HomeUncategorizedTRP ಹಗರಣದ 2ನೇ ಚಾರ್ಜ್‌ಶೀಟ್‌‌ನಲ್ಲಿ ಅರ್ನಾಬ್‌ ಗೋಸ್ವಾಮಿ ಆರೋಪಿ

TRP ಹಗರಣದ 2ನೇ ಚಾರ್ಜ್‌ಶೀಟ್‌‌ನಲ್ಲಿ ಅರ್ನಾಬ್‌ ಗೋಸ್ವಾಮಿ ಆರೋಪಿ

- Advertisement -
- Advertisement -

ಟಿಆರ್‌ಪಿ ಹಗರಣದಲ್ಲಿ ಮುಂಬೈ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಎರಡನೇ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಈ ಚಾರ್ಜ್‌ಶೀಟ್‌‌‌ನಲ್ಲಿ ಪೊಲೀಸರು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ.

“ಇತರರ ಜೊತೆಗೆ, ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿಯ ಮಾತೃ ಸಂಸ್ಥೆಯಾದ ಎಆರ್‌‌ಜಿ ಔಟ್‌ಲೆಯರ್‌ ಮೀಡಿಯಾವನ್ನು ಚಾರ್ಜ್‌‌ಶೀಟ್‌‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ” ಎಂದು ಅರ್ನಾಬ್‌ ಗೋಸ್ವಾಮಿಯ ವಕೀಲರು ಹೇಳಿದ್ದಾರೆ.

ಟಿಆರ್‌ಪಿ ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ಗುಪ್ತಚರ ಘಟಕ (ಸಿಐಯು)ವು ಈ ಆರೋಪಪಟ್ಟಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಇದನ್ನೂ ಓದಿ: ರೇಟಿಂಗ್ ಹೆಚ್ಚಿಸಲು ಅರ್ನಾಬ್ 12,000 ಡಾಲರ್ ಮತ್ತು 40 ಲಕ್ಷ ರೂ ಪಾವತಿಸಿದ್ದಾರೆ: ಪಾರ್ಥೋ ದಾಸ್‌ಗುಪ್ತಾ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೇಟಿಂಗ್ ಏಜೆನ್ಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್), ಹನ್ಸಾ ರಿಸರ್ಚ್ ಗ್ರೂಪ್ (ಎಚ್‌ಆರ್‌ಜಿ) ಮೂಲಕ ಕೆಲವು ಟೆಲಿವಿಷನ್ ಚಾನೆಲ್‌ಗಳು ಟಿಆರ್‌ಪಿ ಸಂಖ್ಯೆಯನ್ನು ತಿರುಚುತ್ತಿದೆ ಎಂದು ಆರೋಪಿಸಿತ್ತು. ಇದರ ನಂತರ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿತ್ತು.

ಟಿಆರ್‌ಪಿ
ಅರ್ನಾಬ್‌ ಗೋಸ್ವಾಮಿ ಮತ್ತು ಪಾರ್ಥೋ ದಾಸ್‌ಗುಪ್ತಾ

ಈ ಹಗರಣದಲ್ಲಿ ಅರ್ನಾಬ್‌ ಗೋಸ್ವಾಮಿ, ಬಾರ್ಕ್‌ನ ಮಾಜಿ ಮುಖ್ಯ ನಿರ್ವಹಣಾಧಿಕಾರಿ ಪಾರ್ಥೋ ದಾಸ್‌ಗುಪ್ತಾ ಸೇರಿದಂತೆ ಮುಂಬೈ ಪೊಲೀಸರು ಒಟ್ಟು 15 ಜನರನ್ನು ಬಂಧಿಸಿತ್ತು. ಪ್ರಕರಣದಲ್ಲಿ ರಿಪಬ್ಲಿಕ್‌ ಟಿವಿ, ಮುಂಬೈನ ಸ್ಥಳೀಯ ಚಾನೆಲ್‌‌‌ಗಳಾದ ಬಾಕ್ಸ್‌ ಸಿನೆಮಾ ಹಾಗೂ ಫಕ್ತ್‌ ಮರಾಠಿ ಚಾನೆಲ್‌ಗಳು ಈ ನಕಲಿ ಟಿಆರ್‌ಪಿ ಹಗರಣದಲ್ಲಿ ಭಾಗಿಯಾವೆ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!

