Homeಅಂಕಣಗಳುಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

ಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

- Advertisement -
- Advertisement -

ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಬಜೆಟ್ ಮಂಗಳವಾರ ಲೋಕಸಭೆಯಲ್ಲಿ ಅನಾವರಣಗೊಂಡಿತು. ದೇಶದ ಷೇರುಪೇಟೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ಮಾಧ್ಯಮಲೋಕ ಈ ಉತ್ಸಾಹವನ್ನೇ ಬಜೆಟ್‌ನ ಅಳತೆಗೋಲು ಎಂಬಂತೆ ಬಿಂಬಿಸಿದೆ.

ಷೇರುಪೇಟೆಯ ಜಿಗಿತ-ಕುಸಿತದಲ್ಲಿ ಪ್ರತಿಫಲಿಸುವುದು ಶೇ.4ರಷ್ಟು ಭಾರತ ಮಾತ್ರ. ಉಳಿದ ಶೇ.96ರಷ್ಟು ಭಾರತದ ಪಾಲಿಗೆ ಈ ಬಜೆಟ್ ಎಷ್ಟು ಪ್ರಸ್ತುತ ಅಥವಾ ಅಪ್ರಸ್ತುತ ಎಂಬುದೇ ಅಸಲು ಸಂಗತಿ.

ಅಂಕಿಅಂಶಗಳ ಮಾಯಾಜಾಲವನ್ನು ಹರಿದು ನೋಡುವುದಾದರೆ ಬಡವರನ್ನು ಬಡವರನ್ನಾಗಿಯೇ ಉಳಿಸಿ, ಧನಿಕರನ್ನು ಇನ್ನಷ್ಟು ಧನಿಕರನ್ನಾಗಿಸುವ ಯಥಾಸ್ಥಿತಿವಾದಿ ಬಜೆಟ್ ಇದು. ನಿರುದ್ಯೋಗ, ಸಮಾಜ ಕಲ್ಯಾಣ, ವಿತ್ತೀಯ ಸ್ಥಿತಿಗತಿಯಲ್ಲೂ ನಿರಾಶೆಯನ್ನೇ ಧರಿಸಿರುವ ಮುಂಗಡಪತ್ರ.

ಪೆಟ್ರೋಲ್ ಎಂಬುದು ಮೋದಿ ಸರ್ಕಾರದ ಪಾಲಿಗೆ ತೆರಿಗೆ ಸಂಗ್ರಹದ ಕಾಮಧೇನು-ಕಲ್ಪವೃಕ್ಷ. ಜನಸಾಮಾನ್ಯರ ಪಾಲಿಗೆ ನಡು ಮುರಿದು ನೆಲಕ್ಕೆ ಕೆಡವಿರುವ ಭಯಂಕರ ಬಡಿಗೆ. ಅನ್‌ಬ್ಲೆಂಡೆಡ್ ಪೆಟ್ರೋಲ್ ಮೇಲೆ ಲೀಟರಿಗೆ ಎರಡು ರೂಪಾಯಿಯ ಹೊಸ ತೆರಿಗೆಯನ್ನು ಬಜೆಟ್ಟಿನಲ್ಲಿ ಹೇರಲಾಗಿದೆ. ಈ ಹೊಸ ಭಾರವನ್ನು ಜನಸಾಮಾನ್ಯರೇ ಹೊರಬೇಕಿದೆ. ವಿಶ್ವಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈಗಾಗಲೆ ಏರುಮುಖವಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ತೈಲದ ಬೆಲೆ ಇನ್ನಷ್ಟು ಏರಿಕೆಯ ಒಜ್ಜೆ ಹೊರಲು ಭಾರತದೇಶವಾಸಿಗಳು ತಯಾರಾಗಬೇಕಿದೆ.

ಮೋದಿಯಂತಹ ಮೋದಿಯವರೇ ಮಂಡಿಯೂರಿರುವಂತಹ ಪ್ರಬಲ ರೈತ ಚಳವಳಿ ವರ್ಷದೊಪ್ಪತ್ತು ನಡೆದದ್ದನ್ನು ವಿಶ್ವವೇ ಎದ್ದು ಕುಳಿತು ನೋಡಿತು. ಆದರೆ ಈ ಬಜೆಟ್ಟಿನಲ್ಲಿ ಅಸಲಿ ಕೃಷಿಯ ವಿಷಯವನ್ನು ಭೂತಗಾಜು ಹಾಕಿ ಹುಡುಕಬೇಕಿದೆ.

ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯ ಎಲ್ಲ ರೈತರ ಉತ್ಪನ್ನಗಳಿಗೂ ದೊರೆಯಬೇಕೆಂಬ ರೈತ ಆಂದೋಲನದ ಬೇಡಿಕೆಗೆ ಕೇಂದ್ರ ಸರ್ಕಾರ ಯಾವ ಕಿಮ್ಮತ್ತನ್ನೂ ನೀಡಿಲ್ಲ. ಕಳೆದ ವರ್ಷದ (2021) ಬಜೆಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ತೆತ್ತು ಕೃಷಿ ಉತ್ಪನ್ನಗಳ ಖರೀದಿಗೆ ತೆಗೆದಿರಿಸಿದ್ದ ಮೊತ್ತ 2.48 ಲಕ್ಷ ಕೋಟಿ ರುಪಾಯಿ. ಇಂದು ಮಂಡಿಸಿದ ಬಜೆಟ್ಟಿನಲ್ಲಿ ಈ ಮೊತ್ತ 2.37 ಲಕ್ಷ ಕೋಟಿ ರುಪಾಯಿ.

ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಮೊತ್ತವನ್ನು 1.40 ಲಕ್ಷ ಕೋಟಿ ರುಪಾಯಿಗಳಿಂದ 1.05 ಕೋಟಿ ರುಪಾಯಿಗಳಿಗೆ ಖೋತಾ ಮಾಡಲಾಗಿದೆ. ಇದೇ ರೀತಿ ಬಡಜನಸಮುದಾಯಗಳಿಗೆ ನೀಡಲಾಗುವ ಆಹಾರ ಸಬ್ಸಿಡಿ ಕೂಡ 2.9 ಲಕ್ಷ ಕೋಟಿ ರುಪಾಯಿಗಳಿಂದ 2.1 ಲಕ್ಷ ಕೋಟಿಗೆ ಇಳಿದಿದೆ. ರಾಷ್ಟ್ರೀಯ ಹಸಿರು ಕ್ರಾಂತಿ ಯೋಜನೆಗೆ ಕಳೆದ ಬಜೆಟ್‌ನಲ್ಲಿ 13 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಈ ಬಾರಿ ಅದರ ಪ್ರಸ್ತಾಪವೇ ಇಲ್ಲ.

ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ಕಾಗದದ ಮೇಲೆಯೇ ಉಳಿದಿದೆ. ಪ್ರಧಾನಮಂತ್ರಿ ರೈತ ಧನವೆಂದು ರೈತರಿಗೆ ಪ್ರತಿ ಮೂರು ತಿಂಗಳಿಗೆ ಎರಡು ಸಾವಿರದಂತೆ ವರ್ಷಕ್ಕೆ ಆರು ಸಾವಿರ ರುಪಾಯಿ ನೀಡಲಾಗುತ್ತಿದೆ. ಈ ಮೊತ್ತವನ್ನು ಹನ್ನೆರಡು ಸಾವಿರಕ್ಕೆ ಏರಿಸುವರೆಂಬ ನಿರೀಕ್ಷೆ ಹುಸಿಯಾಗಿದೆ. ಭೂರಹಿತ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ತಲಾ ಆರು ಸಾವಿರ ರೂಪಾಯಿ ನೀಡಿಕೆಯನ್ನು ಆರಂಭಿಸಬಹುದಿತ್ತು.

ರೈತಾಪಿಗಳ ಜನಸಂಖ್ಯೆ ಶೇ.50ಕ್ಕೂ ಹೆಚ್ಚು. ಇವರ ಕೈಗೆ ಹಣ ಹರಿಯುವುದೆಂದರೆ ಖರೀದಿ ಸಾಮರ್ಥ್ಯ
ಹೆಚ್ಚಿಸಿ ಸರಕು ಸರಂಜಾಮುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ. ಬೇಡಿಕೆ ಹೆಚ್ಚಿಸಿದರೆ ಉತ್ಪಾದನೆ ಚುರುಕು ಪಡೆದು ಉದ್ಯೋಗಾವಕಾಶ ಕುದುರಿ ಅರ್ಥಸ್ಥಿತಿಯ ಆವರ್ತ ಜೀವಂತಗೊಳ್ಳುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಈ ಉಸಾಬರಿಗೆ ಹೋಗಿಲ್ಲ. ಸಂಬಳದಾರ ಮಧ್ಯಮವರ್ಗಗಳಿಗೆ ಆದಾಯ ತೆರಿಗೆಯ ಯಾವುದೇ ರಿಯಾಯಿತಿ ಈ ವರ್ಷವೂ ದೊರೆತಿಲ್ಲ.

