ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾದ ಮೇಲೆ ಅಫ್ಘಾನ್ ವಾಯುಪಡೆಯ ನಾಲ್ಕು ಮಹಿಳಾ ಪೈಲಟ್‌ಗಳಲ್ಲಿ ಒಬ್ಬರಾದ ಸಫಿಯಾ ಫಿರೋಜಿ ಅವರನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಟ್ವಿಟರ್ ಬಳಕೆದಾರರು ಇತ್ತೀಚೆಗೆ ಈ ಚಿತ್ರವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಸಫಿಯಾ ಫಿರೋಜಿ, ಅಫ್ಘಾನ್ ವಾಯುಪಡೆಯ ನಾಲ್ಕು ಮಹಿಳಾ ಪೈಲಟ್‌ಗಳಲ್ಲಿ ಒಬ್ಬರು. ಇಂದು ಬೆಳಿಗ್ಗೆ ಅವರನ್ನು ಸಾರ್ವಜನಿಕವಾಗಿ ಕಲ್ಲೆಸೆದು ಸಾಯಿಸಲಾಗಿದೆ” ಎಂದು ಆಗಸ್ಟ್ 18 ರಂದು ಸಂಗೀತಾ ಸಾಗರ್ ಎಂಬುವರು ಹಂಚಿಕೊಂಡಿದ್ದಾರೆ.
ಇದೇ ರೀತಿ ಹಲವು ಮಂದಿ ಈ ಚಿತ್ರವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್!

ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಕಂಡು ಬಂದದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಚಿತ್ರ 2018ರಲ್ಲಿ ನಡೆದ ಪ್ರತಿಭನಟನೆಯ ವರದಿಯಲ್ಲಿ ಕಾಣಿಸಿಕೊಂಡಿದೆ. ಇದು ಕಾಬೂಲ್‌ನಲ್ಲಿ ನಡೆದ ಫರ್ಖುಂಡಾ ಹತ್ಯಾಕಾಂಡದ ಚಿತ್ರ ಎಂಬ ವರದಿಗಳು ಸಿಕ್ಕಿವೆ.

ವರದಿಗಳ ಪ್ರಕಾರ, ಮುಗ್ಧ ಯುವತಿಯ ಹತ್ಯೆಯಾದ ಮೂರನೇ ವರ್ಷದ ಸ್ಮರಣಾರ್ಥವಾಗಿ ಸ್ಥಳೀಯರು ಫರ್ಖುಂಡಾ ಸ್ಮಾರಕದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಕಿರುಕುಳ, ಚಿತ್ರಹಿಂಸೆಗೆ ಬಲಿಯಾದ ಫರ್ಖುಂಡಾ, ರುಖ್ಶಾನಾ, ಶುಕ್ರಿಯಾ ತಬಸುಮ್, ಮಿರ್ಜಾಲಾಂಗ್ ಇತರ ಸಂತ್ರಸ್ತ ಮಹಿಳೆಯರಿಗೆ ನಡೆದ ಅನ್ಯಾಯವನ್ನು ಖಂಡಿಸುವ ಪೋಸ್ಟರ್‌ಗಳನ್ನು ಈ ವರದಿಯಲ್ಲಿ ನೋಡಬಹುದು. ಈ ಪೋಸ್ಟರ್‌ಗಳಲ್ಲಿ ಒಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟರ್‌ನಲ್ಲಿರುವ ಮಹಿಳೆಯನ್ನು ಹೋಲುತ್ತದೆ.
ಇದನ್ನೂ ಓದಿ: Fact check: ಪೊಲೀಸ್ ವಿರುದ್ಧ ತಿರುಗಿಬಿದ್ದ ಪೂಜಾರಿ: ಹಿಗ್ಗಾಮುಗ್ಗಾ ಹೊಡೆದಿದ್ದು ನಿಜವಲ್ಲ!

ಇನ್ನು ಮುಂದಿನ ಹುಡುಕಾಟದಿಂದ ಈ ಚಿತ್ರ ಡಿಸೆಂಬರ್ 26, 2015 ರ ದಿ ನ್ಯೂಯಾರ್ಕ್ ಟೈಮ್ಸ್ ನ ವಿಡಿಯೊದಲ್ಲಿ ದೊರಕಿದೆ. ಇದರಲ್ಲಿ ನಿರೂಪಕ “27 ವರ್ಷದ ಮುಸ್ಲಿಂ ಮಹಿಳೆ ಫರ್ಖುಂಡಾ ಮಲಿಕ್ಜಾಡಾರನ್ನು ಖುರಾನ್ ಸುಟ್ಟ ಆರೋಪದ ಮೇಲೆ ಕೊಲ್ಲಲಾಯಿತು. ಈ ಘಟನೆಯನ್ನು ಸಾವಿರಾರು ಜನರು ವೀಕ್ಷಿಸಿದರು” ಎಂದು ವಿವರಿಸುತ್ತಾರೆ.

