ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿರುವ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರಂತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಂಕ್ಫುಡ್ ತಯಾರಿಕಾ ಕಾರ್ಖಾನೆ ಒಳಗೆ ಆಹಾರ ತಯಾರಿಕೆಗೆ ಎಂದು ಇಟ್ಟಿದ್ದ ಸಿಲಿಂಡರ್ ಸೋರಿಕೆಯಾಗಿ, ಅದರಿಂದ ಬೆಂಕಿ ಹತ್ತಿಕೊಂಡು ಸ್ಪೋಟವಾಗಿ ಈ ದುರ್ಘಟನೆ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ 15 ವಾಣಿಜ್ಯ ಸಿಲಿಂಡರ್ ಇದ್ದವು ಎನ್ನಲಾಗಿದೆ.
ಬಾಯ್ಲರ್ ಜೊತೆಗೆ ಸಿಲಿಂಡರ್ ಕೂಡ ಬ್ಲಾಸ್ಟ್ ಆದ ಕಾರಣ ಅಕ್ಕ ಪಕ್ಕದ ಕಟ್ಟಡಗಳೂ ಸಾಕಷ್ಟು ಹಾನಿಯಾಗಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಲಸಿಕೆ ಪಡೆಯದವರಿಗೆ ಪಡಿತರವಿಲ್ಲ ಎಂದ ಚಿ೦ತಾಮಣಿ ಅಧಿಕಾರಿಗಳು: ಜನರ ಆಕ್ರೋಶ
Boiler blast in MM Food products factory in Gopalapura, Magadi Road. 2 labourers Manish & Saurav of Bihar died in the blast. 3 others severely injured rushed to Victoria hospital for treatment. Fire & Emergency officials doused the fire. #Bengaluru @DeccanHerald @BlrCityPolice pic.twitter.com/RdXQhdBOCl
— Chaithanya (@ChaithanyaSwamy) August 23, 2021
ಕಟ್ಟಡದ ಮಾಲೀಕ ಹಾಗೂ ಆಹಾರ ತಯಾರಿಕಾ ಕಾರ್ಖಾನೆ ಶೇರ್ ಹೋಲ್ಡರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಟ್ಟಡದ ಮಾಲೀಕ, ಫ್ಯಾಕ್ಟರಿ ಮಾಲೀಕರಾದ ವಿಜಯ್ ಮೆಹ್ತಾ ಹಾಗೂ ಸಚಿನ್ ಅವರ ಮೇಲೆ ನಿರ್ಲಕ್ಷ್ಯತನದಿಂದ ಸಾವು ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕರನ್ನು ಸೌರವ್ ಹಾಗೂ ಮನೀಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡವರಲ್ಲಿ ಸಚಿನ್, ಧನಲಕ್ಷ್ಮಿ ಮತ್ತು ಶಾಂತಿ ಎಂದು ಗುರುತಿಸಲಾಗಿದ್ದು, ಸ್ಥಳೀಯರಾದ ಧನಲಕ್ಷ್ಮಿ ಮತ್ತು ಶಾಂತಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು ಕಾರ್ಖಾನೆಯ ಒಳಗೆ ಏಳು ಮಂದಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯನ್ನು ಸುಮಾರು 5 ತಿಂಗಳ ಹಿಂದೆಯಷ್ಟೇ ಆರಂಭಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಗಂಗಾವತಿ: ಮಾದಿಗ ಸಮುದಾಯದ ಮೇಲೆ ಗುಂಪು ಕಟ್ಟಿಕೊಂಡು ಆಕ್ರಮಣ; ನಾಲ್ವರು ಆಸ್ಪತ್ರೆಗೆ ದಾಖಲು


