Homeಅಂತರಾಷ್ಟ್ರೀಯಆಸ್ಟ್ರೇಲಿಯಾ: ಲಾಕ್‌ಡೌನ್ ವಿರುದ್ಧ ಪ್ರತಿಭಟನೆ, 218 ಜನರ ಬಂಧನ

ಆಸ್ಟ್ರೇಲಿಯಾ: ಲಾಕ್‌ಡೌನ್ ವಿರುದ್ಧ ಪ್ರತಿಭಟನೆ, 218 ಜನರ ಬಂಧನ

- Advertisement -
- Advertisement -

ಕೊರೊನಾ ನಿಯಂತ್ರಣಕ್ಕಾಗಿ ಆಸ್ಟ್ರೇಲಿಯಾದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಲಾಕ್‌ಡೌನ್‌ ವಿರುದ್ದ ಮೆಲ್ಬೋರ್ನ್ ಮತ್ತು ಸಿಡ್ನಿ ನಗರಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಘಟನೆಯಲ್ಲಿ 218 ಜನರನ್ನು ಪೊಲೀಸರು ಬಂಧಿಸಿದ್ದು, ಎಲ್ಲರಿಗೂ ಭಾರೀ ಮೊತ್ತಡ ದಂಡ ವಿಧಿಸಿದ್ದಾರೆ. ಮೆಲ್ಬೋರ್ನ್‌ನಲ್ಲಿ, 4,000 ಜನರು ರ್‍ಯಾಲಿ ನಡೆಸಿದ್ದು, ಅವರನ್ನು ಚದುರಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಅನ್ನು ಬಳಸಿದ್ದಾರೆ.

ಅದೇ ರೀತಿಯಲ್ಲಿ ಸಿಡ್ನಿಯಲ್ಲಿಯೂ ಪ್ರತಿಭಟನೆ ನಡೆದಿದ್ದು, 1,000 ಕ್ಕೂ ಹೆಚ್ಚು ಪೊಲೀಸರು ಲಾಟಿಚಾರ್ಜ್‌ ಮೂಲಕ ಪ್ರತಿಭಟನೆಯನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಡ್ನಿಯಲ್ಲಿ ಹೊಸದಾಗಿ 825 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದು 24 ಗಂಟೆಗಳ ಅವಧಿಯಲ್ಲಿ ಆಸ್ಟ್ರೇಲಿಯಾದ ಪ್ರದೇಶವೊಂದರಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ.

ಇದನ್ನೂ ಓದಿ: ರೈತರ ಮಕ್ಕಳಿಗೆ ಪಿಯುಸಿಯಿಂದ ಪಿಜಿವರೆಗೂ ಸ್ಕಾಲರ್‌‌ಶಿಪ್‌: ಸಿಎಂ ಬೊಮ್ಮಾಯಿ ಘೋಷಣೆ

ಸಿಡ್ನಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸಲು ಆಸ್ಟ್ರೇಲಿಯಾ ಸೈನ್ಯವನ್ನು ನಿಯೋಜಿಸಲಿದೆ ಎಂದು ವರದಿಯಾಗಿದೆ. ಬ್ರಿಸ್ಬೇನ್‌ನಲ್ಲಿ 2,000 ಕ್ಕೂ ಹೆಚ್ಚು ಪ್ರತಿಭಟನಾಕಾರರು ದೊಡ್ಡ ಶಾಂತಿಯುತ ಮೆರವಣಿಗೆಯನ್ನು ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 218 ಜನರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಕನಿಷ್ಠ ಏಳು ಅಧಿಕಾರಿಗಳು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರೆಲ್ಲರಿಗೂ 5,452 ಡಾಲರ್‌ (ಭಾರತೀಯ ರೂಪಾಯಿಯಲ್ಲಿ 4,05,369 ರೂ) ದಂಡವನ್ನು ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಕೊರೊನಾ ನಿರ್ಬಂಧ ಸಡಿಲಗೊಳಿಸಿದ ತಮಿಳುನಾಡು: ಸಿನಿಮಾ ಥಿಯೇಟರ್‌ ಓಪನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಜ‌ನ‌ರಿಗೆ ಬೇಡಾದ‌ದ್ದು ಸ‌ರ್ಕಾರ‌ಕ್ಕೆ ಏಕೆ ಬೇಕು? ಸಾಯೋರು ಜ‌ನ‌ತಾನೇ….

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆಗಳು ಆಶ್ಚರ್ಯಕರ ಫಲಿತಾಂಶ ನೀಡುತ್ತವೆ: ಭಗವಂತ್ ಮಾನ್

0
'ಚುನಾವಣಾ ಪೂರ್ವ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷದ ಜನಪ್ರಿಯತೆಯನ್ನು ಸೆರೆಹಿಡಿಯದಿದ್ದರೂ, ಅದರ ನೈಜ ಸಾಧನೆಯು ನೇರವಾಗಿ ಸರ್ಕಾರವನ್ನು ರಚಿಸಲು ಸಹಾಯ ಮಾಡುತ್ತದೆ. ಲೋಕಸಭೆ ಚುನಾವಣೆಗಳು ಆಶ್ಚರ್ಯಕರ ಫಲಿತಾಂಶಗಳನ್ನು ನೀಡುತ್ತವೆ' ' ಎಂದು ಪಂಜಾಬ್...