Homeದಲಿತ್ ಫೈಲ್ಸ್'ನಿಮಗೆ ಮೀಸಲಾತಿ ಏಕೆ ಬೇಕು..?'; ಪ್ರಯಾಗ್‌ರಾಜ್ ಎನ್‌ಎಲ್‌ಯು ಪ್ರಾಧ್ಯಾಪಕರಿಂದ ದಲಿತ ವಿದ್ಯಾರ್ಥಿಗೆ ಜಾತಿ ತಾರತಮ್ಯ

‘ನಿಮಗೆ ಮೀಸಲಾತಿ ಏಕೆ ಬೇಕು..?’; ಪ್ರಯಾಗ್‌ರಾಜ್ ಎನ್‌ಎಲ್‌ಯು ಪ್ರಾಧ್ಯಾಪಕರಿಂದ ದಲಿತ ವಿದ್ಯಾರ್ಥಿಗೆ ಜಾತಿ ತಾರತಮ್ಯ

ತನಿಖೆಗೆ ನ್ಯಾಯಾಂಗ ಅಧಿಕಾರಿಗಳ ಸಮಿತಿ ರಚಿಸಿದ ಅಲಹಾಬಾದ್ ಹೈಕೋರ್ಟ್

- Advertisement -
- Advertisement -

ಪ್ರಯಾಗ್‌ರಾಜ್‌ನ ಡಾ. ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎಲ್‌ಯು) ಕಾನೂನು ವಿಭಾಗದ ಮುಖ್ಯಸ್ಥರ ವಿರುದ್ಧ ದಲಿತ ವಿದ್ಯಾರ್ಥಿಯೊಬ್ಬರು ಮಾಡಿದ ಜಾತಿ ಆಧಾರಿತ ತಾರತಮ್ಯ ಮತ್ತು ಅವಮಾನದ ಆರೋಪಗಳ ಬಗ್ಗೆ ತನಿಖೆ ನಡೆಸಲು ಹಾಗೂ ವಿದ್ಯಾರ್ಥಿಯ ದೂರಿನ ಕುರಿತು ವಿಶ್ವವಿದ್ಯಾಲಯವು ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಪರಿಶೀಲಿಸಲು ಅಲಹಾಬಾದ್ ಹೈಕೋರ್ಟ್ ಇಬ್ಬರು ನ್ಯಾಯಾಂಗ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.

ವಿದ್ಯಾರ್ಥಿಯ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಲು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ನ್ಯಾಯಾಲಯವು ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ವಿಭಾಗದ ಮುಖ್ಯಸ್ಥರನ್ನು (ಎಚ್‌ಒಡಿ) ಎಲ್ಲಾ ಆಡಳಿತಾತ್ಮಕ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಆದೇಶಿಸಿದೆ.

ಬಿಎ ಎಲ್ಎಲ್ ಬಿ (ಆನರ್ಸ್) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು, ಎಚ್‌ಒಡಿ ಮತ್ತು ಬಾಲಕರ ಹಾಸ್ಟೆಲ್‌ನ ವಾರ್ಡನ್ ತಮ್ಮ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಬಳಸಿ ಜಾತಿ ಆಧಾರಿತವಾಗಿ ಅವಮಾನಿಸಿದ್ದಾರೆ, ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ತನ್ನ ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ವಿವಿ ಆಡಳಿತ ಮಂಡಳಿಯು ಎಚ್‌ಒಡಿಯನ್ನು ರಕ್ಷಿಸಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.

ಸಾಂವಿಧಾನಿಕ ಕಾನೂನು-I ಪರೀಕ್ಷೆಯಲ್ಲಿ ತಾನು ಟಾಪರ್ ಆಗಿದ್ದೆ ಎಂಬುದು ಸಂಬಂಧಪಟ್ಟ ಅಧ್ಯಾಪಕರಿಗೆ ತಿಳಿದಿದ್ದರಿಂದಲೇ ಆ ರೀತಿಯ ಹೇಳಿಕೆಯನ್ನು ತನಗೆ ನೀಡಲಾಗಿದೆ ಎಂದು ಅರ್ಜಿದಾರ ಆರೋಪಿಸಿದ್ದಾನೆ. ತನ್ನ ಜಾತಿಯ ಕಾರಣಕ್ಕಾಗಿ ತನ್ನ ಉತ್ತರ ಪತ್ರಿಕೆಗಳನ್ನು ಕಟ್ಟುನಿಟ್ಟಾದ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ. ಎಚ್‌ಒಡಿ ಈ ಹಿಂದೆಯೂ ಜಾತಿ ಮತ್ತು ಮೀಸಲಾತಿಗೆ ಸಂಬಂಧಿಸಿದಂತೆ ಅವಮಾನಕರ ಹೇಳಿಕೆಗಳನ್ನು ನೀಡಿದ್ದರು ಎಂದು ಆತ ಹೇಳಿಕೊಂಡಿದ್ದಾನೆ.

