Homeಕರ್ನಾಟಕಲಸಿಕೆ ಪಡೆಯದವರಿಗೆ ಪಡಿತರವಿಲ್ಲ ಎಂದ ಚಿ೦ತಾಮಣಿ ಅಧಿಕಾರಿಗಳು: ಜನರ ಆಕ್ರೋಶ

ಲಸಿಕೆ ಪಡೆಯದವರಿಗೆ ಪಡಿತರವಿಲ್ಲ ಎಂದ ಚಿ೦ತಾಮಣಿ ಅಧಿಕಾರಿಗಳು: ಜನರ ಆಕ್ರೋಶ

- Advertisement -
- Advertisement -

ರಾಜ್ಯದ ಚಿ೦ತಾಮಣಿ ಸೇರಿದಂತೆ ಹಲವು ತಾಲೂಕುಗಳ ತಹಶೀಲ್ದಾರ್‌ಗಳು ಮತ್ತು ಜಿಲ್ಲಾಧಿಕಾರಿಗಳು “ಲಸಿಕೆ ಪಡೆಯದಿದ್ದವರಿಗೆ ಪಡಿತರವನ್ನು ನೀಡುವುದಿಲ್ಲ’ ಎ೦ದು ಸುತ್ತೋಲೆ ಹೊರಡಿಸಿದ್ದಾರೆ. ಇದು ಆಹಾರದ ಹಕ್ಕಿನ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಕೋವಿಡ್‌ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿ ಕಾನೂನು ತರಲಾಗಿದೆ. ಎಲ್ಲೆಡೆ ಲಸಿಕೆ ಹಾಕಲಾಗುತ್ತಿದೆ.  ಲಸಿಕೆ ಸ್ವಪ್ರೇರಿತವಾಗಿರಬೇಕು ಎ೦ದು ಕೇ೦ದ್ರ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆಯು ಸ್ಪಷ್ಟವಾಗಿ ಹೇಳಿದ್ದರೂ ಲಸಿಕೆ ಪಡೆಯದವರಿಗೆ ಪಡಿತರ ನೀಡಬಾರದು ಎ೦ದು ಕೋಲಾರ ಜಿಲ್ಲೆಯ ಚಿ೦ತಾಮಣಿ ತಾಲೂಕಿನ ತಹಶೀಲ್ದಾರ್‌ ಹೊರಡಿಸಿರುವ ಸೂಚನೆಯು ವಿರೋಧಕ್ಕೆ ಗ್ರಾಸವಾಗಿದೆ.

ಜನರನ್ನು ಲಸಿಕಾ ಹಾಕಿಕೊಳ್ಳುವಂತೆ ಒತ್ತಾಯಿಸುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಲಸಿಕೆ ಪಡೆಯದವರಿಗೆ ಪಡಿತರ ಸ್ಥಗಿತಗೊಳಿಸಲು ಸುತ್ತೋಲೆ ಹೊರಡಿಸುತ್ತಿದ್ದಾರೆ. ಆದರೂ, ಕ೦ದಾಯ ಸಚಿವ ಆರ್‌. ಅಶೋಕ್‌ ಮತ್ತು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಈವರೆಗೂ ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ.

ಬಾಗಲಕೋಟೆ ಮತ್ತು ಯಾದಗಿರಿ ಜಿಲ್ಲೆಯಲ್ಲಿಯೂ ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಪಡಿತರ ಚೀಟಿದಾರರಿಗೆ ಪಡಿತರವನ್ನು ಸ್ಮಗಿತಗೊಳಿಸಿದ್ದರು. ಇದರ ಬೆನ್ನಲ್ಲೇ ಚಿ೦ತಾಮಣಿ ತಾಲೂಕಿನ ತಹಶೀಲ್ದಾರ್‌, 2021ರ ಆಗಸ್ಟ್‌ 21ರಂದು ಪಡಿತರ ಸ್ಮಗಿತಗೊಳಿಸುವ೦ತೆ ನ್ಯಾಯಬೆಲೆ ಅಂಗಡಿ ಪ್ರಾಧಿಕಾರದವರಿಗೆ ಸೂಚಿಸಿದ್ದಾರೆ.

“ಲಸಿಕೆ ಪಡೆಯದೇ ಇರುವ ಪಡಿತರ ಚೀಟಿದಾರರಿಗೆ ಪಡಿತರವನ್ನು ನೀಡಲಾಗುವುದಿಲ್ಲ ಎ೦ಬ ಬಗ್ಗೆ ಸೂಚನಾ ಫಲಕವನ್ನು ನ್ಯಾಯಬೆಲೆ ಅ೦ಗಡಿಯ ಮುಂದೆ ಕಡ್ಡಾಯವಾಗಿ ಪ್ರಕಟಿಸುವುದು” ಎಂದು ಸೂಚಿಸಿರುವುದು ಸೂಚನಾ ಪತ್ರದಿ೦ದ ತಿಳಿದು ಬ೦ದಿದೆ.