ಗ್ರಾಮೀಣ ಬಡಜನರನ್ನು ತಕ್ಕಮಟ್ಟಿಗಾದರೂ ಹಸಿವಿನಿಂದ ಕಾಪಾಡುತ್ತ ಬಂದಿರುವುದು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕೋವಿಡ್ ಲಾಕ್‌ಡೌನ್‌ಗಳ ನಂತರ ಮಹಾನಗರಗಳಿಂದ ಹಳ್ಳಿಗಳಿಗೆ ನಡೆದ ಮಹಾವಲಸೆಯ ನಂತರ ಆ ಜನರಾಶಿಯನ್ನು ಪೊರೆದ ಯೋಜನೆ. ಗ್ರಾಮೀಣ ಬಡಜನರಿಂದ ಭಾರೀ ಬೇಡಿಕೆ ಇರುವ ಯೋಜನೆಯಿದು. ಆದರೆ ಈ ಯೋಜನೆಯ ಹಂಚಿಕೆಯನ್ನು 98,000 ಕೋಟಿ ರುಪಾಯಿಗಳಿಂದ 73,000 ಕೋಟಿ ರುಪಾಯಿಗಳಿಗೆ ಇಳಿಸಲಾಗಿದೆ!

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪಾಲಿಗೆ ಎಂದಿನಂತೆ ನಿರಾಶಾದಾಯಕ ಬಜೆಟ್. ಆರೋಗ್ಯ ಮಂತ್ರಾಲಯಕ್ಕೆ ಹಂಚಿಕೆ ಮಾಡಲಾಗಿರುವ ಒಟ್ಟು ಹಣ 86,200 ಕೋಟಿ ರುಪಾಯಿಗಳು. ಕಳೆದ ವರ್ಷದ ಪರಿಷ್ಕೃತ ಬಜೆಟ್ ಹಂಚಿಕೆಗೆ ಹೋಲಿಸಿದರೆ ಕೇವಲ 200 ಕೋಟಿ ರುಪಾಯಿಗಳ ಹೆಚ್ಚಳ!

ಶೇ.90ರಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಅಸಂಘಟಿತ ಕ್ಷೇತ್ರವನ್ನು ನೆಲಕಚ್ಚಿಸಲಾಗಿದೆ. ಹೀಗಾಗಿ ಈ ವಲಯಕ್ಕೆ ಪುನಶ್ಚೇತನ ನೀಡುವ ಮಾತನ್ನು ಬಜೆಟ್ಟಿನಲ್ಲಿ ನಿರೀಕ್ಷಿಸುವುದೂ ಮೂರ್ಖತನವಾದೀತು. ಹಣದುಬ್ಬರ ದರವನ್ನು ತಿರುಚಿ ತಗ್ಗಿಸಿ ಮಂಡಿಸಲಾಗಿದೆ.

ದೇಶದ ಅತಿ ಸಿರಿವಂತರ ಪ್ರಮಾಣ ಶೇ.10. ದೇಶದ ಶೇ.64.6ರಷ್ಟು ಸಂಪತ್ತು ಇವರ ಕೈಯಲ್ಲಿದೆ. ದೇಶವನ್ನು ಕಾಡಿದ ನೋಟು ರದ್ದು, ಕೋವಿಡ್ ಮಹಾ ಸಾಂಕ್ರಾಮಿಕ, ನಿರುದ್ಯೋಗ, ಬಡತನ, ಹಸಿವಿನ ಸಂಕಟಗಳು ಈ ವರ್ಗದ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತದ ಕೇವಲ ಹತ್ತು ಮಂದಿ ಅಪಾರ ಧನಿಕರ ಬಳಿ ಇರುವ ಸಂಪತ್ತಿನಿಂದ ದೇಶದ ಎಲ್ಲ ಮಕ್ಕಳ ಶಾಲಾ ಮತ್ತು ಪ್ರೌಢ ಶಿಕ್ಷಣವನ್ನು 25 ವರ್ಷಗಳ ಕಾಲ ನಡೆಸಬಹುದೆಂಬ ಅಂಕಿಅಂಶ ಎರಡು ವಾರಗಳ ಹಿಂದೆ ದಾವೋಸ್‌ನಲ್ಲಿ ಜರುಗಿದ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಂಡಿತವಾದವು. ದೇಶದ ಆರ್ಥಿಕ ಏಣಿಶ್ರೇಣಿಯ ಮೇಲ್ಭಾಗದ ಶೇ.10 ಮಂದಿ ದೇಶದ ಒಟ್ಟು ಸಂಪತ್ತಿನ ಶೇ.45ರಷ್ಟರ ಒಡೆತನ ಹೊಂದಿದ್ದರೆ ಕೆಳಭಾಗದ ಶೇ.50ರಷ್ಟು ಜನಸಂಖ್ಯೆಯು ದೇಶದ ಒಟ್ಟು ಸಂಪತ್ತಿನ ಶೇ.6ರಷ್ಟರಲ್ಲೇ ಒದ್ದಾಡಿದೆ. ಆಕ್ಸ್‌ಫ್ಯಾಮ್ ಇಂಡಿಯಾದ ಈ ಅಂಕಿ ಅಂಶಗಳ ಪ್ರಕಾರ ಈ ಶೇ.10ರಷ್ಟು ಅತಿ ಧನಿಕರ ಮೇಲೆ ವಿಧಿಸಲಾಗುವ ಶೇ.ಒಂದರಷ್ಟು ತೆರಿಗೆ ಕೂಡ 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರುಗಳನ್ನು ಒದಗಿಸಬಲ್ಲದು. ಹಾಗೆಯೇ ಭಾರತದ 98 ಮಂದಿ ಶತಕೋಟ್ಯಾಧೀಶ ಕುಬೇರರ ಮೇಲೆ ವಿಧಿಸಲಾಗುವ ಶೇ.1ರಷ್ಟು ಸಂಪತ್ತು ತೆರಿಗೆ ಕೂಡ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತವನ್ನು ಏಳು ವರ್ಷಗಳಿಗೂ ಹೆಚ್ಚು ಕಾಲ ಸಾಕಬಲ್ಲದು.

