Homeಮುಖಪುಟಬಡ ಕುಟುಂಬಕ್ಕೆ ವಾರ್ಷಿಕ ₹1 ಲಕ್ಷ, 1 ಕೋಟಿ ಸರ್ಕಾರಿ ಉದ್ಯೋಗ: ಆರ್‌ಜೆಡಿ ಭರವಸೆ

ಬಡ ಕುಟುಂಬಕ್ಕೆ ವಾರ್ಷಿಕ ₹1 ಲಕ್ಷ, 1 ಕೋಟಿ ಸರ್ಕಾರಿ ಉದ್ಯೋಗ: ಆರ್‌ಜೆಡಿ ಭರವಸೆ

- Advertisement -
- Advertisement -

ಬಿಹಾರದ ಮಹಾಘಟಬಂಧನ್‌ನ ಅತಿದೊಡ್ಡ ಪಕ್ಷವಾಗಿರುವ ಆರ್‌ಜೆಡಿ ಶನಿವಾರ ಲೋಕಸಭೆ ಚುನಾವಣೆಗೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಕ್ಷಾ ಬಂಧನದಂದು ಬಡ ಕುಟುಂಬಗಳ ಸಹೋದರಿಯರಿಗೆ ವರ್ಷಕ್ಕೆ ₹1 ಲಕ್ಷ ಮತ್ತು ಪ್ರತಿ ವರ್ಷ 1 ಕೋಟಿ ಸರ್ಕಾರಿ ಉದ್ಯೋಗ ಸೃಷ್ಟಿ ಭರವಸೆ ನೀಡಿದೆ.

ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಆರ್‌ಜೆಡಿಯ ಚುನಾವಣಾ ಪ್ರಣಾಳಿಕೆ ‘ಪರಿವರ್ತನ್ ಪತ್ರ’ವನ್ನು ಬಿಡುಗಡೆ ಮಾಡಿ, “2024ರ ಚುನಾವಣೆಗೆ ಪಕ್ಷವು 24 ‘ಜನ ವಚನ’ಗಳನ್ನು ಘೋಷಣೆ ಮಾಡುತ್ತಿದೆ; ಪಕ್ಷವು ನಮ್ಮ ಬದ್ಧತೆಯನ್ನು ಪೂರೈಸುತ್ತದೆ” ಎಂದು ಹೇಳಿದರು.

“ಇಂಡಿಯಾ ಬಣವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಆರ್‌ಜೆಡಿ ದೇಶಾದ್ಯಂತ ನಿರುದ್ಯೋಗಿ ಯುವಕರಿಗೆ 1 ಕೋಟಿ ಸರ್ಕಾರಿ ಉದ್ಯೋಗಗಳನ್ನು ಪಡೆಯುವುದನ್ನು ಖಾತ್ರಿಪಡಿಸುತ್ತದೆ. ಈ ಪ್ರಕ್ರಿಯೆಯು ಈ ವರ್ಷದ ಸ್ವಾತಂತ್ರ್ಯ ದಿನದಂದು ಪ್ರಾರಂಭವಾಗಲಿದೆ. ಅದು ‘ಬೆರೋಜ್‌ಗಾರಿ ಸೆ ಆಜಾದಿ’ಯಂತಿರುತ್ತದೆ” ಸುದ್ದಿಗಾರರಿಗೆ ತಿಳಿಸಿದರು.

“ನಿರುದ್ಯೋಗ ನಮ್ಮ ದೊಡ್ಡ ಶತ್ರು ಆದರೆ ಬಿಜೆಪಿ ನಾಯಕರು ಅದರ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅವರು 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು … ಆದರೆ ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ” ಎಂದು ಅವರು ಹೇಳಿದರು.

“ಈ ವರ್ಷದ ರಕ್ಷಾ ಬಂಧನದ ಸಂದರ್ಭದಲ್ಲಿ, ನಾವು ಬಡ ಕುಟುಂಬಗಳಿಗೆ ಸೇರಿದ ನಮ್ಮ ಸಹೋದರಿಯರಿಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ನೀಡಲು ಪ್ರಾರಂಭಿಸುತ್ತೇವೆ” ಎಂದು ಆರ್‌ಜೆಡಿ ನಾಯಕ ಹೇಳಿದರು.

ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ₹500 ಕ್ಕೆ ನೀಡುವುದಾಗಿ ಭರವಸೆ ನೀಡಲಾಯಿತು.

“ಬಿಹಾರದಲ್ಲಿ ಉತ್ತಮ ಸಂಪರ್ಕಕ್ಕಾಗಿ, ನಾವು ಪೂರ್ಣಿಯಾ, ಭಾಗಲ್ಪುರ್, ಮುಜಾಫರ್‌ಪುರ, ಗೋಪಾಲ್‌ಗಂಜ್ ಮತ್ತು ರಕ್ಸಾಲ್‌ನಲ್ಲಿ ಐದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತೇವೆ. ಜೊತೆಗೆ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ₹1.60 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಅನ್ನು ಮಂಜೂರು ಮಾಡುತ್ತೇವೆ. ತಿಂಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು, ಬಿಹಾರದ ಜನರು ಸಹ 200 ಯೂನಿಟ್ ಪಡೆಯುತ್ತಾರೆ” ಎಂದು ಹೇಳಿದರು.

ಕೇಂದ್ರದಲ್ಲಿ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಸಶಸ್ತ್ರ ಪಡೆಗಳಲ್ಲಿ ಗುತ್ತಿಗೆ ಉದ್ಯೋಗದ ಅಗ್ನಿವೀರ್ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಭರಚಸೆ ನೀಡಿದ್ದಾರೆ.

ಇದನ್ನೂ ಓದಿ; ಹೇಮಂತ್ ಸೊರೆನ್ ಬಂಧನ ಖಂಡಿಸಿ ಪ್ರತಿಭಟಿಸಿದ ಆದಿವಾಸಿಗಳ ವಿರುದ್ಧ ಎಫ್‌ಐಆರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...