Homeಮುಖಪುಟವಿಜಯ್ ನೇತೃತ್ವದ ಟಿವಿಕೆ ಸೇರಿದ ಎಐಎಡಿಎಂಕೆ ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ವಿಜಯ್ ನೇತೃತ್ವದ ಟಿವಿಕೆ ಸೇರಿದ ಎಐಎಡಿಎಂಕೆ ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

- Advertisement -
- Advertisement -

ಚುನಾವಣೆಯ ಬೆನ್ನಲ್ಲೇ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಸೇರಿದ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ಧ ತಮಿಳುನಾಡು ವಿಧಾನಸಭೆಯ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ (ಅಕ್ಟೋಬರ್ 13) ಎತ್ತಿಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠವು, ಶಾಸಕರ ರಾಜೀನಾಮೆಗಳು ನೈಜವಾಗಿದ್ದವು ಮತ್ತು ರಾಜೀನಾಮೆ ಪ್ರಕ್ರಿಯೆಯ ಕುರಿತು ಸ್ಪೀಕರ್ ವಿವರವಾದ ತನಿಖೆ ನಡೆಸುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಶಾಸಕರ ರಾಜೀನಾಮೆಯು ಅನರ್ಹತಾ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು, ಎರಡು ತಿಂಗಳೊಳಗೆ ಅನರ್ಹತಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶವು 2026ರ ಮೇ 4ರಂದು ಪ್ರಕಟಗೊಂಡಿತ್ತು. ನಟ ವಿಜಯ್ ಅವರ ಟಿವಿಕೆ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಜಯಗಳಿಸಿತ್ತು. ಆದಾಗ್ಯೂ, ಸರ್ಕಾರ ರಚಿಸಲು ಅಗತ್ಯವಿದ್ದ ಬಹುಮತದ (118 ಸ್ಥಾನಗಳು) ಸಂಖ್ಯೆಗಿಂತ ಕಡಿಮೆ ಅಂದರೆ 108 ಸ್ಥಾನಗಳನ್ನು ಮಾತ್ರ ಟಿವಿಕೆ ಪಡೆದಿದ್ದರಿಂದ, ಅದು ಇತರ ರಾಜಕೀಯ ಪಕ್ಷಗಳ ಬೆಂಬಲವನ್ನು ಕೋರಿತ್ತು. ಈ ಬೆನ್ನಲ್ಲೇ ಟಿವಿಕೆ ಸರ್ಕಾರವನ್ನೂ ರಚಿಸಿತ್ತು. ನಂತರ ಮೇ 13ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ 144 ಮತಗಳನ್ನು ತನ್ನ ಪರವಾಗಿ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಎಐಎಡಿಎಂಕೆ ಪಕ್ಷದ ಪ್ರಕಾರ, ಚುನಾವಣಾ ಫಲಿತಾಂಶಗಳು ಘೋಷಣೆಯಾದ ತಕ್ಷಣ, ಅಂದರೆ 2026ರ ಮೇ 11ರಂದು ಪಕ್ಷವು ತನ್ನ ಸದಸ್ಯರಿಗೆ ವಿಶ್ವಾಸಮತವನ್ನು ವಿರೋಧಿಸುವಂತೆ ಸೂಚಿಸಿ ‘ವಿಪ್’ ಜಾರಿಗೊಳಿಸಿತ್ತು. ಆದರೆ, ಮೇ 13ರಂದು ನಡೆದ ವಿಶ್ವಾಸಮತದ ಸಂದರ್ಭದಲ್ಲಿ 25 ಶಾಸಕರು ಪಕ್ಷದ ವಿಪ್‌ಗೆ ವಿರುದ್ಧವಾಗಿ ಟಿವಿಕೆ ಪರವಾಗಿ ಮತ ಚಲಾಯಿಸಿದ್ದರು. ಶಾಸಕರು ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ, 2026ರ ಮೇ 14ರಂದು ಭಾರತದ ಸಂವಿಧಾನದ 10ನೇ ಅನುಸೂಚಿಯ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು.

