HomeUncategorizedರೆಡ್ಡಿಯ ಗುಡ್ ಟೈಮ್ - ಮೋದಿಯ ಅಚ್ಚೆ ದಿನ್

ರೆಡ್ಡಿಯ ಗುಡ್ ಟೈಮ್ – ಮೋದಿಯ ಅಚ್ಚೆ ದಿನ್

- Advertisement -
- Advertisement -

‘ನೋಡಪಾ… ಕೆಟ್ಟ ಘಳಿಗೆಯಲ್ಲಿ ಏನೇನಾಗಿದೆಯೋ ಅದ್ನೆಲ್ಲಾ ಮರ್‍ತೊಗ್ಬಿಡು, ನನ್ನ ಟೈಮು ಈಗ ಚೆನ್ನಾಗಿ ಶುರುವಾಗಿದೆ.’
ರಾಯಚೂರು ರೂರಲ್ ಎಂಎಲ್‌ಎ ಬಸನಗೌಡರನ್ನು ಆಪರೇಷನ್ ಮಾಡಲು ಹೋಗಿದ್ದ ದಿ ಗ್ರೇಟ್ ಜೆನ್ನಿ ಅಲಿಯಾಸ್ ಜನಾರ್ಧನ ರೆಡ್ಡಿಯ ಡೀಲಿಂಗ್ ಡೈಲಾಗ್ ಇದು. ಇವಿಎಂ ಮಷೀನ್‌ಗಳ ಪಕಡ್ಬಂದಿಯೂ ಸೇರಿದಂತೆ ಮಾಡಬಾರದ ಮಸಲತ್ತುಗಳನ್ನೆಲ್ಲ ಮಾಡಿದ ಹೊರತಾಗಿಯೂ ಮ್ಯಾಜಿಕ್ ನಂಬರ್ ತಲುಪಲಾರದ ಅತಂತ್ರ ಸ್ಥಿತಿಯಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿಯ ಆಸರೆಯಲ್ಲದೆ ಮತ್ತೇನೂ ಬಾಕಿ ಉಳಿದಿರಲಿಲ್ಲ. ಸ್ವತಃ ಅಮಿತ್ ಶಾ, ಯಡ್ಯೂರಪ್ಪನವರ ಹೆಗಲಿಗೆ ಅಧಿಕಾರದ ಜೋಳಿಗೆ ನೇತುಹಾಕಿ ದಿಲ್ಲಿ ಸೇರಿಕೊಂಡು ರಿಮೋಟ್ ಹಿಡಿದು ಕೂತಮೇಲೆ ಪಾಪ, ರೆಡ್ಡಿಯಾದರು ಇನ್ನೇನು ಮಾಡಬೇಕಿತ್ತು. ಆದ್ರೆ ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದು ಜೆನ್ನಿ ರೆಡ್ಡಿಯ ಬಾಯಿಂದ ಹೊರಬಿದ್ದ ‘ನನ್ನ ಟೈಮು ಚೆನ್ನಾಗಿ ಶುರುವಾಗಿದೆ’ ಅನ್ನೋ ಸಂಗತಿ. ಇದು ಯಾಕಷ್ಟು imporatant ವಿಷಯವಾಗುತ್ತೆ ಅನ್ನೋದಕ್ಕೆ 2014ರ ಲೋಕಸಭಾ ಸಮರ ಕಣದಲ್ಲಿ ಮೋದಿ ಮಹಾತ್ಮರು ಉದುರಿಸಿದ್ದ ಡೈಲಾಗ್ ನೆನಪಿಸಿಕೊಳ್ಳಿ. ಅವತ್ತು ಹೋದಬಂದ ಕಡೆಯಲ್ಲೆಲ್ಲ ‘ಅಚ್ಚೇ ದಿನ್ ಆಯೇಗಾ, ಜರೂರ್ ಆಯೇಗಾ’ ಅಂತ ಮಹಾತ್ಮರು ಬಂಬಡಾ ಬಜಾಯಿಸಿದ್ದಕ್ಕೂ ಇವತ್ತು ರೆಡ್ಡಿಯಂತಹ ಮಾಫಿಯಾಗಳು ‘ನಮಗೆ ಗುಡ್ ಟೈಮ್ ಶುರುವಾಗಿದೆ’ ಅನ್ನೋದಕ್ಕೂ ಸಂಬಂಧ ಇರೋದು ಕಾಣಿಸುತ್ತೆ ಅಲ್ವಾ?