ಸೆಪ್ಟೆಂಬರ್ 16 ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರಿದ್ದ ಏಕಸದಸ್ಯ ಪೀಠವು ಈ ಆರೋಪಗಳು ಗಂಭೀರವಾಗಿದ್ದು, ನಿಷ್ಪಕ್ಷಪಾತ ಸಂಸ್ಥೆಯಿಂದ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ. ಪ್ರಯಾಗ್‌ರಾಜ್ ಜಿಲ್ಲಾ ನ್ಯಾಯಾಲಯದ ಸ್ಮಾಲ್ ಕಾಸ್ ಕೋರ್ಟ್‌ನ ನ್ಯಾಯಾಧೀಶರು ಮತ್ತು ಪ್ರಯಾಗ್‌ರಾಜ್‌ನ ವಿಶೇಷ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಒಳಗೊಂಡ ಸಮಿತಿಯನ್ನು ರಚಿಸಿರುವ ನ್ಯಾಯಾಲಯವು, ತನಿಖೆ ನಡೆಸಿ ಸೆಪ್ಟೆಂಬರ್ 24 ರ ಮುಂದಿನ ವಿಚಾರಣೆಯ ಮೊದಲು ವರದಿ ಸಲ್ಲಿಸುವಂತೆ ಸೂಚಿಸಿದೆ.

ಮುಂದಿನ ಆದೇಶದವರೆಗೆ, ವಿಭಾಗದ ಮುಖ್ಯಸ್ಥರನ್ನು (ಎಚ್‌ಒಡಿ) ಎಲ್ಲಾ ಆಡಳಿತಾತ್ಮಕ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೋಪಾಲ್: ಮಕ್ಕಳ ಸಾವಿನ ಬಗ್ಗೆ ವರದಿ ಮಾಡುತ್ತಿದ್ದಾಗ ಪೊಲೀಸರು ಹೋಟೆಲ್‌ಗಳಿಂದ ಹೊರಹಾಕಿದರು ಎಂದು ಖ್ಯಾತ ಯೂಟ್ಯೂಬರ್ ಕಾವ್ಯ ಕರ್ನಾಟಕ್ ಆರೋಪ

ಭೋಪಾಲ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಮಕ್ಕಳ ಸಾವಿನ ಕುರಿತು ವರದಿ ಮಾಡಲು ತೆರಳಿದ್ದ ತಮ್ಮ ತಂಡವನ್ನು ಎರಡು ಹೋಟೆಲ್‌ಗಳಿಂದ ಹೊರಹೋಗುವಂತೆ ಒತ್ತಾಯಿಸಲಾಯಿತು. ಪೊಲೀಸರು ಹೋಟೆಲ್‌ಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ದೆಹಲಿಯಿಂದ ಬಂದ ಪತ್ರಕರ್ತರನ್ನು ಅಲ್ಲಿಂದ...

DELHI SIR |’ನೋಟಿಸ್‌ಗಳನ್ನು ಯಾಂತ್ರಿಕವಾಗಿ ನೀಡಿದಂತಿದೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಸ್ಪಷ್ಟನೆ ಅಗತ್ಯ : ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಮತದಾರರಿಗೆ ನೀಡಲಾದ ನೋಟಿಸ್‌ಗಳು 'ಬಹುತೇಕ ಯಾಂತ್ರಿಕವಾಗಿ' ಜಾರಿಯಾದಂತೆ ಕಂಡುಬರುತ್ತಿವೆ ಮತ್ತು 'ತಾರ್ಕಿಕ ವ್ಯತ್ಯಾಸ'ವನ್ನು ಗುರುತಿಸಲು ಬಳಸಲಾದ ಆಧಾರದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ...

ಹಮೀದ್ ಅನ್ಸಾರಿ ಅವರಿಗೆ ನೀಡಿರುವ ಪದ್ಮಶ್ರೀ ಹಿಂಪಡೆಯುವಂತೆ ಹಿಂದೂ ಸೇನಾ ಆಗ್ರಹ

ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಬಲಪಂಥೀಯ ರಾಷ್ಟ್ರೀಯತಾವಾದಿ ಸಂಘಟನೆ ಹಿಂದೂ ಸೇನಾ ಆಗ್ರಹಿಸಿದೆ. ಸೋಮವಾರ (ಸೆ. 21) ಕೇಂದ್ರ...

ವಂದೇ ಮಾತರಂ ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆಯಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

‘ವಂದೇ ಮಾತರಂ’ ದೇಶದ ರಾಷ್ಟ್ರೀಯ ಗೀತೆಯಾಗಿ (National Song) ಮುಂದುವರಿಯಲಿದೆ, ಆದರೆ ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ನೈಜ ಧಾರ್ಮಿಕ ಆಕ್ಷೇಪಣೆ ಹೊಂದಿರುವ ಯಾವುದೇ ವ್ಯಕ್ತಿಯು ಅದರ ಕೆಲವು ಚರಣಗಳನ್ನು...

