Homeಚಳವಳಿಪಾಯಲ್ ತಾಡ್ವಿ ಆತ್ಮಹತ್ಯೆ : ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ಮುಂದುವರಿಕೆ

ಪಾಯಲ್ ತಾಡ್ವಿ ಆತ್ಮಹತ್ಯೆ : ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ಮುಂದುವರಿಕೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ಆದಾರಿತ ದೌರ್ಜನ್ಯಗಳನ್ನ ಪತ್ತೆಹಚ್ಚಲು ಈ ಥೋರೋಟ್ ಸಮಿತಿಯ ವರದಿಯನ್ನ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ.

- Advertisement -
- Advertisement -

| ಮೂಲ : ಶಾ ಅಲಂ ಖಾನ್ |
| ಕನ್ನಡಕ್ಕೆ: ಶ್ರೀ ಪಾದ್ ಭಟ್ |

ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಬೂತಪೂರ್ವ ಗೆಲುವಿನ ನಂತರ ಪ್ರದಾನ ಮಂತ್ರಿ ಮೋದಿ ಅವರು ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಮಾತನಾಡುತ್ತ ‘ ಇಂಡಿಯಾದಲ್ಲಿ ಈಗ ಕೇವಲ ಎರಡು ಜಾತಿಗಳಿವೆ – ಒಂದು ಬಡವರು ಮತ್ತೊಂದು ಈ ಬಡತನವನ್ನ ಉಪಶಮನಗೊಳಿಸುವವರು’ ಎಂದು ಹೇಳಿದರು. ಅವರ ಮಾತುಗಳ ಪ್ರತಿದ್ವನಿ ಕಮರಿಹೋಗುವುದಕ್ಕೂ ಮೊದಲೆ ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯವ ವೈದ್ಯೆ ‘ಪಾಯಲ್ ತಾಡ್ವಿ’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ತಾಡ್ವಿಯವರು ಆ ಆಸ್ಪತ್ರೆಯಲ್ಲಿ ತಮ್ಮ ಹಿರಿಯ ವೈದ್ಯೆಯರಿಂದ ನಿರಂತರವಾಗಿ ಜಾತಿ ಅಪಮಾನ ಮತ್ತು ತಾರತಮ್ಯದ ಹಿಂಸೆಗೆ ಒಳಗಾಗಿದ್ದರು. ಆದಿವಾಸಿ ಭಿಲ್ ಮುಸ್ಲಿಂ ಸಮುದಾಯದ ತಾಡ್ವಿ ಅವರು ಮೇ 2018ರಿಂದ ಆ ಸಂಸ್ಥೆಯಲ್ಲಿ ಎಂ.ಡಿ. ಗೈನಕಾಲಜಿ ವಿಶಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಪ್ರದಾನಿ ಏನೇ ಹೇಳಿದರೂ ಇಂದಿಗೂ ಜಾತಿಯು ಇಂಡಿಯಾ ಸಮಾಜದಲ್ಲಿ ಭಯಾನಕ ವಾಸ್ತವವಾಗಿದೆ

