Homeದಲಿತ್ ಫೈಲ್ಸ್ಉತ್ತರ ಪ್ರದೇಶ| ಪೊಲೀಸ್ ಠಾಣೆಯೊಳಗೆ ದಲಿತ ಯುವಕನ ಸಾವು ಪ್ರಕರಣ; 'ಪೊಲೀಸರೆ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ..'...

ಉತ್ತರ ಪ್ರದೇಶ| ಪೊಲೀಸ್ ಠಾಣೆಯೊಳಗೆ ದಲಿತ ಯುವಕನ ಸಾವು ಪ್ರಕರಣ; ‘ಪೊಲೀಸರೆ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ..’ ಎಂದು ಕುಟುಂಬದ ಆರೋಪ

- Advertisement -
- Advertisement -


ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪಟ್ಟಿ ಪೊಲೀಸ್ ಠಾಣೆಯ ಕೋಣೆಯೊಂದರಲ್ಲಿ ದಲಿತ ಯುವಕನೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಂತರ, ಪೊಲೀಸರು ಮತ್ತು ಅಪ್ರಾಪ್ತ ಬಾಲಕಿಯ ಕುಟುಂಬದವರ ವಿರುದ್ಧ ಕೊಲೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇಬ್ಬರೂ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ನೀಡಿದ್ದ ಅಪಹರಣದ ಪ್ರಕರಣದಲ್ಲಿ ಮೃತ ಯುವಕನನ್ನು ಬಂಧಿಸಲಾಗಿತ್ತು.

ಕರ್ತವ್ಯಲೋಪ ಆರೋಪದ ಮೇಲೆ ಪ್ರತಾಪಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪಕ್ ಭುಕರ್ ಅವರು ಪಟ್ಟಿ ಠಾಣೆಯ ಎಸ್‌ಎಚ್‌ಒ (ಠಾಣಾಧಿಕಾರಿ) ಆನಂದ್ ಪಾಲ್ ಸಿಂಗ್ ಮತ್ತು ತನಿಖಾಧಿಕಾರಿ ಓಂಕರ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.

ವೃತ್ತ ನಿರೀಕ್ಷಕ (ಸಿಒ) ಪ್ರದೀಪ್ ಸಿಂಗ್ ಅವರ ಪ್ರಕಾರ, ಯುವಕ ತನ್ನ 17 ವರ್ಷದ ಮಗಳನ್ನು ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಿಸಿದ್ದಾನೆ ಎಂದು ಬಾಲಕಿಯ ತಂದೆ ದೂರು ದಾಖಲಿಸಿದ್ದರು. ಇಬ್ಬರೂ ಒಂದೇ ಗ್ರಾಮದವರು. ಗಾಜಿಯಾಬಾದ್‌ನಿಂದ ಬಾಲಕಿಯನ್ನು ಪತ್ತೆ ಹಚ್ಚಿ ಕರೆತರಲಾಗಿದ್ದು, ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಎದುರು ಆಕೆಯ ಹೇಳಿಕೆಗಳನ್ನು ದಾಖಲಿಸಲಾಗಿದೆ. “ತಾನು ಸ್ವಯಂಪ್ರೇರಣೆಯಿಂದ ಯುವಕನೊಂದಿಗೆ ಹೋಗಿರುವುದಾಗಿ ಮತ್ತು ಆತನೊಂದಿಗೆ ಬದುಕಲು ಬಯಸುವುದಾಗಿ ಆಕೆ ತಿಳಿಸಿದ್ದಾಳೆ. ಆದರೆ ಆಕೆ ಅಪ್ರಾಪ್ತೆಯಾಗಿರುವುದರಿಂದ, ಮೇಜರ್ ಆಗುವವರೆಗೆ ಸ್ವತಃ ಈ ನಿರ್ಧಾರ ತೆಗೆದುಕೊಳ್ಳಲು ಕಾನೂನು ಅವಕಾಶ ನೀಡುವುದಿಲ್ಲ” ಎಂದು ಸಿಂಗ್ ತಿಳಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಯುವಕನನ್ನು ಬಂಧಿಸಿರಲಿಲ್ಲ, ಆತ ಸೋಮವಾರ ತಾನಾಗಿಯೇ ಪೊಲೀಸ್ ಠಾಣೆಗೆ ಬಂದಿದ್ದ ಎಂದು ಸಿಒ ತಿಳಿಸಿದ್ದಾರೆ. ಆತನನ್ನು ಲಾಕಪ್‌ನಲ್ಲಿ ಇರಿಸಿರಲಿಲ್ಲ, ಬದಲಿಗೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ವಿಚಾರಣೆ ನಡೆಸುತ್ತಿದ್ದ ಕೋಣೆಯಲ್ಲಿ ಕೂರಿಸಲಾಗಿತ್ತು. ತನಿಖಾಧಿಕಾರಿ ಯಾವುದೇ ಕೆಲಸಕ್ಕಾಗಿ ಕೋಣೆಯಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಯುವಕ ಬಾತ್‌ರೂಮ್ ವೆಂಟಿಲೇಟರ್‌ಗೆ ಅಂಟಿಸಿದ್ದ ಕಬ್ಬಿಣದ ರಾಡಿಗೆ ನೇಣುಹಾಕಿಕೊಂಡಿರುವುದು ಕಂಡುಬಂದಿದೆ ಎಂದು ಸಿಂಗ್ ಹೇಳಿದರು.

