Homeಮುಖಪುಟ2,500 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡ ದೆಹಲಿ ಪೊಲೀಸರು

2,500 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡ ದೆಹಲಿ ಪೊಲೀಸರು

- Advertisement -
- Advertisement -

ದೆಹಲಿಯ ಫರಿದಾಬಾದ್‌ನ ಮನೆಯೊಂದರಲ್ಲಿ 2,500 ಕೋಟಿಗಿಂತ ಹೆಚ್ಚು ಮೌಲ್ಯದ 354 ಕೆಜಿ ಹೆರಾಯಿನ್‌ ಅನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದು, ಅತಿದೊಡ್ಡ ಹೆರಾಯಿನ್ ಸಾಗಣೆ ಜಾಲವನ್ನು ಬೇಧಿಸಿದ್ದಾರೆ.

ಅಫ್ಘಾನಿಸ್ತಾನ, ಯುರೋಪ್ ಮತ್ತು ಭಾರತದ ಕೆಲವು ಭಾಗಗಳಲ್ಲಿ ಹರಡಿರುವ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಡ್ರಗ್ಸ್​ ಜಾಲವನ್ನು ಬೇಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಈವರೆಗೆ ನಾಲ್ಕು ಜನರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ’ಮಾದಕ ದ್ರವ್ಯ ಭಯೋತ್ಪಾದನೆ’ ಕೋನವನ್ನು ತನಿಖೆ ನಡೆಸುತ್ತಿರುವುದಾಗಿ, ಶಂಕಿತರ ವಿಚಾರಣೆಯನ್ನು ಪ್ರಾರಂಭಿಸಿರುವುದ್ದಾಗಿ ಪೊಲೀಸರು ತಿಳಿಸಿದ್ದಾರೆ.

“ಅಫ್ಘಾನಿಸ್ತಾನಿ ಹಜರತ್ ಅಲಿ, ಕಾಶ್ಮೀರದ ಅನಂತ್‌ನಾಗ್ ನಿವಾಸಿ ರಿಜ್ವಾನ್ ಅಹ್ಮದ್, ಪಂಜಾಬ್‌ನ ಜಲಂಧರ್‌ನ ಗುರ್ಜೋತ್ ಸಿಂಗ್ ಮತ್ತು ಗುರ್ದೀಪ್ ಸಿಂಗ್ ಎಂಬುವವರನ್ನು‍ ಪೊಲೀಸರು ಬಂಧಿಸಿದ್ದಾರೆ. ಈ ದಂಧೆ ಅಫ್ಘಾನಿಸ್ತಾನ, ಯುರೋಪ್ ಮತ್ತು ಭಾರತದ ಹಲವಾರು ಭಾಗಗಳಲ್ಲಿ ಹರಡಿದೆ” ಎಂದು ದೆಹಲಿ ಪೊಲೀಸ್ ವಿಶೇಷ ಸೆಲ್​​ನ ನೀರಜ್​ ಠಾಕೂರ್ ತಿಳಿಸಿದ್ದಾರೆ. ​

ಇದನ್ನೂ ಓದಿ: ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತು ಆಮ್‌ ಆದ್ಮಿ ಪಕ್ಷ ಸೇರಿದ ವಿರಾಜಪೇಟೆ ಮಾಜಿ ಶಾಸಕ ಎಚ್.ಡಿ.ಬಸವರಾಜು

354 ಕೆಜಿ ಹೆರಾಯಿನ್‌ಗೆ ಬಳಸಿದ 100 ಕೆಜಿಗಿಂತ ಹೆಚ್ಚು ರಾಸಾಯನಿಕಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್‌ನ ಒಟ್ಟಾರೆ ಅಂತರರಾಷ್ಟ್ರೀಯ ಮೌಲ್ಯ 2,500 ಕೋಟಿಗಿಂತ ಹೆಚ್ಚಿದ್ದು, ಇದನ್ನು ಪಂಜಾಬ್‌ಗೆ ಕಳುಹಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Rs 2,500 Crore Worth Heroin Seized Near Delhi. This Is What It Looks Like
ಪೊಲೀಸರು ವಶಪಡಿಸಿಕೊಂಡಿರುವ ಹೆರಾಯಿನ್

ಇರಾನ್‌ನ ಚಬಹಾರ್ ಬಂದರಿನ ಮೂಲಕ ಮಹಾರಾಷ್ಟ್ರದ ಮುಂಬೈಗೆ ಜವಾಹರ್ ಲಾಲ್ ನೆಹರು ಬಂದರಿನ ಮೂಲಕ ಅಫ್ಘಾನಿಸ್ತಾನದಿಂದ ಡ್ರಗ್ಸ್‌ ತರಲಾಗಿದೆ. ಗೋಣಿ ಚೀಲಗಳಲ್ಲಿ ಮತ್ತು ಪೆಟ್ಟಿಗೆಗಳಲ್ಲಿ ಹೆರಾಯಿನ್ ಅಡಗಿಸಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

“ಅಫ್ಘಾನಿಸ್ತಾನದಿಂದ ತರಲಾದ ಡ್ರಗ್ಸ್​​ನ್ನು ಮಧ್ಯಪ್ರದೇಶದ ಶಿವಪುರಿ ಸಮೀಪ ಇರುವ ಕಾರ್ಖಾನೆಯಲ್ಲಿ ಇನ್ನಷ್ಟು ಸಂಸ್ಕರಿಸಲಾಗಿತ್ತು. ಅದನ್ನು ಅಡಗಿಸಿಡಲು ಫರಿದಾಬಾದ್​ನಲ್ಲಿ ಬಾಡಿಗೆ ಮನೆಯನ್ನೂ ಪಡೆಯಲಾಗಿದೆ. ನಂತರ ಇದನ್ನು ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಮಾರಾಟ ಮಾಡಲು ಯೋಜಿಸಲಾಗಿತ್ತು” ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಡ್ರಗ್ಸ್ ದಂಧೆಯ ಹಿಂದಿನ ಮಾಸ್ಟರ್ ಮೈಂಡ್ ನವಪ್ರೀತ್ ಸಿಂಗ್ ಪೋರ್ಚುಗಲ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಂಜಾಬಿನಿಂದ ಬಂಧಿಸಿರುವ ಆರೋಪಿ ಮಾಹಿತಿ ನೀಡಿದ್ದಾರೆ. ಇದಕ್ಕೆ ಹಣಕಾಸು ಸಹಕಾರ ಪಾಕಿಸ್ತಾನದಿಂದ ಸಿಗುತ್ತಿದೆ ಎಂಬ ಮಾಹಿತಿಯೂ ಸಿಕ್ಕಿದೆ ಎಂದು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಇದನ್ನೂ ಓದಿ: ಆರೋಗ್ಯ ಸರಿಯಿಲ್ಲ ಎಂದಿದ್ದ ಪ್ರಜ್ಞಾ ಠಾಕೂರ್‌‌ – ಡ್ಯಾನ್ಸ್‌ ಮಾಡುವ ವಿಡಿಯೊ ವೈರಲ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...