Homeಮುಖಪುಟಚೆನ್ನೈನಲ್ಲಿ 4 ಕೋಟಿ ರೂ.ನಗದು ಸಾಗಿಸುವಾಗ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತರು

ಚೆನ್ನೈನಲ್ಲಿ 4 ಕೋಟಿ ರೂ.ನಗದು ಸಾಗಿಸುವಾಗ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತರು

- Advertisement -
- Advertisement -

ಚೆನ್ನೈನ ತಾಂಬರಂ ರೈಲು ನಿಲ್ದಾಣದಲ್ಲಿ 4 ಕೋಟಿ ರೂ.ನಗದು ಸಾಗಾಟ ಮಾಡುವಾಗ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಆರೋಪಿಗಳನ್ನು ಬಿಜೆಪಿ ಸದಸ್ಯ ಹಾಗೂ ಅಗರಂ ಮೂಲದ ಎಸ್ ಸತೀಶ್ (33), ಆತನ ಸಹೋದರ ಎಸ್ ನವೀನ್ (31), ತೂತುಕುಡಿಯ ಎಸ್ ಪೆರುಮಾಳ್ (26) ಎಂದು ಗುರುತಿಸಲಾಗಿದೆ. ಎರಡನೇ ದರ್ಜೆಯ ಎಸಿ ಕೋಚ್‌ನಲ್ಲಿ ಶೋಧ ನಡೆಸಿದಾಗ ಅವರು ಸಾಗಿಸುತ್ತಿದ್ದ ಬ್ಯಾಗ್‌ಗಳಲ್ಲಿ 500ರ ನೋಟುಗಳ ಕಂತೆ ಪತ್ತೆಯಾಗಿತ್ತು. ಇವರು ಆರು ಬ್ಯಾಗ್‌ಗಳಲ್ಲಿ 4 ಕೋಟಿ ರೂ.ಹಣವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಮೂವರು ರೈಲಿನಲ್ಲಿ ತಿರುನಲ್ವೇಲಿಗೆ ತೆರಳುತ್ತಿದ್ದಾಗ ಫ್ಲೈಯಿಂಗ್ ಸ್ಕ್ವಾಡ್ ಅವರನ್ನು ವಶಕ್ಕೆ ಪಡೆದಿದೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಕುರಿತು ಮಾಹಿತಿಯನ್ನು ಸ್ವೀಕರಿಸಿದ ನಂತರ, ಪೊಲೀಸರು ಮತ್ತು ತಾಂಬರಂನಲ್ಲಿ ಬೀಡುಬಿಟ್ಟಿದ್ದ ಫ್ಲೈಯಿಂಗ್ ಸ್ಕ್ವಾಡ್ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಚೆನ್ನೈನ ತಾಂಬರಂ ರೈಲು ನಿಲ್ದಾಣಕ್ಕೆ ತೆರಳಿದ್ದರು.  ನಂತರ ಪೊಲೀಸರು ಮೂವರೂ ಶಂಕಿತರನ್ನು ಬಂಧಿಸಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ, ಐಟಿ ತಂಡಗಳು ಆರೋಪಿಗಳನ್ನು ಭಾನುವಾರ ಅಥವಾ ಸೋಮವಾರ ವಿಚಾರಣೆ ನಡೆಸಲಿವೆ.

ಇದರ ಜೊತೆಗೆ ಪೊಲೀಸರು ಕಿಲ್ಪಾಕ್, ಟ್ರಿಪ್ಲಿಕೇನ್ ಮತ್ತು ಸಾಲಿಗ್ರಾಮಮ್ ಮತ್ತು ತಿರುನಲ್ವೇಲಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿಯ ಸೂಚನೆ ಮೇರೆಗೆ ನಗದು ವರ್ಗಾವಣೆ ಮಾಡಿದ್ದಾರೆ ಎಂದು ತನಿಖೆಯ ವೇಳೆ ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ತಿರುನಲ್ವೇಲಿ ಲೋಕಸಭಾ ಕ್ಷೇತ್ರದಲ್ಲಿ ಹಣವನ್ನು ವಿತರಿಸಲು ಇವರು ಸಾಗಾಟ ಮಾಡುತ್ತಿದ್ದರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

39 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆ ಏಪ್ರಿಲ್ 19ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಇದನ್ನು ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಮರು ಹಂಚಿಕೆಗೆ ಸಮೀಕ್ಷೆ ನಡೆಸುತ್ತೇವೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು; ಆಟೋ ರಿಕ್ಷಾದಲ್ಲೆ ಹೆರಿಗೆ

0
ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದು, 30 ವರ್ಷದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ತರುವಾಯ ಆಸ್ಪತ್ರೆಗೆ...