ಮೋದಿ ‘ಅಚ್ಚೇ ದಿನ್ ಅಂದಾಗ, ನಮ್ಮ ಬಡ ಬೋರೇಗೌಡಪ್ಪಗಳು ತಮ್ಮ ಮನೆಯ ದೀಪಕ್ಕೆ ಎಣ್ಣೆ ಬರುತ್ತೆ, ತಟ್ಟೆಗೆ ಅನ್ನ ಬಂದು ಬೀಳುತ್ತೆ, ಬೆಲೆಯೇರಿಕೆಯ ಗ್ರಾಫು ಕುಸಿಯುತ್ತೆ ಅಂತ ಕನಸು ಕಂಡಿದ್ದರು. ಆದರೆ ಮೋದಿಯ ಅಚ್ಚೇ ದಿನ್ ವಾಸ್ತವ ಅಂತಹ ಬೋರೇಗೌಡರಿಗಲ್ಲ, ಇಂಥಾ ಜನಾರ್ಧನ ರೆಡ್ಡಿಗಳಿಗೆ. ಇಲ್ಲದೇ ಹೋಗಿದ್ದರೆ, ಅನಾಮತ್ತು ಹದಿನಾರೂವರೆ ಸಾವಿರ ಕೋಟಿಯ ಅದಿರು ಲಫಡಾ ಕೇಸಿನಲ್ಲಿ
ನಂಬರ್1 ಆರೋಪಿಯಾಗಿ ಜೈಲು ಸೇರಿ, ಬೇಲ್‌ಡೀಲ್ ಕೇಸಲ್ಲಿ ಜಡ್ಜ್‌ಗೆ 10 ಕೋಟಿಯ ಬೇಲ್‌ಪೂರಿ ತಿನ್ನಿಸಲು ಹೋಗಿ ತಗಲಾಕ್ಕೊಂಡು ಜೈಲೂಟ ಭದ್ರ ಮಾಡಿಕೊಂಡಿದ್ದ ಜನಾರ್ಧನ ರೆಡ್ಡಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ಸುಲಭವಾಗಿ ಬೇಲ್ ಮೇಲೆ ಹೊರಬಂದು ನಿಟ್ಟುಸಿರು ಬಿಡುತ್ತಿರಲಿಲ್ಲ. ಸಿಬಿಐ ರೇಡುಗಳಿಂದ ಇನ್ನು ರೆಡ್ಡಿಯ ಕಥೆ ಮುಗಿದೇಹೋಯ್ತು, ಅವನ ಆಸ್ತಿಯೆಲ್ಲ ಜಪ್ತಿಯಾಗಿ ಬೀದಿಗೆ ಬಂದ ಅನ್ನುವವರ ಮುಂದೆ ಮುನ್ನೂರು ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿ ಕುಟುಂಬ ಸಮೇತ ಹಾಡಿ ಕುಣಿಯುತ್ತಾನೆಂದರೆ ಅವನ ‘ಗುಡ್ ಟೈಂ’ ಹಿಂದೆ ಮೋದಿಯ ‘ಅಚ್ಚೇ ದಿನ್ ಕೆಲಸ ಮಾಡಿಲ್ಲ ಅನ್ನಲಿಕ್ಕಾಗುತ್ತಾ? ಅದೂ ಇಡೀ ದೇಶಕ್ಕೆ ದೇಶವೇ ಮೋದಿ ಮಾಡಿದ ‘ನೋಟ್‌ಬಂಧಿಯಿಂದ ದುಡ್ಡಿಗಾಗಿ ಪರದಾಡುತ್ತಿರುವ ಹೊತ್ತಲ್ಲಿ!

