Homeಮುಖಪುಟಪಂಜಾಬ್ : ಮೂವರು ಎಎಪಿ ಶಾಸಕರು ಬಿಜೆಪಿ ಸೇರ್ಪಡೆ; ವಿಧಾನಸಭೆ ಚುನಾವಣೆಗೆ ಮುನ್ನ ಮಹತ್ವದ ಬೆಳವಣಿಗೆ

ಪಂಜಾಬ್ : ಮೂವರು ಎಎಪಿ ಶಾಸಕರು ಬಿಜೆಪಿ ಸೇರ್ಪಡೆ; ವಿಧಾನಸಭೆ ಚುನಾವಣೆಗೆ ಮುನ್ನ ಮಹತ್ವದ ಬೆಳವಣಿಗೆ

- Advertisement -
- Advertisement -

ಪಂಜಾಬ್ ವಿಧಾನಸಭಾ ಚುನಾವಣೆಗೆ (2027) ಮುನ್ನ ಆಮ್ ಆದ್ಮಿ ಪಾರ್ಟಿ (ಎಎಪಿ) ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಸೋಮವಾರ (ನ.2) ಮೂವರು ಶಾಸಕರಾದ ಹರ್ಮೀತ್ ಸಿಂಗ್ ಪಠಾನ್‌ಮಜ್ರಾ, ಚೇತನ್ ಸಿಂಗ್ ಜೌರಾಮಜ್ರಾ ಮತ್ತು ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ವಿಧಾನಸಭಾ ಚುನಾವಣೆಗೆ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಎಪಿ ಪ್ರಕಟಿಸಿದ ಬೆನ್ನಲ್ಲೇ, ಪಠಾನ್‌ಮಜ್ರಾ ಮತ್ತು ಜೌರಾಮಜ್ರಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಪಕ್ಷದೊಳಗೆ ಅಸಮಾಧಾನ ಹೆಚ್ಚುತ್ತಿರುವ ನಡುವೆಯೇ ನಡೆದಿದೆ.

ಇದಕ್ಕೂ ಮುನ್ನ, ಎಎಪಿಯಿಂದ ಅಮಾನತುಗೊಂಡಿದ್ದ ಶಾಸಕ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಪಂಜಾಬ್ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದರು. ಅಮೃತಸರ ಉತ್ತರ ಕ್ಷೇತ್ರದ ಶಾಸಕರಾಗಿರುವ ಸಿಂಗ್ ಅವರು, ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ಕಳುಹಿಸಿರುವುದಾಗಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸನೌರ್‌ ಶಾಸಕ ಪಠಾನ್‌ಮಜ್ರಾ, ಸಮಾನಾ ಶಾಸಕ ಜೌರಾಮಜ್ರಾ ಮತ್ತು ಅಮೃತಸರ ಉತ್ತರದ ಸಿಂಗ್ ಅವರು, ಪಂಜಾಬ್ ಬಿಜೆಪಿ ಉಸ್ತುವಾರಿ ಸತೀಶ್ ಪೂನಿಯಾ, ಸಹ-ಉಸ್ತುವಾರಿ ವೀರೇಂದ್ರ ಸಚ್‌ದೇವ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಕೇವಲ್ ಸಿಂಗ್ ಧಿಲ್ಲೋನ್ ಅವರ ಸಮ್ಮುಖದಲ್ಲಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾತನಾಡಿದ ಕುನ್ವರ್ ವಿಜಯ್ ಪ್ರತಾಪ್ ಸಿಂಗ್, ಎಎಪಿಯ ಕಳೆದ ಐದು ವರ್ಷಗಳನ್ನು ಒಂದು “ಇಂಟರ್ನ್‌ಶಿಪ್ ಅವಧಿ” ಎಂದು ಬಣ್ಣಿಸಿದ್ದಾರೆ. “ಇಂದು ಎಎಪಿಯಲ್ಲಿನ ನನ್ನ ಐದು ವರ್ಷಗಳ ಇಂಟರ್ನ್‌ಶಿಪ್ ಕೊನೆಗೊಂಡಿದೆ ಮತ್ತು ನಾನು ಅಧಿಕೃತವಾಗಿ ಬಿಜೆಪಿಯನ್ನು ಸೇರುತ್ತಿದ್ದೇನೆ. ನಮ್ಮ ಅನುಭವವನ್ನು ಬಳಸಿಕೊಂಡು, ಪಂಜಾಬ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಮರುಸ್ಥಾಪಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ” ಎಂದು ಹೇಳಿದ್ದಾರೆ.

