Homeಕರ್ನಾಟಕಸದನದಲ್ಲಿ ಸ್ಪೀಕರ್ ಮೇಲೆಯೇ ಬಿಜೆಪಿಗರಿಂದ ಗೂಂಡಾಗಿರಿ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಸದನದಲ್ಲಿ ಸ್ಪೀಕರ್ ಮೇಲೆಯೇ ಬಿಜೆಪಿಗರಿಂದ ಗೂಂಡಾಗಿರಿ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

- Advertisement -
- Advertisement -

ಬುಧವಾರ ವಿಧಾಸಭಾ ಅಧಿವೇಶನದಲ್ಲಿ ಬಿಜೆಪಿಯ ಕೆಲವು ನಾಯಕರು ಮಸೂದೆಯ ಪ್ರತಿಗಳನ್ನು ಹರಿದು ಉಪಸಭಾಧ್ಯಕ್ಷರ ಮೇಲೆ ಎಸೆದು ಅತಿರೇಕದ ವರ್ತನೆ ಪ್ರದರ್ಶನ ಮಾಡಿದ್ದಾರೆ. ”ಬಿಜೆಪಿಯವರು ಸದನದಲ್ಲಿ ತಾಲಿಬಾನಿಗಳಿಗಿಂತ ಅಸಭ್ಯವಾಗಿ ಸ್ಪೀಕರ್ ಮೇಲೆಯೇ ಗೂಂಡಾಗಿರಿ ನಡೆಸಿದ್ದಾರೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಡಿಯೋ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ”ಬೊಮ್ಮಾಯಿಯವರು ನಮಗೆ ತಾಲಿಬಾನ್ ಸರ್ಕಾರ ಎಂದಿದ್ದಾರೆ. ಆದರೆ, ಬೊಮ್ಮಾಯಿಯವರು ಉತ್ತರಿಸಲೇಬೇಕಾದ ಪ್ರಶ್ನೆ ಒಂದಿದೆ. ಬೊಮ್ಮಾಯಿ ಅವರು ಪಾಕಿಸ್ತಾನದಲ್ಲಿ ಯಾವಾಗ ಮುಖ್ಯಮಂತ್ರಿಯಾಗಿದ್ದರು, ಯಾಕಾಗಿ ಆಗಿದ್ದರು? ಈ ಪ್ರಶ್ನೆ ನಾವು ಕೇಳುತ್ತಿರುವುದಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೊಮ್ಮಾಯಿಯವರ ಪ್ರತಿಸ್ಪರ್ಧಿಯಾಗಿರುವ ಅವರದ್ದೇ ಪಕ್ಷದ ಯತ್ನಾಳ್ ಅವರು ಕೇಳುತ್ತಿರುವುದು” ಎಂದು ಹೇಳಿದ್ದಾರೆ.

”ಬೊಮ್ಮಾಯಿ ಅವರಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೇ ಲಾಹೋರ್ ಮುಖ್ಯಮಂತ್ರಿಯೇ ಎಂದು ಕೇಳಿದ್ದರಂತೆ, ಬೊಮ್ಮಾಯಿ ಅವರು ಯತ್ನಾಳ್ ಅವರ ಈ ಮಾತಿಗೆ ಏನು ಹೇಳುತ್ತಾರೋ ಅದನ್ನು ಮೊದಲು ಸ್ಪಷ್ಟಪಡಿಸಲಿ, ನಂತರ ತಾಲಿಬಾನ್ ಕಡೆ ಹೋಗಲಿ” ಎಂದು ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡಿದ್ದಾರೆ.

ಸದನದಲ್ಲಿ ಬಿಜೆಪಿಗರ ಅತಿರೇಕದ ವರ್ತನೆ: 10 ಶಾಸಕರ ಅಮಾನತು

ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಮಸೂದೆಗಳ ಪ್ರತಿಗಳನ್ನು ಹರಿದು ಪೀಠದಲ್ಲಿದ್ದ ಉಪಸಭಾಧ್ಯಕ್ಷರ ಮೇಲೆಸೆದು ಕೋಲಾಹಲ ಸೃಷ್ಟಿಸಿದ ಬಿಜೆಪಿಯ 10 ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಪಕ್ಷ ನಾಯಕರ ಸಭೆಗೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದಕ್ಕೆ ಸರಕಾರ ಉತ್ತರ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಧರಣಿ ನಡೆಸಿದ್ದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿದ್ದು, ”ಕೆಲವು ಗಣ್ಯರನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಿ ಅವರನ್ನು ಬರಮಾಡಿಕೊಳ್ಳಲು ಶಿಷ್ಟಾಚಾರದ ಪ್ರಕಾರ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ” ಎಂದು ಹೇಳಿದ್ದರು.

