Homeಅಂತರಾಷ್ಟ್ರೀಯಇಸ್ರೇಲಿ ಸೇನೆಯ ನೆಲದಾಳಿಗೆ ಮಧ್ಯ ಗಾಜಾದಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರ; 1,500ಕ್ಕೂ ಅಧಿಕ...

ಇಸ್ರೇಲಿ ಸೇನೆಯ ನೆಲದಾಳಿಗೆ ಮಧ್ಯ ಗಾಜಾದಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರ; 1,500ಕ್ಕೂ ಅಧಿಕ ಕುಟುಂಬಗಳು ಅತಂತ್ರ

- Advertisement -
- Advertisement -

ಗಾಜಾ: ಇಸ್ರೇಲಿ ಸೇನೆಯ ಹೊಸ ನೆಲದಾಳಿಯ ಕಾರ್ಯಾಚರಣೆ ಮತ್ತು ಮಿಲಿಟರಿ ನಿರ್ಬಂಧಗಳಿಂದಾಗಿ ಮಧ್ಯ ಗಾಜಾ ಪಟ್ಟಿಯಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರಕ್ಕೆ ಒಳಗಾಗಿದ್ದಾರೆ. 1,500ಕ್ಕೂ ಅಧಿಕ ಕುಟುಂಬಗಳು ತಮ್ಮ ನೆಲೆಗಳನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗಾಗಲೇ ಯುದ್ಧದ ಪರಿಣಾಮವಾಗಿ ಮನೆಮಠ ಕಳೆದುಕೊಂಡಿರುವ ಸಾವಿರಾರು ಜನರು ಮತ್ತೊಮ್ಮೆ ನಿರಾಶ್ರಿತರಾಗಿದ್ದಾರೆ. ಗಾಜಾದ ಅಲ್-ನುಸೇರತ್ ಮತ್ತು ಅಲ್-ಬುರೈಜ್ ನಿರಾಶ್ರಿತರ ಶಿಬಿರಗಳ ನಿವಾಸಿಗಳ ಮೇಲೆ ಇಸ್ರೇಲಿ ಸೇನೆಯ ಈ ಕಾರ್ಯಾಚರಣೆ ತೀವ್ರ ಪರಿಣಾಮ ಬೀರಿದೆ ಎಂದು ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

2025ರ ಅಕ್ಟೋಬರ್‌ನಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಬಳಿಕ ಇಸ್ರೇಲಿ ಸೇನೆ ಸಾರ್ವಜನಿಕವಾಗಿ ಘೋಷಿಸಿರುವ ಮೊದಲ ಪ್ರಮುಖ ಮಿಲಿಟರಿ ದಾಳಿ ಇದಾಗಿದೆ. ಕದನ ವಿರಾಮ ಜಾರಿಯಲ್ಲಿದ್ದರೂ ಗಾಜಾದಲ್ಲಿ ಇಸ್ರೇಲಿ ದಾಳಿಗಳು ಮತ್ತು ನಾಗರಿಕರ ಮೇಲಿನ ಹಿಂಸಾಚಾರ ಮುಂದುವರಿದಿರುವುದಕ್ಕೆ ಈ ಬೆಳವಣಿಗೆ ಮತ್ತೊಂದು ಉದಾಹರಣೆಯಾಗಿದೆ. ಗಾಜಾದ ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕದನ ವಿರಾಮ ಜಾರಿಗೆ ಬಂದ ನಂತರವೂ ಇಸ್ರೇಲಿ ದಾಳಿಗಳಲ್ಲಿ 1,600ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.

