Homeಕರ್ನಾಟಕಎಥನಾಲ್ ಪ್ರಮಾಣವನ್ನು ಶೇ. 20ರಿಂದ 30ಕ್ಕೆ ಏರಿಸಲು ಕೇಂದ್ರ ಸರ್ಕಾರದಲ್ಲಿ ಈ ಹಿಂದೆಯೇ ಚರ್ಚೆಯಾಗಿತ್ತು!: ಕೇಂದ್ರ...

ಎಥನಾಲ್ ಪ್ರಮಾಣವನ್ನು ಶೇ. 20ರಿಂದ 30ಕ್ಕೆ ಏರಿಸಲು ಕೇಂದ್ರ ಸರ್ಕಾರದಲ್ಲಿ ಈ ಹಿಂದೆಯೇ ಚರ್ಚೆಯಾಗಿತ್ತು!: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!

- Advertisement -
- Advertisement -

ಬೆಂಗಳೂರು: ಕರ್ನಾಟಕದಲ್ಲಿ E20 ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತಲೂ ಅಧಿಕ ಪ್ರಮಾಣದ ಎಥನಾಲ್ ಬೆರೆಸಿ ಸಾರ್ವಜನಿಕರಿಗೆ ವಂಚಿಸಲಾಗುತ್ತಿದೆ ಎನ್ನುವ ರಾಜ್ಯ ಸರ್ಕಾರದ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯೊಂದು ಭಾರಿ ಸಂಚಲನ ಮೂಡಿಸಿದೆ. ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ ಪ್ರಮಾಣವನ್ನು ಶೇ. 20 ರಿಂದ ಶೇ. 30ಕ್ಕೆ ಏರಿಸುವ ಕುರಿತು ಕೇಂದ್ರ ಸರ್ಕಾರದ ಹಂತದಲ್ಲಿ ಈ ಹಿಂದೆಯೇ ಚರ್ಚೆಗಳು ನಡೆದಿವೆ ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಕರ್ನಾಟಕದಾದ್ಯಂತ ‘ಮಿಷನ್ ನಿಖರ’ ಕಾರ್ಯಚರಣೆಯಡಿ ಸಚಿವ ರಿಜ್ವಾನ್ ಆರ್ಷದ್ ನೇತೃತ್ವದಲ್ಲಿ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಲಾದ ಸ್ಯಾಂಪಲ್‌ಗಳನ್ನು ಪ್ರಸಿದ್ಧ NABL ಪರೀಕ್ಷಾಗಾರಕ್ಕೆ ಕಳುಹಿಸಲಾಗಿತ್ತು. ಕೇಂದ್ರ ತೈಲ ಕಂಪನಿಗಳು ಶೇ. 20ರಷ್ಟು (E20) ಎಥನಾಲ್ ಮಿಶ್ರಣ ಮಾಡುವುದಾಗಿ ಹೇಳಿಕೊಂಡಿದ್ದರೂ, ಪರೀಕ್ಷಾ ವರದಿಗಳಲ್ಲಿ ಶೇ. 25.5 ರಿಂದ ಶೇ. 31.2 ರಷ್ಟು ಎಥನಾಲ್ ಇರುವುದು ದೃಢಪಟ್ಟಿತ್ತು. ಇದರ ಪರಿಣಾಮವಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇಂಜಿನ್, ಫ್ಯುಯೆಲ್ ಪಂಪ್ ಮತ್ತು ಸೀಲ್ಸ್‌ಗಳು ಹಾಳಾಗುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಮತ್ತು ರಿಜ್ವಾನ್ ಆರ್ಷದ್ ಆರೋಪಿಸಿದ್ದರು. ಈ ಮೂಲಕ ಭಾರತದ ವಾಹನ ಸವಾರರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಲಾಗುತ್ತಿದೆ ಎನ್ನುವ ಪ್ರಗತಿಪರ ಆರೋಪ ರಾಜ್ಯಾದ್ಯಂತ ಕಾವು ಪಡೆದುಕೊಂಡಿತ್ತು.

ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಹೆಚ್‌ಡಿಕೆ ಸ್ಪೋಟಕ ಹೇಳಿಕೆ:

ಈ ವಿವಾದದ ಕಾವೇರಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಹೆಚ್.ಡಿ. ಕುಮಾರಸ್ವಾಮಿ ಅವರನ್ನು “ಕರ್ನಾಟಕದಲ್ಲಿ ಶೇ. 20ರಷ್ಟು ಎಥನಾಲ್ ಬೆರೆಸುವ ಬದಲು ಶೇ. 31.5ರಷ್ಟು ಎಥನಾಲ್ ಬೆರೆಸಿರುವ ಪೆಟ್ರೋಲ್ ಮಾರಾಟವಾಗುತ್ತಿದೆ ಎಂದು ಸಚಿವ ರಿಜ್ವಾನ್ ಆರ್ಷದ್ ಆರೋಪಿಸಿದ್ದಾರಲ್ಲವೇ?” ಎಂದು ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಾನು ನೋಡಿರುವ ಪ್ರಕಾರ, ಕೇಂದ್ರ ಸರ್ಕಾರದಲ್ಲಿ ಎಥನಾಲ್ ಮಿಶ್ರಣವನ್ನು ಶೇ. 20ರಿಂದ ಶೇ. 30ಕ್ಕೆ ಏರಿಕೆ ಮಾಡಲು ಚರ್ಚೆಗಳು ನಡೆಯುತ್ತಿವೆ. ಇಲಾಖೆಗಳಲ್ಲಿ ಕೆಲವು ತೀರ್ಮಾನಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಇದು ನನ್ನ ಇಲಾಖೆಗೆ ಸಂಬಂಧಪಟ್ಟ ವಿಷಯವಲ್ಲ. ನಾನು ಎಥನಾಲ್ ಬಗ್ಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ದೆಹಲಿಗೆ ಹೋದ ಮೇಲೆ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ” ಎಂದು ಹೇಳುವ ಮೂಲಕ ಎಥೆನಾಲ್‌ ಬಗೆಗಿನ ಚರ್ಚೆಗಳಿಗೆ ಸ್ಪೋಟಕ ತಿರುವು ಕೊಟ್ಟಿದ್ದಾರೆ.

ಇಷ್ಟು ದಿನಗಳ ಕಾಲ ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಕೇಂದ್ರದ ನಾಯಕರು “ಎಥನಾಲ್ ಬೆರೆಸುವ ಮಿತಿ ಶೇ. 20 ದಾಟಿಲ್ಲ, ಹೆಚ್ಚಿಸುವ ಯಾವುದೇ ಯೋಜನೆಯೂ ಇಲ್ಲ” ಎಂದು ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಆದರೆ, ಎನ್‌ಡಿಎ ಸರ್ಕಾರದ ಒಕ್ಕೂಟದ ಪ್ರಮುಖ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೇ “ಕೇಂದ್ರದಲ್ಲಿ ಎಥನಾಲ್ ಅನ್ನು ಶೇ. 30ಕ್ಕೆ ಏರಿಸಲು ಕಳೆದ 3-4 ತಿಂಗಳುಗಳಿಂದ ಚರ್ಚೆ ಮತ್ತು ತೀರ್ಮಾನಗಳು ನಡೆದಿವೆ” ಎಂದು ಸ್ವತಃ ಒಪ್ಪಿಕೊಂಡಿರುವುದು ಕೇಂದ್ರ ಸರ್ಕಾರದ ಮುಖವಾಡವನ್ನು ಕಳಚಿಹಾಕಿದಂತಾಗಿದೆ.

ಸಚಿವ ರಿಜ್ವಾನ್ ಆರ್ಷದ್ ವಾಗ್ದಾಳಿ!