ಉತ್ತರ ಪ್ರದೇಶ ಸೇರಿದಂತೆ 3 ರಾಜ್ಯಗಳ 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ

ಭಾರತೀಯ ಚುನಾವಣಾ ಆಯೋಗವು (ಇಸಿಐ) 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳು ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆಯನ್ನು ಅಕ್ಟೋಬರ್ 16ರಂದು ನಡೆಸುವುದಾಗಿ ಘೋಷಿಸಿದೆ. ದ್ವೈವಾರ್ಷಿಕ ಚುನಾವಣೆಯಲ್ಲಿ ಮತದಾನ ನಡೆಯಲಿರುವ 11 ಸ್ಥಾನಗಳ...

ಪತ್ರಕರ್ತ ರವಿ ನಾಯರ್ ಬಂಧನ ಮುಂದುವರಿಕೆ: ಅದಾನಿ ಮಾನನಷ್ಟ ಪ್ರಕರಣದಲ್ಲಿ ಬಿಡುಗಡೆ ಅರ್ಜಿ ಮುಂದೂಡಿದ ಗುಜರಾತ್ ಹೈಕೋರ್ಟ್ 

ಅದಾನಿ ಎಂಟರ್‌ಪ್ರೈಸಸ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಬಂಧನ ಪ್ರಶ್ನಿಸಿ ಪತ್ರಕರ್ತ ರವಿ ನಾಯರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ಮುಂದೂಡಿದೆ. ನಾಯರ್ ಅವರ ಅರ್ಜಿಗೆ ಪ್ರತಿಕ್ರಿಯಿಸಲು ಅದಾನಿ ಎಂಟರ್‌ಪ್ರೈಸಸ್‌ಗೆ...

ರಾಮನ ಹೆಸರಿಗೆ ಕಳಂಕ ತರಬೇಡಿ’: ರಾಮಮಂದಿರ ದೇಣಿಗೆ ಪ್ರಕರಣದ ಚಾರ್ಜ್‌ಶೀಟ್‌ ವಿಳಂಬದ ಕುರಿತು ಕಾಂಗ್ರೆಸ್‌ ಆಕ್ರೋಶ

ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಕೆ ಕುರಿತು ಕಾಂಗ್ರೆಸ್‌ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದೆ. ದೇಣಿಗೆ ನಿರ್ವಹಣೆ ಮತ್ತು...

SIR ಹೆಸರಿನಲ್ಲಿ ಚುನಾವಣಾ ಆಯೋಗದ ವಿಐಪಿ ಹಾಗೂ ಸಾಮಾನ್ಯ ಮತದಾರರು ಎಂಬ ಪದವೇ ಅಸಂವಿಧಾನಿಕ: ಮಲ್ಲಿಕಾರ್ಜುನ ಖರ್ಗೆ

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಹೆಸರಿನಲ್ಲಿ ದೇಶದ ಪ್ರಜೆಗಳ ಮತದಾನದ ಹಕ್ಕನ್ನೇ ಕಸಿಯಲಾಗುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ...

ದೆಹಲಿ ಎಸ್‌ಐಆರ್‌: ಮುಸ್ಲಿಂ, ಎಸ್‌ಸಿ ಹಾಗೂ ವಲಸಿಗರ ಪ್ರದೇಶಗಳಲ್ಲೇ ಭಾರೀ ಮತದಾರರ ಹೆಸರುಗಳ ಹೊರಗಿಡುವಿಕೆ: ವರದಿ

ನವದೆಹಲಿ: ದೆಹಲಿಯಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಈ ಹಿಂದೆ ನೋಂದಾಯಿತರಾಗಿದ್ದ ಸುಮಾರು ಮೂವರಲ್ಲಿ ಒಬ್ಬರ ಹೆಸರು ಕಾಣೆಯಾಗಿರುವುದು ಗಮನಾರ್ಹ ಸಂಗತಿಯಾಗಿ ಹೊರಹೊಮ್ಮಿದೆ. ಅದರಲ್ಲೂ...

ಅಪಹರಣ ಪ್ರಕರಣದಲ್ಲಿ ಬಂಧನ: ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾದ ದಲಿತ ಯುವಕ

ಉತ್ತರ ಪ್ರದೆಶದ ಪ್ರತಾಪ್‌ಗಢದ ಪಟ್ಟಿ ಪೊಲೀಸ್ ಠಾಣೆಯ ತನಿಖಾ ಕೊಠಡಿಯ ಶೌಚಾಲಯದಲ್ಲಿ ಸೋಮವಾರ ಮುಂಜಾನೆ 22 ವರ್ಷದ ದಲಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರತಾಪ್‌ಗಢ ಎಸ್‌ಪಿ,...