ರೆಡ್ಡಿ ಒಬ್ಬನೇ ಅಲ್ಲ, ಮೋದಿಯ ಅಚ್ಚೇ ದಿನ್‌ಗಳ ಫಾಯಿದೆ ಪಡೆದವರು ಬಹಳಷ್ಟು ಮಂದಿಯಿದ್ದಾರೆ. ಆದರೆ ಅವರೆಲ್ಲ ಈ ನೆಲದ ಸಿರಿವಂತರು, ಇಂಡಸ್ಟ್ರಿಯಲಿಸ್ಟುಗಳು, ಕಾರ್ಪೊರೇಟ್ ಕಂಪನಿಗಳು ಮಾತ್ರ! ಆಮ್ ಆದ್ಮಿಯ ಪಾಲಿಗೆ ಅಚ್ಚೇ ದಿನವೂ ಬರಲಿಲ್ಲ, ಹದಿನೈದು ಲಕ್ಷವೂ ಇಣುಕಿ ನೋಡಲಿಲ್ಲ. ಇದೇ ವರ್ಷ ಚೀನಾದ ಶಾಂಘೈ ಮೂಲದ ಹುರೂನ್ ಎಂಬ ಇಂಟರ್‌ನ್ಯಾಷನಲ್ ಅನಾಲಿಟಿಕಲ್ ಸಂಸ್ಥೆಯೊಂದು ಜಗತ್ತಿನ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿತು. ಅದರ ಪ್ರಕಾರ ಕಳೆದ ಮೂರ್‍ನಾಲ್ಕು ವರ್ಷದಲ್ಲಿ ಇಂಡಿಯಾದ ಬಿಲಿಯನೇರುಗಳ ಆಸ್ತಿಗಳಿಕೆ ಶೇ.49ರಷ್ಟು ಹೆಚ್ಚಾಗಿದೆಯಂತೆ. ಅಂದಹಾಗೆ ಆ ಲಿಸ್ಟಿನಲ್ಲಿ ಸ್ಥಾನ ಪಡೆದ ಭಾರತದ ಬಿಲಿಯನೇರುಗಳ ಸಂಖ್ಯೆ 131. ಅಂದರೆ 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಕೇವಲ 131 ಜನರ ಆಸ್ತಿ ಮಾತ್ರ ರಾಕೆಟ್ ವೇಗದಲ್ಲಿ ಹೆಚ್ಚಾಗಿದೆ. ಈ ರಿಪೋರ್ಟು ಹೇಳುವ ಪ್ರಕಾರ ಮೋದಿ ಮಹಾತ್ಮರ ಚೆಡ್ಡಿ ದೋಸ್ತು ಅದಾನಿಯ ಆಸ್ತಿ ಕಳೆದ ಒಂದು ವರ್ಷದಲ್ಲೇ 109% ಜಾಸ್ತಿಯಾಗಿದೆಯಂತೆ! ಇನ್ನು ಅಂಬಾನಿ ಬ್ರದರ್‍ಸ್‌ಗಳದ್ದು, ಜಿಂದಾಲ್ ಕುಡಿಗಳದ್ದು, ಮಿತ್ತಲ್ ಕುಟುಂಬಗಳದ್ದು ಕೇಳೋದೆ ಬೇಡ. ದುರಂತವೆಂದರೆ ಮೋದಿ ಹೇಳಿದ್ದ ಅಚ್ಚೇ ದಿನ್ ಇವರೆಲ್ಲ ಆಸ್ತಿಗಳನ್ನು ಇಷ್ಟೆಲ್ಲ ಹೆಚ್ಚು ಮಾಡಿದ್ದರೂ, ಸುಮಾರು 60 ಕೋಟಿ ಬಡ ಭಾರತೀಯರ ಆದಾಯ ಈ ಅವಧಿಯಲ್ಲಿ ಏನಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಒಟ್ಟಿನಲ್ಲಿ ಮೋದಿ ಮಹಾತ್ಮರ ಅಚ್ಚೇ ದಿನ್ ಜನಸಾಮಾನ್ಯರಿಗೆ ದಕ್ಕಲಿಲ್ಲ, ರೆಡ್ಡಿಯಂಥಾ, ಅಂಬಾನಿ-ಅದಾನಿಗಳಂಥ ಕಾಳಧನಿಕರಿಗೆ ‘ಗುಡ್ ಟೈಂ’ ರೂಪದಲ್ಲಿ ವಕ್ಕರಿಸಿಕೊಂಡಿದೆ ಅನ್ನೋದು ರೆಡ್ಡಿ ಮಾತಿನಿಂದಲೇ ದೃಢವಾಗುತ್ತೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ

ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ದ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. "ಪತ್ರಿಕಾಗೋಷ್ಠಿಯ ಮೂಲಕ...

ಕೇರಳದಲ್ಲಿ ಸರ್ಕಾರ ಬದಲಾವಣೆಗೆ ಕವಿ ಸಚ್ಚಿದಾನಂದನ್ ಕರೆಗೆ ಎಡಪಕ್ಷಗಳ ತೀವ್ರ ವಿರೋಧ; ಇದು ಸಾರ್ವಜನಿಕ ಭಾವನೆ ಎಂದ ವಿಪಕ್ಷಗಳು

ಕೇರಳದಲ್ಲಿ ನಿರಂತರ ಆಡಳಿತ ಅಪೇಕ್ಷಣೀಯವಲ್ಲ ಮತ್ತು ಅಧಿಕಾರವು ರಾಜಕೀಯ ರಂಗಗಳ ನಡುವೆ ಪರ್ಯಾಯವಾಗಿರಬೇಕು ಎಂದು ಹಿರಿಯ ಕವಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಸಚ್ಚಿದಾನಂದನ್ ಹೇಳಿದ್ದಾರೆ. ಈ ಹೇಳಿಕೆ ಆಡಳಿತಾರೂಢ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಣೆ; ದೀಪಕ್ ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿ ಬಂಧನ

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಿಸಿದ್ದ ಜಿಮ್ ಮಾಲೀಕ ದೀಪಕ್ ಕುಮಾರ್ (ಮೊಹಮ್ಮದ್ ದೀಪಕ್) ಅವರನ್ನು ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಪೊಲೀಸರು ಸೋಮವಾರ (ಫೆ.9) ಬಂಧಿಸಿದ್ದಾರೆ. ಬಿಹಾರದ...