ಟಿಆರ್‌ಪಿಯ ಅಂಕಿ ಅಂಶಗಳನ್ನು ಸಂಗ್ರಹಿಸಲು ಬೇಕಾಗಿ ಕೆಲವೊಂದು ಮನೆಗಳಿಗೆ ಮೀಟರ್‌ಗಳನ್ನು ಅಳವಡಿಸಲಾಗುತ್ತದೆ. ಈ ಮೀಟರ್‌ ಅಳವಡಿಸುವ ಗುತ್ತಿಗೆಯನ್ನು ‘ಬಾರ್ಕ್‌‌’ ಹನ್ಸಾ ಎಂಬ ಸಂಸ್ಥೆಗೆ ನೀಡಿತ್ತು. ಆದರೆ ಹನ್ಸಾವು ಕೆಲವು ನಿರ್ದಿಷ್ಟ ವಾಹಿನಿಯನ್ನು ಮಾತ್ರ ಆನ್‌ ಮಾಡಿ ಇಡುವಂತೆ ಆ ಮನೆಗಳಿಗೆ ಹಣ ನೀಡಿತ್ತು. ತಮಗೆ ಹಣ ನೀಡುತ್ತಿರುವುದನ್ನು ಈ ವೀಕ್ಷಕರು ಮ್ಯಾಜಿಸ್ಟ್ರೇಟ್‌ ಮುಂದೆ ಒಪ್ಪಿಕೊಂಡಿದ್ದಾರೆ ಮುಂಬೈ ಪೊಲೀಸರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಅಲ್ಲದೆ ಟಿಆರ್‌ಪಿ ತಿರುಚುವಿಕೆಯು ಬಾರ್ಕ್‌ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತ ಅವರಿಗೆ ತಿಳಿದಿತ್ತು ಎಂದು ಆರೋಪಿಸಲಾಗಿದ್ದು, ಅದಕ್ಕಾಗಿ ಅವರ ಬಂಧನ ಕೂಡಾ ನಡೆದಿತ್ತು. ಟಿಆರ್‌ಪಿ ಹಗರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಬಾರ್ಕ್ 12 ವಾರಗಳ ಅವಧಿಗೆ ಟಿಆರ್‌ಪಿ ರೇಟಿಂಗ್‌ ನೀಡುವುದನ್ನು ಕೂಡಾ ಸ್ಥಗಿತಗೊಳಿಸಿತ್ತು.

ಹೆಚ್ಚು ಟಿಆರ್‌ಪಿಯ ಟಿವಿ ಚಾನೆಲುಗಳೆಂದರೆ ಅದನ್ನು ಹೆಚ್ಚು ವೀಕ್ಷಕರು ವೀಕ್ಷಿಸುತ್ತಾರೆ ಎಂದರ್ಥ. ಹಾಗಾಗಿ ಹೆಚ್ಚು ಟಿಎಆರ್‌ಪಿ ಇರುವ ಚಾನೆಲುಗಳಿಗೆ ಹೆಚ್ಚು ಹೆಚ್ಚು ಜಾಹಿರಾತು ಬರುತ್ತದೆ. ಇದರಿಂದಾಗಿ ಚಾನೆಲ್‌ನ ಆದಾಯವು ಹೆಚ್ಚಾಗುತ್ತದೆ.

ಇದನ್ನೂ ಓದಿ: TRP ತಿರುಚಿದ ಆರೋಪ; ರಿಪಬ್ಲಿಕ್ ಸೇರಿ 3 ಚಾನೆಲ್‌ಗಳ ಮೇಲೆ ತನಿಖೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read