Homeಕರ್ನಾಟಕಬೆಂಗಳೂರಿನಲ್ಲಿ ಶವ ಸುಡಲೂ ಸೌದೆಯ ಕೊರತೆ: ಬೆಡ್ ಎತ್ತಿಕೊಂಡು ಸಂಸದ ಸೂರ್ಯ ನಾಪತ್ತೆ!

ಬೆಂಗಳೂರಿನಲ್ಲಿ ಶವ ಸುಡಲೂ ಸೌದೆಯ ಕೊರತೆ: ಬೆಡ್ ಎತ್ತಿಕೊಂಡು ಸಂಸದ ಸೂರ್ಯ ನಾಪತ್ತೆ!

ಕೋವಿಡ್ ಸಾವುಗಳ ಸಂಖ್ಯೆ ಹೆಚ್ಚಿದಂತೆ ಬೆಂಗಳೂರಿನ ಸ್ಮಶಾನಗಳಲ್ಲಿ ಪಾಳೆ ಹೆಚ್ಚುತ್ತಿದೆ. ಆದರೆ ಇನ್ನೊಂದು ಕಡೆ ಶವ ಸುಡಲು ಸೌದೆ (ಕಟ್ಟಿಗೆ) ಕೊರತೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ.

- Advertisement -
- Advertisement -

ಬೆಂಗಳೂರಿನ ಜನಪ್ರತಿನಿಧಿಗಳು, ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಸಂಬಂಧಿಸಿದವರು ಪಲಾಯನ ಮಾಡಿದ್ದಾರೆ. ಬೆಡ್ ಬ್ಲಾಕಿಂಗ್ ಬಗ್ಗೆ ‘ಹವಾ’ ಎಬ್ಬಿಸಿದ ಸಂಸದ ತೇಜಸ್ವಿ ಸೂರ್ಯ ಕೂಡಾ ಈಗ ನಾಪತ್ತೆಯಾಗಿದ್ದಾರೆ. ಅವರೀಗ ಯಾವ ಮಾಧ್ಯಮದ ಫೋನ್ ಕರೆಯನ್ನು ಸ್ವೀಕರಿಸದ ಮಟ್ಟಿಗೆ ಜನದ್ರೋಹಿಯಾಗಿದ್ದಾರೆ.

ಹತ್ತು ದಿನಗಳ ಹಿಂದಷ್ಟೆ, ಆಕ್ಸಿಜನ್ ಮತ್ತು ಬೆಡ್‌ಗಳ ಕೊರತೆಯಿದ್ದಾಗ ಕಂದಾಯ ಸಚಿವ, ಬೆಂಗಳೂರಿನ ಶಾಸಕ ಆರ್. ಅಶೋಕ್ ಹೊಸ ಸ್ಮಶಾನ ನಿರ್ಮಿಸುತ್ತೇವೆ ಎಂದರು. ಅದು ಇನ್ನೂವರೆಗೂ ಆಗಿಲ್ಲ. ರಿಯಲ್ ಎಸ್ಟೇಟ್ ಮಾಡುವ ಜನರಿಗೆ ‘ಅಮೂಲ್ಯ’ ಭೂಮಿಯನ್ನು ಸ್ಮಶಾನಕ್ಕೆ ಪಡೆಯಲು ಮನಸ್ಸು ಒಪ್ಪುತ್ತದೆಯೇ ಎಂಬ ಪ್ರಶ್ನೆ ಬೆಂಗಳೂರಿಗರನ್ನು ಈಗ ಕಾಡುತ್ತಿದೆ.

