Homeಮುಖಪುಟಕೊಟ್ಟ ಮಾತಿನಂತೆ ನಡೆದುಕೊಂಡ ಕೇಜ್ರಿವಾಲ್: ದಿಲ್ಲಿಯಲ್ಲಿ ಮಹಿಳೆಯರಿಗೆ ಇಂದಿನಿಂದ ಉಚಿತ ಬಸ್ ಪ್ರಯಾಣ

ಕೊಟ್ಟ ಮಾತಿನಂತೆ ನಡೆದುಕೊಂಡ ಕೇಜ್ರಿವಾಲ್: ದಿಲ್ಲಿಯಲ್ಲಿ ಮಹಿಳೆಯರಿಗೆ ಇಂದಿನಿಂದ ಉಚಿತ ಬಸ್ ಪ್ರಯಾಣ

- Advertisement -
- Advertisement -

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ “ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ” ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಹಲವು ಅಡೆತಡೆ, ವಿರೋಧಗಳ ನಡುವೆಯೂ ದೆಹಲಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಂದು ಬೆಳಿಗ್ಗೆಯೇ ಸಾವಿರಾರು ಮಹಿಳೆಯರು ಉಚಿತ ಪಾಸ್‌ ಪಡೆದು ಪ್ರಯಾಣಿಸಿ ಖುಷಿಪಟ್ಟಿದ್ದಾರೆ. ಬಸ್‌ ಪ್ರಯಾಣದ ಫೋಟೊ ಹಾಕಿ ಧನ್ಯವಾದ ತಿಳಿಸಿದ್ದಾರೆ.

ಇದೊಂದು ಸ್ಮಾರ್ಟ್‌ ಮತ್ತು ವಿಭಿನ್ನ ಚಿಂತನೆಯಾಗಿದೆ. ಇದಕ್ಕಾಗಿ ಅರವಿಂದ್‌ ಕೇಜ್ರಿವಾಲ್‌ರವರಿಗೆ ಅಭಿನಂದನೆಗಳು. ಅವರ ಒಂದು ಸಣ್ಣ ಕ್ರಮವು, ಮಹಿಳೆಯರ ಸುರಕ್ಷತೆ, ನಿರುದ್ಯೋಗ, ಟ್ರಾಫಿಕ್‌ ಜಾಮ್‌ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದೆ. ಸಾರ್ವಜನಿಕ ವಾಹನಗಳ ಬಳಕೆಯ ಅರಿವನ್ನು ಹೆಚ್ಚಿಸಲಿದೆ. ಬದಲಾವಣೆಗಾಗಿ ಹೋರಾಡುತ್ತಿರುವ ಈ ರಾಜಕಾರಣಿಯನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಮನ್ವೀರ್‌ ಗುರ್ಜರ್‌ರವರು ಟ್ವೀಟ್‌ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಸಾರ್ವಜನಿಕ ವಾಹನಗಳನ್ನು ಮಹಿಳೆಯರು ಹೆಚ್ಚಾಗಿ ಬಳಸುವುದರಿಂದ ಅವರ ಆರ್ಥಿಕ ಹೊರೆ ತಗ್ಗುವುದಲ್ಲದೇ ಅವರಿಗೆ ಸುರಕ್ಷತೆ ಲಭಿಸಲಿದೆ. ಸಾರ್ವಜನಿಕ ವಾಹನಗಳ ಬಳಕೆ ಹೆಚ್ಚಿದಂತೆ ಮಾಲಿನ್ಯ ತಗ್ಗುತ್ತದೆ ಈ ರೀತಿಯ ಹಲವಾರು ಅನುಕೂಲಗಳು ಈ ಯೋಜನೆಯಿಂದ ಲಭಿಸಲಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರು ತಮ್ಮ ಮೊಬೈಲ್‌ ಆಪ್‌ನಲ್ಲಿ ಯೋಜನೆಯ ಕುರಿತು ಮಾತನಾಡಲಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ ಬೇಡವೆಂದ ಶ್ರೀಧರನ್ ಗೆ ಪ್ರತಿ ಪತ್ರ ಬರೆದ ಮನೀಶ್ ಸಿಸೋಡಿಯ