ನಮ್ಮ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ, ಫ್ಯಾಕ್ಟರಿಗಳಲ್ಲಿ, ವ್ಯಾಪಾರದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಇಂದಿಗೂ ಜಾತೀಯತೆಯು ವಿಶದಂತೆ ಹಬ್ಬಿಕೊಂಡಿದೆ. ಈ ಜಾತಿ ತಾರತಮ್ಯದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ತಳಸಮುದಾಯಗಳ ವಿದ್ಯಾರ್ಥಿಗಳು, ವಿದ್ವಾಂಸರಾದ ಮಾದಾರಿ ವೆಂಕಟೇಶ್, ರೋಹಿತ್ ವೇಮುಲ, ಸೆಂತಿಲ್ ಕುಮಾರ್ ಮತ್ತು ಪುಲ್ಯಾಲ ರಾಜು ಅವರೊಂದಿಗೆ ಈಗ ತಾಡ್ವಿಯವರೂ ಕೂಡಿಕೊಂಡಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಆದಾರಿತ ಪ್ರತ್ಯೇಕತೆಯನ್ನ ಇಂದು ತ್ವರಿತವಾಗಿ ಬಗೆಹರಿಸಬೇಕಾಗಿದೆ. ಉತ್ತರ ಪ್ರದೇಶದ ದಲಿತ ಕುಟುಂಬದಿಂದ ಬಂದ ಏಮ್ಸ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಬಾಲ ಮುಕುಂದ್ ಭಾರತಿ ಈ ಜಾತಿ ಹಿಂಸೆಯ ಕಾರಣಕ್ಕಾಗಿ ಮಾರ್ಚ 2010ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಕಳೆದ 50 ವರ್ಶಗಳಲ್ಲಿ ಭಾರತಿ ಅವರು ತಮ್ಮ ಗ್ರಾಮದಿಂದ ವೈದ್ಯಕೀಯ ವ್ಯಾಸಂಗಕ್ಕೆ ಪ್ರವೇಶ ಪಡೆದ ಮೊದಲ ದಲಿತ ವಿದ್ಯಾರ್ಥಿಯಾಗಿದ್ದರು. ಏಮ್ಸ್‍ನಲ್ಲಿ ಓದುತ್ತಿದ್ದ ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿ ಅನಿಲ್ ಕುಮಾರ್ ಮೀನಾ ಮಾರ್ಚ 2012ರಲ್ಲಿ ತಮ್ಮ ಹಿಂದುಳಿದ ಜಾತಿಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು. ಏಮ್ಸ್‍ನಲ್ಲಿ ಜಾತಿ ಆಧಾರಿತ ತಾರತಮ್ಮ ಎಶ್ಟು ಗಂಬೀರವಾಗಿದೆಯೆಂದರೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸತ್ಯಶೋದನೆಗಾಗಿ 2007ರಲ್ಲಿ ಸುಖದೇವ ಥೋರೊಟ್ ಅವರ ಅದ್ಯಕ್ಷತೆಯಲ್ಲಿ ಸಮಿತಿಯನ್ನ ರಚಿಸಲಾಯಿತು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ಆದಾರಿತ ದೌರ್ಜನ್ಯಗಳನ್ನ ಪತ್ತೆಹಚ್ಚಲು ಈ ಥೋರೋಟ್ ಸಮಿತಿಯ ವರದಿಯನ್ನ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ. ಈ ವರದಿಯ ಪ್ರಮುಖಾಂಶಗಳು : ಶೇಕಡಾ 69 ಪ್ರಮಾಣದ ಪ.ಜಾತಿ/ ಪ.ಪಂಗಡದ ವಿದ್ಯಾರ್ಥಿಗಳು ತಮಗೆ ಪ್ರಾದ್ಯಾಪಕರಿಂದ ಯಾವುದೆ ಪ್ರೋತ್ಸಾಹ ದೊರಕುವುದಿಲ್ಲ, ಈ ಪ್ರಾದ್ಯಾಪಕರ ತಾತ್ಸಾರ ಮತ್ತು ಅನುಪಸ್ಥಿತಿಯಿಂದಾಗಿ ಅವರೊಂದಿಗೆ ಸಂಪರ್ಕ ಸಾದಿಸಲು ಸಾದ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಶೇಕಡಾ 72 ಪ್ರಮಾಣದ ವಿದ್ಯಾರ್ಥಿಗಳು ತಮ್ಮ ಜಾತಿಯ ಹಿನ್ನೆಲೆ ಕಾರಣಕ್ಕೆ ಈ ಪ್ರಾದ್ಯಾಪಕರು ತಮ್ಮಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು ಮತ್ತು ತರಗತಿಗಳಲ್ಲಿ ಪಾಠ ಮಾಡುವಾಗ ತಾರತಮ್ಯದಿಂದ ನೋಡುತ್ತಿದ್ದರು ಎಂದು ಹೇಳಿದ್ದಾರೆ. ಶೇಕಡಾ 76 ಪ್ರಮಾಣದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನ ನ್ಯಾಯವಾದ ರೀತಿಯಲ್ಲಿ ಮೌಲ್ಯಮಾಪನ ಮಾಡಲೆ ಇಲ್ಲ ಎಂದು ಹೇಳಿದ್ದಾರೆ.

ಶೇಕಡಾ 88 ಪ್ರಮಾಣದ ವಿದ್ಯಾರ್ಥಿಗಳು ತಾವು ನಿರೀಕ್ಷಿಸಿದಕ್ಕಿಂತಲೂ ಕಡಿಮೆ ಅಂಕಗಳನ್ನ ನೀಡಿದ್ದಾರೆ ಎಂದು ಹೇಳಿದ್ದಾರೆ. ಶೇಕಡಾ 84 ಪ್ರಮಾಣದ ವಿದ್ಯಾರ್ಥಿಗಳು ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಪಕ್ಷಪಾತ ಮಾಡಿದರು ಎಂದು ಹೇಳಿದ್ದಾರೆ. ಶೇಕಡಾ 86 ಪ್ರಮಾಣದ ವಿದ್ಯಾರ್ಥಿಗಳು ಮೇಲ್ಜಾತಿಯವರಿಗೆ ಹೋಲಿಸಿದಾಗ ಈ ಪ್ರಾದ್ಯಾಪಕರು ಪರೀಕ್ಷೆಯಲ್ಲಿ ತಮಗೆ ಸಾಕಶ್ಟು ಸಮಯವನ್ನೆ ಕೊಡಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಏಮ್ಸ್ ಹಾಸ್ಟೆಲ್‍ಗಳಲ್ಲಿ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳು ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯದ ಹಿಂಸೆಯನ್ನ ಅನುಬವಿಸಬೇಕಾಯಿತು. ದೆಹಲಿಯ ಏಮ್ಸ್‍ನಲ್ಲಿ ಕೆಲಸ ಮಾಡುತ್ತಿರುವ ಪ.ಜಾತಿ/ಪ.ಪಂಗಡದ ಪ್ರಾದ್ಯಾಪಕರೂ ಸಹ ಈ ತಾರತಮ್ಯಕ್ಕೆ ಒಳಗಾಗಿದ್ದರು ಎಂದು ಆ ವರದಿಯಲ್ಲಿ ವಿವರಿಸಲಾಗಿದೆ

