Homeಮುಖಪುಟಅಸ್ಸಾಂನಲ್ಲಿ ಎರಡು ದಿನಗಳಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಒಕ್ಕಲೆಬ್ಬಿಸಲಾಗಿದೆ: 10ಕ್ಕೂ ಹೆಚ್ಚು ಮಸೀದಿಗಳ ಧ್ವಂಸ

ಅಸ್ಸಾಂನಲ್ಲಿ ಎರಡು ದಿನಗಳಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಒಕ್ಕಲೆಬ್ಬಿಸಲಾಗಿದೆ: 10ಕ್ಕೂ ಹೆಚ್ಚು ಮಸೀದಿಗಳ ಧ್ವಂಸ

- Advertisement -
- Advertisement -

ಅಸ್ಸಾಂ: ಅಸ್ಸಾಂನ ಬಿಜೆಪಿ ನೇತೃತ್ವದ ಸರ್ಕಾರ ಎರಡು ದಿನಗಳ ಅತಿಕ್ರಮಣ ವಿರೋಧಿ ತೆರವು ಕಾರ್ಯಾಚರಣೆಯಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದು, 10ಕ್ಕೂ ಹೆಚ್ಚು ಮಸೀದಿಗಳನ್ನು ಧ್ವಂಸಗೊಳಿಸಿದೆ. ನಾಗಾಂವ್, ಗೋಲಾಘಾಟ್ ಮತ್ತು ಹೊಜೈ ಜಿಲ್ಲೆಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬಹುತೇಕ ಬಂಗಾಳಿ ಮುಸ್ಲಿಂ ಕುಟುಂಬಗಳು ಮನೆ ಕಳೆದುಕೊಂಡಿವೆ. ದಶಕಗಳಿಂದ ಈ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಸರ್ಕಾರದ ತೆರವು ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವ ನಡುವೆಯೇ ಈ ಕಾರ್ಯಾಚರಣೆ ನಡೆದಿದೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ. 

ಕಾರ್ಯಾಚರಣೆಯ ಎರಡನೇ ದಿನವಾದ ಭಾನುವಾರ ನಾಗಾಂವ್ ಜಿಲ್ಲೆಯ ಲುಟುಮರಿ ಲಾಂಗ್‌ಜಾಪ್ ಮೀಸಲು ಅರಣ್ಯ ಪ್ರದೇಶದಲ್ಲಿ 600ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ ಎಂಬುದು ಅಧಿಕಾರಿಗಳ ವಾದ. ಆದರೆ, ಅಲ್ಲಿನ ನಿವಾಸಿಗಳು ತಾವು ಅಕ್ರಮವಾಗಿ ನೆಲೆಸಿಲ್ಲ ಎಂದು ಹೇಳಿದ್ದು, ಸರ್ಕಾರವೇ ಹಲವು ದಶಕಗಳ ಹಿಂದೆ ತಮ್ಮನ್ನು ಆ ಪ್ರದೇಶದಲ್ಲಿ ನೆಲೆಸುವಂತೆ ಮಾಡಿತ್ತು ಎಂದು ಪ್ರತಿಪಾದಿಸಿದ್ದಾರೆ.

ಇದಕ್ಕೂ ಹಿಂದಿನ ದಿನವಾದ ಶನಿವಾರ ಮೂರು ಜಿಲ್ಲೆಗಳಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು. ನಾಗಾಂವ್ ಜಿಲ್ಲೆಯಲ್ಲಿ 336, ಹೊಜೈ ಜಿಲ್ಲೆಯಲ್ಲಿ 152 ಮತ್ತು ಗೋಲಾಘಾಟ್ ಜಿಲ್ಲೆಯಲ್ಲಿ 59 ಕುಟುಂಬಗಳು ಸೇರಿದಂತೆ ಒಟ್ಟು 547 ಕುಟುಂಬಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರಿಸಲಾಗಿತ್ತು. ಎರಡು ದಿನಗಳ ಕಾರ್ಯಾಚರಣೆಯಲ್ಲಿ ಒಟ್ಟು 1,100ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡಿವೆ ಎಂದು ವರದಿಯಾಗಿದೆ.