ಸಿಎಂ ಉತ್ತರದಿಂದ ಸಮಾಧಾನಗೊಳ್ಳದ ಬಿಜೆಪಿ ಶಾಸಕರು ಧರಣಿ ಮುಂದುವರಿಸಿದ್ದರು. ಕೆಲ ಹೊತ್ತಿನ ಬಳಿಕ ಉಪಸಭಾಪತಿಯವರು ಸಭಾಂಗಣದಲ್ಲಿ ಕುಳಿತು ಚರ್ಚೆ ಮುಂದುವರಿಸಿದ್ದರು. ಮಧ್ಯಾಹ್ನದ ಊಟಕ್ಕೆ ಸದನವನ್ನು ಮುಂದೂಡದಿರುವುದಕ್ಕೆ ಅಸಮಾಧಾನಗೊಂಡ ಬಿಜೆಪಿ ಮುಖಂಡರು ಕೆಲವು ಬಿಲ್‌ಗಳು ಸೇರಿದಂತೆ ದಾಖಲೆಗಳನ್ನು ಹರಿದು ಸಭಾಧ್ಯಕ್ಷರ ಪೀಠದ ಮೇಲೆ ಎಸೆದಿದ್ದರು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್​ಗೆ ದೂರು ನೀಡಿದ್ದರು. ಆನಂತರ ಸ್ಪೀಕರ್ ಖಾದರ್ ಅವರು ಅಮಾನತು ಮಾಡಿರುವುದಾಗಿ ತಿಳಿಸಿದರು.

ಶಾಸಕರನ್ನು ಅಮಾನತು ಮಾಡಿರುವುದನ್ನು ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಸೇರಿದಂತೆ ಇತರ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ‌ ಶಿವಲಿಂಗೇಗೌಡ  ಮಾತನಾಡಿ, ”ಸಣ್ಣ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷರ ಮೇಲೆ ಪೇಪರ್ ಎಸೆಯುತ್ತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುಪ್ರೀಂ ವಿಚಾರಣೆಗೆ ಸಜ್ಜಾಗುತ್ತಿದ್ದಂತೆ ಸಿಜೆಪಿಯ ತಿರಂಗಾ ಮೆರವಣಿಗೆ ಆರಂಭ; ಪೊಲೀಸರ ನೋಟಿಸ್ ಧಿಕ್ಕರಿಸಿ ತೆರಳುತ್ತಿದ್ದ ಅಭಿಜೀತ್ ದೀಪ್ಕೆ ವಶಕ್ಕೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಜ್ಜಾಗುತ್ತಿದ್ದ ಬೆನ್ನಲ್ಲೇ, ದೆಹಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ‘ಲೆಹ್ರಾ ದೋ ತಿರಂಗಾ’...

‘ದಿಮಾಗಿ ನಕ್ಸಲ್’, ‘ದೇಶದ್ರೋಹಿ’ ಎಂದು ಪಟ್ಟ ಕಟ್ಟುವುದು ಅಧಿಕಾರ ಕಳೆದುಕೊಳ್ಳುವ ಭೀತಿಯ ಸಂಕೇತ”: ಮೋದಿ-ಅಮಿತ್ ಶಾ ವಿರುದ್ಧ ಪವನ್ ಖೇರಾ ವಾಗ್ದಾಳಿ!

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ತನ್ನ ನೀತಿಗಳು ಮತ್ತು ನಡೆಯನ್ನು ಪ್ರಶ್ನಿಸುವ ನಾಗರಿಕರಿಗೆ ‘ರಾಷ್ಟ್ರವಿರೋಧಿ’, ‘ಎಡಪಂಥೀಯ’ ಹಾಗೂ ‘ದಿಮಾಗಿ ನಕ್ಸಲ್’ ಎಂದು ಪಟ್ಟ ಕಟ್ಟುತ್ತಿರುವುದು ಅದರ ಅಧಿಕಾರ ಕಳೆದುಕೊಳ್ಳುವ ಭೀತಿಯನ್ನು ತೋರಿಸುತ್ತದೆ ಎಂದು...

ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಹೆಚ್ಚಿದ ನಿರ್ಬಂಧ: 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...