ಕ್ರಾಸ್-ವೋಟಿಂಗ್ (ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸುವುದು) ಮತ್ತು ಸಂಭಾವ್ಯ ‘ಕುದುರೆ ವ್ಯಾಪಾರ’ (ಶಾಸಕರನ್ನು ಸೆಳೆಯುವ ಅಥವಾ ಖರೀದಿಸುವ ಪ್ರಯತ್ನ) ನಡೆದಿದೆ ಎಂಬ ವಿಷಯವನ್ನು ಸ್ಪೀಕರ್ ಅವರ ಗಮನಕ್ಕೆ ತರಲಾಗಿತ್ತು. ಆದಾಗ್ಯೂ, ಕ್ರಾಸ್-ವೋಟಿಂಗ್‌ಗಾಗಿ ಕೆಲವು ಶಾಸಕರು ಕ್ಷಮೆಯಾಚಿಸಿದ್ದರಿಂದ, ಅವರ ವಿರುದ್ಧದ ಕ್ರಮವನ್ನು ಕೈಬಿಡಲಾಯಿತು. ನಂತರ, ಮೇ 25ರಂದು ಸಂಬಂಧಪಟ್ಟ ಶಾಸಕರು ಸ್ಪೀಕರ್ ಅವರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದರು. ಮತ್ತು ಅದೇ ದಿನ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಿದ್ದರು. ಸ್ಪೀಕರ್ ಅವರು ಅದೇ ದಿನ ರಾಜೀನಾಮೆಗಳನ್ನು ಅಂಗೀಕರಿಸಿ ಗೆಜೆಟ್‌ನಲ್ಲಿ ಪ್ರಕಟಣೆ ಹೊರಡಿಸಿದ್ದರು ಹಾಗೂ ಆ ಶಾಸಕರು ಟಿವಿಕೆ ಪಕ್ಷವನ್ನು ಸೇರಿಕೊಂಡರು ಎಂದು ಎಐಎಡಿಎಂಕೆ ಹೇಳಿಕೊಂಡಿತ್ತು.

ಸಂವಿಧಾನದ 190ನೇ ವಿಧಿಯ ಪ್ರಕಾರ, ರಾಜೀನಾಮೆಯನ್ನು ಸ್ವಯಂಪ್ರೇರಿತವಾಗಿ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಪೀಕರ್ ಕಡ್ಡಾಯವಾಗಿ ವಿಚಾರಣೆಯನ್ನು ನಡೆಸಬೇಕಿತ್ತು ಎಂದು ಪಕ್ಷವು ವಾದಿಸಿತ್ತು. ಮೇ 25ರಂದು ಮಧ್ಯಾಹ್ನ 2:30ರ ಸುಮಾರಿಗೆ ರಾಜೀನಾಮೆ ನೀಡಲಾಗಿತ್ತು ಮತ್ತು ಅದೇ ದಿನ ಅದನ್ನು ಅಂಗೀಕರಿಸಿ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಎಂದು ಅದು ಪ್ರತಿಪಾದಿಸಿತ್ತು. ಶಾಸಕರಿಗೆ ಅದೇ ದಿನ ಟಿವಿಕೆ ಪಕ್ಷದ ಸದಸ್ಯತ್ವವನ್ನು ನೀಡಲಾಗಿತ್ತು ಎಂಬ ಅಂಶವು ಸಂಭಾವ್ಯ ‘ಕುದುರೆ ವ್ಯಾಪಾರ’ದ ಕಡೆಗೆ ಬೊಟ್ಟು ಮಾಡುತ್ತದೆ ಎಂದು ಹೇಳಿತ್ತು. ಸ್ಪೀಕರ್ ಸರಿಯಾದ ವಿಚಾರಣೆಯನ್ನು ನಡೆಸಿದ್ದಿದ್ದರೆ, ನಮಗೆ ಅದನ್ನು ವಿರೋಧಿಸಲು ಅನುಕೂಲವಾಗುವಂತೆ ನೋಟಿಸ್ ನೀಡಬೇಕಿತ್ತು. ಹಾಗಾಗಿ, ಸಂವಿಧಾನದ 190ನೇ ವಿಧಿಯಲ್ಲಿನ ಕಾರ್ಯವಿಧಾನವನ್ನು ಪಾಲಿಸುವ ಪ್ರಕ್ರಿಯೆಯು ಕೇವಲ ಒಂದು ನಾಟಕವಷ್ಟೇ ಆಗಿತ್ತು ಎಂದು ಎಐಎಡಿಎಂಕೆ ಪ್ರತಿಪಾದಿಸಿತ್ತು.

