Homeಮುಖಪುಟತಮಿಳುನಾಡಿನಲ್ಲಿ ಪ್ರತ್ಯೇಕತೆಯ ಕಿಡಿ ಹಚ್ಚಿದ ಬಿಜೆಪಿ: ಮುನ್ನೆಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು

ತಮಿಳುನಾಡಿನಲ್ಲಿ ಪ್ರತ್ಯೇಕತೆಯ ಕಿಡಿ ಹಚ್ಚಿದ ಬಿಜೆಪಿ: ಮುನ್ನೆಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು

- Advertisement -
- Advertisement -

ಬಿಜೆಪಿ ದೇಶಾದ್ಯಂತ ಒಡೆದು ಆಳುವ ನೀತಿಯ ಮೂಲಕ ಅಧಿಕಾರವನ್ನು ಹಿಡಿಯುತ್ತದೆ ಎಂಬ ಆರೋಪ ದೇಶದ ಅನೇಕ ರಾಜ್ಯಗಳಲ್ಲಿ ಕೇಳಿಬಂದಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಎಲ್‌ಜೆಪಿ ಪಕ್ಷವನ್ನು ಬಿಜೆಪಿ   ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದೆ. ಹಾಗೇ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದರು. ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲಿ ಅಲ್ಲಿ ಕೂಡ ಪ್ರತ್ಯೇಕ ಉತ್ತರ ಪ್ರಾಂತ್ಯದ ರಚನೆಗೆ ಬಿಜೆಪಿ ಪುಷ್ಠಿ ನೀಡಿತ್ತು. ಈಗ ತಮಿಳು ನಾಡಿನಲ್ಲಿ ಕೂಡ ಪ್ರತ್ಯೇಕ ರಾಜ್ಯ ರಚನೆಯ ಚರ್ಚೆಯನ್ನು ಬಿಜೆಪಿಯೇ ಹುಟ್ಟುಹಾಕಿದೆ. ಕೊಂಗನಾಡು ಪ್ರತ್ಯೇಕ ರಾಜ್ಯ ಬೇಡಿಕೆಯ ಕೂಗು ಮತ್ತೊಮ್ಮೆ ತಮಿಳುನಾಡಿನಲ್ಲಿ ಆರಂಭವಾಗಿದೆ.

ಬಿಜೆಪಿ ತಮಿಳು ನಾಡು ರಾಜ್ಯಾಧ್ಯಕ್ಷ  ಎಲ್ ಮುರುಗನ್ ಅವರಿಗೆ  ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದೆ. ಇದೇ ಸಂದರ್ಭದಲ್ಲಿ ಕೊಂಗ ನಾಡು ಪ್ರತ್ಯೇಕ ರಾಜ್ಯದ ಬೇಡಿಕೆ ಮುನ್ನೆಲೆಗೆ ಬಂದಿರುವುದು ಕೇವಲ ಕಾಕತಾಳೀಯವಲ್ಲ. ಬಿಜೆಪಿ ಆರಂಭದಿಂದಲೂ ಕೊಂಗು ನಾಡು ಎಂದು ಕರೆಯಲ್ಪಡುವ ಪಶ್ಚಿಮ ತಮಿಳುನಾಡಿನ ನಾಯಕರನ್ನೇ ಪಕ್ಷದ ಮುಂಚೂಣಿಯಲ್ಲಿ ನಿಲ್ಲಿಸಿದೆ. ಬಿಜೆಪಿಯ ಮತ ಬ್ಯಾಂಕ್ ಇರುವುದೂ ಈ ಪ್ರಾಂತ್ಯದಲ್ಲಿಯೇ.

ದೆಹಲಿಯ ಅಧಿಕಾರ ಕೇಂದ್ರದ ಪಡಸಾಲೆಯಲ್ಲಿ ಕೆಲಸ ಮಾಡುವ ಕೆಲವರು  ವಾರದ ಆರಂಭದಲ್ಲಿ ತಮಿಳುನಾಡು ಟ್ವಿಟರ್ ವಲಯದಲ್ಲಿ ಪ್ರತ್ಯೇಕತೆಯ ಚರ್ಚೆಗೆ ಮುನ್ನಡಿ ಬರೆದಿದ್ದಾರೆ.  ಕೆಲವು ಅಧಿಕೃತ ಪ್ರಕಟಣೆಗಳಲ್ಲಿ, ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯ ಸಚಿವ  ಎಲ್ ಮುರುಗನ್ ಅವರ ಬಯೋ ಡೇಟಾದಲ್ಲಿ  ಹುಟ್ಟಿದ ಜಿಲ್ಲೆ ಊರುಗಳ ವಿಳಾಸದ ಬದಲಾಗಿ ಕೊಂಗು ನಾಡು ಎಂದು ನಮೂದಿಸಲಾಗಿದೆ. ಇದು ಆಕಸ್ಮಿಕವಾಗಿ ನಡೆದ ಬೆಳವಣಿಗೆಯಲ್ಲ. ಬಿಜೆಪಿ ಹೊಸದಾಗಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕೂಡ ಅಣ್ಣಾಮಲೈ ಅವರನ್ನು.  ಅಣ್ಣಾ ಮಲೈ ಕೂಡ ಇದೇ ಕೊಂಗು ನಾಡು ಪ್ರದೇಶದವರು.