ಲುಟುಮರಿ ಪ್ರದೇಶದಲ್ಲಿ ತೆರವುಗೊಳಿಸಲಾದ ಕುಟುಂಬಗಳು ಮೀಸಲು ಅರಣ್ಯದ 300 ಹೆಕ್ಟೇರ್‌ಗೂ ಹೆಚ್ಚು ಭೂಪ್ರದೇಶದಲ್ಲಿ ಹಲವು ದಶಕಗಳಿಂದ ವಾಸಿಸುತ್ತಿದ್ದವು. ತಮ್ಮನ್ನು ಅತಿಕ್ರಮಣಕಾರರು ಎಂದು ಗುರುತಿಸಿರುವ ಸರ್ಕಾರದ ಕ್ರಮವನ್ನು ನಿವಾಸಿಗಳು ವಿರೋಧಿಸಿದ್ದಾರೆ. ತಾವು ಮೂಲತಃ ಅರಣ್ಯ ಇಲಾಖೆಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ಮತ್ತು ಸರ್ಕಾರದ ವ್ಯವಸ್ಥೆಯ ಭಾಗವಾಗಿಯೇ ಇಲ್ಲಿ ನೆಲೆಸಿದ್ದವರು ಎಂದು ಅವರು ಹೇಳಿದ್ದಾರೆ. ಈ ಕುರಿತು ಸ್ಕ್ರೋಲ್ ವರದಿ ಮಾಡಿದೆ.

ಲುಟುಮರಿ ಪ್ರದೇಶದ ನಿವಾಸಿ, 44 ವರ್ಷದ ಅಬ್ದುಲ್ ನೂರ್ ಅವರ ಮನೆ ಕೂಡ ಭಾನುವಾರ ನೆಲಸಮವಾಗಿದೆ. 1974ರಲ್ಲಿ ಸರ್ಕಾರವೇ ತಮ್ಮ ಕುಟುಂಬಗಳನ್ನು ಇಲ್ಲಿ ನೆಲೆಸುವಂತೆ ಮಾಡಿತ್ತು ಎಂದು ಅವರು ಹೇಳಿದ್ದಾರೆ. ತಾವು ಮೂಲತಃ ಸಮೀಪದ ಜೂರಿಯಾ ಪಟ್ಟಣದವರಾಗಿದ್ದರೂ, ತಮ್ಮ ಪೂರ್ವಜರು ಭೂರಹಿತರಾಗಿದ್ದ ಕಾರಣ ಸರ್ಕಾರ ಈ ವ್ಯವಸ್ಥೆ ಮಾಡಿತ್ತು ಎಂದು ಅವರು ವಿವರಿಸಿದ್ದಾರೆ. ಒಟ್ಟು 300 ಭೂರಹಿತ ಕುಟುಂಬಗಳಿಗೆ ತಲಾ ನಾಲ್ಕು ಬಿಘಾ ಭೂಮಿಯನ್ನು ನೀಡಲಾಗಿತ್ತು ಎಂಬುದು ಅವರ ಹೇಳಿಕೆ.

ಈ ಪ್ರದೇಶದ ನಿವಾಸಿಗಳ ತೆರವಿಗೆ ಸಂಬಂಧಿಸಿದ ವಿವಾದ ಹೊಸದಲ್ಲ. ಈ ವರ್ಷದ ಜೂನ್‌ನಲ್ಲೇ ಅಖಿಲ ಭಾರತ ಅರಣ್ಯ ಕಾರ್ಮಿಕರ ಒಕ್ಕೂಟ ಅಸ್ಸಾಂ ಸರ್ಕಾರಕ್ಕೆ ಮನವಿ ಸಲ್ಲಿಸಿ, ಲುಟುಮರಿ ಲಾಂಗ್‌ಜಾಪ್ ಮೀಸಲು ಅರಣ್ಯದಿಂದ ಜನರನ್ನು ಒಕ್ಕಲೆಬ್ಬಿಸುವ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸಿತ್ತು. ಅಲ್ಲಿನ ನಾಲ್ಕು ಗ್ರಾಮಗಳ ನಿವಾಸಿಗಳು ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದಿದ್ದ ‘ತೌಂಗ್ಯಾ’ ಅರಣ್ಯ ನಿರ್ವಹಣಾ ವ್ಯವಸ್ಥೆಯ ಅಡಿಯಲ್ಲಿ ನೆಲೆಸಿದ್ದಾರೆ. ಆದ್ದರಿಂದ ಅವರನ್ನು ಸಾಮಾನ್ಯ ಅತಿಕ್ರಮಣಕಾರರಂತೆ ಪರಿಗಣಿಸಬಾರದು ಎಂಬುದು ಒಕ್ಕೂಟದ ವಾದವಾಗಿತ್ತು.

