Homeಮುಖಪುಟ'ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..'; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

‘ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..’; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

- Advertisement -
- Advertisement -

ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರನ್ನು ಸಂಪರ್ಕಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯು ಇದು ರಾಜಕೀಯ ಪ್ರಚಾರ ಹಾಗೂ ವಿರೋಧ ಪಕ್ಷಗಳ ಮತ್ತು ‘ದಿಮಾಗಿ’ (ಬುದ್ಧಿಜೀವಿ) ನಕ್ಸಲರ ನಿರಾಶೆಯನ್ನು ತೋರಿಸುತ್ತದೆ” ಎಂದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ.

ಚುನಾವಣಾ ಆಯೋಗವು ಒಂದು ಸಾಮುದಾಯಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ ನಿರ್ಧಾರಗಳು ಸಿಇಸಿ ಹಾಗೂ ಇಬ್ಬರು ಚುನಾವಣಾ ಆಯುಕ್ತರ ಸಹಿಯನ್ನು ಹೊಂದಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಚುನಾವಣಾ ಆಯೋಗದ ನಿಯಮಗಳು ತಿಳಿದಿರುವವರು ಇಂತಹ ಆರೋಪಗಳನ್ನು ಮಾಡುವುದಿಲ್ಲ. ನನ್ನ ವಿನಮ್ರ ಅಭಿಪ್ರಾಯದಲ್ಲಿ, ಸಿಇಸಿ ಅಥವಾ ಚುನಾವಣಾ ಆಯುಕ್ತರು ಅಲ್ಪಸಂಖ್ಯಾತರಾದಾಗ ಚುನಾವಣಾ ಆಯೋಗವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ಎಲ್ಲಾ ನಿರ್ಧಾರಗಳನ್ನು ಬಹುಮತದೊಂದಿಗೆ ಸಾಮುದಾಯಿಕವಾಗಿ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಸಿಇಸಿ ಮತ್ತು ಇಬ್ಬರು ಚುನಾವಣಾ ಆಯುಕ್ತರ ನಡುವಿನ ಭಿನ್ನಾಭಿಪ್ರಾಯಗಳ ಕುರಿತಾದ ಪತ್ರಿಕಾ ವರದಿಗೆ ಪ್ರತಿಕ್ರಿಯಿಸಲು ಕೇಳಿದಾಗ ಶರ್ಮಾ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

“ಸಿಇಸಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಸಂದೇಶವನ್ನು ದೇಶಾದ್ಯಂತ ರವಾನಿಸುವುದು ಸರಿಯಲ್ಲ. ಅವರು, ಯಾವುದೇ ನಿರ್ಧಾರಕ್ಕೆ ಮೂರು ಮತಗಳ ಅಗತ್ಯವಿರುತ್ತದೆ, ಇಬ್ಬರೂ ಚುನಾವಣಾ ಆಯುಕ್ತರು ಸಿಇಸಿ ವಿರುದ್ಧವಾಗಿದ್ದರೆ, ಸಿಇಸಿ 1-2 ಅಂತರದಲ್ಲಿ ಸೋಲುತ್ತಿದ್ದರು” ಎಂದು ಹೇಳಿದರು.

“ನಿರ್ಧಾರ ತೆಗೆದುಕೊಳ್ಳುವ ಮುನ್ನ ನಡೆಯುವ ಸಮಾಲೋಚನೆಗಳಲ್ಲಿ ವಿಭಿನ್ನ ಅಭಿಪ್ರಾಯಗಳಿರಬಹುದು, ಆದರೆ ಎಲ್ಲಾ ನಿರ್ಧಾರಗಳಿಗೂ ಚುನಾವಣಾ ಆಯೋಗದ ಸಮಿತಿಯ ಮೂವರ ಸಹಿ ಅಗತ್ಯವಿರುತ್ತದೆ” ಎಂದು ಶರ್ಮಾ ಹೇಳಿದರು.

ಭಿನ್ನಾಭಿಪ್ರಾಯಗಳ ಕುರಿತಾದ ವರದಿಯನ್ನು ಸಂಚಲನ ಸೃಷ್ಟಿಸುವ ಪ್ರಯತ್ನ ಎಂದು ತಳ್ಳಿಹಾಕಿದ ಶರ್ಮಾ, “ಸಿಇಸಿ ಅವರನ್ನು ಗುರಿಯಾಗಿಸುವುದು ರಾಜಕೀಯ ಪ್ರಚಾರವಾಗಿದೆ. ಚುನಾವಣಾ ಆಯುಕ್ತರೊಂದಿಗೆ ಸಮಾಲೋಚಿಸದೆ ಸಿಇಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ ಎಂದು ನಾನು ಭಾವಿಸುವುದಿಲ್ಲ. ಈ ದಾಳಿಯು ವಿರೋಧ ಪಕ್ಷಗಳು ಮತ್ತು ದಿಮಾಗಿ ನಕ್ಸಲರ ನಿರಾಶೆಯನ್ನು ತೋರಿಸುತ್ತದೆ” ಎಂದರು.