ಕೇಂದ್ರ ಸಚಿವರ ಈ ಸ್ವಯಂಕೃತ ಹೇಳಿಕೆಯ ವೀಡಿಯೋವನ್ನು ತಮ್ಮ X (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಆರ್ಷದ್, ಕೇಂದ್ರ ಸರ್ಕಾರ ಹಾಗೂ ತೈಲ ಮಾರುಕಟ್ಟೆ ಕಂಪನಿಗಳಾದ BPCL, HPCL ಮತ್ತು Indian Oil ಸಂಸ್ಥೆಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಕೇಂದ್ರ ಸರ್ಕಾರ ಎಥನಾಲ್ ಮಿಶ್ರಣವನ್ನು ಶೇ. 20ರಿಂದ ಶೇ. 30ಕ್ಕೆ ಏರಿಸಲು ಕಳೆದ 3-4 ತಿಂಗಳುಗಳಿಂದ ಯೋಜಿಸುತ್ತಿದೆ ಎಂಬುದನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ದೃಢಪಡಿಸಿದ್ದಾರೆ. ಹಾಗಾದರೆ, ಅಧಿಕೃತ ಘೋಷಣೆಗೆ ಮುನ್ನವೇ ಸಾರ್ವಜನಿಕರಿಗೆ ಗೊತ್ತಿಲ್ಲದೆ ಅನಧಿಕೃತವಾಗಿ ಪೆಟ್ರೋಲ್‌ನಲ್ಲಿ ಶೇ. 31ಕ್ಕೂ ಹೆಚ್ಚು ಎಥನಾಲ್ ಬೆರೆಸಿರುವುದು ಈ ಬೃಹತ್ ಯೋಜನೆಯ ಭಾಗವೇ?” ಎಂದು ಪ್ರಶ್ನಿಸಿರುವ ಅವರು, #E20Turns420 ಹ್ಯಾಶ್‌ಟ್ಯಾಗ್ ಮೂಲಕ ಕೇಂದ್ರ ಸರ್ಕಾರದ ಎಥೆನಾಲ್ ಬ್ಲೆಂಡಿಂಗ್‌ ವಿವಾದವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಒಟ್ಟಾರೆಯಾಗಿ, ರಾಜ್ಯ ಸರ್ಕಾರ NABL ಲ್ಯಾಬ್ ವರದಿಗಳ ಮೂಲಕ ಎತ್ತಿಹಿಡಿದಿದ್ದ ಶೇ. 31ಕ್ಕೂ ಅಧಿಕ ಎಥನಾಲ್ ಮಿಶ್ರಣದ ಹಗರಣಕ್ಕೆ, ಕೇಂದ್ರ ಸಚಿವರ ಈ ಹೇಳಿಕೆಯೇ ಅತ್ಯಂತ ಪ್ರಬಲ ಸಾಕ್ಷಿಯನ್ನೊದಗಿಸಿದಂತಾಗಿದೆ. ಅನಧಿಕೃತವಾಗಿ ಎಥನಾಲ್ ಪ್ರಮಾಣ ಹೆಚ್ಚಿಸಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಹಾಗೂ ಸಾರ್ವಜನಿಕರ ಜೇಬಿಗೆ ಕನ್ನ ಹಾಕುವ ಹಿಂಬಾಗಿಲ ಕಾರ್ಯಾಚರಣೆ ಕೇಂದ್ರದ ಹಂತದಲ್ಲಿ ನಡೆದಿತ್ತು ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಈಗ ಸಂಪೂರ್ಣ ಪುಷ್ಟಿ ದೊರೆತಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗೆ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ರಾಜೀನಾಮೆ

ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ಪಶ್ಚಿಮ ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗಳಿಗೆ ರಾಜೀನಾಮೆ ನೀಡಿದ್ದಾರೆ, ಒಂದು ತಿಂಗಳಲ್ಲಿ ಸಮಿತಿಯಿಂದ ಹೊರಗುಳಿದ 19 ಸದಸ್ಯರಲ್ಲಿ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ರಾಜ್ಯದ ಮತದಾರರ ಪಟ್ಟಿಯಿಂದ ಹೊರಗುಳಿದ...

‘ನೋಟ್ ಬಂದಿ’ ಆರ್ಥಿಕತೆ ಹಾಳು ಮಾಡಿದೆ, ‘ವೋಟ್ ಬಂದಿ’ ರಾಜಕೀಯ ನಾಶಪಡಿಸುತ್ತಿದೆ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದೆ. 2016ರಲ್ಲಿ ಜಾರಿಗೊಳಿಸಿದ 'ನೋಟ್ ಬಂದ್' ದೇಶದ ಆರ್ಥಿಕತೆಯನ್ನು ಹಾಳುಮಾಡಿದ್ದರೆ, ಈಗ ನಡೆಯುತ್ತಿರುವ 'ವೋಟ್ ಬಂದ್' ದೇಶದ ರಾಜಕೀಯ...

“ಪಟಾಕಿಗಳನ್ನು ಸಿಡಿಸುವುದರಿಂದ ಹಲವು ರೋಗ-ರುಜಿನಗಳು ಗುಣಮುಖವಾಗುತ್ತವೆ” – ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ ಹೇಳಿಕೆ!

ಕಾಳಿ ಪೂಜೆ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಹಾಗೂ ಶಬ್ದ ನಿಯಂತ್ರಿಸಲು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದ ಟಾಲಿಗಂಜ್ ಕ್ಷೇತ್ರದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ...

