Homeಮುಖಪುಟಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ

ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ

- Advertisement -
- Advertisement -

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಆಕ್ಸ್‌ಫರ್ಡ್ ಕೊವೀಡ್ -19 ಲಸಿಕೆಗೆ ಕೇಂದ್ರ ಸರ್ಕಾರ ನೇಮಿಸಿದ್ದ ಎಕ್ಸ್‌ಪರ್ಟ್ ಸಮಿತಿಯು ‌ಅನುಮತಿ ನೀಡಿದ್ದು, ಈಗ ಇದನ್ನು ಡಿಸಿಜಿಐ (Central Drugs Standard Control Organisation) ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಜೊತೆಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ (ICMR) ಕೋವಾಕ್ಸಿನ್ ಗಾಗಿ ಪಾಲುದಾರಿಕೆ ಹೊಂದಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ: ಭಾರತದಲ್ಲಿ ಮುಂದಿನ ವಾರ ಅಸ್ಟ್ರಾಜೆನೆಕಾಗೆ ಅನುಮತಿ ಸಾಧ್ಯತೆ

ಬ್ರಿಟನ್ ಔಷಧ ನಿಯಂತ್ರಕವು ಪ್ರಯೋಗದ ಡೇಟಾವನ್ನು ಪರೀಕ್ಷಿಸುತ್ತಿದ್ದು, ಒಂದು ವೇಳೆ ಭಾರತವು ಈ ಲಸಿಕೆಗೆ ಅನುಮತಿ ನೀಡಿದರೆ ಭಾರತವು ಅಸ್ಟ್ರಾಜೆನೆಕಾಗೆ ಅನುಮತಿ ನೀಡಿದ ಮೊದಲ ರಾಷ್ಟ್ರವಾಗಲಿದೆ.

ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ತಯಾರಿಸುವ ದೇಶವಾದ ಭಾರತವು ಮುಂದಿನ ತಿಂಗಳು ತನ್ನ ನಾಗರಿಕರಿಗೆ ಚುಚ್ಚುಮದ್ದನ್ನು ನೀಡಲು ಬಯಸಿದ್ದು, ಈಗಾಗಲೇ ಫೈಝೆರ್ ಮತ್ತು ಸ್ಥಳೀಯ ಕಂಪನಿ ಭಾರತ್ ಬಯೋಟೆಕ್ ತಯಾರಿಸಿದ ಲಸಿಕೆಗಳಿಗೆ ತುರ್ತು ಬಳಕೆಯ ದೃಡೀಕರಣ ಅರ್ಜಿಗಳನ್ನು ಸಹ ಪರಿಗಣಿಸುತ್ತಿದೆ.

ವಿಶ್ವದಲ್ಲೆ ಅತೀ ಹೆಚ್ಚು ಸೋಂಕಿತರಿರುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆಯು ಭಾರತದಂತಹ ಉಷ್ಣ ವಾತಾವರಣವಿರುವ ದೇಶಗಳಿಗೆ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಅಗ್ಗವಾಗಿದ್ದು, ಸಾಗಿಸಲು ಕೂಡಾ ಸುಲಭವಾಗಿದೆ. ಅಲ್ಲದೆ ಇದನ್ನು ಸಾಮಾನ್ಯ ಫ್ರಿಜ್ ತಾಪಮಾನದಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಬಹುದಾಗಿದೆ ಎನ್ನಲಾಗಿದೆ.

ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಲಸಿಕೆಯ ಅನುಮತಿಗಾಗಿ ಬಂದಿದ್ದ ಮೂರು ಅರ್ಜಿಯನ್ನು ಡಿಸೆಂಬರ್ 9 ರಂದು ಪರಿಶೀಲಿಸಿದ್ದು, ಎಲ್ಲಾ ಕಂಪನಿಗಳಿಂದ ಹೆಚ್ಚಿನ ಮಾಹಿತಿ ಪಡೆದಿದೆ.


ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ: ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಹಳ್ಳಿಗಳಿಗೆ ಹೊರಟ ಯುವಜನತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...