ಈ ತೆರವು ಕಾರ್ಯಾಚರಣೆಯ ವೇಳೆ 50 ವರ್ಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿದ್ದ ಕೆಲವು ಮಸೀದಿಗಳು ಸೇರಿದಂತೆ 10ಕ್ಕೂ ಹೆಚ್ಚು ಮಸೀದಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸ್ಕ್ರೋಲ್ ವರದಿ ತಿಳಿಸಿದೆ. ಮನೆಗಳ ಜೊತೆಗೆ ಧಾರ್ಮಿಕ ಕಟ್ಟಡಗಳೂ ನೆಲಸಮವಾಗಿರುವುದು ಈ ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಪರಿಣಾಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಸ್ಸಾಂನಲ್ಲಿ ಅಂಚಿನಲ್ಲಿರುವ ಸಮುದಾಯಗಳು, ಅದರಲ್ಲೂ ವಿಶೇಷವಾಗಿ ಬಂಗಾಳಿ ಮುಸ್ಲಿಮರು, ತೆರವು ಕಾರ್ಯಾಚರಣೆಗಳಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಇತ್ತೀಚಿನ ಕಾರ್ಯಾಚರಣೆಯೂ ಈ ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ಅಭಿಯಾನದ ಭಾಗವಾಗಿದೆ ಎಂದು ವಿಮರ್ಶಕರು ಆಕ್ಷೇಪಿಸುತ್ತಿದ್ದಾರೆ. ಮತ್ತೊಂದೆಡೆ, ಸರ್ಕಾರದ ಕ್ರಮ ಅರಣ್ಯ ಭೂಮಿಯಲ್ಲಿನ ಅತಿಕ್ರಮಣ ತೆರವುಗೊಳಿಸುವ ಉದ್ದೇಶ ಹೊಂದಿದೆ ಎಂಬುದು ಆಡಳಿತದ ನಿಲುವು.

ದಶಕಗಳಿಂದ ವಾಸಿಸುತ್ತಿದ್ದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳ ಪುನರ್ವಸತಿ, ಅವರ ಭೂಮಿಯ ಮೇಲಿನ ಹಕ್ಕು ಮತ್ತು ಸರ್ಕಾರದ ಹಿಂದಿನ ನೆಲೆಸುವಿಕೆ ವ್ಯವಸ್ಥೆಯ ಕುರಿತು ಈಗ ಪ್ರಶ್ನೆಗಳು ಎದುರಾಗಿವೆ. ವಿಶೇಷವಾಗಿ, ಸರ್ಕಾರವೇ ನೆಲೆಸಲು ಅವಕಾಶ ನೀಡಿತ್ತು ಎನ್ನುವ ನಿವಾಸಿಗಳ ಹೇಳಿಕೆಗಳ ಹಿನ್ನೆಲೆಯಲ್ಲಿ, ಅವರ ಹಕ್ಕುಗಳನ್ನು ಪರಿಶೀಲಿಸದೆ ನಡೆಸಿದ ತೆರವು ಕ್ರಮದ ನ್ಯಾಯಸಮ್ಮತತೆ ಕುರಿತು ಚರ್ಚೆ ತೀವ್ರಗೊಂಡಿದೆ. ಮನೆಗಳ ಜೊತೆಗೆ ದಶಕಗಳ ಬದುಕು ಮತ್ತು ಧಾರ್ಮಿಕ ಕೇಂದ್ರಗಳನ್ನೂ ಕಳೆದುಕೊಂಡಿರುವ ಕುಟುಂಬಗಳಿಗೆ ನ್ಯಾಯ ಹಾಗೂ ಪುನರ್ವಸತಿ ದೊರೆಯುತ್ತದೆಯೇ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಉರುವಲು ಸಂಗ್ರಹಿಸುತ್ತಿದ್ದ ಮೂವರನ್ನು ಕೊಂದ ಉಗ್ರರು; ಸಿಎಂ ನಿವಾಸದ ಮುಂದೆ ಶವಗಳನ್ನಿಟ್ಟು ಸ್ಥಳೀಯರ ಪ್ರತಿಭಟನೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಡಿನಲ್ಲಿ ಉರುವಲು ಸಂಗ್ರಹಿಸಲು ತೆರಳಿದ್ದ ಮೂವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿರುವ ಬೆಟ್ಟ ಪ್ರದೇಶದಲ್ಲಿ ಸೋಮವಾರ ಈ ದಾಳಿ ನಡೆದಿದೆ....

