Homeಮುಖಪುಟಕೇರಳದಲ್ಲಿ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರನ ಕುರಿತು ಸಿನೆಮಾ: ದ್ವೇಷಾಭಿಯಾನ ಪ್ರಾರಂಭಿಸಿದ ಹಿಂದುತ್ವವಾದಿಗಳು

ಕೇರಳದಲ್ಲಿ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರನ ಕುರಿತು ಸಿನೆಮಾ: ದ್ವೇಷಾಭಿಯಾನ ಪ್ರಾರಂಭಿಸಿದ ಹಿಂದುತ್ವವಾದಿಗಳು

ಬಲಪಂಥೀಯರ ಧ್ವೇಷಾಭಿಯಾನ ಅಧಿಕವಾಗುತ್ತಿದ್ದಂತೆ ಕೇರಳದ ಇತರ ಮೂವರು ಮಲಯಾಳಂ ನಿರ್ದೇಶಕರು "ವಾರಿಯಂಕುನ್ನತ್ ಕುಂಞ್ಞಹ್ಮದ್ ಹಾಜಿ" ಅವರನ್ನು ಇಟ್ಟುಕೊಂಡು ಚಿತ್ರ ನಿರ್ಮಿಸುವುದಾಗಿ ಘೋಷಿಸಿದ್ದಾರೆ.

- Advertisement -
- Advertisement -

20 ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕೇರಳದ ಮಲಬಾರ್ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ “ವಾರಿಯಂಕುನ್ನತ್ ಕುಂಞ್ಞಹ್ಮದ್ ಹಾಜಿ”ಯ ಜೀವನಾಧಾರಿತ ಸಿನೆಮಾ ಮಾಡುವುದಾಗಿ ಘೋಷಣೆಯಾಗುತ್ತಿದ್ದಂತೆ, ಬಲಪಂಥೀಯರು ಇದರ ವಿರುದ್ಧ ದ್ವೇಷದ ಅಭಿಯಾನ ಪ್ರಾರಂಭಿಸಿದ್ದಾರೆ.

ಬಲಪಂಥೀಯ ಹಿಂದುತ್ವವಾದಿ ಸಂಘಟನೆಗಳು ಘೋಷಿತ ಸಿನಿಮಾದ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

‘ವಾರಿಯಂಕುನ್ನನ್’ ಎಂದು ಹೆಸರಿಸಲಾಗಿರುವ ಈ ಚಿತ್ರವನ್ನು ಮಲಯಾಳಂ ಚಿತ್ರ ರಂಗದ ಖ್ಯಾತ ನಿರ್ದೇಶಕ ಆಶಿಕ್ ಅಬು ನಿರ್ದೇಶಿಸಲಿದ್ದು, ‘ವಾರಿಯಂಕುನ್ನತ್ ಕುಂಞ್ಞಹ್ಮದ್ ಹಾಜಿ’ ಪಾತ್ರವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸಲಿದ್ದಾರೆ. ವಾರಿಯಂಕುನ್ನತ್ ಕುಂಞ್ಞಹ್ಮದ್ ಹಾಜಿ ನೇತೃತ್ವದ ಮಲಬಾರ್ ದಂಗೆಯ 100 ನೇ ವರ್ಷಾಚರಣೆಯಾದ 2021 ರಲ್ಲಿ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

“ಅವರು ವಿಶ್ವದ ಕಾಲು ಭಾಗವನ್ನು ಆಳಿದ ಸಾಮ್ರಾಜ್ಯದ ವಿರುದ್ಧ ನಿಂತರು. ಬ್ರಿಟಿಷರ ವಿರುದ್ಧ ಹಿಂದೆಂದೂ ಯುದ್ಧ ಮಾಡದ ಸೈನ್ಯದೊಂದಿಗೆ ತನ್ನದೇ ದೇಶವನ್ನು ಕಟ್ಟಿಕೊಂಡರು. ಇತಿಹಾಸವನ್ನು ಸುಟ್ಟು ಹೂಳಲಾಗಿದ್ದರೂ, ದಂತಕಥೆಯು ಜೀವಂತವಾಗಿದೆ! ನಾಯಕ, ಸೈನಿಕ, ದೇಶಭಕ್ತನ ದಂತಕಥೆ. 1921 ರ ಮಲಬಾರ್ ಕ್ರಾಂತಿಯ ಮುಖವಾದ ವ್ಯಕ್ತಿಯ ಚಿತ್ರ ‘ವಾರಿಯಂಕುನ್ನನ್’. ಮಲಬಾರ್ ಕ್ರಾಂತಿಯ 100 ನೇ ವಾರ್ಷಿಕೋತ್ಸವವಾದ 2021 ರಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ.” ನಟ ಪೃಥ್ವಿರಾಜ್ ಸುಕುಮಾರನ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಬಲಪಂಥೀಯ ಹಿಂದುತ್ವವಾದಿ ಸಂಘಟನೆಗಳು ಚಿತ್ರದ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದು, ಚಿತ್ರದ ವಿರುದ್ದ ಈಗಾಗಲೇ ಧ್ವೇಷಾಭಿಯಾನ ಪ್ರಾರಂಭವಾಗಿದೆ. ಬಲಪಂಥೀಯ ವೆಬ್ಸೈಟ್ ಒಪಿಇಂಡಿಯಾ ಜೂನ್ 23 ರಂದು ಪೋಸ್ಟ್ ಮಾಡಿದ ಲೇಖನವೊಂದರಲ್ಲಿ ವಾರಿಯಂಕುನ್ನತ್ ಅವರನ್ನು ‘ಜಿಹಾದಿ’ ಹಾಗೂ ‘ಭಯೋತ್ಪಾದಕ’ ಎಂದು ಉಲ್ಲೇಖಿಸಿದೆ. ಈ ಸ್ವಾತಂತ್ರ್ಯ ಹೋರಾಟಗಾರ 1921 ರಲ್ಲಿ ಸಾವಿರಾರು ಹಿಂದೂಗಳನ್ನು ಹತ್ಯೆ ಮಾಡಿದ್ದಾರೆಂದು ಮತ್ತು ನೂರಾರು ಹಿಂದೂ ದೇವಾಲಯಗಳ ನಾಶಕ್ಕೆ ಕಾರಣವಾಗಿದ್ದಾರೆಂದು ಅದು ಆರೋಪಿಸಿದೆ.

ಇತ್ತ ಕಡೆ ಬಲಪಂಥೀಯರ ಧ್ವೇಷಾಭಿಯಾನ ಅಧಿಕವಾಗುತ್ತಿದ್ದಂತೆ ಇತರ ಮೂವರು ಮಲಯಾಳಂ ನಿರ್ದೇಶಕರು “ವಾರಿಯಂಕುನ್ನತ್ ಅಹ್ಮದ್ ಹಾಜಿ” ಅವರನ್ನು ಇಟ್ಟುಕೊಂಡು ಚಿತ್ರ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ಅಲಿ ಅಕ್ಬರ್ ಎಂಬ ನಿರ್ದೇಶಕ “ತಾನು ‘ಅಹ್ಮದ್ ಹಾಜಿ’ಯನ್ನು ಖಳನಾಯಕನಾಗಿ ತೋರಿಸಲಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಖಿಲಾಫತ್ ಚಳವಳಿಯ ಮುಖಂಡ ಅಲಿ ಮುಸ್ಲಿಯಾರ್ ಅವರನ್ನು ಬಂಧಿಸಿದ ನಂತರ ಖ್ಯಾತ ವಿದ್ವಾಂಸರಾಗಿದ್ದ ಮತ್ತು ಬ್ರಿಟಿಷರ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿದ್ದ ವಾರಿಯಂಕುನ್ನತ್ ಶಸ್ತ್ರಾಸ್ತ್ರ ಕೈಗೊಳ್ಳಲು ನಿರ್ಧರಿಸಿದ್ದರು. ನಂತರ ಅವರು ಕೆಲವು ಸಿಪಾಯಿಗಳ ಸಹಾಯದಿಂದ ಸೈನ್ಯವನ್ನು ಸಂಘಟಿಸಿ ದಂಗೆಗೆ ಕಾರಣರಾದರು, ಇದು ಕೇರಳದ ಮಲಬಾರ್ ನಾದ್ಯಂತ ಹರಡಿತು.

ಇದರ ನಂತರ ಈ ಸೇನಾನಿಗಳು ಬ್ರಿಟಿಷ್ ಅಧಿಕಾರಿಗಳು ಓಡಿಸಿ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಅಲ್ಲಿ ”ಮಲಬಾರ್ ರಾಜ್ಯ” ಎಂಬ ಸ್ವತಂತ್ರ ರಾಜ್ಯವನ್ನು ಘೋಷಿಸಿ 1921 ರಲ್ಲಿ “ವಾರಿಯಂಕುನ್ನತ್ ಅಹ್ಮದ್ ಹಾಜಿ” ಅದರ ಆಡಳಿತಗಾರನಾದರು.

ಈ ಚಳವಳಿಯೊಳಗೆ ವಿಭಜನೆಗಳನ್ನು ಸೃಷ್ಟಿಸಲು ಬ್ರಿಟಿಷರು ಹಿಂದೂ-ಮುಸ್ಲಿಂ ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸಿ “ವಾರಿಯಂಕುನ್ನತ್ ಕುಂಞ್ಞಹ್ಮದ್ ಹಾಜಿ” ಅವರನ್ನು ‘ಮುಸ್ಲಿಂ ಮತಾಂಧ’ ಎಂದು ಚಿತ್ರಿಸಲು ಪ್ರಯತ್ನಿಸಿದ್ದರು. ಆದರೆ ಈ ಸ್ವಾತಂತ್ರ್ಯ ಹೋರಾಟಗಾರ ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ಪರಿಗಣಿಸಿದ್ದಾರೆಂದು ಇತಿಹಾಸ ತಜ್ಞರು ಉಲ್ಲೇಖಿಸಿದ್ದಾರೆ.

1922 ರಲ್ಲಿ, ಅವರ ಸ್ನೇಹಿತನೊಬ್ಬ ಸ್ವಾತಂತ್ರ ಹೋರಾಟಗಾರರಿಗೆ ದ್ರೋಹವೆಸಗಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಅವರ ಆಳ್ವಿಕೆಯು ಕೊನೆಗೊಂಡಿತು. ನಂತರ ಅವರನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು.


ಓದಿ: ಕೊರೊನಾ ವಿರುದ್ದದ ಹೋರಾಟ: ಕೇರಳದ ಆರೋಗ್ಯ ಮಂತ್ರಿಗೆ ವಿಶ್ವಸಂಸ್ಥೆಯಿಂದ ಗೌರವ


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...