Homeಅಂಕಣಗಳುಅಂತೂ ಭಾರತದ ವರ್ಚಸ್ಸು ಬೆಳಗಿತು!

ಅಂತೂ ಭಾರತದ ವರ್ಚಸ್ಸು ಬೆಳಗಿತು!

- Advertisement -
- Advertisement -

ಪ್ರಪಂಚ ಆಗಾಗ್ಗೆ ಹಿಟ್ಲರ್‌ನನ್ನ ನೆನಸಿಕೊಂಡು ಬೆಚ್ಚುತ್ತಿತ್ತು. ಆತನ ಭಯಾನಕ ಯುಗವೊಂದು ಅಂತ್ಯವಾದುದಕ್ಕೆ ನಿಟ್ಟುಸಿರುಬಿಟ್ಟಿತ್ತು. ಆದರೇನು ಆತನ ಭೂತ ರಷ್ಯಾದಲ್ಲಿ ವಕ್ಕರಿಸಿದೆಯಂತಲ್ಲಾ. ರಷ್ಯಾದ ಅಧ್ಯಕ್ಷ ಪುಟಿನ್ ದೇಹವನ್ನ ಹೊಕ್ಕ ಹಿಟ್ಲರ್ ಭೂತ, ಜಗತ್ತಿನ ನಾಶದ ಬಗ್ಗೆ ಮಾತನಾಡುತ್ತಿದ್ದಾನಲ್ಲಾ. ಜಗತ್ತಿನ ಸರ್ವಾಧಿಕಾರಿಗಳ ಅಂತ್ಯವೆಲ್ಲಾ ಕೆಟ್ಟದಾಗಿ ಕೊನೆಯಾಗಿದೆ. ವಿನಾಶಕಾರಿ ಸಾಹಸಕ್ಕೆ ಕೈಹಾಕಿರುವ ಪುಟಿನ್, ತನ್ನ ಅಂತ್ಯದವರೆಗೂ ವಿರಮಿಸುವಂತೆ ಕಾಣುತ್ತಿಲ್ಲ. ಈ ನಡುವೆ, ಎಲ್ಲ ಹೊಡೆದಾಡಿ ಸತ್ತರೆ ನಮ್ಮ ಯಜಮಾನ ನೂಕಾಟದಲ್ಲೇ ಸತ್ತ ಎಂಬ ಗಾದೆಯಂತೆ ನಮ್ಮ ಮೋದಿ ಕತೆಯಾಗಿದೆಯಲ್ಲಾ. ಅಮೆರಿಕ ಅತ್ತ ರಷ್ಯ ಸಹವಾಸಕ್ಕೆ ಹೋದಿಯಾ ಜೋಕೆ ಎಂದರೆ, ಇತ್ತ ನಮ್ಮ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಸಿಕ್ಕಿಕೊಂಡು ಕರೆತರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ, ಈಗಾಗಲೇ ತೀರಿಕೊಂಡ ಹಾವೇರಿಯ ನವೀನನ ಪಾರ್ಥಿವ ಶರೀರವನ್ನು ಮರಳಿ ತರುವ ವಿಷಯದಲ್ಲಿ ಅರವಿಂದ ಬೆಲ್ಲದ್ ಎಂಬ ಶಾಸಕ ನವೀನನ ಶವ ತರುವ ಜಾಗದಲ್ಲಿ 8 ಜನ ವಿದ್ಯಾರ್ಥಿಗಳನ್ನ ತರಬಹುದು ಎಂದುಬಿಟ್ಟಿದ್ದಾನಲ್ಲಾ. ಇದು ಇಡೀ ಬಿಜೆಪಿಯವರ ಮನಸ್ಥಿತಿಯಾದ್ದರಿಂದ ಯಾರೂ ಖಂಡಿಸಿಲ್ಲವಂತಲ್ಲಾ. ಥೂತ್ತೇರಿ.

****

ಉನ್ನತ ವ್ಯಾಸಂಗಕ್ಕೆಂದು ಉಕ್ರೇನಿಗೆ ಹೋದ ನಮ್ಮ ಹುಡುಗರು ಯುದ್ಧದ ಹೊಗೆಯಲ್ಲಿ ಸಿಕ್ಕಿಕೊಂಡು ಏದುಸಿರು ಬಿಡುತ್ತಿರುವಾಗ ಅವರನ್ನ ಭಾರತಕ್ಕೆ ಕರೆತರುವ ಕಾರ್ಯಾಚರಣೆಗೆ ಯಾವ ಹೆಸರಿಡಬೇಕೆಂಬ ಸಂಚು ಬಿಜೆಪಿಗಳ ತಲೆಯಲ್ಲಿ ಶಾನೆ ದಿನ ಸುಳಿದಾಡಿತಂತಲ್ಲಾ. ಇತರ ದೇಶಗಳು ತಮ್ಮ ದೂತಾವಾಸದ ಸಿಬ್ಬಂದಿಗಳನ್ನು ಬಳಸಿಕೊಂಡು ತಮ್ಮವರನ್ನು ಕರೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಉತ್ತರ ಭಾರತದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಬಿಜೆಪಿಗಳ ತಲೆಯಲ್ಲಿ ಮಿಂಚು ಹೊಳೆದಂತಾಗಿ ಆಪರೇಷನ್ ಗಂಗಾ ಹೊಳೆಯಿತಂತಲ್ಲಾ. ಆ ಕೂಡಲೇ ರೋಮಾಂಚನಗೊಂಡು ಆಪರೇಷನ್ ಗಂಗಾ ಮೂಲಕ ನಮ್ಮ ವಿದ್ಯಾರ್ಥಿಗಳನ್ನ ಕರೆತರುವಷ್ಟರಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾ ಶೆಲ್ ದಾಳಿಗೆ ಹತ್ಯೆಯಾದರು. ಮಕ್ಕಳನ್ನು ಕರೆತರುವಲ್ಲಿ ಆದ ವಿಳಂಬ, ಭಾರತದ ದೂತವಾಸದವರ ಕಣ್ಮರೆ ಇವೆಲ್ಲವನ್ನು ಗ್ರಹಿಸಿದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಕ್ಕೆ, ಜಾಲತಾಣದ ಕೀಟಗಳು ಅವರ ನೋವನ್ನೂ ಲೆಕ್ಕಿಸದೆ ಕುಟುಕಿದವಂತಲ್ಲಾ. ಆಪರೇಷನ್ ಗಂಗಾ ಕಾರ್ಯಾಚರಣೆಯಿನ್ನೂ ಪೂರ್ಣಗೊಂಡಿಲ್ಲ, ಆಗಲೇ ನಮ್ಮ ಪ್ರಧಾನಿಗಳು ನಮ್ಮ ಕಾರ್ಯಾಚರಣೆಯಿಂದ ಭಾರತದ ವರ್ಚಸ್ಸು ಉತ್ತುಂಗದಲ್ಲಿ ಬೆಳಗುತ್ತಿದೆ ಎಂದಿದ್ದಾರಲ್ಲಾ. ಅಂತೂ ಕಳೆಗುಂದಿದ್ದ ಭಾರತದ ವರ್ಚಸ್ಸು ಏರಬೇಕಾದರೆ ಯುದ್ದ ಸಂಭವಿಸಬೇಕಾಯ್ತಂತಲ್ಲಾ. ಥೂ ಥೂ ಥೂತ್ತೇರಿ.

****

ಅರವಿಂದ ಬೆಲ್ಲದ್

ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕೆಂಬುದೆ ಈ ಬಿಜೆಪಿಗಳಿಗೆ ಗೊತ್ತಿಲ್ಲವಲ್ಲ ಎಂಬುದು ಭಾರತದ ಸಾಮಾನ್ಯ ಪ್ರಜೆಯ ಅಳಲಾಗಿದೆಯಂತಲ್ಲಾ. ಯುದ್ಧ ಪೀಡಿತ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಕರೆತಂದ ಮಾತ್ರಕ್ಕೆ ಈ ದೇಶದ ವರ್ಚಸ್ಸು ಜಗತ್ತಿನಲ್ಲಿ ಬೆಳಗಬೇಕಾದರೆ ಅದಿನ್ನೆಂತಹ ಜಗತ್ತು ಇದಿನ್ನೆಂತಹ ದೇಶ ಎನ್ನುವಂತಹ ಕಿಡಿಗೇಡಿ ಮಾತುಗಳು ಬಿತ್ತರವಾಗುತ್ತಿವೆಯಂತಲ್ಲಾ. ಈ ಸಮಯದಲ್ಲಿ ಹಿಂದಿರುಗಿ ನೋಡಿದರೆ ನಮ್ಮನ್ನಾಳುವವರ ಬೇಜವಾಬ್ದಾರಿತನಗಳು ಸಾಲುಗಟ್ಟಿವೆಯಲ್ಲಾ. ಮುಖ್ಯವಾಗಿ ಕೊರೊನಾ ಭಾರತಕ್ಕೆ ಕಾಲಿಟ್ಟಾಗ ಆ ಬಗ್ಗೆ ಎಚ್ಚರವಹಿಸದ ನಾಯಕರು ಅಮೆರಿಕದ ಅಧ್ಯಕ್ಷನ ಜೊತೆ ಸಾರ್ವಜನಿಕ ಸಭೆ ಮಾಡಿ, ಮೆರವಣಿಗೆ ಮಾಡಿ, ಆತನನ್ನು ತಬ್ಬಿಕೊಂಡು ಕಳಿಸಿಕೊಡುವಷ್ಟರಲ್ಲಿ ಕೊರೊನಾ ಮಾರಿ ಭಾರತಾಂಬೆಯ ಸೆರಗಿನಲ್ಲಿ ಆಶ್ರಯ ಪಡೆದಾಗಿತ್ತಲ್ಲಾ. ಕೊರೊನಾ ಅನಾಹುತವನ್ನ ತಬ್ಲಿಗಿ ಮುಸ್ಲಿಮರ ಮೇಲೆ ಎತ್ತಿಹಾಕಿದ ಮತಾಂಧರು ಏಕದಂ ಲಾಕ್‌ಡೌನ್ ಮಾಡಿದ ಪರಿಣಾಮ ಸಾವಿರಾರು ಭಾರತಮಾತೆಯ ಪುತ್ರರು ಅಸುನೀಗಿದರು. ಇತಿಹಾಸ ತೋರಿಸಿದ ಭೀಕರತೆಯ ಬಗ್ಗೆ ಎಚ್ಚರಿಕೆಯಿದ್ದಿದ್ದರೆ, ಉಕ್ರೇನಿನಲ್ಲಿ ಸಿಕ್ಕಿಕೊಂಡ ವಿದ್ಯಾರ್ಥಿಗಳನ್ನು ತಿಂಗಳ ಮೊದಲೇ ಕರಕೊಂಡು ಬಂದಿದ್ದರೆ, ಐದುನೂರು ಜನ ಹುತಾತ್ಮ ರೈತರಿಂದ ಮಂಕಾಗಿರುವ ಭಾರತದ ವರ್ಚಸ್ಸು ಸುಧಾರಿಸುತ್ತಿಲ್ಲ. ಥೂತ್ತೇರಿ.