ದೆಹಲಿಯ ಏಮ್ಸ್‍ನ ಪಕ್ಕದಲ್ಲಿರುವ ಮತ್ತೊಂದು ಪ್ರಮುಖ ವೈದ್ಯ ಶಿಕ್ಷಣ ಬೋದಿಸುವ ವರ್ದಮಾನ ಮಹಾವೀರ ವೈದ್ಯಕೀಯ ಕಾಲೇಜ್‍ನಲ್ಲಿ ಶೇಕಡಾ 25 ಪ್ರಮಾಣದ ದಲಿತ ವಿದ್ಯಾರ್ಥಿಗಳನ್ನ ಜಾತಿ ತಾರತಮ್ಯದ ಕಾರಣಕ್ಕೆ ಶರೀರ ವಿಜ್ಞಾನ (physiology) ಪರೀಕ್ಷೆಯಲ್ಲಿ ಸಾಮೂಹಿವಾಗಿ ಅನುತ್ತೀರ್ಣಗೊಳಿಸಲಾಯಿತು. ಈ ಹಗರಣಕ್ಕೆ ಸಂಬಂದಸಿದಂತೆ 2012ರಲ್ಲಿ ಮುಂಗೇಕರ್ ಸಮಿತಿಯು ತನಿಖೆ ನಡೆಸಿತು. ಈ ಸಮಿತಿಯು ಪರಿಶಿಷ್ಟ ಜಾತಿಗಳ ರಾಶ್ಟ್ರೀಯ ಆಯೋಗಕ್ಕೆ (NCSC) ನೀಡಿದ ವರದಿಯಲ್ಲಿ ‘ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳ ವಿರುದ್ದ ಕಾಲೇಜ್‍ನ ಆಡಳಿತ ಮಂಡಳಿಯ ದ್ವೇಶ ಯಾವ ಮಟ್ಟದಲ್ಲಿದೆಯೆಂದರೆ ದಲಿತರು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಮಾಹಿತಿ ಆಯೋಗಕ್ಕೆ ಪ್ರತಿನಿತ್ಯ ಅರ್ಜಿಗಳನ್ನ ಸಲ್ಲಿಸುತ್ತಿದ್ದರು’ ಎಂದು ಉಲ್ಲೇಖಿಸಲಾಗಿದೆ. ಕಿರುಕುಳಕ್ಕೆ ಒಳಗಾದ ದಲಿತ ವಿದ್ಯಾರ್ಥಿಗಳಿಗೆ 10 ಲಕ್ಷ ಮೊತ್ತದ ಪರಿಹಾರ ಕೊಡಬೇಕೆಂದು ಮತ್ತು ಆ ಕಾಲೇಜ್‍ನ ಬೋದಕ ಮತ್ತು ಆಡಳಿತ ಸಿಬ್ಬಂದಿಯನ್ನ ಅಮಾನತ್ತು ಮಾಡಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿತ್ತು.

ಶಿಕ್ಷಣ ಸಂಸ್ಥೆಗಳನ್ನ ಮೇಲ್ಜಾತಿಗಳು ಮತ್ತು ಶ್ರೀಮಂತ ವರ್ಗದವರಿಗೆ ಕಾಯ್ದಿರಿಸಲಾಗುತ್ತದೆ. ಆದರೆ ಜಾತಿ ಆದಾರಿತ ಮೀಸಲಾತಿಯ ಸಾಮಾಜಿಕ ನ್ಯಾಯದ ಮೂಲಕ ಈ ಯಾಜಮಾನಕೀಯಕ್ಕೆ ಒಡ್ಡಲಾಗುವ ಸವಾಲನ್ನ ಮೀರಲು ಈ ಕಿರುಕುಳ, ಅಪಮಾನ, ಪ್ರತ್ಯೇಕತೆ, ತಾರತಮ್ಯವನ್ನ ತುರ್ತಾಗಿ ಜಾರಿಗೊಳಿಲಾಗುತ್ತದೆ. ಈ ಅಪರಾದಿಗಳಿಗೆ ದಂಡನೆಯ ಕ್ರಮ ಮತ್ತು ಶಾಸನಬದ್ದ ಆದೇಶವಿದ್ದರೂ ಸಹ ದೀರ್ಘಾವದಿ ಪರಿಹಾರವನ್ನ ಕಂಡುಕೊಳ್ಳುವುದು ಅವಶ್ಯಕವಾಗಿದೆ.
( ಕೃಪೆ : ಇಂಡಿಯನ್ ಎಕ್ಸ್‍ಪ್ರೆಸ್ 29, ಮೇ, 2019)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...