ಇದನ್ನೂ ಓದಿ: ತಮಿಳುನಾಡು ಸರ್ಕಾರದ ಆರ್ಥಿಕ ಸಲಹಾ ಮಂಡಳಿಯ ಭಾಗವಾದ ರಘುರಾಂ ರಾಜನ್, ಎಸ್ತರ್ ಡುಫ್ಲೊ

2021ರ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸಿನ ಕನಸು ಕಾಣುತ್ತಿದ್ದ ಬಿಜೆಪಿಗೆ ಫಲಿತಾಂಶಗಳು ಅಷ್ಟು ಸಮಧಾನಕಾರಿಗಾಗಿ ಕಾಣಲಿಲ್ಲ. ತಮಿಳು ಸಂಸ್ಕೃತಿಯನ್ನು  ಹಿಂದುತ್ವದ ಅಜೆಂಡಾದ ಮೂಲಕ ಒಡೆಯಲು ಸಾಧ್ಯವಿಲ್ಲವೆಂಬ ವಿಷಯ ಅರಿವಾಗುತ್ತಿದ್ದಂತೆ ಬಿಜೆಪಿ ತಮಿಳರನ್ನು ತಮಿಳರಿಂದಲೇ ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದೆ.

ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳು ನಾಡಿನಲ್ಲಿ ಅಧಿಕಾರವನ್ನು ಹಿಡಿಯುತ್ತಿದ್ದಂತೆ ಈ ಪ್ರತ್ಯೇಕತೆಯ ಕೂಗು ತೀವ್ರಗೊಂಡಿದೆ. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆಯುವ ನಿರ್ಣಯ ಕೈಗೊಂಡಿರುವುದು ಹಾಗೂ ಜಿಎಸ್‌ಟಿ ಮತ್ತು ನೀಟ್‌ ಕುರಿತು ಪರಿಶೀಲನೆಗೆ ಸದನ ಸಮಿತಿಯನ್ನು ರಚಿಸಿರುವುದು ಕೇಂದ್ರ ಸರ್ಕಾರದ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸ್ಟಾಲಿನ್ ತಂತ್ರಕ್ಕೆ ಬಿಜೆಪಿ ಪ್ರತಿ ತಂತ್ರವಾಗಿ ಪ್ರತ್ಯೇಕ ಕೊಂಗುನಾಡು ಬೇಡಿಕೆಯನ್ನು ಹುಟ್ಟುಹಾಕಿದೆ.

ಕೊಂಗು ನಾಡು ರಾಜ್ಯದ ಬೇಡಿಕೆ ಆರಂಭವಾಗಿರುವುದು ಇದೇ ಮೊದಲಲ್ಲ. 2013 ರಲ್ಲಿಯೂ ಇದೇ ಕೂಗು ಮತ್ತು ಆಗ್ರಹಗಳು ತಮಿಳುನಾಡಿನಲ್ಲಿ ಕೇಳಿಬಂದಿದ್ದವು. 1950 ರಲ್ಲಿ ಪ್ರತ್ಯೇಕ ಭಾಷಾವಾರು ಪ್ರಾಂತ್ಯದ ಆಧಾರದಲ್ಲಿ ರಾಜ್ಯಗಳ ರಚನೆಯಾದಾಗಿನಿಂದಲೂ ಈ ಬೇಡಿಕೆ ಕೇಳಿ ಬರುತ್ತಿದೆ. ಪ್ರತ್ಯೇಕ ರಾಜ್ಯ ಹೋರಾಟಕ್ಕಾಗಿ ಹಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ. ಈ ಪಕ್ಷಗಳು ರಾಜಕೀಯದಲ್ಲಿ ಯಶಸ್ವಿಯಾಗದ್ದರಿಂದ ಮತ್ತು  ಡಿಎಂಕೆ  ಎಐಡಿಎಂಕೆಗಳ ಚೆನ್ನೈ ಕೇಂದ್ರಿತ ರಾಜಕಾರಣದಿಂದ ಕೊಂಗು ನಾಡು ಚರ್ಚೆ ಇದುವರೆಗೆ ಮುಖ್ಯವಾಹಿನಿಗೆ ಬಂದಿರಲಿಲ್ಲ. ಕಾಲ ಬದಲಾದಂತೆಲ್ಲ ತಮಿಳು ನಾಡಿನ ರಾಜಕೀಯ ಚಿತ್ರಣವೂ ಬದಲಾಗುತ್ತಿದೆ. 2 ದ್ರಾವಿಡ ಪಕ್ಷಗಳ ರಾಜಕೀಯ ಮೇಲಾಟದ ನಡುವೆ ರಾಜ್ಯದಲ್ಲಿ ಬೇರೂರಲು ಯತ್ನಿಸುತ್ತಿರುವ ಬಿಜೆಪಿಗೆ ಹದವಾದ ಮಣ್ಣು ಕೊಂಗು ನಾಡಿನಲ್ಲಿ ಕಾಣಿಸುತ್ತಿದೆ. ಬಿಜೆಪಿ ಈ ಪ್ರಾತ್ಯಂದಲ್ಲಿ ಪ್ರಬಲವಾದಂತೆಲ್ಲ ಪ್ರತ್ಯೇಕ ರಾಜ್ಯದ ಕೂಗು ಬಲಗಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ದಿಢೀರ್‌ ಬೆಳವಣಿಗೆ- ಎಐಡಿಎಂಕೆಯಲ್ಲಿ ಬಂಡಾಯದ ಬಿರುಗಾಳಿ

ಏನಿದು ಕೊಂಗು ನಾಡು ?

ತಮಿಳು ನಾಡಿನ ಪಶ್ಚಿಮ ಭಾಗವನ್ನು ಕೊಂಗು ನಾಡು ಎಂದು ಕರೆಯಲಾಗುತ್ತದೆ. ಪ್ರಾಚೀನ ಕೊಂಗುನಾಡು  ಪ್ರದೇಶವು ಹಲವಾರು ಜಿಲ್ಲೆಗಳು ಮತ್ತು ತಾಲ್ಲೂಕುಗಳಿಂದ ಕೂಡಿದ್ದು, ಇವುಗಳನ್ನು ಪ್ರಸ್ತುತ ಪಳನಿ, ಕರುರು, ಧರಪುರಂ, ತಿರುಚೆಂಗೋಡು, ಈರೋಡ್, ಪೊಲ್ಲಾಚಿ, ನಮ್ಮಕ್ಕಲ್, ಸೇಲಂ, ಧರ್ಮಪುರಿ, ನೀಲಗಿರಿ, ಅವಿನಾಶಿ, ಸತ್ಯಮಂಗಲಂ, ಕೊಯಮತ್ತೂರು ಎಂದು ಕರೆಯಲಾಗುತ್ತದೆ.  ಬೃಹತ್ ಸಂಪತ್ತು, ಆಹ್ಲಾದಕರ ವಾತಾವರಣ ಮತ್ತು ವಿಶಿಷ್ಟ ಲಕ್ಷಣಗಳಿಂದ ಕೂಡಿರುವ ಕೊಂಗುನಾಡಿನಲ್ಲಿ ಚೇರ, ಪಾಂಡ್ಯ, ಚೋಳ, ಹೊಯ್ಸಳ, ಮುಸ್ಲಿಂ ಆಡಳಿತಗಾರರು ಮತ್ತು ಅಂತಿಮವಾಗಿ ಬ್ರಿಟಿಷರು ಆಳ್ವಿಕೆ ನಡೆಸಿದ್ದಾರೆ . ತಮಿಳುನಾಡಿನ ಇತರ ಭಾಗಗಳಿಂದ ಭಾಷಿಕ ಭಿನ್ನತೆ ಮತ್ತು ಭೌಗೋಳಿಕ ಭಿನ್ನತೆಯನ್ನು ಹೊಂದಿರುವ  ಈ ಪ್ರದೇಶ ಕರ್ನಾಟಕದ ಗಡಿಗೆ ಹೊಂದಿಕೊಂಡಂತೆಯೇ ಇರುವುದು ವಿಶೇಷ. ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ ಈ ಭಾಗದಲ್ಲಿ ಅನೇಕ ನದಿಗಳು ಹರಿಯುತ್ತಿದ್ದು ಸಮೃದ್ಧ ಕೃಷಿಗೆ ಕೊಂಗುನಾಡು ಪ್ರಸಿದ್ಧವಾಗಿದೆ.

 

ಪ್ರಾಚೀನ ಕೊಂಗುನಾಡು ದೇಶ ಒಳಗೊಂಡಿದ್ದ ಭೂಭಾಗ

ಇಂದು ಸೇಲಂ, ಕೃಷ್ಣಗಿರಿ, ಕೊಯಂಬತ್ತೂರು ನಗರಗಳು ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ ದೇಶಾದ್ಯಂತ ಪ್ರಸಿದ್ಧವಾಗಿವೆ.

ಇದನ್ನೂ ಓದಿ: ‘ಕೇಂದ್ರ ಸರ್ಕಾರ’ ಅಲ್ಲ, ‘ಒಕ್ಕೂಟ ಸರ್ಕಾರ’: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌‌!

ತಮಿಳು ನಾಡಿನಲ್ಲಿ ಕಳೆದ 10 ವರ್ಷಗಳಲ್ಲಿ ಬಿಜೆಪಿಗೆ ನೆಲೆ ಸಿಕ್ಕಿರುವುದು ಇಲ್ಲಿ ಮಾತ್ರ. ಬಿಜೆಪಿ ತನ್ನ ಮತಬ್ಯಾಂಕ್ ವಿಸ್ತರಣೆಯ ಉದ್ದೇಶಕ್ಕೆ ಪ್ರತ್ಯೇಕತೆಯ ಕೂಗನ್ನು ಸಶಕ್ತವಾಗಿ ಬಳಸಿಕೊಳ್ಳಲು ಮುಂದಾಗಿದೆ ಎಂಬುದು  ಪ್ರತ್ಯೇಕ ರಾಜ್ಯವನ್ನು  ವಿರೋಧಿಸುವವರ ಆರೋಪವಾಗಿದೆ.

ಸುಮಾರು 61 ವಿಧಾನಸಭಾ ಕ್ಷೇತ್ರಗಳು ಹಾಗೂ 10 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕೊಂಗು ನಾಡು ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿಸುವುದು ಅಥವಾ ಪುದಚ್ಚೇರಿ ಮಾದರಿಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿಸುವುದು ಬೆಜೆಪಿಯ ಲೆಕ್ಕಾಚಾರ. ಹೆಚ್ಚುವರಿಯಾಗಿ ಸುತ್ತಲಿನ ಒಂದೆರಡು ಜಿಲ್ಲೆಗಳನ್ನು ಸೇರಿಸಿ 90 ವಿಧಾನಸಭಾ ಕ್ಷೇತ್ರಗಳನ್ನು ಹಾಗೂ 15 ಲೋಕಸಭಾ ಕ್ಷೇತ್ರಗಳನ್ನು ಒಗ್ಗೂಡಿಸಿ ಒಂದು ಹೊಸ ರಾಜ್ಯ ರಚನೆ ಮಾಡುವ ಚಿಂತನೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಲಯದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರತ್ಯೇಕ ಕೊಂಗು ನಾಡು ಬೇಡಿಕೆಗೆ ಹಲವು ಸಂಘಟನೆಗಳು, ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳು ಕೂಡ ಬೇಡಿಕೆಗೆ ಧ್ವನಿಗೂಡಿಸಿ ಕೊಂಗು ನಾಡು ಚರ್ಚೆ ಕಾವೇರಲು ಕಾರಣರಾಗಿದ್ದಾರೆ. ಬಿಜೆಪಿಯ ವಿಸ್ತರಣಾ ವಾದದ ಸಾಂದರ್ಭಿಕ ಶಿಶುವಾಗಿ ಕೊಂಗು ನಾಡು ರಾಜ್ಯ ರಚನೆಯಾಗಬಹುದೇ ? ಅಥವಾ ಡಿಎಂಕೆ ಮತ್ತು ಬಿಜೆಪಿ ನಡುವಿನ ರಾಜಕೀಯ ತಿಕ್ಕಾಟ ಪ್ರತ್ಯೇಕ ರಾಜ್ಯದ ರಚನೆಗೆ ದಾರಿ ಮಾಡಿ ಕೊಡಬಹುದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

-ರಾಜೇಶ್ ಹೆಬ್ಬಾರ್‌

ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ‘ಅಣ್ಣಾಮಲೈ’ ನೇಮಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. 26 ಕೋಟಿ ಜನಸಂಖ್ಯೆ ಇರುವ ಜಂಗಲ್ ರಾಜ್ಯ ಉತ್ತರ ಪ್ರದೇಶವನ್ನು 4 ಅಥವಾ 5 ರಾಜ್ಯವಾಗಿ ವಿಭಜಿಸಿ ಅಲ್ಲಿ ಅಭಿವ್ರಿದ್ಧಿಗೆ ಇಂಬು ಕೊಡುವ ಬದಲು , ದಕ್ಷಿಣದ ದ್ರಾವಿಡರನ್ನು ಒಡೆಯಲು ಕುತಂತ್ರಿ ಚಡ್ಡಿಗಳು ಪ್ರಯತ್ನಿಸುತ್ತಿರುವುದನ್ನು ಎಲ್ಲಾ
    ದಕ್ಷಿಣ ಭಾರತೀಯರು ವಿರೋಧಿಸಬೇಕು.

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...