ಇಸ್ರೇಲಿ ಸೇನೆಯ ಬಾಂಬ್ ದಾಳಿ, ಬಲವಂತದ ಸ್ಥಳಾಂತರ ಆದೇಶಗಳು ಮತ್ತು ನಾಗರಿಕರ ಸಂಚಾರದ ಮೇಲಿನ ನಿರ್ಬಂಧಗಳ ನಡುವೆ ಮಧ್ಯ ಗಾಜಾದಲ್ಲಿ ಈ ಹೊಸ ಸ್ಥಳಾಂತರದ ಅಲೆ ಸೃಷ್ಟಿಯಾಗಿದೆ. ಅಲ್-ನುಸೇರತ್ ಮತ್ತು ಅಲ್-ಬುರೈಜ್ ನಿರಾಶ್ರಿತರ ಶಿಬಿರಗಳ ಜನರು ಈ ಕಾರ್ಯಾಚರಣೆಯಿಂದ ನೇರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ಗಾಜಾ ಪಟ್ಟಿಯ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಒಂದಾದ ಸಲಾಹ್ ಅಲ್-ದಿನ್ ರಸ್ತೆಯನ್ನೂ ಇಸ್ರೇಲಿ ಸೇನೆ ಮುಚ್ಚಿದೆ. ಇದರಿಂದ ಸ್ಥಳೀಯ ನಿವಾಸಿಗಳ ಸಂಚಾರ ಮಾತ್ರವಲ್ಲದೆ, ತುರ್ತು ಪರಿಹಾರ ಕಾರ್ಯಾಚರಣೆಗಳಿಗೂ ತೀವ್ರ ಅಡ್ಡಿಯಾಗಿದೆ.

ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ, ಪ್ರಾಥಮಿಕ ಕ್ಷೇತ್ರಮಟ್ಟದ ಅಂದಾಜಿನ ಪ್ರಕಾರ 6,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಅಥವಾ ಇತರ ರೀತಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಪರಿಣಾಮ ಎದುರಿಸಿದ್ದಾರೆ ಎಂದು ತಿಳಿಸಿದೆ. ಈ ದಾಳಿಯಿಂದ ಜನರ ಆಸ್ತಿಪಾಸ್ತಿ ಮತ್ತು ಅಗತ್ಯ ಆಶ್ರಯ ಸೌಲಭ್ಯಗಳು ನಾಶವಾಗಿದ್ದು, ಸಾವಿರಾರು ಡಾಲರ್ ಮೌಲ್ಯದ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಕಚೇರಿ ಹೇಳಿದೆ.

ಪೀಡಿತ ಪ್ರದೇಶಗಳ ಒಳಗೆ ಮತ್ತು ಸುತ್ತಮುತ್ತಲಿನ ಆರು ನೋಂದಾಯಿತ ಆಶ್ರಯ ಕೇಂದ್ರಗಳಲ್ಲಿ 630 ಕುಟುಂಬಗಳಿಗೆ ಸೇರಿದ ಸುಮಾರು 2,855 ಜನರು ವಾಸಿಸುತ್ತಿದ್ದಾರೆ. ಅಲ್-ಹದ್ದಾದ್ ಆಶ್ರಯ ಕೇಂದ್ರದಲ್ಲಿ 603 ಜನರು, ಅಲ್-ವಾಟೀನ್‌ನಲ್ಲಿ 400, ಸನಾಬೆಲ್ ಅಲ್-ಅಮಲ್‌ನಲ್ಲಿ 639, ಅಲ್-ದವಾ ಶಿಬಿರದಲ್ಲಿ 649, ಹಮಿದಿಯಾ ಶಿಬಿರದಲ್ಲಿ 306 ಮತ್ತು ಅಲ್-ಇಜ್ಜ್ ಇಬ್ನ್ ಅಬ್ದ್ ಅಲ್-ಸಲಾಮ್ ಕೇಂದ್ರದಲ್ಲಿ 258 ಜನರು ಆಶ್ರಯ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಇವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತಷ್ಟು 235 ಕುಟುಂಬಗಳಿಗೆ ಸೇರಿದ 2,405 ಜನರು ವಾಸಿಸುತ್ತಿದ್ದರು. ಇದಲ್ಲದೆ, ಕಾರ್ಯಾಚರಣೆಯ ಗುರಿಯಾಗಿರುವ ಪ್ರದೇಶಗಳು ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿದ್ದ ಇತರ ಕುಟುಂಬಗಳೂ ಪರಿಣಾಮ ಎದುರಿಸಿವೆ.