ಕೋಣೆಯಲ್ಲಿದ್ದ ಕಂಬಳಿಯ ಚಿಂದಿಯಿಂದ ಯುವಕ ನೇಣುಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಠಾಣೆಯಲ್ಲಿದ್ದ ಆರೋಪಿಯ ಮೇಲೆ ನಿಗಾ ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರಿಂದ ಎಸ್‌ಎಚ್‌ಒ ಮತ್ತು ಉಪನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಂಗ್ ಹೇಳಿದರು.

ಯುವಕ ಮತ್ತು ಬಾಲಕಿ ಈ ಹಿಂದೆ ಕೂಡ ಒಮ್ಮೆ ಪರಾರಿಯಾಗಿದ್ದರು ಎಂದು ಸಿಒ ತಿಳಿಸಿದರು. ಆ ಸಂದರ್ಭದಲ್ಲೂ ಬಾಲಕಿಯನ್ನು ವಾಪಸ್ ಕರೆತರಲಾಗಿದ್ದು, ತಾನಾಗಿಯೇ ಬಿಟ್ಟುಹೋಗಿರುವುದಾಗಿ ಮತ್ತು ಯುವಕನೊಂದಿಗೆ ಬದುಕಲು ಬಯಸುವುದಾಗಿ ಆಕೆ ತಿಳಿಸಿದ್ದಾಳೆ. ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿತ್ತು.

ಈ ಬಾರಿ ಬಾಲಕಿಯನ್ನು ಪತ್ತೆ ಹಚ್ಚಿ ಕರೆತಂದ ನಂತರ, ಯುವಕ ಪೊಲೀಸ್ ಠಾಣೆಗೆ ಬಂದು ತಾವಿಬ್ಬರೂ ಮದುವೆಯಾಗಿದ್ದು ದಂಪತಿಯಂತೆ ವಾಸಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದನು ಎಂದು ಸಿಂಗ್ ತಿಳಿಸಿದರು.

ಆದರೆ, ಬಾಲಕಿಯ ತಂದೆಯ ಪ್ರಚೋದನೆಯ ಮೇರೆಗೆ ಪೊಲೀಸರು ಯುವಕನಿಗೆ ಚಿತ್ರಹಿಂಸೆ ನೀಡಿದ್ದಾರೆ, ಆತನ ಸಾವನ್ನು ಮುಚ್ಚಿಹಾಕಲು ನೇಣುಬಿಗಿದುಕೊಂಡಿರುವಂತೆ ನಾಟಕವಾಡಲಾಗಿದೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬದವರ ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ಬಾಲಕಿಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಒ ತಿಳಿಸಿದ್ದಾರೆ. “ಅವರ ಮೇಲಿನ ಆರೋಪಗಳನ್ನು ತನಿಖೆಯು ಸಾಬೀತುಪಡಿಸಲಿದೆ” ಎಂದು ಅವರು ಹೇಳಿದರು.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ಗಳು 103(1) (ಕೊಲೆ) ಮತ್ತು 351(3) (ಕ್ರಿಮಿನಲ್ ಬೆದರಿಕೆ) ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಾಕ್ಷ್ಯಗಳನ್ನು ಭದ್ರಪಡಿಸಿಕೊಳ್ಳಲಾಗಿದೆ ಎಂದು ಪ್ರತಾಪಗಢ ಪೊಲೀಸರು ತಿಳಿಸಿದ್ದಾರೆ. ಈ ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದಾರೆ.

ಯುವಕನ ಕುಟುಂಬದವರು ಆರೋಪಿಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಉನ್ನತ ಮಟ್ಟದ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ನಾಗೀನಾ ಸಂಸದ ಹಾಗೂ ಆಜಾದ್ ಸಮಾಜ ಪಾರ್ಟಿಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರು ‘ಎಕ್ಸ್’ ಪೋಸ್ಟ್ ಮೂಲಕ ಒತ್ತಾಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಗೋಮಾಂಸ ಸಾಗಿಸುತ್ತಿರುವ ಶಂಕೆ; ಬಿರಿಯಾನಿ ಹೋಟೆಲ್ ಮಾಲೀಕನ ಮೇಲೆ ಗುಂಪು ಹಲ್ಲೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮೂವರು ಯುವಕರು ಮುಸ್ಲಿಂ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯಿಂದ ಆತನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಭಾನುವಾರ (ಸೆ. 20) ಈ...