ಪಂಜಾಬ್ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ ಎಂದಿರುವ ಸಿಂಗ್, “ಪಂಜಾಬ್ ಸಿಂಧ್ ಗುಜರಾತ್ ಮರಾಠ” ಎಂಬ ಸಾಲುಗಳನ್ನು ಉಲ್ಲೇಖಿಸಿ, “ಪಂಜಾಬ್‌ಗೆ ಆದ್ಯತೆ ನೀಡಲಾಗಿತ್ತಾದರೂ, ಇಂದು ಅದು ಶೋಚನೀಯ ಸ್ಥಿತಿಯಲ್ಲಿದೆ” ಎಂದು ಹೇಳಿಕೆ ನೀಡಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರ ದೂರದೃಷ್ಟಿಯೊಂದಿಗೆ ಪಂಜಾಬ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಮರುಸ್ಥಾಪಿಸಬಹುದು. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಹೇಗೆ ಕಾರ್ಯನಿರ್ವಹಿಸಿವೆ ಎಂಬುದನ್ನು ನಾವು ನೋಡಿದ್ದೇವೆ. ನಮಗೆ ವಹಿಸಲಾಗುವ ಯಾವುದೇ ಜವಾಬ್ದಾರಿಯನ್ನು ನಾವು ಶ್ರದ್ಧೆಯಿಂದ ನಿರ್ವಹಿಸುತ್ತೇವೆ” ಎಂದು ಸಿಂಗ್ ತಿಳಿಸಿದ್ದಾರೆ.

ಪಂಜಾಬ್ “ದೇವರ ನಾಡು” ಎಂದು ಹೇಳಿದ ಜೌರಾಮಜ್ರಾ, ಕಳೆದ ಐದು ವರ್ಷಗಳಲ್ಲಿ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ ಎಂದಿದ್ದಾರೆ. ರಾಜ್ಯದಲ್ಲಿ ಗಣಿಗಾರಿಕೆ ಮಾಫಿಯಾ ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಹಗರಣಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ರಾಜ್ಯವನ್ನು ಸುಸ್ಥಿರಗೊಳಿಸಲು ಇಲ್ಲಿ “ಡಬಲ್ ಇಂಜಿನ್” ಸರ್ಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ.

ಪಠಾನ್‌ಮಜ್ರಾ ಅವರು ಎಎಪಿ ಸರ್ಕಾರದ ಕೆಲಸಗಳನ್ನು ಟೀಕಿಸುತ್ತಾ, ಪಂಜಾಬ್ ಈಗ “ಉಡ್ತಾ ಪಂಜಾಬ್” (ಮಾದಕವಸ್ತುಗಳ ಪಿಡುಗಿಗೆ ತುತ್ತಾದ ಪಂಜಾಬ್) ಎಂದು ಕರೆಯಲ್ಪಡುತ್ತಿದೆ. ಆರಂಭದಲ್ಲಿ ಎಎಪಿ ಆಕರ್ಷಕ ದೃಷ್ಟಿಕೋನವನ್ನು ಮುಂದಿಟ್ಟಿತ್ತಾದರೂ, ಧ್ವನಿ ಎತ್ತಿದವರನ್ನು ಕಡೆಗಣಿಸಲಾಯಿತು. ಪಂಜಾಬ್ “ಉಭರ್ತಾ ಪಂಜಾಬ್” (ಅಭಿವೃದ್ಧಿ ಹೊಂದುತ್ತಿರುವ ಪಂಜಾಬ್) ಆಗಿ ಬದಲಾಗಬೇಕು ಎಂದಿದ್ದು, ಸರ್ಕಾರವು ಸುಮಾರು 2.5 ಲಕ್ಷ ಕೋಟಿ ರೂಪಾಯಿ ಸಾಲ ಪಡೆದು, ರಾಜ್ಯವನ್ನು “ನಾಶಪಡಿಸಿದೆ” ಎಂದು ದೂರಿದ್ದಾರೆ.

ಪೂನಿಯಾ ಅವರು ಎಎಪಿ ಮೂವರು ಬಂಡಾಯ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಅವರ ರಾಜಕೀಯ, ಸಾಮಾಜಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯು ಪಕ್ಷವನ್ನು ಹಾಗೂ ಪಂಜಾಬ್‌ನಲ್ಲಿ ಪಕ್ಷದ ಗೆಲುವಿನ ಅಭಿಯಾನವನ್ನು ಬಲಪಡಿಸಲಿದೆ ಎಂದಿದ್ದಾರೆ. ಪಂಜಾಬ್‌ನಲ್ಲಿ ಬಿಜೆಪಿ ಪರವಾದ ಒಲವು ಹಾಗೂ ಆಡಳಿತಾರೂಢ ಎಎಪಿ ವಿರುದ್ಧ ಅಸಮಾಧಾನದ ಅಲೆ ಇದೆ. ಮಾದಕವಸ್ತುಗಳ ಹಾವಳಿ ಪಂಜಾಬ್‌ನಲ್ಲಿರುವ ಅತಿದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.








ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ : 2 ಗ್ರಾಮಗಳ 1,895 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ

ರಾಮನಗರ ತಾಲೂಕಿನ ಬಿಡದಿ ಹೋಬಳಿಯಲ್ಲಿರುವ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮಗಳಲ್ಲಿ, ಪ್ರಸ್ತಾವಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' (GBIT) ಯೋಜನೆಗಾಗಿ 1,895 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ...

‘ಹೆಸರುಗಳನ್ನು ತೆಗೆದುಹಾಕುವುದು ಕಳ್ಳತನವಲ್ಲ’; ಎಸ್‌ಐಆರ್ ಬಗ್ಗೆ ಪ್ರತಿಪಕ್ಷಗಳು ಗೊಂದಲ ಹರಡುತ್ತಿವೆ: ಸಂಬಿತ್ ಪಾತ್ರ

ವಾರಾಣಸಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಪುರಿ ಸಂಸದ ಸಂಬಿತ್ ಪಾತ್ರ ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ...

ರಾಮಮಂದಿರ ದೇಣಿಗೆ ದುರುಪಯೋಗ: ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಬಿಟ್ಟ ಸುಪ್ರೀಂ: ಆರೋಪಗಳ ಅರ್ಹತೆ ಬಗ್ಗೆ ಪ್ರತಿಕ್ರಿಯೆ ಇಲ್ಲ

ನವದೆಹಲಿ: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ...

ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ ತಿರಸ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಜನಪರ ಸಂಘಟನೆಗಳ ಒತ್ತಾಯ

ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿರುವ ಎಸ್‌ಐಆರ್‌ (ಎಸ್‌ಐಆರ್) ಅಂತಿಮ ಮತದಾರರ ಪಟ್ಟಿಯನ್ನು ಕರ್ನಾಟಕ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಬೇಕು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ಪಟ್ಟಿಯನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ಪ್ರಕರಣ: ಪವರ್ ಟಿವಿ ರಾಕೇಶ್ ಶೆಟ್ಟಿ ಮನೆ, ಕಚೇರಿ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಲಾಗಿದೆ ಎನ್ನಲಾದ ವಿವಾದಾತ್ಮಕ ಸ್ಟಿಂಗ್ ವಿಡಿಯೋ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಪ್ರಕರಣದ ಪ್ರಮುಖ ಶಂಕಿತರಾಗಿರುವ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ...