ಆಂಧ್ರ ಪ್ರದೇಶ | ಹಿಂಸಾಚಾರದಿಂದ ಮುನ್ಸಿಪಲ್ ಚುನಾವಣೆ ನಾಮಪತ್ರ ಸಲ್ಲಿಕೆಗೆ ಅಡ್ಡಿ ಆರೋಪ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈಎಸ್‌ಆರ್‌ ಕಾಂಗ್ರೆಸ್

ಆಂಧ್ರ ಪ್ರದೇಶದಲ್ಲಿ ನಡೆದ ವ್ಯಾಪಕ ಹಿಂಸಾಚಾರದಿಂದಾಗಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ಸೋಮವಾರ (ಅಕ್ಟೋಬರ್ 19) ಸುಪ್ರೀಂ ಕೋರ್ಟ್‌ನ...

ಮೂಲಭೂತ ಸೌಕರ್ಯ- ವಿದ್ಯಾರ್ಥಿ ಸಂಘಕ್ಕಾಗಿ ಉಪವಾಸ ಸತ್ಯಾಗ್ರಹ; ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ಜಾಮಿಯಾ ಆಡಳಿತ ಮಂಡಳಿ

ದೆಹಲಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಒಂದು ವಾರ ತುಂಬಿದ ಹಿನ್ನೆಲೆಯಲ್ಲಿ, ಸೋಮವಾರ (ಅ.19) ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಏಳು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ವಿದ್ಯಾರ್ಥಿಗಳು...

2027ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಇಚ್ಛೆ: ಕೊಲೆ ಅಪರಾಧಿಯ ಶಿಕ್ಷೆಗೆ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್!

ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಟಿಕೆಟ್‌ನಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿರುವ ಕೊಲೆ ಪ್ರಕರಣದ ಅಪರಾಧಿಯ ಜೀವಾವಧಿ ಜೈಲು ಶಿಕ್ಷೆ...

SIR ವಿರೋಧಿ ಹೋರಾಟಕ್ಕೆ ಧುಮುಕಿದ ರೈತ, ದಲಿತ ಸಂಘಟನೆಗಳು : ಅ.23ರಂದು ರಾಜ್ಯದಾದ್ಯಂತ ಪ್ರತಿಭಟನೆ

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಹಾಗೂ ಚುನಾವಣಾ ಆಯೋಗದ ಏಕಪಕ್ಷೀಯ ತೀರ್ಮಾನಗಳನ್ನು ವಿರೋಧಿಸಿ ಅಕ್ಟೋಬರ್ 23ರಂದು ರಾಜ್ಯದಾದ್ಯಂತ ಬೃಹತ್ ಜನತಾ ಮೆರವಣಿಗೆ ಮತ್ತು 'ಜಂತರ್ ಮಂತರ್' ಮಾದರಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಸ್ಐಆರ್ ವಿರೋಧಿ...