****

ಶಿವಮೊಗ್ಗದ ಮುಸ್ಲಿಮರು ಮತ್ತೊಮ್ಮೆ ಈಶ್ವರಪ್ಪನನ್ನು ಗೆಲ್ಲಿಸಿ ಕಳುಹಿಸುವ ಪಣತೊಟ್ಟಿದ್ದಾರಂತಲ್ಲಾ. ಹಾಗೆ ನೋಡಿದರೆ ಈಶ್ವರಪ್ಪ ಶಾಸಕನಾಗಿದ್ದೇ ಹತ್ಯೆಗೊಂಡವರ ಶವಯಾತ್ರೆಗಳನ್ನು ಮಾಡುವ ಮುಖಾಂತರ. ಪ್ರತಿವರ್ಷ ಗಣಪತಿ ಮೆರವಣಿಗೆ ಸಮಯದಲ್ಲಿ ಅಶ್ಲೀಲ ಘೋಷಣೆಗಳನ್ನು ಕೂಗುವುದು; ಇದು ಕೋಮುಘರ್ಷಣೆಗಳಿಗೆ ಕಾರಣವಾಗಿ ಹತ್ಯೆಗಳು ನಡೆಯುವುದು; ಕೂಡಲೇ ಈಶ್ವರಪ್ಪ ಓಡಿಬಂದು ಹತ್ಯೆಗೊಂಡವನ ಮೆರವಣಿಗೆ ಮಾಡಿ, ಚಿತಾಗಾರ ತಲುಪಿಸಿ ಬಂದು, ಭೀಕರ ಭಾಷಣ ಮಾಡಿ ಚಿತಾಗಾರದ ಕಾವು ಆರದಂತೆ ನೋಡಿಕೊಂಡು ಚುನಾವಣೆಗೆ ಹೋಗುವುದು; ಹೀಗೆ ಸುಮಾರು ಹತ್ಯೆ ನಡೆದ ನಂತರ ಈಶ್ವರಪ್ಪ ಶಾಸಕ ಮಂತ್ರಿ ಎಲ್ಲವೂ ಆದರು. ಈಗ ಮನೆಗೆ ಹೋಗಲಿದ್ದ ಈಶ್ವರಪ್ಪನನ್ನ ಮತ್ತಷ್ಟು ಬಲಿಷ್ಠಗೊಳಿಸುವ ತೀರ್ಮಾನ ತೆಗೆದುಕೊಂಡಿರುವಂತೆ ಕಾಣುತ್ತಿದೆಯಲ್ಲ; ಈಗ ನಡೆದಿರುವ ಕೊಲೆಯ ಹಿನ್ನೆಲೆಯಲ್ಲಿ ಎರಡೂ ಕಡೆಯ ಧರ್ಮಾಂಧರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈಶ್ವರಪ್ಪ ಮತ್ತೊಂದು ಚಾನ್ಸ್ ಹೊಡಿತಾರೆ ಅಂತಾ ಇದಾರಲ್ಲ. ಥೂತ್ತೇರಿ.


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...