ಮತ್ತೊಂದೆಡೆ, ಶಾಸನಸಭೆಯ ಸದಸ್ಯರೊಬ್ಬರ ರಾಜೀನಾಮೆಯನ್ನು ಅಂಗೀಕರಿಸಿದ ಮಾತ್ರಕ್ಕೆ, ರಾಜೀನಾಮೆಗೂ ಮುನ್ನ ಅವರು ತೋರಿದ ನಡವಳಿಕೆಗೆ ಸಂಬಂಧಿಸಿದ ಅನರ್ಹತೆಯ ಪರಿಣಾಮಗಳಿಂದ ಅವರು ಮುಕ್ತರಾಗುವುದಿಲ್ಲ ಎಂದು ಶಾಸನಸಭೆಯ ಕಾರ್ಯದರ್ಶಿ ವಾದಿಸಿದ್ದರು. ಸಂವಿಧಾನದ 10ನೇ ಅನುಸೂಚಿಯಡಿ ಸದಸ್ಯರ ವಿರುದ್ಧ ಬಾಕಿ ಇರುವ ಅನರ್ಹತಾ ಪ್ರಕ್ರಿಯೆಗಳನ್ನು ಸದಸ್ಯರ ರಾಜೀನಾಮೆ ಅಂಗೀಕಾರವು ರದ್ದುಗೊಳಿಸುತ್ತದೆ, ನಿಷ್ಫಲಗೊಳಿಸುತ್ತದೆ ಅಥವಾ ವ್ಯರ್ಥವಾಗುವಂತೆ ಮಾಡುತ್ತದೆ ಎಂಬ ಮೂಲಭೂತವಾಗಿ ತಪ್ಪಾದ ಕಾನೂನು ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ಇದು ಸಂಪೂರ್ಣವಾಗಿ ತಪ್ಪು ಕಲ್ಪನೆಯನ್ನು ಆಧರಿಸಿದೆ ಎಂದು ಹೇಳಿದ್ದರು.

ಶಾಸಕರ ರಾಜೀನಾಮೆಗಳು ಸ್ವಯಂಪ್ರೇರಿತವಾಗಿದ್ದವು ಎಂಬುದರ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಅವುಗಳನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಪ್ರತಿಪಾದಿಸಿದ್ದರು. ರಾಜೀನಾಮೆ ಪತ್ರಗಳನ್ನು ತಮಗೆ ಸಲ್ಲಿಸಿದಾಗ, ರಾಜೀನಾಮೆ ನೀಡುವ ನಿರ್ಧಾರವು ಸ್ವಯಂಪ್ರೇರಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾವು ಪ್ರತಿಯೊಬ್ಬ ಶಾಸಕರನ್ನೂ ವಿಚಾರಿಸಿದ್ದಾಗಿ ಅವರು ತಿಳಿಸಿದ್ದರು. ಆ ಶಾಸಕರು ತಮ್ಮ ಸ್ವಂತ ಇಚ್ಛೆ ಮತ್ತು ನಿರ್ಧಾರದಿಂದಲೇ ರಾಜೀನಾಮೆ ನೀಡಿದ್ದಾರೆ ಹಾಗೂ ಅವರ ಈ ನಿರ್ಧಾರದ ಹಿಂದೆ ಯಾವುದೇ ರೀತಿಯ ಅನಗತ್ಯ ಪ್ರಭಾವ ಅಥವಾ ಒತ್ತಡದ ಅಂಶಗಳಿಲ್ಲ ಎಂಬ ಬಗ್ಗೆ ತೃಪ್ತಿಗೊಂಡ ನಂತರವೇ ರಾಜೀನಾಮೆಗಳನ್ನು ಅಂಗೀಕರಿಸಲಾಗಿತ್ತು ಎಂದು ತಿಳಿಸಿದ್ದರು.

ಇಂದು (ಅ.13) ಈ ವಿಷಯವನ್ನು ಕೈಗೆತ್ತಿಕೊಂಡಾಗ, ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರು ವಾದ ಮಂಡಿಸುತ್ತಾ, ಸಂವಿಧಾನದ 190(3)(b) ವಿಧಿಯ ಪ್ರಕಾರ, ಸದಸ್ಯರೊಬ್ಬರ ರಾಜೀನಾಮೆಯ ಹಿಂದಿನ ಉದ್ದೇಶದ ಬಗ್ಗೆ ವಿಚಾರಣೆ ನಡೆಸಲು ಸಭಾಧ್ಯಕ್ಷರು ಬದ್ಧರಲ್ಲ ಎಂದು ಪ್ರತಿಪಾದಿಸಿದ್ದರು. ರಾಜೀನಾಮೆಯು ನೈಜವಾಗಿದೆಯೇ ಎಂಬುದನ್ನು ಮಾತ್ರ ಪರಿಶೀಲಿಸುವುದು ಸಭಾಧ್ಯಕ್ಷರ ಕರ್ತವ್ಯವಾಗಿದ್ದು, ಪ್ರಸ್ತುತ ಪ್ರಕರಣದಲ್ಲಿ ಅದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ, ಸಂಬಂಧಪಟ್ಟ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರಾದರೂ ಆ ಪತ್ರವನ್ನು ಬರೆದಿದ್ದಾರೆ ಎಂಬ ಆರೋಪವಿಲ್ಲ ಎಂಬುದನ್ನೂ ಅವರು ಎತ್ತಿ ತೋರಿಸಿದ್ದರು. ಹೀಗಾಗಿ, ಸಭಾಧ್ಯಕ್ಷರ ನಿರ್ಧಾರವು ಸಂವಿಧಾನಕ್ಕೆ ಅನುಗುಣವಾಗಿದ್ದು, ಅದರಲ್ಲಿ ಯಾವುದೇ ಅಕ್ರಮ ಅಥವಾ ಅನುಚಿತ ಅಂಶಗಳಿಲ್ಲ ಎಂದು ವಾದಿಸಿದ್ದರು.

ರಾಜೀನಾಮೆ ನೀಡಿದ ಶಾಸಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಸ್ಥಾನ ತೆರವಾಗುವ ಪ್ರತಿಯೊಂದು ಸಂದರ್ಭವೂ ಭ್ರಷ್ಟಾಚಾರ ಅಥವಾ ಇತರ ಯಾವುದೇ ದುಷ್ಕೃತ್ಯದಿಂದಲೇ ಉಂಟಾಗುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ, ಸದಸ್ಯರು ಮತ್ತೊಂದು ಪಕ್ಷವನ್ನು ಸೇರುವ ಮುನ್ನವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು; ಹೀಗಾಗಿ, ಈ ಕ್ರಮವನ್ನು ದುರುದ್ದೇಶಪೂರಿತ ಎಂದು ಹೇಳಲಾಗುವುದಿಲ್ಲ ಎಂದು ವಾದಿಸಿದ್ದರು. ಅಲ್ಲದೆ, ಸದಸ್ಯರೊಬ್ಬರಿಗೆ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡುವ ಹಕ್ಕಿರುವುದರಿಂದ, ಇದು ಭಿನ್ನಮತ ಮತ್ತು ಪ್ರಜಾಪ್ರಭುತ್ವವನ್ನು ವ್ಯಕ್ತಪಡಿಸುವ ಸ್ಪಷ್ಟ ವಿಧಾನವಾಗಿದೆ ಎಂದೂ ಪ್ರತಿಪಾದಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ತೀವ್ರ ಹಲ್ಲೆ ನಡೆಸಿದ್ದ ಆರೋಪಿಗೆ 48 ಗಂಟೆಯೊಳಗೆ ಜಾಮೀನು, ಹೂಮಾಲೆ ಹಾಕಿ ಸ್ವಾಗತ!

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಹಿಂದೂ ರಕ್ಷಾ ದಳದ ನಾಲ್ವರು ಕಾರ್ಯಕರ್ತರು ಬಿಡುಗಡೆಯಾದ ಬಳಿಕ, ಅವರಲ್ಲಿ ಒಬ್ಬರಿಗೆ ಹೂಮಾಲೆ ಹಾಕಿ, ಹೂವುಗಳನ್ನು ಸುರಿದು...

SC, ST ಮೀಸಲಾತಿ ಹೆಚ್ಚಳ ರದ್ದು | ಸುಪ್ರೀಂ ಕೋರ್ಟ್‌ಗೆ ಹೋಗುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ : ಡಿಸಿಎಂ ಪರಮೇಶ್ವರ್

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಮುಂದಿನ ಕಾನೂನಾತ್ಮಕ ಕ್ರಮಗಳ...

ಬೆಂಗಳೂರಿನಲ್ಲಿ SIR ವಿರೋಧಿ ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: “ಶಾಂತಿಯುತ ಹಕ್ಕು ರಕ್ಷಿಸಿ, ಪೊಲೀಸರ ನಡವಳಿಕೆ ಮರುಪರಿಶೀಲಿಸಲಾಗುವುದು” – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿಯುತ ಮೆರವಣಿಗೆಯ...

SC, ST ಮೀಸಲಾತಿ ಹೆಚ್ಚಳ ರದ್ದು | ಹಿಂದಿನ ಬಿಜೆಪಿ ಸರ್ಕಾರದ ಬೇಜವಾಬ್ದಾರಿತನ ಕಾರಣ; ಡಿಸಿಎಂ ಪರಮೇಶ್ವರ್

ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿಯನ್ನು ಶೇಕಡ 50ರ ಮಿತಿಗಿಂತ ಹೆಚ್ಚಿಸುವ ಕಾಯ್ದೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ (ಅ.12) ರದ್ದುಗೊಳಿಸಿದೆ. ಈ ಮೀಸಲಾತಿ ಹೆಚ್ಚಳವು 'ಸಾಂವಿಧಾನಿಕವಾಗಿ ಅಸಮ್ಮತ' ಎಂದು...

ದೆಹಲಿ ಪ್ರತಿಭಟನೆ: ಇಂಡಿಯಾ ಬ್ಲಾಕ್ ಸಂಸದರು, ನಾಗರಿಕ ಸಮಾಜ ಮತ್ತು ವಿದ್ಯಾರ್ಥಿ ಸಂಘಟನೆಗಳೊಂದಿಗೆ ರಾಹುಲ್ ಗಾಂಧಿ ಚಹಾ ಕೂಟ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಚುನಾವಣಾ ಅಕ್ರಮಗಳು ಮತ್ತು ‘ಮತ ಚೋರಿ’ ಆರೋಪಗಳ ವಿರುದ್ಧ ದೇಶಾದ್ಯಂತ ವಿರೋಧ ಪಕ್ಷಗಳ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...

ಪ್ರತಿಭಟನೆಯ ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತರ ಮೇಲೆ ದೌರ್ಜನ್ಯ : ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಸುಪ್ರೀಂ ಕೋರ್ಟ್

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮಹಿಳಾ ಪತ್ರಕರ್ತೆಯರ ಮೇಲೆ ನಡೆದ ಹಲ್ಲೆಯ ಕುರಿತು ವಿವರಣೆ ನೀಡಲು ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕವಾಗಿ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಅ.13)...

ಪ್ರಧಾನಿ ಮೋದಿ ವಿರುದ್ಧ ಹೇಳಿಕೆ : ರಾಹುಲ್ ಗಾಂಧಿ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು "ಚೋರೋ ಕೆ ಸರ್ದಾರ್" (ಕಳ್ಳರ ಸರದಾರ) ಮತ್ತು "ಕಮಾಂಡರ್-ಇನ್-ಚೀಫ್" (ಕಳ್ಳರ ಸೇನಾಧಿಪತಿ) ಎಂದು ನಿಂದಿಸಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ, ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ...

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಪಾರ್ಲಿಮೆಂಟರಿ ಬೋರ್ಡ್ ಸದಸ್ಯೆ ಹಾಗೂ ಮಾಜಿ ಸಂಸದೆ ಡಾ. ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ. ಪ್ರಸ್ತುತ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ...

DELHI PROTEST : ಜಂತರ್ ಮಂತರ್ ಪ್ರವೇಶಿಸಿದ ಸಿಜೆಪಿ ನಾಯಕರು ಪೊಲೀಸ್ ವಶಕ್ಕೆ

ನಿರ್ಬಂಧಗಳ ನಡುವೆ ಜಂತರ್ ಮಂತರ್ ಪ್ರವೇಶಿಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ, ಅಜಿಂಕ್ಯ ಶಿಂದೆ ಮತ್ತು ಇತರರನ್ನು ದೆಹಲಿ ಪೊಲೀಸರು ಮಂಗಳವಾರ (ಅ.13) ವಶಕ್ಕೆ ಪಡೆದಿದ್ದಾರೆ....

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ: ಚುನಾವಣಾ ಆಯೋಗಕ್ಕೆ ಸವಾಲು

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್...