Homeಅಂತರಾಷ್ಟ್ರೀಯಅಮೇರಿಕಾದ ಹೂಡಿಕೆದಾರರಿಗೆ ತನ್ನ ಪಾಲನ್ನು ಮಾರಾಟ ಮಾಡಲಿದೆಯೆ ಟಿಕ್‌ಟಾಕ್‌‌?

ಅಮೇರಿಕಾದ ಹೂಡಿಕೆದಾರರಿಗೆ ತನ್ನ ಪಾಲನ್ನು ಮಾರಾಟ ಮಾಡಲಿದೆಯೆ ಟಿಕ್‌ಟಾಕ್‌‌?

ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿದ ನಂತರ, ಯುಎಸ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮ್ಮ ದೇಶಗಳಲ್ಲಿನ ಡೇಟಾ ಸುರಕ್ಷತೆ ಮತ್ತು ಗೌಪ್ಯತೆ ವಿಷಯಗಳ ಬಗ್ಗೆ ಈ ಕಂಪನಿಯನ್ನು ಸ್ಕ್ಯಾನರ್ ಅಡಿಯಲ್ಲಿ ತಂದಿವೆ.

- Advertisement -
- Advertisement -

ಟಿಕ್‌ಟಾಕ್ ಅಪ್ಲಿಕೇಷನ್ ನಿಷೇಧವನ್ನು ತಪ್ಪಿಸಲು ಟಿಕ್‌ಟಾಕ್ ಸಂಸ್ಥೆಯು ಅಮೇರಿಕಾ ಮೂಲದ ಹೂಡಿಕೆದಾರರಾದ ಜನರಲ್ ಅಟ್ಲಾಂಟಿಕ್ ಮತ್ತು ಸಿಕ್ವೊಯ ಕ್ಯಾಪಿಟಲ್‌ಗೆ ಹೆಚ್ಚಿನ ಪಾಲನ್ನು ಮಾರಾಟ ಮಾಡಬಹುದು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.

ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿದ ನಂತರ, ಅಮೆರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮ್ಮ ದೇಶಗಳಲ್ಲಿನ ಡೇಟಾ ಸುರಕ್ಷತೆ ಮತ್ತು ಗೌಪ್ಯತೆ ವಿಷಯಗಳ ಬಗ್ಗೆ ಈ ಕಂಪನಿಯನ್ನು ಸ್ಕ್ಯಾನರ್ ಅಡಿಯಲ್ಲಿ ತಂದಿವೆ.

ಟೈಗರ್ ಗ್ಲೋಬಲ್ ಮತ್ತು ಸಾಫ್ಟ್‌ಬ್ಯಾಂಕ್ ಅನ್ನು ಚೀನಾ ಒಡೆತನದ ಕಂಪನಿಯ ದೊಡ್ಡ ಹೂಡಿಕೆದಾರರು ಎಂದು ಪರಿಗಣಿಸಲಾಗುತ್ತದೆ.

“ಹೂಡಿಕೆದಾರರ ಬದಲಾವಣೆಯು ಅಪ್ಲಿಕೇಶನ್ ಅನ್ನು ಜಾಗತಿಕವಾಗಿ ಉಳಿಸಬಹುದು. ಅಮೇರಿಕಾ ಹೂಡಿಕೆದಾರರು ಅದರ ಕೆಲವು ಸ್ಪರ್ಧಾತ್ಮಕ ಪ್ಲಾಟ್‌ಫಾರ್ಮ್‌ಗಳಿಗೆ ನೇರ ಅಥವಾ ಪರೋಕ್ಷ ಸಂಪರ್ಕವನ್ನು ಹೊಂದಿರುವುದರಿಂದ ಇದು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅವಕಾಶಗಳನ್ನು ಪುನರುಜ್ಜೀವನಗೊಳಿಸಬಹುದು” ಎಂದು ಉದ್ಯಮದ ಮೂಲವೊಂದು ತಿಳಿಸಿದೆ.

ಟಿಕ್‌ಟಾಕ್ ಹೂಡಿಕೆದಾರರ ಎರಡೂ ಕಂಪನಿಗಳು ಒಂದು ರೀತಿಯಲ್ಲಿ ಆಯಾ ದೇಶಗಳಲ್ಲಿ ಮಾರುಕಟ್ಟೆ ಪಾಲನ್ನು ಪಡೆಯಲು ಟಿಕ್‌ಟಾಕ್‌ನೊಂದಿಗೆ ಸ್ಪರ್ಧಿಸುತ್ತಿವೆ. ಮಾಲೀಕತ್ವವನ್ನು ಅಮೇರಿಕಾ ಹೂಡಿಕೆದಾರರಿಗೆ ವರ್ಗಾಯಿಸಿದರೆ, ಅದು ಭಾರತದ ಕಿರು-ವಿಡಿಯೋ ವಿಭಾಗದಲ್ಲಿ ರಿಲಯನ್ಸ್ ಮತ್ತು ಅಮೇರಿಕಾ ಮಾರುಕಟ್ಟೆಯಲ್ಲಿ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಮಾರುಕಟ್ಟೆಯನ್ನು ಎತ್ತಿಹಿಡಿಯಬಹುದು.

ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಹೂಡಿಕೆದಾರರು ಕೆಲವು ವಿಭಾಗಗಳಲ್ಲಿ ವಿಲೀನಗೊಳ್ಳುವಂತೆ ಒತ್ತಾಯಿಸಬಹುದು.

ನಿಷೇಧದ ನಂತರ, ಟಿಕ್‌ಟಾಕ್‌ ಚೀನಾ ಸರ್ಕಾರದೊಂದಿಗೆ ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳದಂತೆ ದೂರವಿತ್ತು. ಭಾರತೀಯ ಕಾನೂನಿನ ವ್ಯಾಪ್ತಿಯಲ್ಲಿ ಅದು ಉತ್ತಮವಾಗಿ ಕಾರ್ಯನಿರ್ವಹಿಸುತತ್ತಿದೆ ಎಂದು ಭಾರತ ಸರ್ಕಾರಕ್ಕೆ ಭರವಸೆ ನೀಡಿತ್ತು.

ಆದಾಗ್ಯೂ, ಗಡಿ ಉದ್ವಿಗ್ನತೆ ಹೆಚ್ಚುತ್ತಿರುವಾಗ ಅಪ್ಲಿಕೇಷನ್ ಕುರಿತ ನಿಯಮಗಳನ್ನು ಸುಲಭಗೊಳಿಸುವಂತೆ  ಭಾರತ ಸರ್ಕಾರ ಪಟ್ಟುಹಿಡಿದಿದೆ.

ಭಾರತ ಸರ್ಕಾರ ಪ್ರತಿಕ್ರಿಯಿಸಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆ ಕುರಿತು ಚೀನಾದ ಕಂಪನಿಗಳಿಗೆ 70 ಪ್ರಶ್ನೆಗಳನ್ನು ಕೇಳಿದೆ. ಪ್ರತಿಕ್ರಿಯಿಸಲು ನೀಡಲಾದ ಕಾಲಾವಧಿ ಈ ವಾರ ಕೊನೆಗೊಂಡಿದ್ದರೂ, ಕಂಪನಿಗಳು ಭಾರತ ಸರ್ಕಾರದೊಂದಿಗೆ ಸಭೆ ನಡೆಸುತ್ತಿದ್ದರೂ, ಈ ವಿಷಯವು ಇನ್ನೂ ಯಾವುದೇ ಮುನ್ನಡೆಯನ್ನೂ ಕಾಣದೇ ಹಾಗೇ ಉಳಿದಿದೆ.

ವಾಸ್ತವವಾಗಿ, ಜುಲೈ 21 ರಂದು Electronics and Information Technology ಸಚಿವಾಲಯವು ಚೀನಾದ ಸಂಸ್ಥೆಗಳಿಗೆ ಮತ್ತೊಂದು ಎಚ್ಚರಿಕೆ ನೀಡಿತು. ಇದು, ನಿಷೇಧಿತ ಅಪ್ಲಿಕೇಶನ್‌ಗಳ ಲಭ್ಯತೆ ಮತ್ತು ಕಾರ್ಯಾಚರಣೆಯು ನೇರವಾಗಿ ಅಥವಾ ಪರೋಕ್ಷವಾಗಿ ಐಟಿ ಕಾಯ್ದೆಯಡಿ ಅಪರಾಧವಾಗಿದೆ. ಹಾಗಾಗಿ ಕಾನೂನಿನ ಮೂಲಕ ವ್ಯವಹರಿಸುವಂತೆ ಕಟ್ಟುನಿಟ್ಟಾಗಿ ಹೇಳಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಟಿಕ್‌ಟಾಕ್ ಮೇಲೆ ಇದೇ ರೀತಿಯ ನಿಷೇಧವನ್ನು ತರಬೇಕೆಂದಿದ್ದಾರೆ ಎನ್ನಲಾಗಿದೆ. ಈ ಅಪ್ಲಿಕೇಶನ್ ಅಮೇರಿಕಾದಲ್ಲಿ ಸುಮಾರು 50 ಮಿಲಿಯನ್ ಬಳಕೆದಾರರನ್ನು, 800 ಮಿಲಿಯನ್ ಜಾಗತಿಕ ಬಳಕೆದಾರರನ್ನು ಮತ್ತು $ 100 ಬಿಲಿಯನ್ ಮೌಲ್ಯ ಹೊಂದಿದೆ.

ಕಳೆದ ವಾರ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಟ್ರಂಪ್ ಟಿಕ್‌ಟಾಕ್ ಅಮೆರಿಕನ್ ಬಳಕೆದಾರರ ಮೇಲೆ “ಬೇಹುಗಾರಿಕೆ” ನಡೆಸುತ್ತಿದೆ ಎಂದು ಆರೋಪಿಸಿದರು.

ಚೀನಾದ ಮಾಲೀಕತ್ವದಿಂದ ದೂರವಿರುವ ಕಾರ್ಯತಂತ್ರದ ಭಾಗವಾಗಿ ಟಿಕ್‌ಟಾಕ್ ತನ್ನ ಪ್ರಧಾನ ಕಛೇರಿಯನ್ನು ಲಂಡನ್‌ಗೆ ಸ್ಥಳಾಂತರಿಸುವ ಯೋಜನೆಯ ಬಗ್ಗೆ ವರದಿಯೊಂದು ಹೊರಬಿದ್ದಿದೆ.

ಇದರ ಮಧ್ಯೆ ಪಾಕಿಸ್ತಾನವು ಜನಪ್ರಿಯ ಆಟ PUBG ಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಜೊತೆಗೆ ಚೀನಾದ ಲೈವ್-ಸ್ಟ್ರೀಮಿಂಗ್ ಅಪ್ಲಿಕೇಶನ್ ಬಿಗೊ (Bigo)ವನ್ನು ನಿಷೇಧಿಸಿದೆ.


ಇದನ್ನೂ ಓದಿ: 59 ಚೀನಿ ಆಪ್‌ಗಳ ನಿಷೇಧ: ಸ್ಪಷ್ಟೀಕರಣ ನೀಡಿದ ಟಿಕ್‌ಟಾಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಅಧಿಕಾರಿಗಳ...