Homeಮುಖಪುಟಟ್ರಂಪ್ ಬೆದರಿಕೆ ಬೆನ್ನಲ್ಲೇ ರಷ್ಯಾದಿಂದ ತೈಲ ಆಮದು ನಿಲ್ಲಿಸಿದ ರಿಲಯನ್ಸ್ ಇಂಡಸ್ಟ್ರೀಸ್

ಟ್ರಂಪ್ ಬೆದರಿಕೆ ಬೆನ್ನಲ್ಲೇ ರಷ್ಯಾದಿಂದ ತೈಲ ಆಮದು ನಿಲ್ಲಿಸಿದ ರಿಲಯನ್ಸ್ ಇಂಡಸ್ಟ್ರೀಸ್

- Advertisement -
- Advertisement -

ಗುಜರಾತ್‌ನ ಜಾಮ್‌ನಗರದಲ್ಲಿರುವ ತನ್ನ ಸಂಸ್ಕರಣಾಗಾರಕ್ಕೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರದಿಂದ (ನವೆಂಬರ್ 20) ನಿಲ್ಲಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಗಳ ಸಮೂಹವು, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಹಿನ್ನೆಲೆ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ. ಆದರೆ, ಈಗಿರುವ ತೈಲ ಸರಬರಾಜುದಾರರೊಂದಿಗಿನ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಹೇಳಿದೆ ಎಂದು ವರದಿ ತಿಳಿಸಿದೆ.

ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ಫೆಬ್ರವರಿ 2022ರಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ವ್ಯವಹಾರಗಳ ಮೇಲೆ, ವಿಶೇಷವಾಗಿ ತೈಲ ರಫ್ತುದಾರರ ಮೇಲೆ ಸರಣಿ ನಿರ್ಬಂಧಗಳನ್ನು ವಿಧಿಸಿವೆ. ಈ ನಿರ್ಬಂಧಗಳು ರಷ್ಯಾ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಉಕ್ರೇನ್ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸುವ ಉದ್ದೇಶವನ್ನು ಹೊಂದಿವೆ ಎಂದು ಹೇಳಲಾಗ್ತಿದೆ.

ಕಳೆದ ಅಕ್ಟೋಬರ್‌ನಲ್ಲಿ, ಅಮೆರಿಕ ರಷ್ಯಾದ ಎರಡು ದೊಡ್ಡ ಇಂಧನ ಸಂಸ್ಥೆಗಳು ಮತ್ತು ತೈಲ ರಫ್ತುದಾರರಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್‌ಗಳನ್ನು ಗುರಿಯಾಗಿಸಿಕೊಂಡು ಹೊಸ ನಿರ್ಬಂಧಗಳನ್ನು ವಿಧಿಸಿತ್ತು.

ಭಾರತ ಸೇರಿದಂತೆ ವಿವಿಧ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ರಷ್ಯಾದ ಯುದ್ಧಕ್ಕೆ ಉತ್ತೇಜನ ನೀಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಆರೋಪಿಸುತ್ತಿದ್ದಾರೆ.

ಆಗಸ್ಟ್‌ನಲ್ಲಿ, ಟ್ರಂಪ್ ಆಡಳಿತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಟ್ರಂಪ್ ಆಡಳಿತ ಪರಸ್ಪರ ಸುಂಕ ಎಂಬ ನೀತಿಯ ಅಡಿಯಲ್ಲಿ ಭಾರತದ ಸರಕುಗಳ ಮೇಲೆ ಅಮೆರಿಕ ಈಗಾಗಲೇ ಶೇಕಡ 25ರಷ್ಟು ಸುಂಕ ವಿಧಿಸಿದೆ.

ಅಮೆರಿಕದ ಹೆಚ್ಚುವರಿ ಸುಂಕಕ್ಕೆ ಪ್ರತಿಕ್ರಿಯಿಸಿದ್ದ ಭಾರತ, ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಸುಂಕ ಹೇರಲು ನಿರ್ಧರಿಸಿರುವುದು ಅತ್ಯಂತ ದುರದೃಷ್ಟಕರ. ಭಾರತ ಮಾಡುತ್ತಿರುವ ಕೆಲಸವನ್ನು ಬೇರೆ ಅನೇಕ ದೇಶಗಳು ಕೂಡ ತಮ್ಮ ಸ್ವಂತ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಾಡುತ್ತಿವೆ. ಆದರೂ, ಕೇವಲ ಭಾರತವನ್ನು ಮಾತ್ರ ಗುರಿಯಾಗಿಟ್ಟುಕೊಂಡು ಶಿಕ್ಷಾ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ ಎಂದಿತ್ತು.

