HomeಅಂಕಣಗಳುKarnataka against SIRSIR : ಭಾಲ್ಕಿ, ಬೆಳಗಾವಿ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಅರ್ಹ ಮತಗಳ ಡಿಲೀಟ್‌ಗೆ ಯತ್ನ;...

SIR : ಭಾಲ್ಕಿ, ಬೆಳಗಾವಿ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಅರ್ಹ ಮತಗಳ ಡಿಲೀಟ್‌ಗೆ ಯತ್ನ; ಅನ್ಯರು ಫಾರಂ-7 ಸಲ್ಲಿಸಿರುವುದು ಬಯಲು!

- Advertisement -
- Advertisement -

ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಬಟಾಬಯಲಾಗಿ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಪಟ್ಟಂತೆ ಬೆಚ್ಚಿ ಬೀಳಿಸುವ ವಿಚಾರವೊಂದು ಬೆಳಕಿಗೆ ಬಂದಿದೆ.

ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಬೆಳಗಾವಿ ಜಿಲ್ಲೆಯ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಫಾರಂ ನಂಬರ್-7 ಸಲ್ಲಿಸಿ ಸಾವಿರಾರು ಅರ್ಹ ಮತದಾರರ ಹೆಸರುಗಳನ್ನು (ವಿಶೇಷವಾಗಿ ಮುಸ್ಲಿಂ ಮತದಾರರ ಹೆಸರುಗಳು) ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲು ಪ್ರಯತ್ನಿಸಿರುವುದು ಗೊತ್ತಾಗಿದೆ.

ಎರಡೂ ಕಡೆ ಬಿಜೆಪಿ ಕಾರ್ಯಕರ್ತರು ಈ ಅಕ್ರಮಗಳನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭಾಲ್ಕಿ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 107ರಲ್ಲಿ 200, 114ರಲ್ಲಿ 198, 111 ರಲ್ಲಿ 200, 115ರಲ್ಲಿ 230 ಮತ್ತು 129ರಲ್ಲಿ 200 ಫಾರಂ ನಂಬರ್-7 ಸಲ್ಲಿಕೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.

ಸೆಪ್ಟಂಬರ್ 22ರಂದು ಎಲ್ಲಾ ಫಾರಂ-7 ಅನ್ನು ಬೂತ್‌ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒಗಳಿಗೆ) ಸಲ್ಲಿಕೆ ಮಾಡಲಾಗಿದೆ.
“ಬೆಂಗಳೂರು ಕಚೇರಿಯಿಂದ ಬಂದಿದ್ದೇವೆ, ಇವರೆಲ್ಲರ ಹೆಸರನ್ನು ಡಿಲೀಟ್ ಮಾಡಬೇಕೆಂದು ಬಿಎಲ್ಒಗಳಿಗೆ ಹೇಳಿದ್ದಾರೆಂದು” ಅಲ್ಲಿನ ಬಿಎಲ್ಒ ಒಬ್ಬರು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 194, 195, 196 ಮತ್ತು 199ರಲ್ಲಿ ನೂರಾರು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಫಾರಂ ನಂಬರ್-7 ಸಲ್ಲಿಕೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ವೋಟ್ ಡಿಲೀಟ್ ಮಾಡಲು ಸಲ್ಲಿಕೆ ಮಾಡಲಾಗಿದೆ ಎನ್ನಲಾದ ನೂರಾರು ಫಾರಂ ನಂಬರ್-7 ಮತ್ತು ಈ ಫಾರಂಗಳಲ್ಲಿ ಹೆಸರಿಸಲಾದ ವ್ಯಕ್ತಿಗಳನ್ನು ತೋರಿಸಿದ್ದಾರೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾದ 8 ಫಾರಂ-7 ಅನ್ನು ನಾವು ಪರಿಶೀಲಿಸಿದ್ದೇವೆ. ಅದರಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ 5 ಅರ್ಜಿಗಳನ್ನು ಶಿವಂ, 1 ಅರ್ಜಿಯನ್ನು ಮಹಾದೇವ್, 1 ಅರ್ಜಿಯನ್ನು ವಿನೋದ್ ಸಲ್ಲಿಸಿದ್ದಾರೆ ಎಂದಿದೆ. ಮತ್ತೊಂದು ಅರ್ಜಿ ಸಲ್ಲಿಸಿದವರ ಹೆಸರು ಬರೆದಿಲ್ಲ. ಈ ಎಲ್ಲಾ 8 ಅರ್ಜಿಗಳಲ್ಲಿ ಮುಸ್ಲಿಂ ಮತದಾರರ ಹೆಸರುಗಳೇ ಇವೆ.