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಸೂರ್ಯ ಮತ್ತೆ ಪ್ರತ್ಯಕ್ಷರಾಗಿ, ಸೌದೆ ಕದ್ದ ಮುಸ್ಲಿಮರು ಎಂದೂ ಹೇಳುವ ಸಾಧ್ಯತೆಗಳಿವೆ! ಜೀವವಿರೋಧಿ ಸಿದ್ದಾಂತದವರನ್ನು ಮತ್ತು ರಿಯಲ್ ಎಸ್ಟೇಟ್ ದಂಧೆಯವರನ್ನು (ಬಹುಪಾಲು ಅವರೇ ಇದ್ದಾರೆ) ಜನಪ್ರತಿನಿಧಿಗಳನ್ನಾಗಿ ಆರಿಸಿದ ಬೆಂಗಳೂರಿನ ಜನತೆಗೆ ಈಗ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ, ಸಿಕ್ಕರೆ ಆಕ್ಸಿಜನ್, ಚಿಕಿತ್ಸೆ ಸಿಗುತ್ತಿಲ್ಲ. ಆಕಸ್ಮಿಕ ಅಸು ನೀಗಿದರೆ ಸ್ಮಶಾನಗಳಲ್ಲಿ ಕಾಯಬೇಕು. ಅಲ್ಲೂ ಈಗ ಹೊಸ ಸಮಸ್ಯೆ ತಲೆದೋರಿದೆ. ಅಲ್ಲೀಗ ಶವ ಸುಡಲು ಸೌದೆಯ ಅಭಾವ ಉಂಟಾಗಿದೆ.

ಶವಗಾರದಲ್ಲಿ ಶವ ಸುಡಲು ಸೌದೆ ಕೊರತೆ ಈಗ ಎದುರಾಗಿದ್ದು, ಇದು ಬರುವ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗಲಿದೆ. ಶವ ಹೂಳುವ ಪದ್ಧತಿ ಅಚರಿಸುವವರೂ ಕೂಡ ಈಗ ಅನಿವಾರ್ಯವಾಗಿ ಸುಡುವ ಪದ್ಧತಿ ಒಪ್ಪಿಕೊಂಡಿದ್ದಾರೆ. ಒಂದು ಕಡೆ ಸ್ಮಶಾನದಲ್ಲಿ ಕ್ಯೂ, ಇನ್ನೊಂದು ಕಡೆ ಸೌದೆ ಕೊರತೆ.

ಇಂತಹ ಹೊತ್ತಿನಲ್ಲೇ ‘ಸ್ಮಶಾನಕ್ಕೆ ಹೋಗುವ ದಾರಿ’ ಎಂಬ ಫ್ಲೆಕ್ಸ್ ಬೋರ್ಡ್ ಹಾಕಿ, ಅಲ್ಲಿ ನೀರು, ಚಹಾ ವಿತರಣೆ ಮಾಡುತ್ತೇವೆ ಎಂದು ಹೆಮ್ಮೆ ಪಡುವ ಬಿಜೆಪಿ ಶಾಸಕರ ಕ್ರೌರ್ಯವೂ ಜನರನ್ನು ಆಕ್ರೋಶಿತರನ್ನಾಗಿ ಮಾಡಿದೆ. ಜನರಿಗೆ ನೆರವು ನೀಡದ ಈ ಜನಪ್ರತಿನಿಧಿಗಳು ಅಕ್ಷರಶಃ ‘ಸ್ಮಶಾನಕ್ಕೆ ತಲುಪುವ ದಾರಿ’ಯನ್ನು ಸೃಷ್ಟಿ ಮಾಡಿದ್ದಾರೆ.
ಪ್ರತಿ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸುಮಾರು 1,500 ಕೆ.ಜಿ ಕಟ್ಟಿಗೆ ಬೇಕು ಎನ್ನಲಾಗಿದೆ. ನಿತ್ಯ ಸೌದೆ ಸಂಗ್ರಹ ಬಿಬಿಎಂಪಿಗೆ ಭಾರಿ ತಲೆನೋವು ಉಂಟು ಮಾಡಿದೆ. ಶವ ಸುಡಲು ಸೌದೆಗೂ ಶುರುವಾಗುತ್ತಾ ಹಾಹಾಕಾರ ಎಂಬ ಪ್ರಶ್ನೆ ಎದ್ದಿದೆ. ಪ್ರತಿ ಸ್ಮಶಾನದಲ್ಲಿ ನಿತ್ಯ 40 ಕ್ಕಿಂತ ಹೆಚ್ಚು ಶವ ಸುಡಲಾಗುತ್ತಿದೆ.

ಇದನ್ನೂ ಓದಿ: Explainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

ಪರಿಸ್ಥಿತಿ ನಿಭಾಯಿಸಲು ಹೆಚ್ಚು ಮರಗಳನ್ನು ಕಡಿಯುವತ್ತ ಪಾಲಿಕೆಯ ಅರಣ್ಯ ವಿಭಾಗ ಮುಂದಾಗಬಹುದು ಎನ್ನಲಾಗಿದೆ.

ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ತಲಾ ಒಂದು ಅಥವಾ ಎರಡು ಸ್ಮಶಾನಗಳಿದ್ದು, ಅವು ಈಗ ಕೋವಿಡ್ ಶವಗಳ ದಟ್ಟಣೆಗೆ ತತ್ತರಿಸಿವೆ. ಈಗ ಸೌದೆಯ ಕೊರತೆಯೂ ಸೇರಿಕೊಂಡು ಅಂತ್ಯಸಂಸ್ಕಾರವೇ ಒಂದು ದೊಡ್ಡ ಸಮಸ್ಯೆಯಾಗಿದೆ. ಸುಡುವ ಈ ಹೊತ್ತಿನಲ್ಲಿ ಬೆಡ್ ವಿಚಾರದಲ್ಲಿ ಕೋಮುವಾದೀಕರಣ ಮಾಡಿ ಪರಾರಿಯಾದ ಸಂಸದರು ಯಾರ ಫೋನಿಗೂ ಸಿಗುತ್ತಿಲ್ಲ. ಕೊಲ್ಲುವ ಸಿದ್ದಾಂತದ ಜನರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ದೊಡ್ಡ ನಗರಗಳ ಸಮಸ್ಯೆ!

ಕಳೆದ ತಿಂಗಳಿನಿಂದ ಭಾರತವು ಇತರ ದೇಶಗಳಿಗಿಂತ ಹೆಚ್ಚು ಕೋವಿಡ್ ಪ್ರಕರಣಗಳನ್ನು ಕಂಡಿದೆ.
ಜನರು ಹಾಸಿಗೆಗಳಿಗಾಗಿ ಕಾಯುತ್ತ ಸಾವನ್ನಪ್ಪಿದ್ದಾರೆ, ಇನ್ನೊಂದು ಕಡೆ, ಆಮ್ಲಜನಕದ ಸರಬರಾಜು ಕಡಿಮೆಯಾಗಿ ಸಾವುಗಳು ಸಂಭವಿಸುತ್ತಿವೆ.

ಈಗ ಸ್ಮಶಾನಗಳಲ್ಲಿ ಸಹ ಸ್ಥಳಾವಕಾಶವಿಲ್ಲ, ಸ್ಮಶಾನದ ಕಾರ್ಮಿಕರು ಶವಗಳನ್ನು ಸುಡುತ್ತಲೇ ಬೆಂದು ಹೋಗಿದ್ದಾರೆ.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ಹಿಂದೂ ಧರ್ಮದಲ್ಲಿ, ಶವಸಂಸ್ಕಾರವು ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆಯ ವಿಧಿಗಳಲ್ಲಿ ಪ್ರಮುಖ ಭಾಗವಾಗಿದೆ. ಏಕೆಂದರೆ ಆತ್ಮವನ್ನು ಅದರಿಂದ ಬೇರ್ಪಡಿಸುವಂತೆ ಒತ್ತಾಯಿಸಲು ದೇಹವನ್ನು ನಾಶಪಡಿಸಬೇಕು ಎಂದು ಹಿಂದೂಗಳು ನಂಬುತ್ತಾರೆ.

ಭಾರತದ ರಾಜಧಾನಿ ದೆಹಲಿಯಲ್ಲಿ, ತಾತ್ಕಾಲಿಕ ಅಂತ್ಯಕ್ರಿಯೆಯ ನೆರವೇರಿಸಲು ಸೌದೆ ಬಳಸಿ ಸುಡುವಂತೆ ಸ್ಮಶಾನ ಕಾರ್ಮಿಕರು ಮತ್ತು ಪೌರ ಕಾರ್ಮಿಕರನ್ನು ಒತ್ತಾಯಿಸಲಾಗಿದೆ, ಉದ್ಯಾನವನಗಳು ಮತ್ತು ಇತರ ಖಾಲಿ ಸ್ಥಳಗಳನ್ನು ಶವಸಂಸ್ಕಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಉರುವಲುಗಳಾಗಿ ಬಳಸಲು ಅಧಿಕಾರಿಗಳು ದೆಹಲಿ ನಗರದ ಉದ್ಯಾನವನಗಳಲ್ಲಿನ ಮರಗಳನ್ನು ಕಡಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಈಗ ಬೆಂಗಳೂರಿನ ಉದ್ಯಾನವನಗಳ ಮರಗಳನ್ನು ಕತ್ತರಿಸದೇ ಅನ್ಯಮಾರ್ಗವಿಲ್ಲೆವೇನೋ?

ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಒಗ್ಗಟ್ಟಿನಿಂದ ಇದ್ದೇವೆ: ನಾನು, ಡಿ.ಕೆ. ಶಿವಕುಮಾರ್ ಸಹೋದರರಿದ್ದಂತೆ’: ಸಿಎಂ ಸಿದ್ದರಾಮಯ್ಯ

‘ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ, 2028ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 2, ಮಂಗಳವಾರ ಉಪಮುಖ್ಯಮಂತ್ರಿ...

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಚಾರಣೆಗೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಹಾಗೂ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌...

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಗಾಂಧಿ ಕುಟುಂಬದ ವಿರುದ್ಧ ಹೊಸ ಎಫ್‌ಐಆರ್‌ ದಾಖಲಿಸಿದ ಇಡಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹೊಸ ಎಫ್‌ಐಆರ್‌ ದಾಖಲಿಸಿದೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು,...

‘ಸಂಚಾರ ಸಾಥಿ’ ಆ್ಯಪ್‌ ಕಡ್ಡಾಯ: ಬಿಜೆಪಿ ದೇಶವನ್ನು ಸರ್ವಾಧಿಕಾರ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದೆ ಎಂದ ಪ್ರಿಯಾಂಕಾ ಗಾಂಧಿ 

ಮೊಬೈಲ್ ಫೋನ್ ತಯಾರಕರು ಹೊಸ ಹ್ಯಾಂಡ್‌ಸೆಟ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಸ್ಥಾಪಿಸುವಂತೆ ಟೆಲಿಕಾಂ ಇಲಾಖೆ ಕೇಳಿಕೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ಇದನ್ನು "ಗೂಢಚಾರಿ ಅಪ್ಲಿಕೇಶನ್" ಎಂದು ಕರೆದಿದ್ದಾರೆ....

ಎಸ್‌ಐಆರ್ ಚರ್ಚೆಗೆ ಬಿಗಿಪಟ್ಟು ಹಿಡಿದ ಪ್ರತಿಪಕ್ಷಗಳು, ಉಭಯ ಸದನಗಳಲ್ಲಿ ಕೋಲಾಹಲ ; ಕಲಾಪ ಮುಂದೂಡಿಕೆ

ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದೂ (ಡಿ.2) ಕೂಡ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಪಟ್ಟು ಹಿಡಿದು ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದೆ....

ಆಂಧ್ರಪ್ರದೇಶ| ‘ನೀವು ಕೊಳಕು ಜಾತಿಗೆ ಸೇರಿದವರು..’ ಎಂದು ದಲಿತ ವಿದ್ಯಾರ್ಥಿಗಳನ್ನು ನಿಂದಿಸಿದ ಇಂಗ್ಲಿಷ್ ಶಿಕ್ಷಕ

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಿಂದ ಆಘಾತಕಾರಿ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯಂಡಪಲ್ಲಿ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕರು ದಲಿತ ಸಮುದಾಯದ ವಿದ್ಯಾರ್ಥಿಗಳ ವಿರುದ್ಧ ಜಾತಿ ನಿಂದನೆ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು...

ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯಗೊಳಿಸಿದ ಕೇಂದ್ರ : ಗೌಪ್ಯತೆ ಕಳೆದುಕೊಳ್ಳುವ ಆತಂಕ

ಸ್ಮಾರ್ಟ್‌ಫೋನ್ ತಯಾರಕರು ಎಲ್ಲಾ ಹೊಸ ಮೊಬೈಲ್‌ ಫೋನ್‌ಗಳಲ್ಲಿ ಸರ್ಕಾರಿ ಸ್ವಾಮ್ಯದ ಸೈಬರ್ ಭದ್ರತಾ ಅಪ್ಲಿಕೇಶನ್ 'ಸಂಚಾರ್ ಸಾಥಿ'ಯನ್ನು ಮೊದಲೇ ಇನ್‌ಸ್ಟಾಲ್‌ (Pre-install) ಮಾಡಬೇಕು ಮತ್ತು ಬಳಕೆದಾರರು ಅದನ್ನು ಡಿಲಿಟ್ ಮಾಡದಂತೆ ನೋಡಿಕೊಳ್ಳಬೇಕು ಎಂದು...

ಗಡಿಪಾರು ಮಾಡಲಾಗಿರುವ ತುಂಬು ಗರ್ಭಿಣಿ ಬಂಗಾಳಿ ಮಹಿಳೆ ಬಾಂಗ್ಲಾ ಜೈಲಿನಿಂದ ಬಿಡುಗಡೆ

ಅಕ್ರಮ ವಲಸಿಗರು ಎಂದು ಭಾರತೀಯ ಅಧಿಕಾರಿಗಳು ಬಲವಂತವಾಗಿ ಗಡಿಯಾಚೆಗೆ ತಳ್ಳಿರುವ ತುಂಬು ಗರ್ಭಿಣಿ ಬಂಗಾಳಿ ಮಹಿಳೆ ಬಾಂಗ್ಲಾದೇಶದ ಜೈಲಿನಿಂದ ಸೋಮವಾರ (ಡಿಸೆಂಬರ್ 1) ಸಂಜೆ ಬಿಡುಗಡೆಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ...

‘ಕೊಲ್ಲುವಂತೆ ಪೊಲೀಸರೇ ನನ್ನ ಸಹೋದರನಿಗೆ ಪ್ರಚೋದಿಸಿದರು..’; ಪ್ರೇಮಿಯ ಶವವನ್ನು ‘ಮದುವೆ’ಯಾದ ಯುವತಿಯ ಗಂಭೀರ ಆರೋಪ

ಮರ್ಯಾದೆಗೇಡು ಹತ್ಯೆ ಬಳಿಕ ತನ್ನ ಪ್ರೇಮಿಯ ಶವವನ್ನು 'ಮದುವೆ'ಯಾದ ಮಹಾರಾಷ್ಟ್ರದ ಯುವತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಗೆಳೆಯನನ್ನು ಇಬ್ಬರು ಪೊಲೀಸರು ನಿಂದಿಸಿದ ಬಳಿಕ ನನ್ನ ಸಹೋದರ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ...

ಮದುವೆ ಮನೆಯಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ ಪ್ರಶ್ನಿಸಿದ್ದಕ್ಕೆ, ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್ ಹತ್ಯೆ

ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಪುರುಷರ ಗುಂಪನ್ನು ಪ್ರಶ್ನಿಸಿದ್ದಕ್ಕಾಗಿ 20 ಜನ ದುಷ್ಕರ್ಮಿಗಳ ಗುಂಪು ಹೊಂಚುಹಾಕಿ, 26 ವರ್ಷದ ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್ ಅನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿರುವ ಘಟನೆ...