ಎನ್‌ಡಿಎ ಪರೀಕ್ಷೆ; ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ

ಕರ್ನಾಟಕದ 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ...

ಗೂಗಲ್ ‘ರೀಯೂನಿಯನ್’ ಜಾಹೀರಾತು ಬಿಡುಗಡೆಯಾಗಿ 13 ವರ್ಷ: ಕುನಾಲ್ ಕಾಮ್ರಾ ಪೋಸ್ಟ್‌ನಿಂದ ಮತ್ತೆ ನೆನಪಾದ ಗಡಿ ಮೀರಿದ ಸೌಹಾರ್ದತೆ!

13 ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 13ರಂದು ಗೂಗಲ್ ಇಂಡಿಯಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದ ಜಾಗತಿಕ ಪ್ರಸಿದ್ಧ ‘ರೀಯೂನಿಯನ್’ (Google Reunion) ಜಾಹೀರಾತು, ಇಂದು ಸಾಮಾಜಿಕ ಜಾಲತಾಣ...

ಕೇಂದ್ರ ಸಚಿವರ ಜೇಬು ತುಂಬಿಸಲು ಎಥನಾಲ್ ದಂಧೆ!: 130 ಕೋಟಿ ಜನರಿಗೆ 20% ಹೆಸರಲ್ಲಿ 40% ಎಥನಾಲ್ – ಪ್ರಿಯಾಂಕ್‌ ಖರ್ಗೆ!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ಸರಬರಾಜು ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಯಮಾನುಸಾರ ಇರಬೇಕಾದ ಶೇಕಡಾ 20 ಕ್ಕಿಂತಲೂ ಅಧಿಕ ಪ್ರಮಾಣದ ಎಥನಾಲ್ ಮಿಶ್ರಣ ಮಾಡುತ್ತಿರುವುದು ಈಗ ರಾಜ್ಯ ಸರ್ಕಾರ ನಡೆಸಿದ ತನಿಖೆಯಿಂದ...

ಎಥೆನಾಲ್ ಅತಿಯಾದ ಮಿಶ್ರಣ: ಸಾವಿರಾರು ವಾಹನಗಳಿಗೆ ಸಮಸ್ಯೆ, ಎಂಜಿನ್‌ಗಳು ಸ್ಥಗಿತ; ಆರೋಪ ಮತ್ತಷ್ಟು ತೀವ್ರಗೊಳಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ವಿವಾದ ಕರ್ನಾಟಕದಲ್ಲಿ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯದ ವಿವಿಧೆಡೆ ಸಾವಿರಾರು ವಾಹನಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿವೆ, ಎಂಜಿನ್‌ಗಳು ಪದೇಪದೇ ಸ್ಥಗಿತಗೊಳ್ಳುತ್ತಿವೆ ಮತ್ತು...

‘ಕಾಂಗ್ರೆಸಿಗರನ್ನು ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದಿದ್ದ ನಾರಾಯಣಸ್ವಾಮಿ ಮನೆಗೆ ಬ್ಲಿಂಕಿಟ್ ಮೂಲಕ 20 ಚಾಕುಗಳ ಆರ್ಡರ್: ದೂರು ದಾಖಲಿಸಿದ ಬಿಜೆಪಿ

ಬೆಂಗಳೂರು: ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ಮೂಲಕ ತನಗೆ 20 ಚಾಕುಗಳನ್ನು ಕಳುಹಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೇ ಈ ಚಾಕುಗಳನ್ನು ಆರ್ಡರ್ ಮಾಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ...

ಫಿರೋಜಾಬಾದ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಬಹು ಅಂಗಾಂಗ ಹಾನಿಯಿಂದ 16 ವರ್ಷದ ದಲಿತ ಬಾಲಕಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನವೆಂಬರ್ 1 ರಂದು ಬರ್ಬರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಆಗ್ರಾದ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು...

ಬಂಗಾಳದ SIR ಟ್ರಿಬ್ಯೂನಲ್‌ನಿಂದ 4ನೇ ನ್ಯಾಯಾಧೀಶರ ನಿರ್ಗಮನ: ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ರಾಜೀನಾಮೆ!

ಕೋಲ್ಕತಾ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಮೇಲ್ಮನವಿ ಟ್ರಿಬ್ಯೂನಲ್‌ನಿಂದ ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ಅವರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವರದಿಗಳ ಪ್ರಕಾರ, ಕಲ್ಕತ್ತಾ...