ಈ ಮಿಲಿಟರಿ ಕಾರ್ಯಾಚರಣೆಯಿಂದ ಈಗಾಗಲೇ ನಿರಾಶ್ರಿತರಾಗಿರುವ ಸಾವಿರಾರು ಪ್ಯಾಲೆಸ್ಟೀನಿಯನ್ನರು ತಮ್ಮ ತಾತ್ಕಾಲಿಕ ಆಶ್ರಯಗಳನ್ನೂ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಆಹಾರ, ಕುಡಿಯುವ ನೀರು, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಮಾನವೀಯ ಸೇವೆಗಳನ್ನು ತಲುಪಿಸುವುದಕ್ಕೂ ಸಂಚಾರ ನಿರ್ಬಂಧಗಳು ಅಡ್ಡಿಯಾಗಿವೆ. ಇದರಿಂದ ಗಾಯಾಳುಗಳು, ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವ ನಾಗರಿಕರ ಜೀವಕ್ಕೆ ಮತ್ತಷ್ಟು ಅಪಾಯ ಎದುರಾಗಿದೆ ಎಂದು ಸರ್ಕಾರಿ ಮಾಧ್ಯಮ ಕಚೇರಿ ಎಚ್ಚರಿಸಿದೆ.

ಇಸ್ರೇಲಿ ಸೇನೆಯ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ, ನಾಗರಿಕರನ್ನು ಬಲವಂತವಾಗಿ ಸ್ಥಳಾಂತರಿಸುವುದು ಮತ್ತು ಆಶ್ರಯ ಕೇಂದ್ರಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧ ಹಾಗೂ ಮಾನವೀಯತೆಯ ವಿರುದ್ಧದ ಅಪರಾಧಗಳ ವ್ಯಾಪ್ತಿಗೆ ಬರುತ್ತದೆ ಎಂದು ಆರೋಪಿಸಿದೆ. ಈ ಆರೋಪಗಳಿಗೆ ಬೆಂಬಲವಾಗಿ ನಾಲ್ಕನೇ ಜಿನೀವಾ ಒಪ್ಪಂದ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ರೋಮ್ ಶಾಸನ ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ನಿಬಂಧನೆಗಳನ್ನು ಉಲ್ಲೇಖಿಸಿದೆ.

ಕದನ ವಿರಾಮದ ಮಧ್ಯವರ್ತಿಗಳು, ಅದಕ್ಕೆ ಖಾತರಿ ನೀಡಿರುವ ರಾಷ್ಟ್ರಗಳು, ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕಚೇರಿ ಆಗ್ರಹಿಸಿದೆ. ಸ್ಥಳಾಂತರಗೊಂಡ ನಾಗರಿಕರು, ಆಶ್ರಯ ಕೇಂದ್ರಗಳು ಮತ್ತು ಮಾನವೀಯ ನೆರವು ಒದಗಿಸುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಅಲ್ಲದೆ, ಸಲಾಹ್ ಅಲ್-ದಿನ್ ರಸ್ತೆಯನ್ನು ಯಾವುದೇ ವಿಳಂಬವಿಲ್ಲದೆ ಸಂಪೂರ್ಣವಾಗಿ ಪುನಃ ತೆರೆಯಬೇಕು. ನಾಗರಿಕರ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ಆಹಾರ, ಔಷಧ, ವೈದ್ಯಕೀಯ ಉಪಕರಣಗಳು ಮತ್ತು ಇತರ ತುರ್ತು ಪರಿಹಾರ ಸಾಮಗ್ರಿಗಳನ್ನು ಯಾವುದೇ ಅಡೆತಡೆಯಿಲ್ಲದೆ ತಲುಪಿಸಲು ಸುರಕ್ಷಿತ ಹಾಗೂ ನಿರಂತರ ಮಾನವೀಯ ಕಾರಿಡಾರ್‌ಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.

ಕದನ ವಿರಾಮದ ಬಳಿಕವೂ ಗಾಜಾದ ಜನರಿಗೆ ಸುರಕ್ಷತೆ ಮತ್ತು ನೆಮ್ಮದಿ ಮರೀಚಿಕೆಯಾಗಿರುವುದು, ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿದಿರುವುದು ಹಾಗೂ ನಿರಾಶ್ರಿತರು ಮತ್ತೆ ಮತ್ತೆ ನೆಲೆ ಕಳೆದುಕೊಳ್ಳುತ್ತಿರುವುದು ಅಲ್ಲಿನ ಮಾನವೀಯ ಬಿಕ್ಕಟ್ಟಿನ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಮುಂದುವರಿಕೆಗೆ ಸುಪ್ರೀಂ ಕೋರ್ಟ್ ಅಸ್ತು: ರಾಜ್ಯ ಸರ್ಕಾರದ ಮೇಲ್ಮನವಿ ವಜಾ!

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅವಕಾಶ ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದರೊಂದಿಗೆ ದ್ವಿಚಕ್ರ ವಾಹನ ಮಾಲೀಕರು ಮತ್ತು ಅಗ್ರಿಗೇಟರ್...

ಕಾವೇರಿ ವಿವಾದ: ಕರ್ನಾಟಕದಿಂದ 11 ಟಿಎಂಸಿ ಹೆಚ್ಚುವರಿ ನೀರು ಕೇಳಿದ್ದ ತಮಿಳುನಾಡಿನ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್!

ಕಾವೇರಿ ನದಿಯಿಂದ ತನಗೆ 11 ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ವಿಕ್ರಮ್...

‘ಮುಗ್ಧ ಭಾರತೀಯರ ಹತ್ಯೆ ಸಹಿಸಿಕೊಂಡು ಭಯೋತ್ಪಾದನೆಗೆ ಬೆಂಬಲಿಸುವ ಪಾಕಿಸ್ತಾನದೊಂದಿಗೆ ಮಾತುಕತೆ ಸಾಧ್ಯವಿಲ್ಲ’: ರಾಹುಲ್ ಗಾಂಧಿ 

ಚಿಕಾಗೋ: ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದರೆ ಮಾತ್ರ ಆ ದೇಶದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಾಧ್ಯ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ....

ಚುನಾವಣಾ ಆಯುಕ್ತರ ನೇಮಕಾತಿ ಪ್ರಕರಣ: ಪ್ರತ್ಯೇಕ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿಎಸ್‌) ನೇಮಕಾತಿಯನ್ನು ನಿಯಂತ್ರಿಸುವ 2023ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ದೊಡ್ಡ ಪೀಠಕ್ಕೆ ವರ್ಗಾಯಿಸಬೇಕೇ ಎಂಬ ಕುರಿತು ಇಬ್ಬರು ನ್ಯಾಯಮೂರ್ತಿಗಳ ಪೀಠ ನೀಡಿದ್ದ...

ಗುಜರಾತ್‌ನಲ್ಲಿ ಖಾಸಗಿ ವಾಹನಗಳ ಮೇಲೆ ಜಾತಿ ಪ್ರದರ್ಶನಕ್ಕೆ ಬ್ರೇಕ್: ಜಾತಿ ಸೂಚಿಸುವ ಪದ, ಚಿಹ್ನೆ, ಬರಹಗಳ ಬಳಕೆ ನಿಷೇಧಿಸಿದ ಸರ್ಕಾರ

ಅಹಮದಾಬಾದ್: ಖಾಸಗಿ ವಾಹನಗಳ ಮೇಲೆ ಜಾತಿಯನ್ನು ಗುರುತಿಸುವ ಪದಗಳು, ಚಿಹ್ನೆಗಳು, ಚಿತ್ರಗಳು ಮತ್ತು ಬರಹಗಳನ್ನು ಪ್ರದರ್ಶಿಸುವುದನ್ನು ಗುಜರಾತ್‌ನ ಸರ್ಕಾರ ನಿಷೇಧಿಸಿದೆ. ಜಾತಿ ಆಧಾರಿತ ಗುರುತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸ ವ್ಯಾಪಕವಾಗಿರುವ ರಾಜ್ಯದಲ್ಲಿ ಭೂಪೇಂದ್ರ...

‘ಬಸವಣ್ಣನವರ ಅವಹೇಳನ’: ‘ಬಸವ ಮಂಟಪ’ ಕೃತಿ ನಿಷೇಧಕ್ಕೆ ಕಾಂಗ್ರೆಸ್, ಬಿಜೆಪಿ ಲಿಂಗಾಯತ ನಾಯಕರ ಆಗ್ರಹ; ರವಿ ಹಂಜ್ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಒತ್ತಾಯ

ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ವ್ಯಕ್ತಿತ್ವ ಮತ್ತು ವಿಚಾರಗಳಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ನೆಲೆಸಿರುವ ಲೇಖಕ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಪುಸ್ತಕದ ವಿರುದ್ಧ...

ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿದ್ದ ಟಿವಿಕೆ ಶಾಸಕ ವಿ.ಎಸ್. ಬಾಬು ನಿಧನ

2026ರ ಏಪ್ರಿಲ್‌ನಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆಡಳಿತಾರೂಢ ತಮಿಳಗ ವೆಟ್ರಿ...

ದೆಹಲಿ ಎಸ್‌ಐಆರ್ : ಮುಸ್ತಫಾಬಾದ್‌ನ ಸುಳ್ಳು ‘ಫಾರಂ-7’ ಅರ್ಜಿಗಳ ಕುರಿತು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ದೆಹಲಿಯ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ಮತದಾರರ ಹೆಸರನ್ನು ಅಳಿಸಿಹಾಕಲು ನಕಲಿ 'ಫಾರಂ-7' ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ದೂರಿನ ಕುರಿತು ಪರಿಶೀಲನೆ ನಡೆಸುವಂತೆ ಸುಪ್ರೀಂ...

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ ನಾಯಕತ್ವದ ‘ಡಿಕೆಶಿ V/s ಕುಮಾರ ಸಂಘರ್ಷ’

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜಾತಿ ಸಮೀಕರಣಗಳು ಮತ್ತು ಸಮುದಾಯದ ನಾಯಕತ್ವವು ಸದಾ ನಿರ್ಣಾಯಕ ಪಾತ್ರ ವಹಿಸುತ್ತಲೇ ಬಂದಿವೆ. ಅದರಲ್ಲೂ ಹಳೆಯ ಮೈಸೂರು ಭಾಗದಲ್ಲಿ ಅತ್ಯಂತ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ರಾಜಕೀಯ ಒಲವು, ರಾಜ್ಯದ...

ಉತ್ತರ ಪ್ರದೇಶ: ಮದುವೆಗೆ 15 ದಿನ ಇರುವಾಗ ಪೊಲೀಸ್ ಕಸ್ಟಡಿಯಲ್ಲಿ ಮುಸ್ಲಿಂ ಯುವಕನ ಸಾವು; ಪೊಲೀಸರ ವಿರುದ್ಧ ಚಿತ್ರಹಿಂಸೆ, ₹18.8 ಲಕ್ಷ ಸುಲಿಗೆ ಆರೋಪ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ 22 ವರ್ಷದ ಮುಸ್ಲಿಂ ಯುವಕನೊಬ್ಬನ ಮದುವೆಗೆ ಇನ್ನು ಕೇವಲ 15 ದಿನಗಳು ಬಾಕಿ ಇರುವಾಗ ಹರಿಯಾಣದ ಫರಿದಾಬಾದ್ ಜೈಲಿನಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್...