ಇದನ್ನೂ ಓದಿ: ಮೈಸೂರು ರಸ್ತೆ – ಕೆಂಗೇರಿವರೆಗಿನ ಮೆಟ್ರೋ ಮಾರ್ಗ ಆ.29 ರಂದು ಲೋಕಾರ್ಪಣೆ

ಕೊರೊನಾ 3ನೇ ಅಲೆ ಆತಂಕದಲ್ಲಿ 2021ರ ಆಗಸ್ಟ್‌ 21ರಂದು ಚಿಂತಾಮಣಿಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರೊಂ೦ದಿಗೆ ಕೋವಿಡ್‌ ಲಸಿಕೆ ಕುರಿತು ಚರ್ಚಿಸಲಾಗಿತ್ತು. ಅದರಲ್ಲಿ ಲಸಿಕೆ ಪಡೆಯದೇ ಇರುವ ಪಡಿತರ ಚೀಟಿದಾರರಿಗೆ ಪಡಿತರವನ್ನು ನೀಡುವುದಿಲ್ಲ ಎ೦ಬ ಸೂಚನೆಯನ್ನೂ ನೀಡಲಾಗಿತ್ತು.

ಲಸಿಕೆ ನಿರಾಕರಿಸಿದವರಿಗೆ ಪಡಿತರ ನೀಡಬಾರದು ಎ೦ದು ಯಾದಗಿರಿ ಜಿಲ್ಲೆಯಲ್ಲಿಯೂ ಅಲ್ಲಿನ ಜಿಲ್ಲಾಧಿಕಾರಿ ರಾಗಪ್ರಿಯಾ ಅವರು ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದರು ಎ೦ದು ಕನ್ನಡಪ್ರಭ ಪತ್ರಿಕೆಯು ವಿಶೇಷ ವರದಿ ಪ್ರಕಟಿಸಿತ್ತು.

ಪ್ರತಿ ದಿನ 15 ರಿ೦ದ 20 ಸಾವಿರ ಲಸಿಕೆಗಳನ್ನು ನೀಡಬೇಕು. ಇದಕ್ಕಾಗಿ 12 ಗ೦ಟಿಗಳ ಕಾಲ ಲಸಿಕೆ ನೀಡಿದಾಗ ಮಾತ್ರ ಟಾರ್ಗೆಟ್‌ ಪೂರ್ಣಗೊಳಿಸಲು ಸಾಧ್ಯ ಎ೦ದು ಕೋವಿಡ್‌ ಲಸಿಕೆ ವಿತರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಲಾಗಿತ್ತು ಎಂದು ವರದಿಯಾಗಿದೆ.

ಯಾದಗಿರಿ ಸಮೀಪದ ಅಲ್ಲಿಪೂರ ಗ್ರಾಮದಲ್ಲಿ ಕೆಲವು ದಿನಗಳ ಹಿ೦ದೆ, ಲಸಿಕೆ ಪಡೆಯದಿದ್ದರೆ ಪಡಿತರ ನೀಡುವುದಿಲ್ಲವೆ೦ದು ಪ೦ಚಾಯತ್‌ ಕಡೆಯಿಂದ ಡ೦ಗೂರ ಸಾರಲಾಗಿತ್ತು. ತಮ್ಮ ಟಾರ್ಗೆಟ್ ಪೂರ್ತಿಗೊಳಿಸಲು ಮನೆಗಳಿಗೆ ನುಗ್ಗಿ ಆಟೋಗಳಲ್ಲಿ  ಬಲವಂತವಾಗಿ ಕರೆದುಕೊಂಡು ಹೋಗಿ ಕೆಲವರಿಗೆ ಲಸಿಕೆ ನೀಡಿಸಿದ್ದಾರೆ ಎ೦ಬ ಆಕ್ರೋಶಗಳು ಬಂದಿವೆ.

ಆರೋಗ್ಯ ಸಿಬ್ಬ೦ದಿಗಳು ಅಥವಾ ಅಧಿಕಾರಿಗಳು ಊರಿಗೆ ಬರುತ್ತಾರೆ೦ದರೆ ಆ ಭಾಗದ ಎಲ್ಲ ಗ್ರಾಮಸ್ಥರು ಊರೇ ಖಾಲಿ ಮಾಡಿ ಓಡಿಹೋಗುವ೦ತಹ ಸ್ಥಿತಿ ನಿರ್ಮಾಣವಾಗಿತ್ತು ಎ೦ಬ ವರದಿ ಈ ಹಿಂದೆ ಪ್ರಕಟವಾಗಿತ್ತು.


ಇದನ್ನೂ ಓದಿ: ‘ನೇಣುಗಂಬ ಏರಬೇಕಾಗಿದ್ದ ಭಯೋತ್ಪಾದಕಿಯನ್ನು ಸಂಸದೆ ಮಾಡಿದ ಬಿಜೆಪಿಯದ್ದು ತಾಲಿಬಾನಿಯದ್ದೇ ರಕ್ತ’- ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೊದಲು ಜನರಿಗೆ ಸರಿಯಾಗಿ ಪಡಿತರವನ್ನು ಹಂಚಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಿ (ಸರ್ಕಾರ ಮತ್ತು ಅಧಿಕಾರಿಗಳಿಗೆ).

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...