ರಷ್ಯಾದಿಂದ ತೈಲ ಆಮದಿನ ಮರುಮಾಪನ ಪ್ರಕ್ರಿಯೆ ಈಗಲೂ ಪ್ರಗತಿಯಲ್ಲಿದೆ. ನಾವು ಭಾರತ ಸರ್ಕಾರದ ಮಾರ್ಗಸೂಚಿಗಳಿಗೆ ಸಂಪೂರ್ಣವಾಗಿ ಬದ್ಧರಾಗಿರುತ್ತೇವೆ ಎಂದು ಅಕ್ಟೋಬರ್ 23ರಂದು ರಿಲಯನ್ಸ್ ಇಂಡಸ್ಟ್ರೀಸ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿತ್ತು.

ಡಿಸೆಂಬರ್ 1,2025ರಿಂದ ಜಾಮ್‌ನಗರ ರಿಫೈನರಿಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಬಳಸಿ ಯಾವುದೇ ಉತ್ಪನ್ನ ತಯಾರಿಸುವುದಿಲ್ಲ. ಅಲ್ಲಿಂದ ರಫ್ತು ಮಾಡುವ ಎಲ್ಲಾ ಪೆಟ್ರೋಲ್, ಡೀಸೆಲ್, ಇತ್ಯಾದಿ ಉತ್ಪನ್ನಗಳು ರಷ್ಯಾ-ಮುಕ್ತವಾಗಿರುತ್ತವೆ ಎಂದು ರಿಲಯನ್ಸ್ ಸಮೂಹದ ವಕ್ತಾರ ಗುರುವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಜನವರಿ 21, 2026ರಿಂದ ಪಾಶ್ಚಿಮಾತ್ಯ ದೇಶಗಳು ಹೊಸತಾಗಿ ಹೇರಲಿರುವ ಕಠಿಣ ನಿರ್ಬಂಧಗಳಿಗೆ ಸಂಪೂರ್ಣವಾಗಿ ಅನುಗುಣವಾಗಿರಲು ರಿಲಯನ್ಸ್ ರಷ್ಯಾದಿಂದ ತೈಲ ಆಮದು ನಿಲ್ಲಿಸಿದೆ. ಅಮೆರಿಕ ಸರ್ಕಾರ ರಷ್ಯಾದ ತೈಲ ವ್ಯವಹಾರಗಳನ್ನು ನಿಲ್ಲಿಸಲು ಕಂಪನಿಗಳಿಗೆ ಕೊನೆಯ ಗಡುವಾಗಿ ಈ ಶುಕ್ರವಾರವನ್ನು ನಿಗದಿಪಡಿಸಿದೆ. ಆದರೆ, ರಿಲಯನ್ಸ್ ಆ ಗಡುವಿಗಿಂತಲೂ ಮೊದಲೇ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಿ ಹೊಸ ವ್ಯವಸ್ಥೆಗೆ ಬದಲಾಯಿಸಿಕೊಂಡಿದೆ ಎಂದು ವರದಿ ಹೇಳಿದೆ.

ರಾಯಿಟರ್ಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ರಷ್ಯಾದ ರೋಸ್‌ನೆಫ್ಟ್‌ ಕಂಪನಿಯಿಂದ ದಿನಕ್ಕೆ ಸುಮಾರು 500,000 ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಲು ದೀರ್ಘಾವಧಿಯ ಒಪ್ಪಂದವನ್ನು ಮಾಡಿಕೊಂಡಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಇಂಧನ ರಫ್ತುದಾರ ಮತ್ತು ರಷ್ಯಾ ತೈಲದ ಭಾರತದ ಅತಿದೊಡ್ಡ ಆಮದುದಾರ. ಭಾರತದ ಒಟ್ಟು ರಷ್ಯಾ ತೈಲ ಆಮದಿನ ಅರ್ಧದಷ್ಟು ರಿಲಯನ್ಸ್ ಮಾಡುತ್ತಿದೆ.

ರಾಯಿಟರ್ಸ್ ಪ್ರಕಾರ, ರಿಲಯನ್ಸ್‌ನ ತೈಲ ರಫ್ತಿನಲ್ಲಿ ಯುರೋಪ್ ಶೇ. 28 ರಷ್ಟು ಪಾಲನ್ನು ಹೊಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ದೌರ್ಜನ್ಯಕ್ಕೆ ದಲಿತ ವಿದ್ಯಾರ್ಥಿ ಬಲಿ | ಸಂತಾಪ ಸೂಚಿಸಲು ಬಾರದ ಕಾಲೇಜು ಸಿಬ್ಬಂದಿ : ಅನುಮಾನ ವ್ಯಕ್ತಪಡಿಸಿದ ಶಿಕ್ಷಣ ಸಚಿವ

ಜಾತಿ ದೌರ್ಜನ್ಯದ ಆರೋಪ ಮಾಡಿ ದಲಿತ ವಿದ್ಯಾರ್ಥಿ ನಿತಿನ್ ರಾಜ್ ಸಾವಿಗೆ ಶರಣಾದ ನಂತರ, ಅವರ ಕಾಲೇಜಿನ ಒಬ್ಬನೇ ಒಬ್ಬ ಪ್ರತಿನಿಧಿಯೂ ಮನೆಗೆ ಭೇಟಿ ನೀಡದಿರುವುದು 'ಗಂಭೀರವಾದ ವಿಷಯ' ಎಂದು ಕೇರಳದ ಸಾರ್ವಜನಿಕ...

ಹಂಗೇರಿ ಚುನಾವಣೆಯಲ್ಲಿ ತೀವ್ರ ಬಲಪಂಥೀಯ ವಿಕ್ಟರ್ ಒರ್ಬಾನ್‌ಗೆ ಸೋಲು : ಟ್ರಂಪ್ ಆಪ್ತನ ಯುಗಾಂತ್ಯ

ಹಂಗೇರಿಯ ಸಾರ್ವತ್ರಿಕ ಚುನಾವಣೆಯಲ್ಲಿ, ಕಳೆದ 16 ವರ್ಷಗಳಿಂದ ದೇಶವನ್ನು ಆಳಿದ ತೀವ್ರ ಬಲಪಂಥೀಯ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ವಿಕ್ಟರ್ ಒರ್ಬಾನ್ ಸೋಲಾಗಿದೆ. ಆರ್ಥಿಕ ಸ್ಥಗಿತ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ...

ಹಾರ್ಮುಝ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಲು ಮುಂದಾದ ಅಮೆರಿಕ : ಕಠಿಣ ಕ್ರಮದ ಎಚ್ಚರಿಕೆ ನೀಡಿದ ಇರಾನ್

ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿದ್ದ ಅಮೆರಿಕ-ಇರಾನ್ ನಡುವಿನ ಐತಿಹಾಸಿಕ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಹಾರ್ಮುಝ್ ಜಲಸಂಧಿಯ ಸುತ್ತಲಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ.  ಮಾತುಕತೆ ವಿಫಲವಾದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಝ್...

ಕೇರಳ: ಕಣ್ಣೂರು ದಂತ ಕಾಲೇಜಿನಲ್ಲಿ ದಲಿತ ಬಿಡಿಎಸ್ ವಿದ್ಯಾರ್ಥಿ ಆತ್ಮಹತ್ಯೆ, ಕ್ರೂರ ಜಾತಿ ನಿಂದನೆ, ಅವಮಾನ ಆರೋಪ

ಕೇರಳದಲ್ಲಿ ನಡೆದ ಜಾತಿ ಆಧಾರಿತ ಕಿರುಕುಳದ ಆಘಾತಕಾರಿ ಪ್ರಕರಣದಲ್ಲಿ, ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ.   ಆರ್‌.ಎಲ್ ನಿತಿನ್ ರಾಜ್ ಅವರ ಕುಟುಂಬವು...

ಜಬ್ಬಾರ್​ರನ್ನು ಎಂಎಲ್‌ಸಿ ಮಾಡಿದ್ದು ನಾವು, ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು : ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನರ ಪ್ರತಿಕ್ರಿಯೆ ಚೆನ್ನಾಗಿತ್ತು, ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ಮತದಾರ ಬಂಧುಗಳು ಉತ್ತಮವಾಗಿ ಮತದಾನ ಮಾಡಿದ್ದಾರೆ. ಒಳ್ಳೆಯ ಅಂತರದಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲುತ್ತೆ,...

ಧಾರವಾಡ: ಯುವ ಕಾಂಗ್ರೆಸ್ ನಾಯಕ ಫೈರೋಜ್ ಖಾನ್ ಪಠಾಣ್ ಹತ್ಯೆ; ಮೂವರು ಆರೋಪಿಗಳ ಬಂಧನ

ಧಾರವಾಡದಲ್ಲಿ ಶುಕ್ರವಾರ ತಡರಾತ್ರಿ ಯುವ ಕಾಂಗ್ರೆಸ್ ನಾಯಕನೊಬ್ಬನನ್ನು ಅವರ ನಿವಾಸದೊಳಗೆ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ನಗರದಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿದೆ. ಮೃತ ವ್ಯಕ್ತಿಯನ್ನು ಫೈರೋಜ್ ಖಾನ್ ಪಠಾಣ್ (34) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ,...

ಮಧ್ಯಪ್ರದೇಶದ ಕಟ್ನಿಯಲ್ಲಿ ಮಹಾರಾಷ್ಟ್ರಕ್ಕೆ ರೈಲಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 163 ಅಪ್ರಾಪ್ತ ಬಾಲಕರ ರಕ್ಷಣೆ; 8 ಮಂದಿ ಬಂಧನ

ಕಟ್ನಿ: ಬಿಹಾರದಿಂದ ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾದ 163 ಅಪ್ರಾಪ್ತ ಬಾಲಕರನ್ನು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್ ರೈಲಿನಿಂದ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಆರು ರಿಂದ 13 ವರ್ಷದೊಳಗಿನ...

ನಗರಪಾಲಿಕೆ ಚುನಾವಣೆಯಲ್ಲಿ ನಮಗೆ ಅಧಿಕಾರಕ್ಕೆ ಬರಲು ಒಂದು ಅವಕಾಶ ನೀಡಿ: ಬೆಂಗಳೂರಿಗರಿಗೆ ಎಚ್‌.ಡಿ ಕುಮಾರಸ್ವಾಮಿ ಮನವಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿರುವ ಐದು ಮಹಾನಗರ ಪಾಲಿಕೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವ ಮೂಲಕ ಅಧಿಕಾರಕ್ಕೆ ಬರುವ ಅವಕಾಶ ನೀಡುವಂತೆ ದೇವೇಗೌಡ ನೇತೃತ್ವದ ಜೆಡಿಎಸ್ ಶನಿವಾರ ಬೆಂಗಳೂರಿನ ಜನರನ್ನು...

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿ.ಕೆ ಶಿವಕುಮಾರ್; ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಸಮಿತಿ ವಿಸರ್ಜನೆ

ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗಕ್ಕೆ ನೀಡಿದ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಂಗೀಕರಿಸಿದ್ದಾರೆ, ಜೊತೆಗೆ ಅಲ್ಪಸಂಖ್ಯಾತ ಘಟಕ ಸಮಿತಿಯನ್ನೂ ವಿಸರ್ಜಿಸಿದ್ದಾರೆ ಎಂದು ವರದಿಯಾಗಿದೆ. ಕೆಪಿಸಿಸಿ ಅಲ್ಪಸಂಖ್ಯಾತ...

‘ಯುದ್ಧ ಭುಗಿಲೆದ್ದು ಪಾಕಿಸ್ತಾನ ಶಾಂತಿ ಸ್ಥಾಪಿಸಲು ವಿಫಲವಾದರೆ, ಇಸ್ರೇಲ್ ಮೇಲೆ ದಾಳಿ ಮಾಡುವುದು ನಮ್ಮ ಕರ್ತವ್ಯ’: ಟರ್ಕಿ ಅಧ್ಯಕ್ಷ ಎರ್ಡೋಗನ್

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಇಸ್ರೇಲ್ ವಿರುದ್ಧ ತೀಕ್ಷ್ಣ ಎಚ್ಚರಿಕೆ ನೀಡಿದ್ದು, ನಡೆಯುತ್ತಿರುವ ಸಂಘರ್ಷವನ್ನು ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ ಸಂಭಾವ್ಯ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಕಠಿಣ ಪದಗಳ ಹೇಳಿಕೆಯಲ್ಲಿ,...