Homeಎಕಾನಮಿಮಾರುತಿ ಸುಜಿಕಿಗೆ ಕರಾಳ ಸೆಪ್ಟಂಬರ್: ಒಂದೇ ತಿಂಗಳಲ್ಲಿ 31.1% ಮಾರಾಟ ಕುಸಿತ..

ಮಾರುತಿ ಸುಜಿಕಿಗೆ ಕರಾಳ ಸೆಪ್ಟಂಬರ್: ಒಂದೇ ತಿಂಗಳಲ್ಲಿ 31.1% ಮಾರಾಟ ಕುಸಿತ..

- Advertisement -
- Advertisement -

ಮಾರುತಿ ಸುಜಿಕಿ ಕಾರುಗಳ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡಿದ್ದು, ಸೆಪ್ಟೆಂಬರ್ ತಿಂಗಳೊಂದರಲ್ಲೇ  31.1ರಷ್ಟು ಕುಸಿತವಾಗಿದೆ.

ಭಾರತದ ಅತಿದೊಡ್ಡ ಆಟೋಮೊಬೈಲ್ ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ ಕಾರುಗಳ ಮಾರಾಟ ಶೇ.31.5ರಷ್ಟು ಕುಸಿದು ಹೋಗಿದ್ದು ಸಧ್ಯದ ಆರ್ಥಿಕ ಸ್ಥಿತಿಗೆ ಕನ್ನಡಿ ಹಿಡಿದಿದೆ.

2019ರ ಸೆಪ್ಟೆಂಬರ್ ತಿಂಗಳಲ್ಲಿ 78,979 ಪ್ರಯಾಣಿಕರ ಕಾರುಗಳು ಮಾತ್ರ ಮಾರಾಟವಾಗಿವೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯ 1,15,228 ಕಾರುಗಳು ಮಾರಾಟವಾಗಿದ್ದವು.

ಏಫ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಕಾರುಗಳ ಮಾರಾಟದಲ್ಲಿ ಶೇಕಡ 24ರಷ್ಟು ಕುಸಿತ ಕಂಡಿದೆ. ಈ ಅವಧಿಯಲ್ಲಿ 7,40,911 ಕಾರುಗಳು ಮಾರಾಟವಾಗಿವೆ. 2018ರ ಇದೇ ಅವಧಿಯಲ್ಲಿ 9,75,327 ಕಾರುಗಳು ಮಾರಾಟವಾಗಿದ್ದವು ಎಂದು ಅಂಕಿಅಂಶಗಳು ತಿಳಿಸುತ್ತವೆ.

ಆಲ್ಟೋ, ಹಳೆಯ ವಾಗೆನ್ ಆರ್ ಕಾರುಗಳ ಮಾರಾಟದಲ್ಲೂ 42.6ರಷ್ಟು ಕುಸಿತ ಕಂಡುಬಂದಿದೆ. ಅಂದರೆ ಕೇವಲ 20,085 ಕಾರುಗಳು ಮಾತ್ರ ಮಾರಾಟವಾಗಿವೆ. ಹೊಸ ಮಾದರಿಯ ವಾಗೆನ ಆರ್, ಸಲೆರಿಯೋ, ಇನ್ನಿಸ್, ಸ್ವಿಪ್ಟ್್, ಬಲೆರೋ, ಜೈರ್ ಕಾರುಗಳ ಮಾರಾಟದಲ್ಲಿ 22.7ರಷ್ಟು ಕುಸಿದಿದೆ.

2018ರಲ್ಲಿ 1,53,550 ಕಾರುಗಳು ಮಾರಾಟವಾಗಿದ್ದರೆ, 2019ರ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 1,15,452 ಕಾರುಗಳು ಮಾರಾಟವಾಗಿ ಶೇಕಡ 24.8ರಷ್ಟು ಮತ್ತು ರಫ್ತು ಮಾರಾಟದಲ್ಲೂ 17ರಷ್ಟು ಕುಸಿತ ಕಂಡುಬಂದಿದ್ದು ಆರ್ಥಿಕತೆ ದಿವಾಳಿಯ ಅಂಚಿನತ್ತ ಸಾಗುತ್ತಿರುವುದರ ಸಂಕೇತವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...