ಈ ನಡುವೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಸಾವಿರಾರು ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಸ್ವತಃ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ (ಸೆ.24) ಸುದ್ದಿಗೋಷ್ಠಿ ನಡೆಸಿದ ಬಿ.ಕೆ.ಹರಿಪ್ರಸಾದ್, ಎಸ್‌ಐಆರ್ ಪ್ರಕ್ರಿಯೆ ವೇಳೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ 2000 ಮತದಾರರ ಹೆಸರು ಡಿಲೀಟ್ ಮಾಡಲು ಅಭಯ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಮತದಾರರ ಹೆಸರು ಡಿಲೀಟ್ ಮಾಡಿ ಎಂದು ಪತ್ರ ಬರೆಯಲು ಇವರು ಯಾರು? ಅಭಯ್ ಪಾಟೀಲ್ ಬರೆದಿರುವ ಪತ್ರ ನಮ್ಮ ಬಳಿ ಇದೆ ಎಂದು ಹರಿಪ್ರಸಾದ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಶಾಸಕರು ಕಾನೂನು ಮೀರಿ ಶಾಸಕರು ಸಾಮೂಹಿಕ ಡಿಲೀಷನ್‌ಗೆ ಕೋರಿ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಶಾಸಕ ಅಭಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ಬಿ.ಕೆ ಹರಿಪ್ರಸಾದ್ ಆರೋಪಿಸಿರುವಂತೆ ಅಭಯ್ ಪಾಟೀಲ್ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರ ಮತ್ತು ಆ ರೀತಿ ಸಾಮೂಹಿಕವಾಗಿ (ಬಲ್ಕ್‌) ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿ ಬರೆದಿರುವ ಪತ್ರವನ್ನು ಕೆಳಗೆ ನೋಡಬಹುದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..’; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರನ್ನು ಸಂಪರ್ಕಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯು ಇದು ರಾಜಕೀಯ ಪ್ರಚಾರ ಹಾಗೂ ವಿರೋಧ ಪಕ್ಷಗಳ...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: ಸಂಕಷ್ಟದಲ್ಲಿ ಲಕ್ಷಾಂತರ ‘Gen Z’ ಯುವಕರ ಮತದಾನದ ಹಕ್ಕು!

ಭಾರತೀಯ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಆಯುಕ್ತರ ನಡುವೆ ಉಂಟಾಗಿದೆ ಎನ್ನಲಾದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ, ದೇಶದ ನೂತನ ಯುವ ಮತದಾರರ ಸೇರ್ಪಡೆ ಪ್ರಕ್ರಿಯೆ ಮಂದಗತಿಯಲ್ಲಿದೆ ಎಂಬ ವರದಿ...

‘ಅನ್ಯಾಯಯುತ’ ಚುನಾವಣೆಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಪ್ರಿಯಾಂಕಾ ಗಾಂಧಿ

ವಯನಾಡ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ವಿಚಾರದ ನಡುವೆಯೇ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ವಾಗ್ದಾಳಿ ಮತ್ತಷ್ಟು ತೀವ್ರಗೊಂಡಿದೆ. ಮತದಾರರ...