ಸೌರವ್ ದಾಸ್ – ಆಶುತೋಶ್ ರಾಂಕಾ ಬಿಡುಗಡೆ ಕುರಿತು ಸಿಗದ ಸ್ಪಷ್ಟತೆ

ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಸೋಮವಾರ ಮಧ್ಯಾಹ್ನ ಹೊಸ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ಮುಂದೆ ಹಾಜರುಪಡಿಸಬೇಕಿತ್ತು....

ಸುಳ್ಳು ಅಫಿಡವಿಟ್‌ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಮತದಾರರು ಖಾಸಗಿ ದೂರು ದಾಖಲಿಸಬಹುದು : ಸುಪ್ರೀಂ ಕೋರ್ಟ್

'ಜನತಾ ಪ್ರಾತಿನಿಧ್ಯ ಕಾಯ್ದೆ 1951'ರ ಸೆಕ್ಷನ್ 125A ಅಡಿಯಲ್ಲಿ ಬರುವ ಅಪರಾಧಗಳಿಗೆ ಸಂಬಂಧಿಸಿದಂತೆ, ಚುನಾಯಿತ ಅಭ್ಯರ್ಥಿಗಳು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಅಥವಾ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ, ಖಾಸಗಿ...

ಉತ್ತರ ಪ್ರದೇಶ| ಜಾಹೀರಾತು ವಿವಾದ; ಹಿಟ್ಟಿನ ಗಿರಣಿಯಲ್ಲಿ ಹಲ್ಲೆಗೊಳಗಾಗಿದ್ದ ಹಿರಿಯ ಪತ್ರಕರ್ತ ಸಾವು

ಉತ್ತರ ಪ್ರದೇಶದ ಹಪುರ್‌ನಲ್ಲಿರುವ ಹಿಂದಿ ದಿನಪತ್ರಿಕೆ 'ದೈನಿಕ್ ಜನ್ವಾಣಿ'ಯ ಪತ್ರಕರ್ತರೊಬ್ಬರು ಹಿಟ್ಟಿನ ಗಿರಣಿಯಲ್ಲಿ ಭಾಣುವಾರ ನಡೆದ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ. ಜಾಹೀರಾತು ಕೇಳಲು ತೆರಳಿದ್ದ ವೇಳೆ ಅವರನ್ನು ನಕಲಿ ಪತ್ರಕರ್ತ ಎಂದು ಆರೋಪಿಸಿ ಹಲ್ಲೆ...

ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ : ಬಾಂಡ್ ಸಲ್ಲಿಸುವಂತೆ ಪೊಲೀಸರಿಂದ ನೋಟಿಸ್; ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ವಿಚಾರಣೆಯ ಅವಧಿಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಒಬ್ಬರ ಜಾಮೀನಿನೊಂದಿಗೆ (ಶ್ಯೂರಿಟಿ) 10,000 ರೂ. ಮೌಲ್ಯದ ಬಾಂಡ್ (ಮುಚ್ಚಳಿಕೆ ಪತ್ರ) ಸಲ್ಲಿಸುವಂತೆ ದೆಹಲಿ ಪೊಲೀಸರು ತಮಗೆ ನೀಡಿದ್ದ ನೋಟಿಸ್ ಅನ್ನು ಪ್ರಶ್ನಿಸಿ ವಿದ್ಯಾರ್ಥಿ ಸಂಘಟನೆ...

ಜೆಎನ್‌ಯು ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ; ರಾಷ್ಟ್ರಪತಿಗಳಿಗೆ ಪತ್ರ ಬರೆದ ಸಿಪಿಐ(ಎಂ) ಸಂಸದ ಜಾನ್ ಬ್ರಿಟಾಸ್

ತಮ್ಮ ಪ್ರಮುಖ 13 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಜೆಎನ್‌ಯುಎಸ್‌ಯು) ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ವಿಚಾರದಲ್ಲಿ ತುರ್ತು ಮಧ್ಯಪ್ರವೇಶ ಕೋರಿ ಕಮ್ಯೂನಿಸ್ಟ್...