Homeಮುಖಪುಟತಮಿಳುನಾಡು ರಾಜಕೀಯದಲ್ಲಿ ದಿಢೀರ್‌ ಬೆಳವಣಿಗೆ- ಎಐಡಿಎಂಕೆಯಲ್ಲಿ ಬಂಡಾಯದ ಬಿರುಗಾಳಿ

ತಮಿಳುನಾಡು ರಾಜಕೀಯದಲ್ಲಿ ದಿಢೀರ್‌ ಬೆಳವಣಿಗೆ- ಎಐಡಿಎಂಕೆಯಲ್ಲಿ ಬಂಡಾಯದ ಬಿರುಗಾಳಿ

- Advertisement -
- Advertisement -

ತಮಿಳುನಾಡಿನ ರಾಜಕೀಯದಲ್ಲಿ ದಿಡೀರ್‌ ಬೆಳವಣಿಗೆಯೊಂದು ನಡೆದಿದೆ. ವಿರೋಧಪಕ್ಷ ಎಐಡಿಎಂಕೆ ನಾಯಕ ಇ. ಪಳನಿಸ್ವಾಮಿ ಮತ್ತು ಎಐಡಿಎಂಕೆ ಉಚ್ಛಾಟಿತ ನಾಯಕಿ V K ಶಶಿಕಲಾ ಬಣಗಳ ನಡುವೆ ಬಿರುಸಿನ ರಾಜಕೀಯ ತಿಕ್ಕಾಟ ಆರಂಭವಾಗಿದೆ. ಈ ಬೆಳವಣಿಗೆಯಲ್ಲಿ ಶಶಿಕಲಾ ಬಣದ 16 ಜನ  ನಾಯಕರನ್ನು ಇಂದು ಎಐಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ಪಕ್ಷದಿಂದ ಉಚ್ಛಾಟನೆಗೊಂಡವರಲ್ಲಿ ಎಐಡಿಎಂಕೆ ವಕ್ತಾರ ವಿ ಪುಗಲೆಂದಿ ಸೇರಿ ಇತರ ನಾಯಕರು ಸೇರಿದ್ದಾರೆ.

ಘಟನೆಯ ಹಿನ್ನಲೆ 

ನಿನ್ನೆ ಭಾನುವಾರ ಜೂನ್‌ 13 ರಂದು ಏಐಡಿಎಂಕೆಯ ನಾಯಕಿ V K ಶಶಿಕಲಾ ಅವರು ರಾಜಕೀಯಕ್ಕೆ ಮರಳುವುದಾಗಿ ಪತ್ರ ಬರೆದಿದ್ದರು. ನಂತರದಲ್ಲಿ ಶಶಿಕಲಾ ತಮಿಳುನಾಡು ರಾಜಕೀಯ ಮರುಪ್ರವೇಶದ ಕುರಿತು ತಮ್ಮ ಬೆಂಬಲಿಗರೊಂದಿಗೆ ಮಾತನಾಡಿದ ದೂರವಾಣಿ ಕರೆ ಕೂಡ ಎಲ್ಲೆಡೆ ಹರಿದಾಡಿತ್ತು. ಈ ವೇಳೆ ಶಶಿಕಲಾ ರಾಜಕೀಯದ ಎರಡನೇ ಇನ್ನಿಂಗ್ಸ್‌ಗೆ ಅನೇಕರು ಬೆಂಬಲ ಸೂಚಿಸಿದ್ದರು. ಈಗ ಶಶಿಕಲಾರವರನ್ನು ಬೆಂಬಲಿಸಿದ ಎಐಡಿಎಂಕೆಯ ನಾಯಕರನ್ನು ಪಕ್ಷದಿಂದ ವಜಾಮಾಡಲಾಗಿದೆ.

ಏಐಡಿಎಂಕೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು ವಿ.ಕೆ. ಶಶಿಕಲಾ ರಾಜಕೀಯ ಪ್ರವೇಶವೆಂಬುದು ಒಂದು ನಾಟಕ. ಪಕ್ಷವನ್ನು ಯಾವುದೇ ಕಾರಣಕ್ಕೂ ಒಂದು ಕುಟುಂಬದ ಹಿಡಿತಕ್ಕೆ ನೀಡಲು ಸಾಧ್ಯವಿಲ್ಲ.  V K ಶಶಿಕಲಾ ತೆಕ್ಕೆಗೆ ಪಕ್ಷವನ್ನು ಒಪ್ಪಿಸಿದರೆ ಏಐಡಿಎಂಕೆ ನಾಶವಾಗುತ್ತದೆ ಎಂದು ಹೇಳಿಕೆ ನೀಡಿದೆ.

ಶಶಿಕಲಾ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಎಐಡಿಎಂಕೆ ಮುಖಂಡ ಸಿ ಪೊನ್ನಿಯನ್‌ ಮಾತನಾಡಿ  V K ಶಶಿಕಲಾ ಪಕ್ಷದಿಂದ ಉಚ್ಛಾಟನೆಗೊಂಡಿರುವ ವ್ಯಕ್ತಿ. ಅವರು ಬಂದು ಏಐಡಿಎಂಕೆಯನ್ನು ಮರುಸಂಘಟನೆ ಮಾಡುತ್ತೇನೆ ಎನ್ನುತ್ತಾರೆ. ಆದರೆ ಸಾಧ್ಯವಿಲ್ಲ. ಅವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು  ಹೇಳಿದ್ದಾರೆ.

ವಿ.ಕೆ.   V K ಶಶಿಕಲಾ ಟಿ.ಟಿ.ವಿ. ದಿನಕರನ್‌ ಅವರ ಬಣಕ್ಕೆ ಸೇರಿದವರು. ಯಾರು ಶಶಿಕಲಾ ಜೊತೆ ಇರುತ್ತಾರೋ ಅವರಿಗೆ ಎಐಡಿಎಂಕೆಯಲ್ಲಿ ಸ್ಥಳವಿಲ್ಲ ಎಂದು ಸಿ ಪೊನ್ನಿಯನ್‌ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ : ತೆಲಂಗಾಣ: 40,000 ಕೋಟಿ ಸಾಲವಿದ್ದರೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...