Homeಕರೋನಾ ತಲ್ಲಣಅನ್‌ಲಾಕ್ 3: ಕರ್ಫ್ಯೂ ಅಂತ್ಯ, ಆಗಸ್ಟ್ ತಿಂಗಳು ಶಾಲೆ ಬಂದ್‌; ಜಿಮ್‌, ಯೋಗ ಸಂಸ್ಥೆ ಓಪನ್

ಅನ್‌ಲಾಕ್ 3: ಕರ್ಫ್ಯೂ ಅಂತ್ಯ, ಆಗಸ್ಟ್ ತಿಂಗಳು ಶಾಲೆ ಬಂದ್‌; ಜಿಮ್‌, ಯೋಗ ಸಂಸ್ಥೆ ಓಪನ್

ಹೊಸ ಮಾರ್ಗಸೂಚಿಗಳಲ್ಲಿ, ಶಾಲೆಗಳು, ಕಾಲೇಜುಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಆಗಸ್ಟ್ ಅಂತ್ಯದವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು ಸರ್ಕಾರ ಹೇಳಿದೆ.

- Advertisement -
- Advertisement -

ಕೊರೊನಾ ಲಾಕ್‌ಡೌನ್‌ ಅಥವಾ 3 ನೇ ಅನ್‌ಲಾಕ್‌ ಪ್ರಕ್ರಿಯೆಯ ಕಾರ್ಯಸೂಚಿಯನ್ನು ಸರ್ಕಾರ ಇಂದು ಬಿಡುಗಡೆ ಮಾಡಿದ್ದು, ರಾತ್ರಿ ಕರ್ಫ್ಯೂವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಕಂಟೈನ್‌ಮೆಂಟ್ ವಲಯಗಳಲ್ಲಿ ಇಲ್ಲದ ಜಿಮ್‌ಗಳು ಮತ್ತು ಯೋಗ ಸಂಸ್ಥೆಗಳನ್ನು ಅನ್‌ಲಾಕ್ 3 ನಲ್ಲಿ ತೆರೆಯಲು ಅನುಮತಿ ನೀಡಲಾಗಿದೆ.

ಆದರೆ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಉದ್ಯಾನಗಳು, ಸಿನೆಮಾ ಸಭಾಂಗಣ ಮತ್ತು ದೊಡ್ಡ ಗುಂಪು ಸೇರುವ ಎಲ್ಲ ರೀತಿಯ ಸಭೆಗಳಿಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ.

ಭಾರತವು 15 ಲಕ್ಷಕ್ಕೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದರಿಂದ ಮತ್ತು ದೈನಂದಿನ ಪ್ರಕರಣಗಳ ಹೆಚ್ಚಳವು 50,000 ಕ್ಕೆ ಹತ್ತಿರವಾಗಿದ್ದರಿಂದ ಈ ಪ್ರಕಟಣೆ ಬಂದಿದೆ.

ಹೆಚ್ಚಿನ ರಾಜ್ಯಗಳು, ಅದರಲ್ಲೂ ವಿಶೇಷವಾಗಿ ಪ್ರಕರಣಗಳಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿರುವ ರಾಜ್ಯಗಳಲ್ಲಿ ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ವಿಧಿಸಲಾಗಿದೆ.

ಇಂದು ಹೊರಡಿಸಲಾದ ಕೇಂದ್ರದ ಹೊಸ ಮಾರ್ಗಸೂಚಿಗಳಲ್ಲಿ, ಶಾಲೆಗಳು, ಕಾಲೇಜುಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಆಗಸ್ಟ್ ಅಂತ್ಯದವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು ಸರ್ಕಾರ ಹೇಳಿದೆ.

ಮೆಟ್ರೊ ರೈಲು ಕಾರ್ಯಾಚರಣೆಗಳು, ಸಿನೆಮಾ ಹಾಲ್‌ಗಳು, ಈಜು ಕೊಳ, ಮನರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಬಾರ್‌ಗಳು, ಸಭಾಂಗಣಗಳು ಮತ್ತು ದೊಡ್ಡ ಕೂಟಗಳನ್ನು ಒಳಗೊಂಡಿರುವ ಇತರ ಸ್ಥಳಗಳು ಸಹ ಮುಚ್ಚಲ್ಪಡುತ್ತವೆ.

ಆದಾಗ್ಯೂ, ಸ್ವಾತಂತ್ರ್ಯ ದಿನಾಚರಣೆಯನ್ನು ಸಾಮಾಜಿಕ ಅಂತರದೊಂದಿಗೆ, ಕಠಿಣ ರಕ್ಷಣಾತ್ಮಕ ಕ್ರಮಗಳೊಂದಿಗೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಎಲ್ಲಾ ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಇದರ ವ್ಯಾಪ್ತಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸುತ್ತವೆ.

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರು ಮತ್ತು ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳು ಸೇರಿದಂತೆ ದೀರ್ಘಕಾಲದ ಕಾಯಿಲೆ ಇರುವವರು ಮನೆಯಲ್ಲೇ ಇರಲು ಸೂಚಿಸಲಾಗಿದೆ.

ದೇಶದಲ್ಲಿ ಇದುವರೆಗೆ ಒಟ್ಟು 15,31,669 ಪ್ರಕರಣಗಳನ್ನು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ತಿಳಿಸಿದೆ. ಸೋಂಕಿನಿಂದಾಗಿ ಒಟ್ಟು 34,193 ಮಂದಿ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: ವೈದ್ಯಕೀಯ ಉಪಕರಣಗಳ ಖರೀದಿ ಹಗರಣದಲ್ಲಿ ಅಶ್ವತ್ಥ ನಾರಾಯಣ್ ಪಾತ್ರ: ಆಪ್ ಆರೋಪ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read