ದೆಹಲಿ ಬಿಟ್ಟು ರಿಲಯನ್ಸ್ ರಿಫೈನರಿ ಇರುವ ಜಾಮ್‌ನಗರಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಮುಂಬರುವ ಭಾರತ ಭೇಟಿ ಹಾಗೂ ವಿದೇಶಾಂಗ ಸಚಿವಾಲಯದ ನಿರ್ಧಾರಗಳ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ...

ದೆಹಲಿ ಪ್ರತಿಭಟನೆ: ‘ತಿರಂಗ ಹಾರಿಸಿದ್ದಕ್ಕೆ ಜೈಲಿಗೆ ಹೋಗಲೂ ಸಿದ್ಧ’: ಮೋದಿ ಸರ್ಕಾರದ ವಿರುದ್ಧ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ

ನವದೆಹಲಿ: ರಾಷ್ಟ್ರಧ್ವಜ ಹಾರಿಸುವುದನ್ನೇ ಅಪರಾಧವೆಂದು ಪರಿಗಣಿಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆಯೇ ಎಂದು ಪ್ರಶ್ನಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ತಿರಂಗ ಹಾರಿಸಿದ್ದಕ್ಕಾಗಿ ಜೈಲಿಗೆ ಹೋಗಬೇಕಾದರೂ ಸಿದ್ಧ ಎಂದು ಘೋಷಿಸಿದ್ದಾರೆ....

“ಅಮೆರಿಕ-ಪಾಕಿಸ್ತಾನ್ ಯುದ್ಧವಾದರೆ ನಾವು ಪಾಕ್ ಪರ ನಿಲ್ಲುತ್ತೇವೆ”: ರಾಜಸ್ಥಾನ ಬಿಜೆಪಿ ಅಧ್ಯಕ್ಷರಿಂದ ವಿವಾದಾತ್ಮಕ ಹೇಳಿಕೆ!

"ಒಂದು ವೇಳೆ ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಹೊರೆಯ ದೇಶವಾಗಿರುವುದರಿಂದ ನಾವು ಅದರ ಜೊತೆ ಇರುತ್ತೇವೆ" ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ...

ಗ್ಯಾನೇಶ್ ಕುಮಾರ್ ರಕ್ಷಣೆಗಾಗಿ ದೆಹಲಿಯನ್ನೇ ಭಾರತ-ಪಾಕ್ ಗಡಿಯನ್ನಾಗಿ ಪರಿವರ್ತಿಸಿದ ಮೋದಿ: ಅಭಿಜೀತ್ ದಿಪ್ಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ನಡೆದಿರುವ ಅಕ್ರಮಗಳನ್ನು ವಿರೋಧಿಸಿ, ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಚರ್ಚಿಸಲು ವಿದ್ಯಾರ್ಥಿ ಸಂಘಟನೆಗಳು,...

ಸಹಪಾಠಿಗಳ ಜಾತಿ, ಪ್ರವೇಶದ ವರ್ಗ, ರ‍್ಯಾಂಕ್ ಕೇಳಬೇಡಿ: ದರ್ಶನ್, ಸಾಹಿಲ್ ಸಾವುಗಳ ಬೆನ್ನಲ್ಲೇ ತಾರತಮ್ಯ ವಿರೋಧಿ ನಿಯಮ ನೆನಪಿಸಿದ ಐಐಟಿ ಬಾಂಬೆ

ಮುಂಬೈ: ಸಹಪಾಠಿಗಳ ಜಾತಿ, ಪ್ರವೇಶದ ವರ್ಗ ಅಥವಾ ಪ್ರವೇಶ ಪರೀಕ್ಷೆಯ ರ‍್ಯಾಂಕ್‌ಗಳ ಬಗ್ಗೆ ಪ್ರಶ್ನಿಸುವುದು ತಾರತಮ್ಯಕ್ಕೆ ಕಾರಣವಾಗಬಹುದು. ಇಂತಹ ಪ್ರಶ್ನೆಗಳನ್ನು ಕೇಳಬಾರದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ತನ್ನ ವಿದ್ಯಾರ್ಥಿಗಳಿಗೆ...

ಲೈಂಗಿಕ ಕಿರುಕುಳದ ಆರೋಪ ಮಾಡಿದ ಪತ್ರಕರ್ತೆಯ ವಿರುದ್ಧ ಜಾತಿ ನಿಂದನೆ ಪ್ರಕರಣ: ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡುವಾಗ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಮಹಿಳಾ ಪತ್ರಕರ್ತೆಯ ವಿರುದ್ಧ ದಾಖಲಾಗಿರುವ...