ಮರ ಕತ್ತರಿಸುವ ಯಂತ್ರದಿಂದ ದಾಳಿ ಪ್ರಕರಣ : ಗಾಯಾಳು ಆಂಧ್ರ ವಿದ್ಯಾರ್ಥಿನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ, ಆರೋಪಿಗೆ ಪೊಲೀಸರಿಂದ ಗುಂಡೇಟು

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡುವಿನ ಸರ್ಕಾರಿ ಶಾಲೆಯ ತರಗತಿಯೊಳಗೆ ಹೇಮಂತ್ ಎಂಬಾತ ಮರ ಕತ್ತರಿಸುವ ಯಂತ್ರದಿಂದ ನಡೆಸಿದ ಭೀಕರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿ ಗೋಪಿಕಾಳನ್ನು, ಘಟನೆ ನಡೆದ ಕೆಲವೇ...

“ಮೋದಿ ಎಂಬ ರಾವಣನನ್ನು ಕೆಳಗಿಳಿಸಲು ವಾನರ ಸೇನೆ ಬಂದಿದೆ”: ದೆಹಲಿಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಾಗ್ದಾಳಿ!

ದೇಶದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಸದ್ದಿಲ್ಲದೆ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲ್ಲಾಡಿಸಲಾಗುತ್ತಿದೆ ಎಂಬ ಆರೋಪಗಳ ನಡುವೆ, ರಾಜಧಾನಿ ನವದೆಹಲಿ ಬೃಹತ್ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. 'ಇಂಡಿಯಾ' (INDIA) ಒಕ್ಕೂಟ...

ಕರ್ನಾಟಕ SIR | ಎರಡು ಫಾರಂ-6 ಹಾಕಿದ ವ್ಯಕ್ತಿಗೆ 5 ವೋಟರ್ ಐಡಿ ನೀಡಿದ ಚು. ಆಯೋಗ!

ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಕರ್ನಾಟಕದ ಮತದಾರರ ಪಟ್ಟಿ ಶುದ್ದವಾಗಿದೆ. ಅನರ್ಹ ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಒ) ಅನ್ಬುಕುಮಾರ್ ಪ್ರತಿಪಾದಿಸುತ್ತಿದ್ದಾರೆ. ಆದರೆ, ಅಕ್ಟೋಬರ್ 27ರಂದು ಅಂತಿಮ...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್: ವಿಡಿಯೋ ಅಪ್‌ಲೋಡ್‌ಗೆ ಬಳಸಿದ ಫೋನ್ ಕುಮಾರಸ್ವಾಮಿ ದೆಹಲಿ ನಿವಾಸದಲ್ಲಿ ಹಸ್ತಾಂತರ: ಬೆಂಗಳೂರು ಪೊಲೀಸ್ ಆಯುಕ್ತರ ಮಾಹಿತಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ವೈರಲ್ ಆಗಿದ್ದ ವಿವಾದಾತ್ಮಕ ‘ಸ್ಟಿಂಗ್ ಆಪರೇಷನ್’ ವಿಡಿಯೊವನ್ನು ಅಪ್‌ಲೋಡ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನವದೆಹಲಿಯ ಅಧಿಕೃತ ನಿವಾಸದಲ್ಲಿ...

‘ಗ್ಯಾನೇಶ್ ಕುಮಾರ್ ನಂತರ ನಿಮ್ಮ ಸರದಿ’: ಮತಗಳ್ಳತನಕ್ಕೆ ಮೋದಿ, ಅಮಿತ್ ಶಾ ಕೂಡ ಕಾನೂನು ಕ್ರಮ ಎದುರಿಸಬೇಕಾಗುತ್ತದೆ; ರಾಹುಲ್ ಗಾಂಧಿ ಎಚ್ಚರಿಕೆ

ನವದೆಹಲಿ: ಮತಗಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ನಂತರ...