Homeಕರ್ನಾಟಕಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಮುಂದುವರಿಕೆಗೆ ಸುಪ್ರೀಂ ಕೋರ್ಟ್ ಅಸ್ತು: ರಾಜ್ಯ ಸರ್ಕಾರದ ಮೇಲ್ಮನವಿ ವಜಾ!

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಮುಂದುವರಿಕೆಗೆ ಸುಪ್ರೀಂ ಕೋರ್ಟ್ ಅಸ್ತು: ರಾಜ್ಯ ಸರ್ಕಾರದ ಮೇಲ್ಮನವಿ ವಜಾ!

- Advertisement -
- Advertisement -

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅವಕಾಶ ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದರೊಂದಿಗೆ ದ್ವಿಚಕ್ರ ವಾಹನ ಮಾಲೀಕರು ಮತ್ತು ಅಗ್ರಿಗೇಟರ್ ಸಂಸ್ಥೆಗಳಿಗೆ ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ಹಕ್ಕಿದೆ ಎಂಬ ತೀರ್ಪನ್ನು ಎತ್ತಿಹಿಡಿದಂತಾಗಿದೆ. ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನು ನೀಡಿರುವುದಾಗಿ ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ಯುವತಿಯರ ಸುರಕ್ಷತೆ, ಪ್ರಯಾಣ ದರ ಮತ್ತು ಆಟೋ ಯೂನಿಯನ್‌ಗಳ ಧೋರಣೆಯ ಕುರಿತು ಮಹತ್ವದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಜಿಪಿಎಸ್ (GPS) ವ್ಯವಸ್ಥೆಯೂ ಇರುವುದರಿಂದ ಬೈಕ್ ಟ್ಯಾಕ್ಸಿಗಳು ಯುವತಿಯರಿಗೆ ಹೆಚ್ಚು ಸುರಕ್ಷಿತವಾಗಿವೆ; ಅವುಗಳನ್ನು ನಿಷೇಧಿಸುವ ಬದಲು ನಿಯಂತ್ರಿಸುವುದು ಉತ್ತಮ ಹಾಗೂ ಈಗಾಗಲೇ 25 ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಜಾರಿಯಲ್ಲಿದೆ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಯುವತಿಯರೊಂದಿಗೆ ನಡೆದ ಸಂಭಾಷಣೆಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಶರ್ಮಾ, “ನಾನು ಅವರನ್ನು, ಕಚೇರಿಗೆ ಹೇಗೆ ಬರುತ್ತೀರಿ ಎಂದು ಕೇಳಿದೆ. ಕ್ಯಾಬ್ ಮಾಡಲು ಹಣವಿಲ್ಲದ ಕಾರಣ ಬೈಕ್‌ನಲ್ಲಿ ಬರುತ್ತೇವೆ ಎಂದರು. ಆಟೋ ಏಕೆ ಬಳಸುವುದಿಲ್ಲ ಎಂದು ಕೇಳಿದಾಗ, ‘ಸರ್, ಆಟೋ ದರ ಐದು ಪಟ್ಟು ಹೆಚ್ಚಿರುತ್ತದೆ’ ಎಂದು ಅವರು ಹೇಳಿದರು. ಅಲ್ಲದೆ, ‘ನಮ್ಮ ಆಟೋ’ (Namma Auto) ಹೊರತುಪಡಿಸಿ ಬೇರೆ ಯಾರನ್ನೂ ಆಟೋ ಯೂನಿಯನ್‌ಗಳು ಒಳಗೆ ಬಿಡುವುದಿಲ್ಲ” ಎಂಬ ಅಂಶವನ್ನೂ ವಿವರಿಸಿದರು ಎಂದು ನ್ಯಾಯಮೂರ್ತಿ ಶರ್ಮಾ ಉಲ್ಲೇಖಿಸಿದ್ದಾರೆ.

ಈ ವಿವಾದವು ಜನವರಿ 23, 2026ರಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ತೀರ್ಪಿನಿಂದ ಹುಟ್ಟಿಕೊಂಡಿದೆ. ರಾಜ್ಯದಲ್ಲಿ ನಿಯಂತ್ರಕ ನೀತಿ ರೂಪಿಸುವವರೆಗೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿ, ಪರೋಕ್ಷವಾಗಿ ಬೈಕ್ ಟ್ಯಾಕ್ಸಿ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠವು ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ವಿವಿಧ ಅಗ್ರಿಗೇಟರ್ ಸಂಸ್ಥೆಗಳು, ಬೈಕ್ ಮಾಲೀಕರು ಮತ್ತು ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿತ್ತು.

ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಕಾಂಟ್ರ್ಯಾಕ್ಟ್ ಕ್ಯಾರೇಜ್ ಆಗಿ ಕಾರ್ಯಾಚರಣೆ ನಡೆಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ರಾಜ್ಯ ಸರ್ಕಾರ ನಿಯಂತ್ರಕ ಷರತ್ತುಗಳನ್ನು ವಿಧಿಸಬಹುದಾದರೂ, ಕೇವಲ ದ್ವಿಚಕ್ರ ವಾಹನ ಎಂಬ ಕಾರಣಕ್ಕಾಗಿ ಪರವಾನಗಿ ನಿರಾಕರಿಸುವಂತಿಲ್ಲ ಎಂದು ತಿಳಿಸಿ, ಅರ್ಜಿಗಳನ್ನು ಪರಿಗಣಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ, ಪ್ರಯಾಣಿಕರ ಸುರಕ್ಷತೆ, ವಿಮಾ ರಕ್ಷಣೆ ಮತ್ತು ಸೂಕ್ತ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳೂ ಮೇಲ್ಮನವಿ ಸಲ್ಲಿಸಿ, ಸಮಾನ ನಿಯಂತ್ರಕ ಹೊಣೆಗಾರಿಕೆ ಇಲ್ಲದೆ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಿದರೆ ಹಾಲಿ ಸಾರಿಗೆ ಚಾಲಕರಿಗೆ ತೊಂದರೆಯಾಗುತ್ತದೆ ಎಂದು ವಾದಿಸಿದ್ದವು.

ವಿಚಾರಣೆ ವೇಳೆ ಸಂಚಾರ ದಟ್ಟಣೆಯ ಬಗ್ಗೆ ರಾಜ್ಯ ಸರ್ಕಾರ ವ್ಯಕ್ತಪಡಿಸಿದ್ದ ಆತಂಕವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿ, ಕಾರುಗಳಿಗೆ ಹೋಲಿಸಿದರೆ ಬೈಕ್‌ಗಳು ಕಡಿಮೆ ರಸ್ತೆ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ ಮತ್ತು ಬೈಕ್ ಟ್ಯಾಕ್ಸಿಗಳು ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿವೆ ಎಂದು ಗಮನಸೆಳೆದಿತ್ತು.

ಮೋಟಾರು ವಾಹನ ಕಾಯ್ದೆಯಡಿ ಬೈಕ್‌ಗಳು ಮತ್ತು ಮೋಟಾರು ಕ್ಯಾಬ್‌ಗಳನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ ಹಾಗೂ ರಾಜ್ಯದ ಅಗ್ರಿಗೇಟರ್ ನಿಯಮಗಳಲ್ಲಿ ಬೈಕ್ ಟ್ಯಾಕ್ಸಿಗಳ ಪ್ರಸ್ತಾಪವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತ್ತು. ಸುರಕ್ಷತೆ, ಸಂಚಾರ ದಟ್ಟಣೆ ಮತ್ತು ಮಾಲಿನ್ಯದ ಕುರಿತು ಪರಿಶೀಲಿಸಿದ್ದ 2019ರ ತಜ್ಞರ ಸಮಿತಿಯ ವರದಿಯನ್ನು ಉಲ್ಲೇಖಿಸಿ, ಬೈಕ್ ಟ್ಯಾಕ್ಸಿ ನಡೆಸುವ ಯಾವುದೇ ಸಹಜ ಹಕ್ಕು ಅಗ್ರಿಗೇಟರ್‌ಗಳಿಗಿಲ್ಲ ಎಂದು ಪ್ರತಿಪಾದಿಸಿತ್ತು. ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲು ಸಿದ್ಧವಿದ್ದರೂ, ಬೆಂಗಳೂರಿನಲ್ಲಿ ಅವಕಾಶ ನೀಡಲು ತನ್ನ ವಿರೋಧವಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.

ಮತ್ತೊಂದೆಡೆ, ಕರ್ನಾಟಕದಲ್ಲಿ ಸುಮಾರು 4.5 ಲಕ್ಷ ಪ್ರಯಾಣಿಕರು ಬೈಕ್ ಟ್ಯಾಕ್ಸಿಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅಗ್ರಿಗೇಟರ್ ಸಂಸ್ಥೆಗಳು ನ್ಯಾಯಾಲಯಕ್ಕೆ ತಿಳಿಸಿದ್ದವು. ಹೈಕೋರ್ಟ್‌ನ ಹಿಂದಿನ ತೀರ್ಪು ಹಾಗೂ 2004 ಮತ್ತು 2024ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗಳನ್ನು ಅವು ಉಲ್ಲೇಖಿಸಿದ್ದವು. ಪೀಠದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರವೂ, ತನ್ನ ಅಧಿಸೂಚನೆಗಳ ಅಡಿಯಲ್ಲಿ ಬೈಕ್‌ಗಳನ್ನು ಟ್ಯಾಕ್ಸಿಗಳಾಗಿ ಬಳಸಬಹುದು ಎಂಬುದನ್ನು ದೃಢಪಡಿಸಿತ್ತು.

ಈ ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ ಬೈಕ್ ಟ್ಯಾಕ್ಸಿ ಸೇವೆಗಳ ಮುಂದುವರಿಕೆಗೆ ಅನುವು ಮಾಡಿಕೊಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲಿ ಸೇನೆಯ ನೆಲದಾಳಿಗೆ ಮಧ್ಯ ಗಾಜಾದಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರ; 1,500ಕ್ಕೂ ಅಧಿಕ ಕುಟುಂಬಗಳು ಅತಂತ್ರ

ಗಾಜಾ: ಇಸ್ರೇಲಿ ಸೇನೆಯ ಹೊಸ ನೆಲದಾಳಿಯ ಕಾರ್ಯಾಚರಣೆ ಮತ್ತು ಮಿಲಿಟರಿ ನಿರ್ಬಂಧಗಳಿಂದಾಗಿ ಮಧ್ಯ ಗಾಜಾ ಪಟ್ಟಿಯಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರಕ್ಕೆ ಒಳಗಾಗಿದ್ದಾರೆ. 1,500ಕ್ಕೂ ಅಧಿಕ ಕುಟುಂಬಗಳು ತಮ್ಮ ನೆಲೆಗಳನ್ನು ತೊರೆಯಬೇಕಾದ...

ಕಾವೇರಿ ವಿವಾದ: ಕರ್ನಾಟಕದಿಂದ 11 ಟಿಎಂಸಿ ಹೆಚ್ಚುವರಿ ನೀರು ಕೇಳಿದ್ದ ತಮಿಳುನಾಡಿನ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್!

ಕಾವೇರಿ ನದಿಯಿಂದ ತನಗೆ 11 ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ವಿಕ್ರಮ್...

‘ಮುಗ್ಧ ಭಾರತೀಯರ ಹತ್ಯೆ ಸಹಿಸಿಕೊಂಡು ಭಯೋತ್ಪಾದನೆಗೆ ಬೆಂಬಲಿಸುವ ಪಾಕಿಸ್ತಾನದೊಂದಿಗೆ ಮಾತುಕತೆ ಸಾಧ್ಯವಿಲ್ಲ’: ರಾಹುಲ್ ಗಾಂಧಿ 

ಚಿಕಾಗೋ: ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದರೆ ಮಾತ್ರ ಆ ದೇಶದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಾಧ್ಯ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ....

ಚುನಾವಣಾ ಆಯುಕ್ತರ ನೇಮಕಾತಿ ಪ್ರಕರಣ: ಪ್ರತ್ಯೇಕ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿಎಸ್‌) ನೇಮಕಾತಿಯನ್ನು ನಿಯಂತ್ರಿಸುವ 2023ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ದೊಡ್ಡ ಪೀಠಕ್ಕೆ ವರ್ಗಾಯಿಸಬೇಕೇ ಎಂಬ ಕುರಿತು ಇಬ್ಬರು ನ್ಯಾಯಮೂರ್ತಿಗಳ ಪೀಠ ನೀಡಿದ್ದ...