“ಚುನಾವಣಾ ಆಯೋಗವು ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ, ಇದರಲ್ಲಿ ಇನ್ನು ಮುಂದೆ ಹೆಚ್ಚಿನದ್ದೇನೂ ಇದೆ ಎಂದು ನಾನು ಭಾವಿಸುವುದಿಲ್ಲ” ಎಂದು ಶರ್ಮಾ ಹೇಳಿದ್ದಾರೆ.

ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮತದಾರರ ಪಟ್ಟಿ ವಜಾ ಮತ್ತು ಮಾಹಿತಿ ಸೇರಿದಂತೆ ವಿವಿಧ ನಿರ್ಧಾರಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬುಧವಾರದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಪ್ರತಿಪಾದಿಸಿದ ನಂತರ ಅವರ ಈ ಹೇಳಿಕೆಗಳು ಬಂದಿವೆ.

ಆದರೆ, ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ಮೂವರೂ ಆಯುಕ್ತರ ಒಪ್ಪಿಗೆಯೊಂದಿಗೆ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಸಿಜೆಯ ‘ನರಮೇಧ’ ತೀರ್ಪಿಗೆ ರೋಹಿಂಗ್ಯಾ ನಿರಾಶ್ರಿತರಿಂದ ಸ್ವಾಗತ: ತಾಯ್ನಾಡು ಮ್ಯಾನ್ಮಾರ್‌ಗೆ ಮರಳುವ ಇಂಗಿತ

ನವೆಂಬರ್ 19, 2026ರಂದು, ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವಾದ ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮ್ಯಾನ್ಮಾರ್ ನರಮೇಧ ನಡೆಸಿದೆ ಎಂದು ಐತಿಹಾಸಿಕ ತೀರ್ಪು ನೀಡಿದೆ. ಅಂತಾರಾಷ್ಟ್ರೀಯ...

‘ಬಸವ ಮಂಟಪ’ ವಿವಾದ: ವಿದೇಶಕ್ಕೆ ತೆರಳಲು ಯತ್ನಿಸಿದ ಲೇಖಕ ರವಿ ಹಂಜ್ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ; ಕೃತಿ ಮುಟ್ಟುಗೋಲು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂ ಡಿಕೆಶಿ ಆದೇಶ

ಬೆಂಗಳೂರು, ನವೆಂಬರ್ 21: 12ನೇ ಶತಮಾನದ ಸಮಾಜ ಸುಧಾರಕ, ವಚನ ಚಳವಳಿಯ ಮುಂಚೂಣಿ ನಾಯಕ ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಮತ್ತು ಅವಮಾನಕರ ವಿಚಾರಗಳನ್ನು ಬರೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ‘ಬಸವ ಮಂಟಪ’...

ಸ್ಥಳಾಂತರಗೊಂಡ ರೋಹಿಂಗ್ಯಾಗಳ ಸುರಕ್ಷಿತ, ತ್ವರಿತ ವಾಪಸಾತಿಗೆ ಬೆಂಬಲ : ಭಾರತ ಪುನರುಚ್ಚಾರ

ಸ್ಥಳಾಂತರಗೊಂಡ ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ಗೆ ಸುರಕ್ಷಿತವಾಗಿ ಮತ್ತು ಸುಸ್ಥಿರವಾಗಿ ವಾಪಸ್ ಕಳುಹಿಸುವುದಕ್ಕೆ ತನ್ನ ಬೆಂಬಲವನ್ನು ಭಾರತ ಶುಕ್ರವಾರ (ನ.20) ಪುನರುಚ್ಚರಿಸಿದೆ. ಮ್ಯಾನ್ಮಾರ್ ವಿರುದ್ಧದ ನರಮೇಧ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತನ್ನ ಐತಿಹಾಸಿಕ...

“ತೆರಿಗೆ ಇಳಿಸಿದರೂ ಉದ್ಯಮ ವಲಯ ಸಂಬಳ ಹೆಚ್ಚಿಸಿಲ್ಲ”: ಪ್ರಧಾನಿ ಮೋದಿ ಮಾತುಗಳಲ್ಲೇ ಸಾಬೀತಾಯ್ತು ‘ಟ್ರಿಕಲ್-ಡೌನ್’ ಆರ್ಥಿಕತೆಯ ವೈಫಲ್ಯ!

ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿ ಉದ್ಯಮ ವಲಯಕ್ಕೆ ಭಾರಿ ರಿಯಾಯಿತಿ ನೀಡಿದ್ದರೂ, ಕಂಪನಿಗಳು ತಮ್ಮ ಲಾಭವನ್ನು ಕಾರ್ಮಿಕರೊಂದಿಗೆ ಹಂಚಿಕೊಳ್ಳದೆ ಕೇವಲ ತಮ್ಮ ತಿಜೋರಿ ತುಂಬಿಸಿಕೊಂಡಿವೆ ಎಂಬುದನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ...

ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 13 ಮಂದಿ ಸಾವು; 346 ಜನರು ಆಸ್ಪತ್ರೆಗೆ ದಾಖಲು, ಹಲವರ ಸ್ಥಿತಿ ಗಂಭೀರ

ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಕಲುಷಿತ ಮದ್ಯ ಸೇವನೆಯಿಂದ ಸಂಭವಿಸಿರುವ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ನಕಲಿ ಮದ್ಯ ಸೇವನೆಯಿಂದ ಮೆಥನಾಲ್ ವಿಷಪೂರಿತಕ್ಕೆ ಒಳಗಾಗಿರುವ ಶಂಕೆಯ ಹಿನ್ನೆಲೆಯಲ್ಲಿ 346ಕ್ಕೂ ಹೆಚ್ಚು ಜನರನ್ನು...

SIR ಪೂರ್ವದ ಮತದಾರರ ಪಟ್ಟಿ ಬಳಕೆ : ರಾಜಸ್ಥಾನ ಪಂಚಾಯತ್ ಸಮರದಲ್ಲಿ ಕಾಂಗ್ರೆಸ್​ಗೆ ಭರ್ಜರಿ ಜಯ; ಬಿಜೆಪಿಗೆ ಹಿನ್ನಡೆ

ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್) ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಮೇಲುಗೈ ಸಾಧಿಸಿದೆ. ಈ ಫಲಿತಾಂಶವು ರಾಜ್ಯದ ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ...

ಎಸ್‌ಐಆರ್‌ನಲ್ಲಿ ಅಳಿಸುವಿಕೆಗೆ ಗುರುತಿಸಿದ್ದ 1,635 ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಮತ್ತೆ ಪ್ರತ್ಯಕ್ಷ; ಹಳೆಯ EPIC ಸಂಖ್ಯೆಗಳೇ ಮುಂದುವರಿಕೆ

ಬೆಂಗಳೂರು: ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಹೆಸರಿನಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿರುವುದನ್ನು ದಿ ವೈರ್ ವರದಿ ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ಎಸ್‌ಐಆರ್ ವೇಳೆ ಗೈರುಹಾಜರಿ, ಸ್ಥಳಾಂತರ, ಮರಣ...

ದಲಿತ ತಾರತಮ್ಯ ಪ್ರಕರಣ: ತನಿಖಾಧಿಕಾರಿಯನ್ನು ಬದಲಿಸಲು ಮದ್ರಾಸ್ ಹೈಕೋರ್ಟ್ ಆದೇಶ

ರಾಮನಾಥಪುರಂ ಜಿಲ್ಲೆಯ ಗ್ರಾಮದೊಂದರಲ್ಲಿ ಸಾರ್ವಜನಿಕ ರಸ್ತೆಯನ್ನು ಬಳಸಲು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ಜನರು ಎದುರಿಸುತ್ತಿರುವ ತೊಂದರೆಗಳ ಕುರಿತು ಸಲ್ಲಿಸಲಾದ ದೂರಿನ ಬಗ್ಗೆ ಹೊಸದಾಗಿ ತನಿಖೆ ನಡೆಸಲು, ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್‌ಪಿ)...

‘ಶೀಘ್ರದಲ್ಲೇ ನಿರ್ಗಮಿತ ಪ್ರಧಾನಿ ಆಗಲಿದ್ದೇನೆಂದು ಮೋದಿಯವರಿಗೆ ಅರಿವಾಗಿದೆ’: FICCI ಭಾಷಣದ ಬೆನ್ನಲ್ಲೇ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಕಾರ್ಮಿಕರ ವೇತನ ಹೆಚ್ಚಳವಾಗುತ್ತಿಲ್ಲ ಎಂದು ಕೈಗಾರಿಕೋದ್ಯಮಿಗಳನ್ನೇ ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಕಳೆದ 12 ವರ್ಷಗಳಿಂದ ದೇಶದ ಆಡಳಿತ ನಡೆಸುತ್ತಿರುವ...

ರಾಜೀನಾಮೆ ಬಳಿಕ ಪದಚ್ಯುತಿ ಪ್ರಕ್ರಿಯೆ ಮುಂದುವರಿಸುವಂತಿಲ್ಲ: ನ್ಯಾಯಮೂರ್ತಿ ವರ್ಮಾ

ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ರಾಜೀನಾಮೆ ನೀಡಿದ ಬಳಿಕ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರತಿಪಾದಿಸಿದ್ದಾರೆ. ತಾವು ನ್ಯಾಯಮೂರ್ತಿ ಹುದ್ದೆಯಲ್ಲಿ ಮುಂದುವರಿದಿಲ್ಲ. ಹೀಗಿರುವಾಗ ತಮ್ಮನ್ನು ಪದಚ್ಯುತಗೊಳಿಸುವ ಯಾವುದೇ...