IN SUPPORT of Officer Derek Chauvin. Not just that, but he’d be promoted & honored as a national hero… as we’ve seen time & again in India.
— sameera khan (@SameeraKhan) June 1, 2020
What blacks are to the US, Muslims are to India. #GeorgeFloyd
— PuNsTeR™ (@Pun_Starr) May 29, 2020
I seek solace in believing that the killers of George Floyd will not be feted or elected to power. That is the only difference when you compare the situation with India.
— Rana Ayyub (@RanaAyyub) May 31, 2020
ಓದಿ: …ಆದರೆ ಪ್ರಿಯಾಂಕ ಚೋಪ್ರಾ, ನಿಮ್ಮ ದೇಶದ ಕತೆ ಏನು?