ಗುಜರಾತ್‌ನಲ್ಲಿ ಖಾಸಗಿ ವಾಹನಗಳ ಮೇಲೆ ಜಾತಿ ಪ್ರದರ್ಶನಕ್ಕೆ ಬ್ರೇಕ್: ಜಾತಿ ಸೂಚಿಸುವ ಪದ, ಚಿಹ್ನೆ, ಬರಹಗಳ ಬಳಕೆ ನಿಷೇಧಿಸಿದ ಸರ್ಕಾರ

ಅಹಮದಾಬಾದ್: ಖಾಸಗಿ ವಾಹನಗಳ ಮೇಲೆ ಜಾತಿಯನ್ನು ಗುರುತಿಸುವ ಪದಗಳು, ಚಿಹ್ನೆಗಳು, ಚಿತ್ರಗಳು ಮತ್ತು ಬರಹಗಳನ್ನು ಪ್ರದರ್ಶಿಸುವುದನ್ನು ಗುಜರಾತ್‌ನ ಸರ್ಕಾರ ನಿಷೇಧಿಸಿದೆ. ಜಾತಿ ಆಧಾರಿತ ಗುರುತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸ ವ್ಯಾಪಕವಾಗಿರುವ ರಾಜ್ಯದಲ್ಲಿ ಭೂಪೇಂದ್ರ...

‘ಬಸವಣ್ಣನವರ ಅವಹೇಳನ’: ‘ಬಸವ ಮಂಟಪ’ ಕೃತಿ ನಿಷೇಧಕ್ಕೆ ಕಾಂಗ್ರೆಸ್, ಬಿಜೆಪಿ ಲಿಂಗಾಯತ ನಾಯಕರ ಆಗ್ರಹ; ರವಿ ಹಂಜ್ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಒತ್ತಾಯ

ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ವ್ಯಕ್ತಿತ್ವ ಮತ್ತು ವಿಚಾರಗಳಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ನೆಲೆಸಿರುವ ಲೇಖಕ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಪುಸ್ತಕದ ವಿರುದ್ಧ...

ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿದ್ದ ಟಿವಿಕೆ ಶಾಸಕ ವಿ.ಎಸ್. ಬಾಬು ನಿಧನ

2026ರ ಏಪ್ರಿಲ್‌ನಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆಡಳಿತಾರೂಢ ತಮಿಳಗ ವೆಟ್ರಿ...

ದೆಹಲಿ ಎಸ್‌ಐಆರ್ : ಮುಸ್ತಫಾಬಾದ್‌ನ ಸುಳ್ಳು ‘ಫಾರಂ-7’ ಅರ್ಜಿಗಳ ಕುರಿತು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ದೆಹಲಿಯ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ಮತದಾರರ ಹೆಸರನ್ನು ಅಳಿಸಿಹಾಕಲು ನಕಲಿ 'ಫಾರಂ-7' ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ದೂರಿನ ಕುರಿತು ಪರಿಶೀಲನೆ ನಡೆಸುವಂತೆ ಸುಪ್ರೀಂ...

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ ನಾಯಕತ್ವದ ‘ಡಿಕೆಶಿ V/s ಕುಮಾರ ಸಂಘರ್ಷ’

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜಾತಿ ಸಮೀಕರಣಗಳು ಮತ್ತು ಸಮುದಾಯದ ನಾಯಕತ್ವವು ಸದಾ ನಿರ್ಣಾಯಕ ಪಾತ್ರ ವಹಿಸುತ್ತಲೇ ಬಂದಿವೆ. ಅದರಲ್ಲೂ ಹಳೆಯ ಮೈಸೂರು ಭಾಗದಲ್ಲಿ ಅತ್ಯಂತ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ರಾಜಕೀಯ ಒಲವು, ರಾಜ್ಯದ...

ಉತ್ತರ ಪ್ರದೇಶ: ಮದುವೆಗೆ 15 ದಿನ ಇರುವಾಗ ಪೊಲೀಸ್ ಕಸ್ಟಡಿಯಲ್ಲಿ ಮುಸ್ಲಿಂ ಯುವಕನ ಸಾವು; ಪೊಲೀಸರ ವಿರುದ್ಧ ಚಿತ್ರಹಿಂಸೆ, ₹18.8 ಲಕ್ಷ ಸುಲಿಗೆ ಆರೋಪ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ 22 ವರ್ಷದ ಮುಸ್ಲಿಂ ಯುವಕನೊಬ್ಬನ ಮದುವೆಗೆ ಇನ್ನು ಕೇವಲ 15 ದಿನಗಳು ಬಾಕಿ ಇರುವಾಗ ಹರಿಯಾಣದ ಫರಿದಾಬಾದ್ ಜೈಲಿನಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್...