ಟಿಎಂಸಿ ಹೆಸರು, ಚಿಹ್ನೆ ತಡೆ: ಅಂತಿಮ ನಿರ್ಧಾರದ ಕಾಲಮಿತಿ ಕೇಳಿದ ಸುಪ್ರೀಂ ಕೋರ್ಟ್; ಸೆ. 28ಕ್ಕೆ ವಿಚಾರಣೆ

ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಮೂಲ ಹೆಸರು ಹಾಗೂ ‘ಜೋಡಾ ಘಾಸ್‌ಫುಲ್‌’ (Flowers & Grass) ಚುನಾವಣಾ ಚಿಹ್ನೆಯ ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು...

ಸುಪ್ರೀಂ ಕೋರ್ಟ್ ತೀರ್ಪುಗಳ ಉಲ್ಲಂಘನೆ : ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಅರ್ಜಿ

ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯವೈಖರಿಯನ್ನು ನಿಯಂತ್ರಿಸುವ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ನಡಾವಳಿಗಳನ್ನು ಪ್ರಾರಂಭಿಸಲು...

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಪುನಃ ಅಗ್ರಸ್ಥಾನ ಪಡೆದ ಗೌತಮ್ ಅದಾನಿ; ಶೇ. 13 ರಷ್ಟು ಸಂಪತ್ತು ಹೆಚ್ಚಳ

ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ರ ಪ್ರಕಾರ, ಭಾರತದ ಬಿಲಿಯನೇರ್‌ಗಳ ಸಂಖ್ಯೆಯು ದಾಖಲೆಯ 391 ಕ್ಕೆ ತಲುಪಿದ್ದು, ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ ಮತ್ತು ಅವರ ಕುಟುಂಬವು...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: SIR ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರು, ತಜ್ಞರ ಕಳವಳ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದೊಳಗೆ ದಾಖಲಾಗಿರುವ ಭಿನ್ನಾಭಿಪ್ರಾಯಗಳು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್  ನಡೆಸಿದ ತನಿಖಾ ವರದಿ ಪ್ರಕಾರ,...

ಚಲಿಸುವ ರೈಲಿನಲ್ಲಿ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯ: ಮುಸ್ಲಿಂ ಯುವಕನ ಆರೋಪ

ಮುಂಬೈಯಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮುಸ್ಲಿಂ ಯುವಕನೊಬ್ಬ ಆರೋಪಿಸಿದ್ದಾನೆ. ದಾಳಿಕೋರರು ತನ್ನ ಶರ್ಟ್ ಹರಿದು, ಥಳಿಸಿ, ಬಲವಂತವಾಗಿ "ಜೈ ಶ್ರೀ ರಾಮ್" ಎಂದು ಜಪಿಸುವಂತೆ...

ಫಾರ್ಮ್ 6 ರಲ್ಲಿನ ಬದಲಾವಣೆಗಳು ಕಾನೂನುಬಾಹಿರ; ಆಯೋಗದೊಳಗಿನ ಭಿನ್ನಾಭಿಪ್ರಾಯ ಗಂಭೀರ: ಮಾಜಿ ಸಿಇಸಿ ಓ.ಪಿ. ರಾವತ್

"ಶಾಸನಬದ್ಧ ಮತದಾರರ ನೋಂದಣಿ ಫಾರ್ಮ್ ನಂ 6 ರಲ್ಲಿ ಮಾಡಲಾದ ಬದಲಾವಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕಾನೂನುಬಾಹಿರ" ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಓ.ಪಿ. ರಾವತ್ ತಿಳಿಸಿದ್ದಾರೆ. "ಚುನಾವಣಾ ಆಯೋಗದೊಳಗಿನ...

‘ಸಲ್ವಾರ್ ತೆಗೆಯಲು ಯತ್ನ, ಎದೆ ಒತ್ತುವುದು ಅತ್ಯಾಚಾರ ಯತ್ನವಲ್ಲವೇ?’: ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಚಾಟಿ 

ನವದೆಹಲಿ: ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಸೇರಿದಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ...

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಿ; ಕೂಡಲೇ ಎಸ್‌ಐಆರ್ ನಿಲ್ಲಿಸಿ: ವಿಪಕ್ಷಗಳ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ಗಂಭೀರ ಕಳವಳ ವ್ಯಕ್ತಪಡಿಸಿರುವುದು ದೊಡ್ಡ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. "ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್...

‘ಸಹೋದರಿಯರು, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧ’: ಮುಸ್ಲಿಂ ಮಹಿಳೆಯರ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಶಾಸಕನ ಅತ್ಯಾಚಾರ ಬೆದರಿಕೆ

ಭೋಪಾಲ್: ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ಆಗಮಿಸುವುದನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. “ಮುಸ್ಲಿಂ ಹುಡುಗರು ಮಾತ್ರ...