48 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ; ಗ್ಯಾನೇಶ್ ಕುಮಾರ್‌ಗೆ ಸಿಜೆಪಿ ಎಚ್ಚರಿಕೆ

ದೇಶದ ಅತ್ಯಂತ ದೊಡ್ಡ ರಾಷ್ಟ್ರದ್ರೋಹಿ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), "ಮತದಾರರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದ್ದಾರೆ" ಎಂದು ಆರೋಪಿಸಿ ಅವರ...

11 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸಲು ಒತ್ತಾಯಿಸಲಾಗದು: 24 ವಾರ ಮೀರಿದರೂ ಗರ್ಭಪಾತಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ಅನುಮತಿ

ಶ್ರೀನಗರ: ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವ 11 ವರ್ಷದ ಬಾಲಕಿಯನ್ನು ಕಾನೂನಿನಲ್ಲಿರುವ ನಿಗದಿತ ಅವಧಿಯನ್ನು ಮೀರಿದೆ ಎಂಬ ಕಾರಣಕ್ಕೆ ಗರ್ಭಧಾರಣೆಯನ್ನು ಪೂರ್ಣ ಅವಧಿಯವರೆಗೆ ಮುಂದುವರಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್...

6 ವರ್ಷದ ಮಲಮಗಳ ಅತ್ಯಾಚಾರ, ಹತ್ಯೆ ಪ್ರಕರಣ : ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದ ಸುಪ್ರೀಂ ಕೋರ್ಟ್

ಮಧ್ಯಪ್ರದೇಶದಲ್ಲಿ ತನ್ನ ಆರು ವರ್ಷದ ಮಲಮಗಳನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ವ್ಯಕ್ತಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಇಂದು (ಸೆ.24) ಬದಲಾಯಿಸಿದೆ. livelaw.in ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್...

ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ತನಿಖೆಗೆ ಸಮಿತಿ ರಚನೆ

ಬಿ.ಟೆಕ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಶಂಕಿತ ಆತ್ಮಹತ್ಯೆಯ ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಬುಧವಾರ (ಸೆ.23) 10 ಸದಸ್ಯರ...

ಉತ್ತರ ಪ್ರದೇಶ| ಗೋಮಾಂಸ ಸಾಗಿಸುತ್ತಿರುವ ಶಂಕೆ; ಬಿರಿಯಾನಿ ಹೋಟೆಲ್ ಮಾಲೀಕನ ಮೇಲೆ ಗುಂಪು ಹಲ್ಲೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮೂವರು ಯುವಕರು ಮುಸ್ಲಿಂ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯಿಂದ ಆತನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಭಾನುವಾರ (ಸೆ. 20) ಈ...

ಟಿಎಂಸಿ ಹೆಸರು, ಚಿಹ್ನೆ ತಡೆ: ಅಂತಿಮ ನಿರ್ಧಾರದ ಕಾಲಮಿತಿ ಕೇಳಿದ ಸುಪ್ರೀಂ ಕೋರ್ಟ್; ಸೆ. 28ಕ್ಕೆ ವಿಚಾರಣೆ

ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಮೂಲ ಹೆಸರು ಹಾಗೂ ‘ಜೋಡಾ ಘಾಸ್‌ಫುಲ್‌’ (Flowers & Grass) ಚುನಾವಣಾ ಚಿಹ್ನೆಯ ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು...

ಉತ್ತರ ಪ್ರದೇಶ| ಪೊಲೀಸ್ ಠಾಣೆಯೊಳಗೆ ದಲಿತ ಯುವಕನ ಸಾವು ಪ್ರಕರಣ; ‘ಪೊಲೀಸರೆ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ..’ ಎಂದು ಕುಟುಂಬದ ಆರೋಪ

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪಟ್ಟಿ ಪೊಲೀಸ್ ಠಾಣೆಯ ಕೋಣೆಯೊಂದರಲ್ಲಿ ದಲಿತ ಯುವಕನೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಂತರ, ಪೊಲೀಸರು ಮತ್ತು ಅಪ್ರಾಪ್ತ ಬಾಲಕಿಯ ಕುಟುಂಬದವರ ವಿರುದ್ಧ ಕೊಲೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ...