Homeಮುಖಪುಟಅಸ್ಸಾಂನ ಲಖಿಂಪುರದಲ್ಲಿ ತೆರವು ಕಾರ್ಯಾಚರಣೆ ಬಳಿಕವೂ ನಿಲ್ಲದ ಸಂಕಷ್ಟ: ಸೂರು ಕಳೆದುಕೊಂಡು ಬಯಲಿನಲ್ಲಿ ಕಾಲಕಳೆಯುತ್ತಿರುವ 135...

ಅಸ್ಸಾಂನ ಲಖಿಂಪುರದಲ್ಲಿ ತೆರವು ಕಾರ್ಯಾಚರಣೆ ಬಳಿಕವೂ ನಿಲ್ಲದ ಸಂಕಷ್ಟ: ಸೂರು ಕಳೆದುಕೊಂಡು ಬಯಲಿನಲ್ಲಿ ಕಾಲಕಳೆಯುತ್ತಿರುವ 135 ಬಡ ಮುಸ್ಲಿಂ ಕುಟುಂಬಗಳು, ಧರ್ಮದ ಆಧಾರದ ತಾರತಮ್ಯದ ಗಂಭೀರ ಆರೋಪ!

- Advertisement -
- Advertisement -

ಲಖಿಂಪುರ (ಅಸ್ಸಾಂ): ಅಸ್ಸಾಂನ ಲಖಿಂಪುರ ಜಿಲ್ಲೆಯ ಕದಮ್ ಕಂದಾಯ ವೃತ್ತದ ವ್ಯಾಪ್ತಿಯ ಬೋಗಿನದಿ ಪ್ರದೇಶದಲ್ಲಿ ಜಿಲ್ಲಾಡಳಿತ ನಡೆಸಿದ ಬೃಹತ್ ತೆರವು ಕಾರ್ಯಾಚರಣೆಯ ಬೆನ್ನಲ್ಲೇ ಸುಮಾರು 135 ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸೂರು ಕಳೆದುಕೊಂಡಿರುವ ಸುಮಾರು 700ಕ್ಕೂ ಹೆಚ್ಚು ಜನರು ಕೊರೆಯುವ ಚಳಿಯಲ್ಲಿ ಬಯಲಲ್ಲೇ ದಿನ ಕಳೆಯುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪಗಳು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ನವೆಂಬರ್ 13ರಂದು ಸರ್ಕಾರಿ ಗೋಮಾಳ ಜಮೀನು ಒತ್ತುವರಿಯಾಗಿದೆ ಎಂಬ ಕಾರಣ ನೀಡಿ ಜಿಲ್ಲಾಡಳಿತವು ಸುಮಾರು 320 ಹೆಕ್ಟೇರ್ ಪ್ರದೇಶದಲ್ಲಿದ್ದ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿತ್ತು. ಇಲ್ಲಿನ ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಸಂತ್ರಸ್ತರಲ್ಲಿ ಹೆಚ್ಚಿನವರು 1983ರ ಅಸ್ಸಾಂ ಚಳವಳಿಯ ಹಿಂಸಾಚಾರದ ಬಳಿಕ ಸ್ವತಃ ಸರ್ಕಾರದಿಂದಲೇ ಪುನರ್ವಸತಿ ಪಡೆದು, ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಬದುಕು ಕಟ್ಟಿಕೊಂಡಿದ್ದ ಬಂಗಾಳಿ ಮಾತನಾಡುವ ಶ್ರಮಿಕ ಮುಸ್ಲಿಂ ಕುಟುಂಬಗಳಾಗಿವೆ. ಈಗ ಇಳಿ ವಯಸ್ಸಿನಲ್ಲಿರುವ ಹಿರಿಯರು ಹಾಗೂ ಪುಟ್ಟ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಎರಡನೇ ಅಥವಾ ಮೂರನೇ ಬಾರಿಗೆ ನಿರಾಶ್ರಿತರಾಗುವ ದಾರುಣ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಈ ಕಾರ್ಯಾಚರಣೆಯ ಬೆನ್ನಲ್ಲೇ ಸ್ಥಳೀಯ ಬೋಗಿನದಿ ಪ್ರಾಥಮಿಕ ಶಾಲೆಯಲ್ಲಿದ್ದ 55 ವಿದ್ಯಾರ್ಥಿಗಳ ಪೈಕಿ 51 ಮಕ್ಕಳು ಪೋಷಕರೊಂದಿಗೆ ವಲಸೆ ಹೋಗಿದ್ದು, ಮಕ್ಕಳ ಶಿಕ್ಷಣವೂ ಅತಂತ್ರವಾಗಿದೆ.

ಮನೆ ಕಳೆದುಕೊಂಡ ಸುಮಾರು 25ರಿಂದ 30 ಕುಟುಂಬಗಳು ಬೋಗಿನದಿ ನದಿಪಾತ್ರದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ಆಶ್ರಯ ಪಡೆದಿದ್ದವು. ಆದರೆ ಕಾರ್ಯಾಚರಣೆ ನಡೆದ ಆರು ದಿನಗಳ ಬಳಿಕ (ನವೆಂಬರ್ 19ರಂದು) ಪೊಲೀಸರು 24 ಗಂಟೆಗಳ ಗಡುವು ನೀಡಿ ಆ ತಾತ್ಕಾಲಿಕ ಶೆಡ್‌ಗಳನ್ನೂ ತೆರವುಗೊಳಿಸಿದ್ದಾರೆ. ಇದರಿಂದಾಗಿ ಹಸುಗೂಸುಗಳು, ಬಾಣಂತಿಯರು ಮತ್ತು ವೃದ್ಧರು ಯಾವುದೇ ಆಶ್ರಯವಿಲ್ಲದೆ ಬೀದಿಯಲ್ಲೇ ಬದುಕು ದೂಡುವಂತಾಗಿದೆ.

ಈ ನಡುವೆ, ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಆಸಿಫ್ ಮುಜ್ತಬಾ ಸೇರಿದಂತೆ ಹಲವರು ಹಂಚಿಕೊಂಡಿರುವ ವರದಿಗಳು ತೀವ್ರ ಆಕ್ರೋಶ ಹುಟ್ಟುಹಾಕಿವೆ. ತೆರವು ಕಾರ್ಯಾಚರಣೆಯ ವೇಳೆ ಅಕ್ಕಪಕ್ಕದ ಹಿಂದೂ ಕುಟುಂಬಗಳಿಗೆ ತಮ್ಮ ಮನೆಯ ಸಾಮಗ್ರಿಗಳನ್ನು ಸುರಕ್ಷಿತವಾಗಿ ಹೊರತೆಗೆಯಲು ಸಮಯ ಮತ್ತು ಅವಕಾಶ ನೀಡಲಾಗಿದ್ದರೆ, ಮುಸ್ಲಿಂ ಕುಟುಂಬಗಳಿಗೆ ವಸ್ತುಗಳನ್ನು ತೆಗೆದುಕೊಳ್ಳಲೂ ಅವಕಾಶ ನೀಡದೆ ಏಕಾಏಕಿ ಮನೆಗಳನ್ನು ಕೆಡವಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರವೇ ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮುಕ್ತಗೊಳಿಸಲಾಗುತ್ತಿದ್ದು, ಇದರಲ್ಲಿ ಯಾವುದೇ ಧರ್ಮದ ತಾರತಮ್ಯವಿಲ್ಲ ಎಂದು ಅಸ್ಸಾಂ ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಸ್ಸಾಂನಾದ್ಯಂತ ನಡೆಯುತ್ತಿರುವ ಬೃಹತ್ ತೆರವು ಕಾರ್ಯಾಚರಣೆಗಳ ಸರಣಿಯ ಭಾಗವಾಗಿಯೇ ಈ ಕ್ರಮವನ್ನೂ ನೋಡಲಾಗುತ್ತಿದೆ. ಸರ್ಕಾರದ ಅಂಕಿಅಂಶಗಳನ್ನೇ ಮುಂದಿಟ್ಟಿರುವ ಮಾನವ ಹಕ್ಕುಗಳ ಸಂಘಟನೆಗಳು, ಈ ಕಾರ್ಯಾಚರಣೆಗಳು ಬಂಗಾಳಿ ಮಾತನಾಡುವ ಮುಸ್ಲಿಂ ಸಮುದಾಯವನ್ನೇ ಅಸಮಾನವಾಗಿ ಗುರಿಯಾಗಿಸಿಕೊಂಡಿವೆ ಎಂದು ಗಂಭೀರವಾಗಿ ಪ್ರಶ್ನಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ: ಕರ್ನಾಟಕ ಸರ್ಕಾರದಿಂದ ಇಂಡಿಯನ್ ಆಯಿಲ್‌ಗೆ ಕಾರಣ ಕೇಳಿ ನೋಟಿಸ್

ಬೆಂಗಳೂರು ಸಮೀಪದ ದೇವನಗೊಂದಿ ಟರ್ಮಿನಲ್‌ನಲ್ಲಿ ಪೆಟ್ರೋಲ್‌ಗೆ ನಿಗದಿತ ಶೇ. 20 ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದು ತಪಾಸಣೆಯ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಇಂಡಿಯನ್ ಆಯಿಲ್ ಕಾರ್ಪೊರೇಷನ್...

ಪೌರಕಾರ್ಮಿಕರ ಸ್ವಂತ ಮನೆ ಕನಸಿಗೆ ಸರ್ಕಾರದ ಬಲ; ಮೈಸೂರಿನಲ್ಲಿ 158 ಕುಟುಂಬಗಳ ವಸತಿ ಸಮುಚ್ಚಯ ಉದ್ಘಾಟಿಸಿದ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಹಗಲಿರುಳು ಶ್ರಮಿಸುವ ಪೌರಕಾರ್ಮಿಕರಿಗೆ ಸ್ವಂತ ಮನೆಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪೌರಕಾರ್ಮಿಕರ ಬದುಕಿನಲ್ಲಿ ಗೌರವ, ಸ್ವಾಭಿಮಾನ ಮತ್ತು ಭದ್ರತೆ ತರುವ...

ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿದರೆ ಡಿಎಂಕೆ ತನ್ನ ‘ನಿಲುವು ಬದಲಾವಣೆ’ಗೆ ವಿವರಣೆ ನೀಡಬೇಕು: ಕಾರ್ತಿ ಚಿದಂಬರಂ

ಈ ಹಿಂದೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿರೋಧಿಸಿದ್ದ ಡಿಎಂಕೆ, ಇದೀಗ ಅದನ್ನು ಬೆಂಬಲಿಸಲು ನಿರ್ಧರಿಸಿದರೆ ತನ್ನ ನಿಲುವು ಬದಲಾವಣೆಗೆ (ಯು-ಟರ್ನ್) ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಶುಕ್ರವಾರ...

ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕನ ನೇಮಕ ರದ್ದು: 10 ದಿನದಲ್ಲಿ ಹೊಸ ನಿರ್ಧಾರಕ್ಕೆ ಹೈಕೋರ್ಟ್ ಸೂಚನೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ (LoP) ರಿತಬ್ರತ ಬ್ಯಾನರ್ಜಿ ಅವರನ್ನು ನೇಮಿಸಿದ್ದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಕೃಷ್ಣ ರಾವ್ ಅವರ ಪೀಠವು ಈ ತೀರ್ಪು ನೀಡಿದ್ದು,...

‘ಒಂದು ನಿರ್ದಿಷ್ಟ ವರ್ಗಕ್ಕೆ ಮಣೆ’: ಉನ್ನತ ನ್ಯಾಯಾಂಗದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರ ಕಡಿಮೆ ಪ್ರಾತಿನಿಧ್ಯಕ್ಕೆ ಮಾಜಿ ಸಿಜೆಐ ಗವಾಯಿ ಆಕ್ಷೇಪ

ನವದೆಹಲಿ: ದೇಶದ ಉನ್ನತ ನ್ಯಾಯಾಂಗದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರೆ ಹಿಂದುಳಿದ ವರ್ಗ (ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮರ್ಪಕ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಭಾರತದ ಮಾಜಿ ಮುಖ್ಯ...

ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು!

ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಹಿಳಾ ಮೀಸಲಾತಿಯ ಹೊಸ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ (ನವೆಂಬರ್ 27) ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಮುಂದಿನ ವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ...

ಪೆಟ್ರೋಲ್ ಬಂಕ್‌ಗಳ ಬೆನ್ನಲ್ಲೇ IOCL ಟರ್ಮಿನಲ್‌ನಲ್ಲಿ ಪರಿಶೀಲನೆ! 3,000 ಲೀಟರ್‌ಗೆ 14 ಲೀಟರ್ ಹೆಚ್ಚು ಎಥೆನಾಲ್, 4–6 ಲೀಟರ್ ಕಡಿಮೆ ಪೆಟ್ರೋಲ್ ಪತ್ತೆ: ಸಚಿವ ರಿಜ್ವಾನ್ ಅರ್ಷದ್ ಮಾಹಿತಿ

ಬೆಂಗಳೂರು: ಪೆಟ್ರೋಲ್‌ನಲ್ಲಿ ನಿಗದಿತ E20 (ಶೇ.20 ಎಥೆನಾಲ್) ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದನ್ನು ಕರ್ನಾಟಕ ಸರ್ಕಾರ ಬಯಲಿಗೆ ತಂದ ಬೆನ್ನಲ್ಲೇ, ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು ತೈಲ ಮಾರುಕಟ್ಟೆ ಕಂಪನಿಗಳ...

ಕ್ಷೇತ್ರ ಮರುವಿಂಗಡಣೆ ಮಸೂದೆ: ನಮಗೆ ಅನುಕೂಲವಾಗಿದ್ದರೆ ಮಾತ್ರ ಒಪ್ಪಿಗೆ; ಡಿಎಂಕೆ ಸ್ಪಷ್ಟನೆ

ನವೆಂಬರ್ 30ರಂದು ಲೋಕಸಭೆಯ ವಿಶೇಷ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇಂದು (ನವೆಂಬರ್ 30) ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ಕರೆದಿದೆ. ಮೂಲಗಳ ಪ್ರಕಾರ, ಈ ಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆಗೆ...

ಪಶ್ಚಿಮ ಬಂಗಾಳ SIR ವಿವಾದ: ಮುದ್ರೆ ಇಲ್ಲದ ಫಾರ್ಮ್ ಹಿಡಿದು ಸಂತ್ರಸ್ತ ಮೇಲ್ಮನವಿದಾರರ ಮನೆಗೆ ಪೊಲೀಸರ ಭೇಟಿ! “ಆದೇಶ ನೀಡಿದವರು ಯಾರು?” ಸ್ಪಷ್ಟನೆ ನೀಡುವಂತೆ ಮುಖ್ಯಚುನಾವಣಾ ಆಯುಕ್ತರಿಗೆ ಸಂಸದರ ಪತ್ರ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆಕ್ಷೇಪಿಸಿ, ಮರುಸೇರ್ಪಡೆಗಾಗಿ ಮೇಲ್ಮನವಿ ನ್ಯಾಯಮಂಡಳಿಗಳ (Appellate Tribunals) ಮುಂದೆ ಅರ್ಜಿ ಸಲ್ಲಿಸಿರುವ ನಾಗರಿಕರ...

ಪಶ್ಚಿಮ ಬಂಗಾಳ SIR ವಿವಾದ: ಸಂತ್ರಸ್ತ ಮೇಲ್ಮನವಿದಾರರ ಮನೆಗೆ ಚುನಾವಣಾ ಆಯೋಗದ ಬದಲು ಪೊಲೀಸರ ಭೇಟಿ! ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸುಪ್ರೀಂ ಸೂಚನೆ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆಕ್ಷೇಪಿಸಿ, ಸೇರ್ಪಡೆಗಾಗಿ ಮೇಲ್ಮನವಿ ನ್ಯಾಯಮಂಡಳಿಗಳ (Appellate Tribunals) ಮುಂದೆ ಅರ್ಜಿ ಸಲ್ಲಿಸಿರುವ ನಾಗರಿಕರ...