ಉಚಿತ ಮೆಟ್ರೊ ಯೋಜನೆಗೆ ಕೇಂದ್ರ ಸರ್ಕಾರ ಅಸಹಕಾರ ತೋರಿತ್ತು. ದೆಲ್ಲಿ ಮೆಟ್ರೋದ ಮಾಜಿ ನಿರ್ದೇಶಕರೊಬ್ಬರು ಪ್ರಧಾನಿಗೆ ಪತ್ರ ಬರೆದು ಯೋಜನೆ ತಡೆಯುವಂತೆ ಕೋರಿದ್ದರು. ಹಾಗಾಗಿ ಮೆಟ್ರೊದಲ್ಲಿ ಉಚಿತ ಪ್ರಯಾಣ ಯೋಜನೆ ಇನ್ನು ಜಾರಿಯಾಗಿಲ್ಲ. ಇದನ್ನು ಸಹ ಕೇಜ್ರಿವಾಲ್‌ ಸಾಧಿಸುತ್ತಾರೆಯೇ ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕವಸ್ತು ತನಿಖೆಗೆ ಸಹಾಯಕವಾಗಿ AI ಆಧಾರಿತ ಅಪ್ಲಿಕೇಶನ್ ಆರಂಭಿಸಿದ ಗುಜರಾತ್ ಪೊಲೀಸರು

ಅಹಮದಾಬಾದ್: ಮಾದಕವಸ್ತು ಪ್ರಕರಣಗಳ ತನಿಖೆಯನ್ನು ಸುಲಭವಾಗಿಸಲು ಮತ್ತು ವಿಚಾರಣೆಯ ಸಮಯದಲ್ಲಿ ಅವುಗಳನ್ನು ಬಲಪಡಿಸಲು, ಇದರಿಂದಾಗಿ ಶಿಕ್ಷೆಯ ಪ್ರಮಾಣ ಸುಧಾರಿಸಲು ಗುಜರಾತ್ ಪೊಲೀಸರು ಶುಕ್ರವಾರ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪ್ಲಿಕೇಶನ್ "NARIT AI"...

ಇಸ್ಲಾಮಾಬಾದ್‌ ಶಾಂತಿ ಮಾತುಕತೆ | ಅಮೆರಿಕ–ಇಸ್ರೇಲ್ ಹತ್ಯೆಗೈದ ಮಕ್ಕಳ ರಕ್ತಸಿಕ್ತ ಬ್ಯಾಗ್‌, ಶೂ ಹೊತ್ತು ತಂದ ಇರಾನ್

ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸುವಾಗ, ಅಮೆರಿಕ-ಇಸ್ರೇಲ್‌ನ ಬಾಂಬ್‌ ದಾಳಿ ನಡೆಸಿ ಹತ್ಯೆಗೈದ ಮಕ್ಕಳ ಫೋಟೋ, ರಕ್ತಸಿಕ್ತ ಬ್ಯಾಗ್ ಮತ್ತು ಶೂಗಳನ್ನು ವಿಮಾನದಲ್ಲಿ ಹೊತ್ತು ತರುವ ಮೂಲಕ ಇರಾನ್‌ ಜಗತ್ತಿನ ಗಮನಸೆಳೆದಿದೆ. ಸಾಮಾಜಿಕ ಜಾಲತಾಣ...

ಮಣಿಪುರ: ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳೊಂದಿಗೆ ಇಬ್ಬರನ್ನು ಬಂಧಿಸಿದ ಭದ್ರತಾ ಪಡೆ

ಇಂಫಾಲ: ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳನ್ನು(ಪಾಪಿ ಸೀಡ್ಸ್) ವಶಪಡಿಸಿಕೊಂಡ ನಂತರ ಭದ್ರತಾ ಪಡೆಗಳು ಅವರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಚುರಾಚಂದ್‌ಪುರ ಪೊಲೀಸ್ ಠಾಣೆ...

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಆಕೆಯ ಗರ್ಭಪಾತ ಮಾಡಿದ ಆರೋಪದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರು ಆಧರಿಸಿ...

ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿದ್ದ ಮಹಿಳೆಯ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏ.10) ತಿರಸ್ಕರಿಸಿದೆ ಎಂದು ಕಾನೂನು...

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ; ಪಾಕಿಸ್ತಾನ ಮಧ್ಯಸ್ಥಿಕೆ

ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ....

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...