ಮೇ 2015 ರ ಬಿಬಿಸಿ ವರದಿಯು ಫರ್ಖುಂಡಾ ಮಲಿಕ್ಜಾಡಾ ಮಾರ್ಚ್ 19 ರಂದು ನಿಧನರಾದರು ಎಂದು ತಿಳಿಸುತ್ತದೆ. ಕುರಾನ್ ಅನ್ನು ಸುಟ್ಟ ತಪ್ಪು ಆರೋಪದಲ್ಲಿ ಈಕೆಯನ್ನು ಹತ್ಯೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ 19 ಮಂದಿ ಪೊಲೀಸ್ ಅಧಿಕಾರಿಗಳು ಸೇರಿ 49 ಜನರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ನೆದರ್‌ಲ್ಯಾಂಡ್ಸ್‌ನ ಡಚ್ ವಿದ್ಯಾರ್ಥಿಗಳಿಗೆ 5 ನೇ ತರಗತಿಯಿಂದ ಭಗವದ್ಗೀತೆ ಕಡ್ಡಾಯ! – ನಿಜವೆ?
ವರದಿಯ ಪ್ರಕಾರ, “ಮೂವರು ಪುರುಷರಿಗೆ 20 ವರ್ಷಗಳ ಜೈಲು ಶಿಕ್ಷೆ, ಎಂಟು ಮಂದಿಗೆ 16 ವರ್ಷಗಳ ಜೈಲು ಶಿಕ್ಷೆ ಮತ್ತು ಅಪ್ರಾಪ್ತ ವಯಸ್ಕನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 11 ಪೋಲಿಸ್ ಅಧಿಕಾರಿಗಳಿಗೆ ಫರ್ಖುಂಡಾಕ್ಕೆ ಭದ್ರತೆ ನೀಡಲು ವಿಫಲವಾದ ಕಾರಣಕ್ಕೆ ತಲಾ ಒಂದು ವರ್ಷ ಶಿಕ್ಷೆ ವಿಧಿಸಲಾಗಿತ್ತು.
ವೈರಲ್ ಪೋಸ್ಟ್‌ಗಳಲ್ಲಿ ಫರ್ಖುಂಡಾ ಮಲಿಕ್ಜಾಡಾ ಅವರನ್ನು ಸಫಿಯಾ ಫಿರೋಜಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಸಫಿಯಾ ಫಿರೋಜಿ ಅಫ್ಘಾನಿಸ್ತಾನದ ಎರಡನೇ ಮಹಿಳಾ ಪೈಲಟ್ ಆಗಿ ಪ್ರಾಮುಖ್ಯತೆ ಪಡೆದಿದ್ದರು. 1990 ರಲ್ಲಿ ಫಿರೋಜಿ ಮತ್ತು ಆಕೆಯ ಕುಟುಂಬ ಕಾಬೂಲ್‌ನಿಂದ ಪಲಾಯನ ಮಾಡಿತ್ತು. 2001 ರಲ್ಲಿ ತಾಲಿಬಾನ್ ಪತನದ ನಂತರ, ಅವರು ಕಾಬೂಲ್‌ಗೆ ಮರಳಿದರು. ಆದರೆ, ಸಫಿಯಾ ಸಾವಿನ ದೃಢೀರಣಕ್ಕೆ ನಮಗೆ ಯಾವುದೇ ನಂಬಲರ್ಹವಾದ ವರದಿ ಲಭ್ಯವಾಗಿಲ್ಲ.
ಅಫ್ಘಾನಿಸ್ತಾನದ ಮೊದಲ ಮಹಿಳಾ ಪೈಲಟ್ ಹೆಸರು ನಿಲೂಫರ್ ರಹ್ಮಾನಿ, ಮಹಿಳಾ ಹಕ್ಕುಗಳ ಮೇಲೆ ತಾಲಿಬಾನ್ ಪ್ರಚಾರವನ್ನು ನಂಬಬೇಡಿ ಎಂದು ಜನರನ್ನು ಒತ್ತಾಯಿಸಿದ್ದಾರೆ.
ಆದ್ದರಿಂದ, ಇದರಿಂದ ಫರ್ಖುಂಡಾ ಮಲಿಕ್ಜಾಡಾ ಅವರ ಹಳೆಯ ಚಿತ್ರವನ್ನು ಅಫ್ಘಾನಿಸ್ತಾನದ ಮಹಿಳಾ ಪೈಲಟ್ ಸಫಿಯಾ ಫಿರೋಜಿ, ತಾಲಿಬಾನಿಗಳು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಪಿಎಂ ಕನ್ಯಾ ಯೋಜನೆ’ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ₹2000 ಸಿಗುವುದು ನಿಜವಲ್ಲ