ಆದರೂ ಕೇಂದ್ರ ಸರ್ಕಾರ ಇವರ ಮೇಲೆ ತೆರಿಗೆ ಹೆಚ್ಚಿಸುವ ಮನಸ್ಸು ಮಾಡುವುದಿಲ್ಲ. ಬದಲಿಗೆ ಇಂದು ಮಂಡಿಸಲಾಗಿರುವ ಬಜೆಟ್‌ನಲ್ಲಿ ಈ ಕುಬೇರರ ಸಮೂಹದ ಕಾರ್ಪೊರೇಟ್ ವಲಯದ ಮೇಲೆ ವಿಧಿಸಲಾಗಿರುವ ಕಾರ್ಪೊರೆಟ್ ಸರ್ಚಾರ್ಜ್ ತೆರಿಗೆಯನ್ನು ಶೇ.12ರಿಂದ ಶೇ.ಏಳಕ್ಕೆ ಇಳಿಸಲಾಗಿದೆ! ದಶಕಗಳಿಂದ ಮಾಡಿಟ್ಟಿದ್ದ ರೇಲ್ವೆ, ಬಂದರು, ವಿಮಾನಯಾನ ಸೇರಿದಂತೆ ಸಾರ್ವಜನಿಕ ವಲಯದ ಆಸ್ತಿಪಾಸ್ತಿಗಳನ್ನು ಅಗ್ಗದ ಬೆಲೆಗೆ ಕಾರ್ಪೊರೇಟುಗಳಿಗೆ ಮಾರಾಟ ಮಾಡಲಾಗುತ್ತಿದೆ.

ಇದು ಶೇ.80ರಷ್ಟು ಬಹುಜನ ಭಾರತದ ಅಣಕವಲ್ಲದೆ ಇನ್ನೇನು?

ಮುಕ್ಕಾಲುಪಾಲು ದೇಶವಾಸಿಗಳ ಬದುಕುಗಳು ನೋಟು ರದ್ದು, ಜಿ.ಎಸ್.ಟಿ., ಕೋವಿಡ್‌ನ ಕ್ರೂರ ಆಘಾತದಡಿ ಜರ್ಝರಿತವಾಗಿವೆ. ಆದರೆ ದೇಶದಲ್ಲಿ ಅಮೃತಕಾಲ ನಡೆಯುತ್ತಿದೆ… ಮುಂದಿನ 25 ವರ್ಷಗಳ ಕಾಲವೂ ಹಾಲಿ ಬಜೆಟ್ಟಿನ ದೂರದರ್ಶಿತ್ವ ವಿಸ್ತರಿಸಲಿದೆ ಎಂದು ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರೊಟ್ಟಿ ಸಿಗದಿದ್ದರೆ ಕೇಕನ್ನು ತಿನ್ನಿ ಎಂದಿದ್ದ ಫ್ರಾನ್ಸಿನ ರಾಜಕುವರಿಯಂತೆ ಥೇಟು.


ಇದನ್ನೂ ಓದಿ: ಬಜೆಟ್‌ 2022-23: ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ವಂಚನೆ; ಖಾಸಗಿ ಪರ ಧೋರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...