ಬಾಂಗ್ಲಾದೇಶ: ಚುನಾವಣೆಗೂ ಮುನ್ನ 62 ವರ್ಷದ ಹಿಂದೂ ಅಕ್ಕಿ ವ್ಯಾಪಾರಿ ಸುಶೇನ್ ಚಂದ್ರ ಸರ್ಕಾರ್ ಹತ್ಯೆ

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು, ಸೋಮವಾರ ತಡರಾತ್ರಿ ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಅಕ್ಕಿ ವ್ಯಾಪಾರಿಯೊಬ್ಬರನ್ನು ಅವರ ಅಂಗಡಿಯೊಳಗೆ ಹತ್ಯೆಯಾಗಿದೆ.  ತ್ರಿಶಾಲ್ ಉಪಜಿಲಾದ ಬೋಗರ್ ಬಜಾರ್ ಛೇದಕದಲ್ಲಿರುವ "ಮೆಸರ್ಸ್ ಭಾಯ್...

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಮಸೀದಿ ಕೆಡವಿದ ಉತ್ತರ ಪ್ರದೇಶ ಸರ್ಕಾರ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಉತ್ತರ ಪ್ರದೇಶ ಆಡಳಿತವು ಬರೇಲಿ ಜಿಲ್ಲೆಯ ಮಸೀದಿಯನ್ನು ನೆಲಸಮಗೊಳಿಸಿದೆ. ಮಸೀದಿ ನಿರ್ಮಾಣ ಕುರಿತಾದ ಪ್ರಕರಣ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಪಾರಿಯಾ...

‘ನಾನು ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ’ : ಜನರಲ್ ನರವಾಣೆ ಪುಸ್ತಕದ ಕುರಿತ ಪ್ರಕಾಶಕರ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆಯ ಪ್ರಕಾಶಕರ ವಿರುದ್ಧ ರಾಹುಲ್ ಗಾಂಧಿ ಮಂಗಳವಾರ (ಫೆ.10) ಗಂಭೀರ ಆರೋಪ ಮಾಡಿದ್ದಾರೆ. ನರವಾಣೆ ಅವರ ನೆನಪುಗಳ ಆಧಾರಿತ ಪುಸ್ತಕವು ಈಗಾಗಲೇ ಮಾರಾಟಕ್ಕೆ...

‘ಆದಿತ್ಯನಾಥನ ಆಡಳಿತದಲ್ಲಿ ಬ್ರಾಹ್ಮಣರು ಅಸುರಕ್ಷಿತರು, ಸನಾತನಿಗಳು ಎಂದಿಗೂ ಮರೆಯುವುದಿಲ್ಲ’ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನ ಬಂಧನ

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಪತ್ರಕರ್ತರೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು...

ಹಿಮಂತ ಬಿಸ್ವಾ ಶರ್ಮಾ ‘ಗುಂಡು ಹಾರಿಸುವ’ ವಿಡಿಯೋ ವಿರುದ್ಧದ ಅರ್ಜಿ; ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಿರ್ದಿಷ್ಟ ಸಮುದಾಯದ ಸದಸ್ಯರ ಮೇಲೆ ಗುರಿಯಿಟ್ಟು ರೈಫಲ್‌ನಿಂದ ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಡಪಂಥೀಯ...

ನರವಾಣೆಯ ಅಪ್ರಕಟಿತ ಆತ್ಮಚರಿತ್ರೆ ಪ್ರಸಾರ ಆರೋಪ : ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸರು

ಮಾಜಿ ಭೂಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ"ಯ ಪ್ರಸಾರ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಪುಸ್ತಕದ ವಿಷಯಗಳನ್ನು ಪ್ರತಿಪಕ್ಷ...

ನರವಾಣೆ ಅವರ ಆತ್ಮಚರಿತ್ರೆಯ ಯಾವುದೇ ಪ್ರತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ: ಪೆಂಗ್ವಿನ್ ಪ್ರಕಾಶನ ಸ್ಪಷ್ಟನೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಗೆ ವಿಶೇಷ ಪ್ರಕಾಶನ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ) ಹೇಳಿದ್ದು,...